Search
  • Follow NativePlanet
Share
» »ಈ ಸ್ಥಳದಲ್ಲಿದೆ ತ್ರೇತಾಯುಗದ ಸರೋವರ, ಇಲ್ಲಿ ಕಾಗೆಯು ಗರುಡನಿಗೆ ರಾಮಾಯಣದ ಕಥೆಯನ್ನು ಹೇಳಿತಂತೆ!

ಈ ಸ್ಥಳದಲ್ಲಿದೆ ತ್ರೇತಾಯುಗದ ಸರೋವರ, ಇಲ್ಲಿ ಕಾಗೆಯು ಗರುಡನಿಗೆ ರಾಮಾಯಣದ ಕಥೆಯನ್ನು ಹೇಳಿತಂತೆ!

ಕಣ ಕಣದಲ್ಲೂ ಒಂದಲ್ಲ ಒಂದು ಇತಿಹಾಸ ಅಡಗಿರುವ ರಾಜ್ಯ ಉತ್ತರಾಖಂಡ. ಎತ್ತರದ ಪರ್ವತಗಳು ಮತ್ತು ಶಿಖರಗಳಿಂದ ಹಿಡಿದು ಅನೇಕ ನಿಗೂಢ ಸ್ಥಳಗಳವರೆಗೆ ಎಲ್ಲವೂ ಉತ್ತರಾಖಂಡದಲ್ಲಿ ನೋಡಬಹುದು. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಕಾಕಭೂಶುಂಡಿ ತಾಲ್ ಸಹ ಇಂತಹ ಒಂದು ವಿಸ್ಮಯಕಾರಿ ರಹಸ್ಯ ತಾಣವಾಗಿದೆ. ಈ ಸರೋವರವನ್ನು ಪೌರಾಣಿಕ ಕಾಲದಿಂದಲೂ ಸಾಕಷ್ಟು ಪವಿತ್ರವೆಂದು ಪರಿಗಣಿಸಲಾಗಿದೆ.

ತ್ರೇತಾ ಯುಗಕ್ಕೆ ಸಂಬಂಧಿಸಿದ ಈ ಸರೋವರಕ್ಕೆ ಸಂಬಂಧಿಸಿದಂತೆ ಅನೇಕ ರಹಸ್ಯಗಳು ಮತ್ತು ನಂಬಿಕೆಗಳಿವೆ. ಇದೇ ಕಾರಣಕ್ಕೆ ಈ ಸರೋವರದ ಮೇಲೆ ಸ್ಥಳೀಯರಿಗೆ ಅಪಾರ ನಂಬಿಕೆ. ಈ ಸರೋವರದಲ್ಲಿ ಸ್ನಾನ ಮಾಡುವ ಮೂಲಕ ತಮ್ಮ ಪಾಪಗಳನ್ನು ತೊಡೆದುಹಾಕಲು ಪ್ರವಾಸಿಗರು ಸಹ ಇಲ್ಲಿಗೆ ಬರುತ್ತಾರೆ. ಸರೋವರದ ಬಗ್ಗೆ ಇನ್ನಷ್ಟು ಮಾಹಿತಿ ಬೇಕೆಂದರೆ ಮುಂದೆ ಓದಿ...

ಈ ಸರೋವರ ಎಲ್ಲಿದೆ?

ಈ ಸರೋವರ ಎಲ್ಲಿದೆ?

ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿರುವ ಈ ಸರೋವರವು ಚಮೋಲಿಯಿಂದ 4,500 ಮೀಟರ್ ಎತ್ತರದಲ್ಲಿದೆ. ಹಾಥಿ ಪರ್ವತದ ತಪ್ಪಲಿನಲ್ಲಿರುವ ಈ ಸರೋವರದ ನೀರು ತಿಳಿ ಬಣ್ಣದ್ದಾಗಿದ್ದು, ಸರೋವರ ನೋಡಿದ ನಂತರ ಎಲ್ಲರೂ ಮಂತ್ರಮುಗ್ಧರಾಗುತ್ತಾರೆ. ಇಲ್ಲಿ ಅರಳುವ ವೈಲ್ಡ್‌ಪ್ಲವರ್ಸ್ ಸರೋವರವನ್ನು ಅಲಂಕರಿಸಲ್ಪಟ್ಟಿದೆ. ಈ ಸರೋವರವು ವಿಶ್ವ ಪರಂಪರೆಯ ತಾಣವಾದ ನಂದಾದೇವಿ ಬಯೋಸ್ಫಿಯರ್ ರಿಸರ್ವ್‌ನಲ್ಲಿದೆ.

ಸರೋವರದ ಮಾರ್ಗವು ಕಂಕುಲ್ ಪಾಸ್ ಮೂಲಕ ಹಾದುಹೋಗುತ್ತದೆ. ಈ ಸರೋವರದ ಇತಿಹಾಸವನ್ನು ರಾಮಾಯಣ ಕಾಲದಿಂದಲೂ ಹೇಳಲಾಗುತ್ತಿರುವುದು ವಿಶೇಷವಾಗಿದೆ. ರಾಮಾಯಣದಲ್ಲಿ ಕಾಕಭೂಶುಂಡಿ ಇಲ್ಲಿ ಕಾಗೆಯ ರೂಪ ತಳೆದು ಗರುಡನಿಗೆ ರಾಮಾಯಣದ ಕಥೆಯನ್ನು ಹೇಳಿದನೆಂಬ ಪ್ರತೀತಿ ಇದೆ. ಈ ಕಾರಣಕ್ಕಾಗಿ ಸರೋವರವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ತೊಲಗುತ್ತದೆ ಎಂದು ಹೇಳಲಾಗುತ್ತದೆ.

ಕಾಕಭೂಶುಂಡಿ ಯಾರು?

ಕಾಕಭೂಶುಂಡಿ ಯಾರು?

ಕಾಕಭೂಶುಂಡಿ ಕೆರೆಯ ಸತ್ಯಾಸತ್ಯೆಯ ಬಗ್ಗೆ ಹಲವು ವರ್ಷಗಳಿಂದ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಸಂತ ತುಳಸಿದಾಸರು ಬರೆದ ರಾಮಚರಿತಮಾನಸ್ ಪಾತ್ರಗಳಲ್ಲಿ ಕಾಕಭೂಶುಂಡಿಯೂ ಒಂದು. ಋಷಿ ಲೋಮೇಶನ ಶಾಪದಿಂದ ಕಾಕಭೂಶುಂಡಿಯು ಕಾಗೆಯಾದನೆಂದು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದಾಗಿ ಅವನು ತನ್ನ ಇಡೀ ಜೀವನವನ್ನು ಕಾಗೆಯಾಗಿ ಬದುಕಿದನು. ಈ ಸರೋವರದ ಮೇಲೆ ವಾಲ್ಮೀಕಿಗಿಂತ ಮುಂಚೆಯೇ ಕಾಕಭೂಶುಂಡಿಯು ಗರುಡನಿಗೆ ರಾಮಾಯಣವನ್ನು ಹೇಳಿದ್ದನೆಂದು ಹೇಳಲಾಗುತ್ತದೆ.

ಕಾಕಭೂಶುಂಡಿಯಿಂದ ತಿಳಿಯಿತು ರಾಮಾಯಣ ಕಥೆ

ಕಾಕಭೂಶುಂಡಿಯಿಂದ ತಿಳಿಯಿತು ರಾಮಾಯಣ ಕಥೆ

ರಾಮನು ಮೇಘನಾದನೊಂದಿಗೆ (ರಾವಣನ ಅತ್ಯಂತ ಪರಾಕ್ರಮಿ ಯೋಧ) ಯುದ್ಧ ಮಾಡುವಾಗ, ಆ ಸಮಯದಲ್ಲಿ ರಾಮನು ನಾಗಪಾಶದಿಂದ ಕಟ್ಟಲ್ಪಟ್ಟನು. ಮೇಘನಾದನು ನಾಗ ವಿದ್ಯೆಯನ್ನು ಸಹ ತಿಳಿದಿದ್ದನು. ಈ ಸಮಯದಲ್ಲಿ ಗರುಡನು ಶ್ರೀರಾಮನನ್ನು ನಾಗಪಾಶದಿಂದ ಮುಕ್ತಗೊಳಿಸಿದನು ಎಂದು ಹೇಳಲಾಗುತ್ತದೆ.

ಈ ಸಮಯದಲ್ಲಿ ಗರುಡನು ರಾಮನ ಬಗ್ಗೆ ಅರಿತುಕೊಂಡನು. ಇದನ್ನು ತಿಳಿಯಲು ಗರುಡನು ಬ್ರಹ್ಮನ ಬಳಿ ತೆರಳಿದಾಗ, ಬ್ರಹ್ಮನು ಗರುಡನನ್ನು ಶಿವನ ಬಳಿಗೆ ಕಳುಹಿಸಿದನು. ಅಲ್ಲಿಂದ ಶಿವನು ಗರುಡನನ್ನು ಕಾಕಭೂಶುಂಡಿ ಬಳಿ ಕಳುಹಿಸಿದನು. ಆಗ ಗರುಡನಿಗೆ ಕಾಕಭೂಶುಂಡಿಯಿಂದ ರಾಮಾಯಣ ಕಥೆ ತಿಳಿಯಿತು.

ಕಾಗೆಗಳು ಸಾಯಲು ಬರುತ್ತವೆ!

ಕಾಗೆಗಳು ಸಾಯಲು ಬರುತ್ತವೆ!

ಕಾಗೆಗಳು ಸಾಯಲು ಈ ಸರೋವರದ ಕಡೆಗೆ ಬರುತ್ತವೆ ಎಂದು ನಂಬಲಾಗಿದೆ. ಸರೋವರದ ಸುತ್ತಲೂ ಕಾಗೆಗಳ ರೆಕ್ಕೆಗಳು ಮುರಿದುಹೋಗಿವೆ. ಆದರೆ ಇಲ್ಲಿ ಕಾಗೆ ಸಾಯುವುದನ್ನು ಯಾರೂ ನೋಡಿಲ್ಲ.

ಸರೋವರ ತಲುಪುವುದು ಹೇಗೆ?

ಸರೋವರ ತಲುಪುವುದು ಹೇಗೆ?

ಈ ಸರೋವರದ ಸುಂದರವಾದ ಮಹಿಮೆಯನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ಒಮ್ಮೆ ಸರೋವರಕ್ಕೆ ಭೇಟಿ ನೀಡಿ. ಕಾಕಭೂಶುಂಡಿ ತಾಲ್ ಯಾವ ಕಾಲ್ಪನಿಕ ಪ್ರದೇಶಕ್ಕಿಂತ ಕಡಿಮೆಯಿಲ್ಲ. ವರ್ಣರಂಜಿತ ಹೂವುಗಳಿಂದ ಸುತ್ತುವರಿದಿರುವ ಈ ಸರೋವರವು ಚಾರಣಕ್ಕೆ ಹೆಚ್ಚು ಖ್ಯಾತಿ ಪಡೆದಿದೆ. ಇದು ಉತ್ತರಾಖಂಡದ ಎತ್ತರದ ಸರೋವರಗಳಲ್ಲಿ ಒಂದಾಗಿದೆ. ಈ ಹಾದಿಯು ಅರಣ್ಯ, ತಾಜಾ ಗಾಳಿ ಮತ್ತು ನೀರಿನಿಂದ ಕೂಡಿದ್ದು, ರಮಣೀಯವಾಗಿದೆ. ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳು, ಶ್ರೀಮಂತ ಪರಂಪರೆ, ಎತ್ತರದ ಸರೋವರ, ಹಾಥಿ ಪರ್ವತ, ಚೌಕಂಬಾ, ನೀಲಕಂಠ ಮತ್ತು ಇತರ ಶಿಖರಗಳ ಹತ್ತಿರದ ನೋಟವನ್ನು ಚಾರಣದ ಸಮಯದಲ್ಲಿ ಕಣ್ತುಂಬಿಕೊಳ್ಳಬಹುದು.

ಈ ಪ್ರವಾಸ ಆನಂದಿಸಲು ಉತ್ತಮ ಫಿಟ್‌ನೆಸ್ ಅಗತ್ಯವಿದೆ. ಪ್ರವಾಸದ ಮೊದಲು ಕೆಲವು ಫಿಟ್‌ನೆಸ್ ಚಟುವಟಿಕೆಗಳನ್ನು ಮಾಡುವ ಮೂಲಕ ನಿಮ್ಮ ದೇಹವನ್ನು ಸಿದ್ಧಪಡಿಸುವುದು ಸಹಾಯ ಮಾಡುತ್ತದೆ. ಟ್ರೆಕ್ಕಿಂಗ್ ಅನುಭವ ಇದ್ದರೆ ಹೆಚ್ಚು ಪ್ರಯೋಜನವಾಗಲಿದೆ.

ಈ ಸರೋವರವು ಉತ್ತರಾಖಂಡದ ಜೋಶಿಮಠ ಪ್ರದೇಶದಲ್ಲಿದೆ. ಇಲ್ಲಿಂದ ಎರಡು ಮಾರ್ಗಗಳಿವೆ. ಒಂದು ಘಂಗಾರಿಯಾ ಬಳಿಯ ಭಿಂದರ್ ಗ್ರಾಮದಿಂದ ಮತ್ತು ಇನ್ನೊಂದು ಸಾರಾ ಗೋವಿಂದ್ ಘಾಟ್‌ನಿಂದ. ಕಂಕುನ್ ಖಾಲ್ ಮತ್ತು ಫರ್ಸ್ವಾನ್ ಪಾಸ್ ದಾಟಿದರೆ ನೀವು ಎತ್ತರದ ಕಾಕಭೂಶುಂಡಿ ತಾಲ್ ಸರೋವರಕ್ಕೆ ಭೇಟಿ ನೀಡಬಹುದು.ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು

ಭೇಟಿ ನೀಡಲು ಉತ್ತಮ ಸಮಯ: ಮೇ - ಜೂನ್, ಸೆಪ್ಟೆಂಬರ್ ಮತ್ತು ಅಕ್ಟೋಬರ್

ಒಟ್ಟಾರೆ ಟ್ರೆಕ್ ದೂರ: 65 ಕಿಲೋಮೀಟರ್

ತೊಂದರೆ ಮಟ್ಟ: ಮಧ್ಯಮದಿಂದ ಕಠಿಣ (ಇದು ವ್ಯಕ್ತಿ ಮೇಲೆ ಅವಲಂಬಿತ)

ಅವಧಿ: 09 ದಿನಗಳು

ಕಾಕಭೂಶುಂಡಿ ಎತ್ತರ : 5230 ಮೀ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X