Search
  • Follow NativePlanet
Share
» »ಜಗತ್ ಗುರು ಶಂಕರಾಚಾರ್ಯರ ಹುಟ್ಟುರಿನ ಬಳಿ ಇರುವ ಪ್ರಸಿದ್ದ ದೇವಾಲಯಗಳು

ಜಗತ್ ಗುರು ಶಂಕರಾಚಾರ್ಯರ ಹುಟ್ಟುರಿನ ಬಳಿ ಇರುವ ಪ್ರಸಿದ್ದ ದೇವಾಲಯಗಳು

ಸನಾತನ ಭಾರತದ ಸಂಸ್ಕøತಿಯನ್ನು ಜಗತ್ತಿಗೆ ಸಾರಿದವರಲ್ಲಿ ಆದಿ ಶಂಕರಾಚರ್ಯರು ಮೊದಲಿಗರು. ಇವರು ಶ್ರೀ ಕೃಷ್ಣನ ಸಿದ್ದಾಂತವಾದ ಅದ್ವೈತ ತತ್ವವನ್ನು ಪ್ರತಿಪಾದಿಸಿದವರು. ಶಂಕರಾಚಾರ್ಯರ ಹುಟ್ಟಿದ್ದು ಕೇರಳದ ಕೆಳದಿಯಲ್ಲಿ ಶಿವಗುರು ಹಾಗು ಆರ್ಯಂಭರಿಗೆ ಜನ್ಮಿಸಿದರು. ಕೇವಲ 26 ವರ್ಷಗಳ ಕಾಲ ಮಾತ್ರ ಜೀವಿಸಿದ ಶಂಕರರು ಭಾರತದಾಂತ್ಯ ಸಂಚರಿಸಿ ಹಲವಾರು ಪ್ರಸಿದ್ದ ದೇವಾಲಯವನ್ನು ಸ್ಥಾಪನೆ ಮಾಡಿದರು. ವಿವಿಧ ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಆದಿ ಶಂಕರಾಚಾರ್ಯರ ಭಗವತ್ ಗೀತೆ, ಉಪನಿಷತ್ ಹಾಗೂ ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರು. ಪ್ರಸುತ್ತ ಲೇಖನದಲ್ಲಿ ಆದಿ ಶಂಕರಾಚಾರ್ಯರ ಹುಟ್ಟುರಿನ ಬಳಿ ಇರುವ ಹಲವು ಪ್ರಸಿದ್ದ ದೇವಾಲಯಗಳನ್ನು ತಿಳಿಯೋಣ.

ಜಗತ್ ಗುರು ಶಂಕರಾಚಾರ್ಯರ

PC:Hvadga

ಶಂಕರ ದೇವಾಲಯ
ಶಂಕರ ದೇವಾಲಯವು ಕೇಳದಿಯಲ್ಲಿದೆ. ಶೃಂಗೇರಿ ಮಠವು ಈ ದೇವಾಲಯದ ನಿರ್ವಹಣೆ ಮಾಡುತ್ತಿದೆ. ಈ ದೇವಾಲಯವು ಅತ್ಯಂತ ಸುಂದರವಾದ ದೇವಲಯವಾಗಿದೆ. ಈ ದೇವಾಲಯದಲ್ಲಿ ಎರಡು ಗೋಪುರಗಳಿವೆ ಅವುಗಳೆಂದರೆ ಒಂದು ಶಂಕರ ದೇಗುಲ ಮತ್ತೊಂದು ಶಾರದಾಂಬ ದೇವಾಲಯ. ಶಂಕರಾಚರ್ಯರ ತಾಯಿ ಆರ್ಯಂಭಳ ಸಮಾಧಿ ಕೂಡ ಈ ಶಂಕರ ದೇವಾಲಯದಲ್ಲೀಯೇ ಇದೆ. ಈ ದೇವಾಲಯ ಪೂಜೆಯನ್ನು ಕೇರಳದ ನಂಬೋದರಿಯ ಶೈಲಿಯ ಬದಲಾಗಿ ತಮಿಳು ಹಾಗೂ ಕರ್ನಾಟಕದ ಬ್ರಾಹ್ಮಣರಿಂದ ಸಕಲ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ.

ಶ್ರೀ ಆದಿ ಶಂಕರ ಕೀರ್ತಿ ಸ್ತಂಭ ಮಂಟಪ
ಶ್ರೀ ಆದಿ ಶಂಕರ ಕೀರ್ತಿ ಸ್ತಂಭ ಮಂಟಪವನ್ನು ಎಂಟು ಕಥೆಗಳ್ಳುಳ ಸ್ಮಾರಕದಲ್ಲಿ ಕಂಚಿ ಕಮಕೋಟಿ ಮಠ ಸ್ಥಾಪಸಿದೆ. ಈ ಸ್ತಂಭ ಮಂಟಪದ ಪ್ರವೇಶದ್ವಾರದಲ್ಲಿ ಎರಡು ಆನೆಗಳ ಪ್ರತಿಮೆಗಳಿವೆ ಹಾಗೇಯೆ ಇಲ್ಲಿ ಹಲವಾರು ದೊಡ್ಡದಾದ ಗಣಪತಿ, ಆದಿ ಶಂಕರಾಚಾರ್ಯರ ಇನ್ನೂ ಮುಂತಾದ ಪ್ರತೀಮೆಗಳನ್ನು ಕಾಣಬುಹುದು. ಮಂಟಪದ ಒಳಭಾಗದಲ್ಲಿ ಆದಿ ಗುರು ಶಂಕರಾಚಾರ್ಯರ ಜೀವನ ಚರಿತ್ರೆಯ ಕುರಿತು ಧರ್ಮದ ಪ್ರತಿಪಾಲಕನಾಗಿ ಹೋರಾಡಿದ, ಸ್ಥಾಪಿಸಿದ ಶಂಕರರ ಸಾಧನೆಗಳ ಕುರಿತು ಚಿತ್ರಗಳ ಮೂಲಕ ವಿವರಿಸಲಾಗಿದೆ. ಆದಿ ಶಂಕರಾಚಾರ್ಯರ ದೇಗುಲವು ಒಂದು ದೊಡ್ಡ ತೀರ್ಥಕ್ಷೇತ್ರವಾಗಿದ್ದು ವಿವಿಧ ಜಾತಿಯವರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಮಣಿಕಮಂಗಳಂ ದೇವಾಲಯ

PC:Ranjithsiji

ಮಣಿಕಮಂಗಳಂ ದೇವಾಲಯ
ಕೆಳದಿಯಿಂದ ಮಣಿಕಮಂಗಳಂ ದೇವಾಲಯಕ್ಕೆ ಕೇವಲ 1 ಕಿ,ಮೀ ಅಂತರದಲ್ಲಿದೆ. ಈ ದೇವಾಲಯವು ಭಗವತಿ ಅಂದರೆ ದುರ್ಗಿಯನ್ನು ಆರಾಧಿಸುವ ದೇಗುಲವಾಗಿದೆ. ಈ ದೇವಾಲಯದಲ್ಲಿ ಶಂಕರಾಚಾರ್ಯರ ತಂದೆ ಶಿವಗುರು ಪೂಜಾರಿಯಾಗಿದ್ದರು. ಸೌಂದರ್ಯ ಲಹರಿಯ ಪ್ರಕಾರ ಒಂದು ದಿನ ಶಂಕರರ ತಂದೆಯು ಶಂಕರರನ್ನು ಈ ದೇವಾಲಯಕ್ಕೆ ಹಾಲುನ್ನು ದೇವಿಗೆ ಅರ್ಪಿಸಿ ಬಾ ಎಂದು ಹೇಳಿ ಕಳಿಹಿಸಿದರಂತೆ ಆಗ ಶಂಕರರು ದೇವಾಲಯ ಗರ್ಭಗುಡಿಯಲ್ಲಿ ನಿಂತು ದೇವಿಗೆ ಹಾಲನ್ನು ಕುಡಿಯುವಂತೆ ಎಷ್ಟು ಬೇಡಿಕೊಂಡರು ಹಾಲು ಕುಡಿಯದ ತಾಯಿಯನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತರಂತೆ ಆಗಾ ದುರ್ಗಿ ಸ್ವರೂಪಿಯಾದ ಮಣಿಕಮಂಗಳಂ ತಾಯಿಯು ಆ ಪುಟ್ಟ ಮಗುವನ್ನು ಕಂಡು ಕರುಣೆಯಿಂದ ಮಗು ಶಂಕರ ತಂದಿರುವ ಹಾಲನ್ನು ಕುಡಿದಳಂತೆ. ಇದು ಈ ದೇವಾಲಯದ ತಾಯಿಯ ಮಹಿಮೆಯಗಿದೆ

ರಾಮಕೃಷ್ಣ ಅದ್ವೈತ ಆಶ್ರಮ
ಬೇಲೂರಿನ ರಾಮಕೃಷ್ಣ ಮಠದ ಪಶ್ಚಿಮ ಶಾಖೆ ಈ ರಾಮಕೃಷ್ಣ ಅದ್ವೈತ ಆಶ್ರಮವಾಗಿದೆ. ಈ ಆಶ್ರಮವು ಶಂಕರಾಚಾರ್ಯರ ಜನಿಸಿದ ಸ್ಥಳ ಕೆಳದಿಯಿಂದ ಹತ್ತಿರದಲ್ಲಿದೆ. ಇಲ್ಲಿ ದೊಡ್ಡದಾದ ಸಭಾಂಗಣವಿದ್ದು ರಾಮಕೃಷ್ಣ ದೇವಾಲಯವಿದೆ. ಈ ಆಶ್ರಮವು ಶಾಲೆ, ಗ್ರಂಥಾಲಯ, ದತ್ತಿ ಔಷಧಾಲಯವನ್ನು ನಿರ್ವಹಿಸುತ್ತಿದೆ.

ಶ್ರೀ ಕೃಷ್ಣ ದೆವಾಲಯ

PC:Srevalsan Nambudiri

ಶ್ರೀ ಕೃಷ್ಣ ದೆವಾಲಯ
ಶೃಂಗೇರಿಯ ಮಠದ ಪಶ್ಚಿಮದಲ್ಲಿರುವ ದೇವಾಲಯ ಶ್ರೀ ಕೃಷ್ಣನ ದೇಗುಲ. ಈ ದೇವಾಲಯವನ್ನು ಶಂಕರಾಚಾರ್ಯರ ಪೂರ್ವಜರ ದೇವಾಲಯ ಎನ್ನಲಾಗಿದೆ. ಶಂಕರರ ಕುಲದೇವತ ಶ್ರೀ ಕೃಷ್ಣನಾಗಿದ್ದನು ಹಾಗೂ ಈ ದೇವಾಲಯದಲ್ಲಿ ನಂಬೂದರಿ ಬ್ರಾಹ್ಮಣರು ಕೃಷ್ಣನನ್ನು ಪೂಜಿಸುತ್ತಾರೆ.

ಕೆಳದಿ

PC:Prasad Pillai Follow

ಉತ್ತಮ ಕಾಲಾವಧಿ
ಕೇರಳದ ಈ ದೇವಾಲಯಕ್ಕೆ ತೆರಳಲು ಸೆಪ್ಟೆಂಬರ್‍ನಿಂದ ಮಾರ್ಚ್‍ವರೆಗೂ ಉತ್ತಮವಾದ ಕಾಲಾವಧಿಯಾಗಿದೆ.

ತಲುಪುವ ಬಗೆ?
ವಾಯು ಮಾರ್ಗದ ಮೂಲಕ
ಕೆಳದಿಗೆ ಯಾವುದೇ ವಿಮಾನ ನಿಲ್ದಾಣವಿಲ್ಲದಿರುವುದರಿಂದ ಕೇರಳದ ಕೊಚ್ಚಿ ಏರ್‍ಪೋರ್ಟ್‍ನಿಂದ ಕೆಳದಿಗೆ ಕೇವಲ 25 ಕಿ,ಮೀ ದೂರದಲ್ಲಿದೆ.

ರೈಲು ಮಾರ್ಗದ ಮೂಲಕ
ಕೆಳದಿಗೆ ನೇರವಾಗಿ ಯಾವುದೇ ರೈಲುಗಳಿಲ್ಲ. ಆದರೆ ಕೇರಳದ ಅಂಗಮಲೈಗೆ ಹಲವಾರು ರೈಲು ಸಂಪರ್ಕವಿದೆ. ಈ ಅಂಗಮಲೈನಿಂದ ಕೆಳದಿಗೆ ಕೇವಲ 8 ಕಿ,ಮೀಯಷ್ಟು ಅಂತರದಲ್ಲಿದೆ.

ಬಸ್‍ನ ಮೂಲಕ
ಬೆಂಗಳೂರಿನಿಂದ ಹಲವಾರು ಖಾಸಗಿ ಬಸ್‍ಗಳ ಸೌಲಭ್ಯವಿರುವುದರಿಂದ ಸುಲಭವಾಗಿ ಕೆಳದಿಗೆ ತಲುಪಬದುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X