Search
  • Follow NativePlanet
Share
» »ಶಿವನು ಕೈಲಾಸದಿಂದ ಬಂದಿಳಿದ ಕೈಲಾಸ ಕೋನಾ ಜಲಪಾತವನ್ನು ಕಂಡಿದ್ದೀರಾ?

ಶಿವನು ಕೈಲಾಸದಿಂದ ಬಂದಿಳಿದ ಕೈಲಾಸ ಕೋನಾ ಜಲಪಾತವನ್ನು ಕಂಡಿದ್ದೀರಾ?

ಈ ಜಲಪಾತ ಸುಮಾರು 40 ಅಡಿ ಎತ್ತರವನ್ನು ಹೊಂದಿದೆ. ಜಲಪಾತದ ವಿಶೇಷತೆಯೆಂದರೆ, ವರ್ಷದುದ್ದಕ್ಕೂ ನೀರಿನಿಂದ ಕೂಡಿರುತ್ತದೆ. ಇಲ್ಲಿ 3 ಫಾಲ್ಸ್ ಇವೆ.

ಕೈಲಾಸ ಕೋನಾ ಜಲಪಾತವು ಆಂಧ್ರಪ್ರದೇಶದಲ್ಲಿನ ಚಿತ್ತೂರು ಜಿಲ್ಲೆಯಲ್ಲಿರುವ ಒಂದು ಅದ್ಭುತ ಜಲಪಾತವಾಗಿದೆ. ಈ ಜಲಪಾತಕ್ಕೆ ಕೈಲಾಸ ಕೋನಾ ಎನ್ನುವ ಹೆಸರು ಬಂದಿರುವುರ ಹಿಂದೆ ಒಂದು ಕಥೆ ಇದೆ. ಈ ಜಲಪಾತಕ್ಕೂ ಶಿವನಿಗೂ ಸಂಬಂಧವಿದೆಯಂತೆ. ಅದೇನು ಅನ್ನೋದನ್ನು ತಿಳಿಯೋಣ.

ಎಲ್ಲಿದೆ ಕೈಲಾಸಕೋನಾ ಜಲಪಾತ

ಎಲ್ಲಿದೆ ಕೈಲಾಸಕೋನಾ ಜಲಪಾತ

ತಿರುಪತಿಯಿಂದ 46 ಕಿ.ಮೀ, ಚೆನ್ನೈನಿಂದ 92 ಕಿ.ಮೀ, ಚೆಟ್ಟೂರಿನಿಂದ 92 ಕಿ.ಮೀ, ಚಿತ್ತೂರುದಿಂದ 76, ಕಣಿಪಾಕಂನಿಂದ 86 ಕಿಮೀ, ಕಾಂಚೀಪುರಂನಿಂದ 85 ಕಿಮೀ ಮತ್ತು ವೆಲ್ಲೂರ್‌ನಿಂದ 110 ಕಿಮೀ, ಕೈಲಾಸಕೋನಾ ಜಲಪಾತಗಳು ನೈಸರ್ಗಿಕ ದೀರ್ಘಕಾಲಿಕ ಜಲಪಾತ ಚಿತ್ತೂರು ಜಿಲ್ಲೆಯ ನಗರಿ ಬೆಟ್ಟಗಳ ಕಣಿವೆಯಲ್ಲಿದೆ.

 40 ಮೀಟರ್‌ ಎತ್ತರದ ಜಲಪಾತ

40 ಮೀಟರ್‌ ಎತ್ತರದ ಜಲಪಾತ


ಜಲಪಾತದ ಎತ್ತರವು ಸುಮಾರು 40 ಮೀಟರ್‌ಗಳಷ್ಟಿದ್ದು, ಬಂಡೆಯ ಕೆಳಗೆ ಒಂದು ಸಣ್ಣ ಕೊಳದಲ್ಲಿ ಇಳಿಯುತ್ತದೆ. ಇಲ್ಲಿನ ನೀರು ಗಣನೀಯ ಖನಿಜ ಮೌಲ್ಯಗಳು ಮತ್ತು ಔಷಧೀಯ ಶಕ್ತಿಯನ್ನು ಹೊಂದಿರುವ ಸ್ಫಟಿಕ ಗುಣವನ್ನು ಹೊಂದಿದೆ. ಕಾಯಿಲೆಗಳನ್ನು ಗುಣಪಡಿಸಬಹುದು ಎನ್ನಲಾಗುತ್ತದೆ. ಪ್ರವಾಸಿಗರಿಗೆ ಜಲಪಾತದ ಮೇಲ್ಭಾಗಕ್ಕೆ ಏರಲು ಅನುಮತಿ ನೀಡಲಾಗುವುದಿಲ್ಲ.

ದಂತಕಥೆಯ ಪ್ರಕಾರ

ದಂತಕಥೆಯ ಪ್ರಕಾರ

PC: Rahuljoseph ind
ಜಲಪಾತದ ಸಮೀಪ ಶಿವ ಮತ್ತು ಪಾರ್ವತಿಯ ಸಣ್ಣ ದೇವಾಲಯವಿದೆ. ದಂತಕಥೆಯ ಪ್ರಕಾರ, ಕೈಲಾಸನಾಥೇಶ್ವರ ಸ್ವಾಮಿ ಕೈಲಾಸಕೋನಾ ಜಲಪಾತದಿಂದ 9 ಕಿ.ಮೀ ದೂರದಲ್ಲಿರುವ ನಾರಾಯಣನಂನಲ್ಲಿ ಪದ್ಮಾವತಿ ದೇವಿಯೊಂದಿಗೆ ವೆಂಕಟೇಶ್ವರ ಸ್ವಾಮಿಯ ಮದುವೆಗೆ ಹಾಜರಾಗಲು ಭೂಮಿಗೆ ಬಂದಿದ್ದರು. ಕೈಲಾಸನಾಥೇಶ್ವರ ಈ ಸ್ಥಳದ ಮೂಕ ಪರಿಸರದಿಂದ ಪ್ರಭಾವಿತರಾಗಿ ಅಲ್ಲೇ ಧ್ಯಾನ ಮಾಡಲು ಉಳಿದುಕೊಂಡಿದ್ದರು, ಆದ್ದರಿಂದ ಇಲ್ಲಿಗೆ ಕೈಲಾಸಕೋನಾ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.

ಇಲ್ಲಿ 3 ಫಾಲ್ಸ್ ಇವೆ

ಇಲ್ಲಿ 3 ಫಾಲ್ಸ್ ಇವೆ

PC: Rahuljoseph ind
ಈ ಜಲಪಾತ ಸುಮಾರು 40 ಅಡಿ ಎತ್ತರವನ್ನು ಹೊಂದಿದೆ. ಜಲಪಾತದ ವಿಶೇಷತೆಯೆಂದರೆ, ವರ್ಷದುದ್ದಕ್ಕೂ ನೀರಿನಿಂದ ಕೂಡಿರುತ್ತದೆ. ಇಲ್ಲಿ 3 ಫಾಲ್ಸ್ ಇವೆ. ಶಿವ ಮತ್ತು ಪಾರ್ವತಿಯ ದೇವಸ್ಥಾನದ ಹತ್ತಿರ ಮುಖ್ಯ ಜಲಪಾತದ ಹೊರತಾಗಿ, ಎರಡು ಸಣ್ಣ ಜಲಪಾತಗಳು ಸುಮಾರು 4 ರಿಂದ 6 ಅಡಿಗಳಷ್ಟು ಎತ್ತರವಿದೆ . ಈ ಎರಡು ಸಣ್ಣ ಜಲಪಾತಗಳು ಸಣ್ಣ ಕೊಳಗಳಾಗಿ ಬೀಳುತ್ತವೆ. ಇಲ್ಲಿ ಸ್ನಾನ ಮಾಡಬಹುದು. ಈ ಎರಡು ಜಲಪಾತಗಳಿಗೆ ಯಾವುದೇ ಸುಸಜ್ಜಿತ ರಸ್ತೆಗಳಿಲ್ಲ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Rahuljoseph ind
ಕೈಲಾಸಕೋನಾ ಜಲಪಾತವನ್ನು ಭೇಟಿ ಮಾಡಲು ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್ ಮತ್ತು ಫೆಬ್ರವರಿ ತಿಂಗಳ ನಡುವೆ. ಕೈಲಾಸಕೋನಾವನ್ನು ಸುಲಭವಾಗಿ ತಲುಪಬಹುದು ಮತ್ತು ಉತ್ತಮ ಸಾರಿಗೆ ಸೌಲಭ್ಯಗಳನ್ನು ಹೊಂದಿದೆ. ವಾಹನಗಳ ಮೂಲಕ ಜಲಪಾತದ ವರೆಗೆ ತಲುಪಬಹುದು. ತಿರುಪತಿ ಮತ್ತು ಪುತ್ತೂರಿನ ಕೈಲಾಸಕೋನಾ ಜಲಪಾತಗಳಿಗೆ ಎಪಿಎಸ್ಆರ್‌ಟಿಸಿ ಬಸ್ಸುಗಳು ಲಭ್ಯವಿದೆ. ಆಂಧ್ರಪ್ರದೇಶ ಪ್ರವಾಸೋದ್ಯಮವು ಕೈಲಾಸಕೋನಾ ಜಲಪಾತಗಳಲ್ಲಿ ಅತಿಥಿ ಗೃಹಗಳೂ ಇವೆ.

ತಲುಪುವುದು ಹೇಗೆ?


ಕೈಲಾಸಕೋನಾ ಜಲಪಾತ ಅಥವಾ ಕೊನೆ ಜಲಪಾತ ಉತ್ತರಕೊಟ್ಟೈ - ಪುತ್ತೂರು - ತಿರುಪತಿ ರಸ್ತೆಯಲ್ಲಿದೆ. ಮುಖ್ಯ ಜಲಪಾತವನ್ನು ಸುಲಭವಾಗಿ ಕಾರಿನ ಮೂಲಕ ತಲುಪಬಹುದು. ಕಾರು ಪಾರ್ಕೀಂಗ್ ಮಾಡಲು ಸಾಕಷ್ಟು ಜಾಗವಿದೆ. ಕಾರ್ ಪಾರ್ಕಿಂಗ್‌ನಿಂದ ಮುಖ್ಯ ಜಲಪಾತವನ್ನು 3 ರಿಂದ 5 ನಿಮಿಷಗಳ ನಡಿಗೆ ಮೂಲಕ ತಲುಪಬಹುದು. ತಿರುಪತಿ ಕೈಲಾಸಕೋನಾಗೆ 44 ಕಿ.ಮೀ. ಬಸ್ ಅಥವಾ ರೈಲು ಸಾರಿಗೆಯು ಆಯಾ ಸ್ಟೇಷನ್‌ಗಳಿಂದ ಲಭ್ಯವಿದೆ. ಚೆನ್ನೈನಿಂದ ಕೈಲಾಸಕೋನಾಗೆ ತಲುಪುವುದು ಹೇಗೆ 70 ಕಿ.ಮೀ. ರೈಲು ನಿಲ್ದಾಣವು ಆಯಾ ಕೇಂದ್ರಗಳಿಂದ ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X