Search
  • Follow NativePlanet
Share
» »ಅತಿ ಉದ್ದ ರೈಲುಮಾರ್ಗದ ರೈಲಿನಲ್ಲಿ ಪ್ರವಾಸ

ಅತಿ ಉದ್ದ ರೈಲುಮಾರ್ಗದ ರೈಲಿನಲ್ಲಿ ಪ್ರವಾಸ

By Vijay

ಭಾರತೀಯ ರೈಲು ಇಂದು ಜಗತ್ತಿನ ಅತಿ ದೊಡ್ಡ ಸಂಸ್ಥೆಗಳ ಪೈಕಿ ಒಂದಾಗಿದೆ. ದೇಶದಲ್ಲೆ ಅತಿ ಹೆಚ್ಚು ಸಂಖ್ಯೆಯ ನೌಕರರನ್ನು ಹೊಂದಿರುವ ಭಾರತೀಯ ರೈಲು ಶ್ರೀಮಂತ ಐತಿಹಾಸಿಕ ಹಿನ್ನಿಲೆಯನ್ನು ಹೊಂದಿದೆ. ದೇಶದ ಮೂಲೆ ಮೂಲೆಗಳನ್ನು ಬೆಸೆಯುವ ಭಾರತೀಯ ರೈಲುಗಳಲ್ಲಿ ಪ್ರಯಾಣ ಮಾಡುವ ಭಾರತೀಯರ ಸಂಖ್ಯೆಯೂ ಅಪಾರ.

ಏರ್ ಇಂಡಿಯಾದಿಂದ ವಿದ್ಯಾರ್ಥಿ ವಿಶೇಷ ದರಗಳು

ಸಾಮಾನ್ಯವಾಗಿ ಅತಿ ಹೆಚ್ಚು ಅಂತರವಿರುವ ಎರಡು ರಾಜ್ಯಗಳಿಗೆ ಅಥವಾ ಊರುಗಳಿಗೆ ಬಸ್ಸುಗಳು ದೊರೆಯುವುದು ಅಥವಾ ಲಭ್ಯವಿರುವುದು ಕಷ್ಟ. ಇಂತಹ ಸಂದರ್ಭಗಳಲ್ಲಿ ಭಾರತೀಯ ರೈಲುಗಳು ಪ್ರಮುಖ ಪಾತ್ರವಹಿಸುತ್ತವೆ. ಕೇವಲ ಮಹಾನಗರಗಳನ್ನು ಮಾತ್ರವೆ ಬೆಸೆಯುವ ವಿಮಾನಗಳಂತಲ್ಲದೆ ರೈಲುಗಳು, ಹಳ್ಳಿಗಳು ಹಾಗೂ ಸಾಮಾನ್ಯ ಪಟ್ಟಣಗಳನ್ನೂ ಸಹ ಬೆಸೆಯುತ್ತವೆ. ಅಲ್ಲದೆ ಪ್ರಯಾಣದ ದರಗಳೂ ಸಹ ಮಧ್ಯಮ ವರ್ಗದ ವ್ಯಕ್ತಿಯ ಕೈಗೆಟಕುವ ರೀತಿಯಲ್ಲಿರುತ್ತದೆ. ಇದೆಲ್ಲ ಕಾರಣಗಳಿಂದ ಭಾರತೀಯ ರೈಲುಗಳು ಸಂಚಾರದ ಪ್ರಮುಖ ಹಾಗೂ ನೆಚ್ಚಿನ ಮಾಧ್ಯಮವಾಗಿದೆ.

ವಿಶೇಷ ಲೇಖನ : ಪ್ರಸಿದ್ಧ ಪ್ರವಾಸಿ ರೈಲು ಮಾರ್ಗಗಳು

ಇನ್ನೂ ರೈಲು ಪ್ರವಾಸವು ತುಂಬ ಹರ್ಷದಾಯಕವಾಗಿರುತ್ತದೆ. ಸ್ನೆಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ರೈಲಿನಲ್ಲಿನ ಪ್ರವಾಸ ಎಂದಿಗೂ ಮರೆಯಲಾಗದ ಸಂತಸದ ಅನುಭೂತಿಯನ್ನು ಕರುಣಿಸುತ್ತದೆ. ಅದೆಷ್ಟೊ ಜನರಿಗೆ ರೈಲಿನಲ್ಲಿಯೆ ಪ್ರವಾಸ ಮಾಡುವ ಚಟವಿರುತ್ತದೆ. ಇನ್ನೂ ಹಲವರಿಗೆ ರೈಲುಗಳ ಕುರಿತು ತಿಳಿಯುವುದೆಂದರೆ ಬಲು ಇಷ್ಟದ ವಿಷಯ. ಇಂದು ಭಾರತದಲ್ಲಿ ಸಾಕಷ್ಟು ಸಂಖ್ಯೆಯ ರೈಲುಗಳು ದಿನನಿತ್ಯ ಪ್ರಯಾಣಿಕರ ಸೇವೆಗೆಂದು ಲಭ್ಯವಿದೆ. ಮಧ್ಯಮದಿಂದ ಹಿಡಿದು ಅತಿ ಉದ್ದನೆಯ ಮಾರ್ಗಗಳೂ ಸಹ ಲಭ್ಯವಿದೆ.

ಪ್ರಸ್ತುತ ಲೇಖನವು ಭಾರತದ ಅತಿ ಉದ್ದನೆಯ ರೈಲು ಮಾರ್ಗದ ಕುರಿತು ತಿಳಿಸುತ್ತದೆ. ಇದು ಅಸ್ಸಾಂ ರಾಜ್ಯದ ದಿಬ್ರುಗರ್ ನಿಂದ ತಮಿಳುನಾಡಿನ ಕನ್ಯಾಕುಮಾರಿಯನ್ನು ಬೆಸೆಯುತ್ತದೆ. ಈ ಮಾರ್ಗದ ಒಟ್ಟು ಉದ್ದ 4273 ಕಿ.ಮೀಗಳು. ಪ್ರಯಾಣಾವಧಿ 84.45 ಗಂಟೆಗಳು. ರೈಲು ಸಂಖ್ಯೆ ಹಾಗೂ ಹೆಸರು 15906 ವಿವೇಕ ಎಕ್ಸ್ ಪ್ರೆಸ್. ವಾರಕ್ಕೊಂದು ದಿನ (ದಿಬ್ರುಗರ್ ನಿಂದ ಶನಿವಾರ) ಮಾತ್ರ ಓಡಾಟ. ಒಟ್ಟು ನಿಲುಗಡೆಗಳು 57. ಯಾವೇಲ್ಲ ಸ್ಥಳಗಳ ಮೂಲಕ ಹಾದು ಹೋಗುತ್ತದೆಂಬುದನ್ನು ಸ್ಲೈಡುಗಳಲ್ಲಿ ತಿಳಿಯಿರಿ. ಕೇವಲ ಪ್ರಮುಖ ನಿಲುಗಡೆಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ.

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ವಿವೇಕ ಎಕ್ಸ್ ಪ್ರೆಸ್ ರೈಲು ದಿಬ್ರುಗಡ್ ನಿಂದ ಪ್ರತಿ ಶನಿವಾರ ರಾತ್ರಿ 11.45 ಹೊರಡುತ್ತದೆ. ಬ್ರಹ್ಮಪುತ್ರ ನದಿ ತಟದಲ್ಲಿ ನೆಲೆಸಿರುವ ದಿಬ್ರುಗಡ್ ಚಹಾ ತೋಟಗಳಿಗೆ ಅತ್ಯಂತ ಪ್ರಸಿದ್ಧ. ವಿಶ್ವ ಪ್ರಸಿದ್ಧ ಅಸ್ಸಾಂ ಚಹಾದ ಶೇ.50 ರಷ್ಟು ಪ್ರಮಾಣವನ್ನು ದಿಬ್ರುಗಡ್ ನಲ್ಲೆ ಉತ್ಪಾದಿಸಲಾಗುತ್ತದೆ. ದಿಬ್ರುಗಡ್ ಕುರಿತು ತಿಳಿಯಿರಿ.

ಚಿತ್ರಕೃಪೆ: Nborkakoty

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ತಿನ್ಸುಕಿಯಾ ನಗರ, ಇದು ಅಸ್ಸಾಮಿನ ತಿನ್ಸುಕಿಯಾ ಜಿಲ್ಲೆಯಲ್ಲಿದೆ. ಅಸ್ಸಾಂ ರಾಜ್ಯದ ಪ್ರಮುಖ ವ್ಯಾಪಾರೀ ಕೇಂದ್ರವಾಗಿರುವ ತಿನ್ಸುಕಿಯಾ ನಗರವು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು, ಅಸ್ಸಾಂ ರಾಜ್ಯದ ಇತರ ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರವಾಗಿಯೂ ಸೇವೆ ಸಲ್ಲಿಸುತ್ತದೆ. ಹೆಚ್ಚಿನ ಓದು. ಹೊಸ ತಿನ್ಸುಕಿಯಾ ಜಂಕ್ಷನ್ ರೈಲು ನಿಲ್ದಾಣ.

ಚಿತ್ರಕೃಪೆ: Iampartha

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಆಸ್ಸಾಂ ರಾಜ್ಯದ ಗೋರ್ಹಾತ್ ಬಳಿಯಿರುವ ಮಾರಿಯಾನಿ. ಇದು ನಾಗಾಲ್ಯಾಂಡ್ ಗಡಿಯ ಬಳಿ ನೆಲೆಸಿದೆ. ಈ ರೈಲು ಮಾರ್ಗದಲ್ಲಿ ಬರುವ ಈ ಪಟ್ಟಣವು ಪ್ರಮುಖವಾಗಿ ಗಿಬ್ಬಾನ್ ವನ್ಯಜೀವಿಧಾಮಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Macaca77

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ದೀಮಾಪುರ : ಈ ಮಾರ್ಗದಲ್ಲಿ ಬರುವ ಭಾರತದ ಈಶಾನ್ಯ ಭಾಗದಲ್ಲಿ ಭಾರೀ ಬೆಳವಣಿಗೆಯನ್ನು ಕಾಣುತ್ತಿರುವ ನಗರ ದೀಮಾಪುರ. ನಾಗಾಲ್ಯಾಂಡ್ ರಾಜ್ಯದಲ್ಲಿರುವ ಈ ಪಟ್ಟಣವನ್ನು ನಾಗಾಳ್ಯಾಂಡಿನ ಹೆಬ್ಬಾಗಿಲು ಎಂದು ಕರೆಯುತ್ತಾರೆ. ಪ್ರವಾಸ ವಿವರ

ಚಿತ್ರಕೃಪೆ: PP Yoonus

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ದೀಫು : ಆಸ್ಸಾಂ ರಾಜ್ಯದ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿರುವ ದೀಫು ಒಂದು ಜನಪ್ರೀಯ ಗಿರಿಧಾಮ ಪ್ರದೇಶವಾಗಿದೆ. ಸ್ಥಳೀಯ ಭಾಷೆಯಲ್ಲಿ ಇದರ ಅಕ್ಷರಶಃ ಅರ್ಥ ಶ್ವೇತ ವರ್ಣದ ನೀರು ಎಂದಾಗುತ್ತದೆ. ಸುತ್ತಮುತ್ತಲಿನ ಪ್ರದೇಶಗಳ ಜನರ ನೆಚ್ಚಿನ ಪ್ರವಾಸಿ ಕೇಂದ್ರ ಇದಾಗಿದೆ.

ಚಿತ್ರಕೃಪೆ: Sardar Hironjyoti Beshra

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಆಸ್ಸಾಂ ರಾಜ್ಯದ ನಗಾಂವ್ ಜಿಲ್ಲೆಯಲ್ಲಿರುವ ಲುಮ್ಡಿಂಗ್ ಒಂದು ಪುರಸಭಾ ಪಟ್ಟಣವಾಗಿದೆ. ಅಲ್ಲದೆ ಇಲ್ಲಿರುವ ಜಂಕ್ಷನ್ ರೈಲು ನಿಲ್ದಾಣವು ಈಶಾನ್ಯ ಭಾರತದ ಹಾಗೂ ಈಶಾನ್ಯ ಫ್ರಾಂಟೀಯರ್ ರೈಲಿನ ಪ್ರಮುಖ ಅಂಗವಾಗಿದೆ.

ಚಿತ್ರಕೃಪೆ: Abhinav Phangcho Choudhury

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಗುವಾಹಟಿ : ಗುವಾಹಟಿಯು ಅಸ್ಸಾ೦ ರಾಜ್ಯದ ಒ೦ದು ಪ್ರಮುಖ ಹಾಗೂ ದೊಡ್ಡ ನಗರವಾಗಿದೆ. ದೇಶದ ಈಶಾನ್ಯ ಭಾಗದಲ್ಲಿರುವ ಇದು ಬ್ರಹ್ಮಪುತ್ರ ನದಿ ದ೦ಡೆಯ ಮೇಲೆ ನೆಲೆಸಿದೆ. ಕೇವಲ ಅಸ್ಸಾ೦ ರಾಜ್ಯ ಮಾತ್ರವಲ್ಲದೇ, ಪ್ರಾದೇಶಿಕ ನೆಲೆಯಲ್ಲಿಯೂ ಸಹ ವೈವಿಧ್ಯತೆಯ ನೈಜ ರೂಪವಾಗಿರುವ ಈ ಪಟ್ಟಣವು, ಮ೦ತ್ರಮುಗ್ಧಗೊಳಿಸುವ ನಗರವಾಗಿದೆ. ಹೆಚ್ಚಿನ ವಿವರ.

ಚಿತ್ರಕೃಪೆ: Nikhilroy21

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಗುವಾಹಟಿ ನಗರದಿಂದ 135 ಕಿ.ಮೀ ಗಳಷ್ಟು ದೂರದಲ್ಲಿರುವ ಗುವಾಲಪಾರಾ ಪಟ್ಟಣವು ಬ್ರಹ್ಮಪುತ್ರ ನದಿಯ ದಂಡೆಯ ಮೇಲೆ ನೆಲೆಸಿದೆ. ಈ ಮಾರ್ಗದಲ್ಲಿ ಗುವಾಹಟಿಯ ನಂತರ ಬರುವ ನಿಲುಗಡೆ ಇದಾಗಿದೆ. ಇದು ಪ್ರಮುಖವಾಗಿ ತನ್ನ ಪ್ರಕೃತಿ ಸೊಬಗಿಗೆ ಹೆಸರುವಾಸಿಯಾಗಿದೆ. ಹುಲುಕಂದಾ ಬೆಟ್ಟ ಇಲ್ಲಿ ಭೇಟಿ ನೀಡಬಹುದಾದ ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರಕೃಪೆ: Travelling Slacker

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಬೊಂಗೈಗಾಂವ್ : ಆಸ್ಸಾಂ ರಾಜ್ಯದಲ್ಲಿರುವ ಪ್ರಮುಖ ನಗರಗಳ ಪೈಕಿ ಬೊಂಗೈಗಾಂವ್ ಸಹ ಒಂದು. ಅಲ್ಲದೆ ರಾಜ್ಯದ ನಾಲ್ಕನೆಯ ಅತಿ ದೊಡ್ಡ ನಗರವಾಗಿದೆ ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದಲೂ ಸಹ ಸಾಕಷ್ಟು ಮಹತ್ವ ಪಡೆದಿದೆ.

ಚಿತ್ರಕೃಪೆ: Simanta5000

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಕೊಕರಾಝಾರ್ : ಕೊಕರಾಝಾರ್ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಈ ಪಟ್ಟಣ ಗೌರಂಗ್ ನದಿಯ ದಂಡೆಯ ಮೇಲೆ ನೆಲೆಸಿದೆ. ಈಶಾನ್ಯ ಭಾರತೀಯ ರೈಲ್ವೆಯು ಈ ಪಟ್ಟಣವನ್ನು ಉತ್ತರ ಹಾಗೂ ದಕ್ಷಿಣ ಎಂಬ ಎರಡು ವಿಭಗಗಳಲ್ಲಿ ಪ್ರತ್ಯೇಕಿಸಿದೆ. ಇದು ಪ್ರಮುಖವಾಗಿ ತನ್ನಲ್ಲಿರುವ ಅಪರೂಪವಾಗಿ ಕಂಡುಬರುವ ಬ್ರಹ್ಮನ ದೇವಸ್ಥಾನಕ್ಕೆ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: daimalu

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಲೀಪುರ ದ್ವಾರ : ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ಅಲೀಪುರದ್ವಾರ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಅಲೀಪುರದ್ವಾರವು ಹಿಮಾಲಯ ಪರ್ವತಗಳ ಕೆಳಬದಿಯಲ್ಲಿ ಹರಿದಿರುವ ಕಲ್ಜಾನಿ ನದಿಯ ಪೂರ್ವ ದಂಡೆಯ ಮೇಲೆ ನೆಲೆಸಿದೆ. ಈ ಪ್ರದೇಶವು ವನ್ಯಜೀವಿ ಸಂಪತ್ತು, ಸೊಂಪಾಗಿ ಬೆಳೆದ ಕಾಡುಗಳು ಹಾಗೂ ವಿಶಿಷ್ಟ ಕಟ್ಟಿಗೆಗಳಿಗೆ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Avinashjammar

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಜಲ್ಪೈಗುರಿ : ಜಲ್ಪೈಗುರಿ ಜಿಲ್ಲೆಯು ಉತ್ತರದಲ್ಲಿ ಭೂತಾನ್ ಮತ್ತು ಪೂರ್ವದಲ್ಲಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಗಡಿಯೊಂದಿಗೆ ಹೊಂದಿಕೊಂಡಿದೆ. ಪ್ರವಾಸಿ ದೃಷ್ಟಿಯಿಂದ ಈ ಪಟ್ಟಣವು ಮಹತ್ವ ಪಡೆದಿದೆ. ಹೆಚ್ಚಿನ ವಿವರ.

ಚಿತ್ರಕೃಪೆ: Arne Hückelheim

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ಮಾಲ್ಡಾ ಜಿಲ್ಲೆಯ ಮಾಲ್ಡಾ ಪಟ್ಟಣವು ಒಂದು ಐತಿಹಾಸಿಕ ನಗರವಾಗಿದೆ. ಸ್ಥಳೀಯ ಭಾಷೆಯ ಈ ಪಟ್ಟಣದ ಹೆಸರಿನ ಅರ್ಥ "ಮಾವಿನ ನಗರ" ಎಂದಾಗುತ್ತದೆ. ಇದು ಪಶ್ಚಿಮ ಬಂಗಾಳ ರಾಜ್ಯದ ಏಳನೆಯ ದೊಡ್ಡ ನಗರವಾಗಿದೆ. ನಗರದ ಐತಿಹಾಸಿಕ ಪ್ರವೇಶ ದ್ವಾರ.

ಚಿತ್ರಕೃಪೆ: Dipankan001

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಪಶ್ಚಿಮ ಬಂಗಾಳ ರಾಜ್ಯದ ಬಿರ್ಭೂಮ್ ಜಿಲ್ಲೆಯ ರಾಂಪುರ ಹಟ್ ಈ ಮಾರ್ಗದ ಒಂದು ನಿಲುಗಡೆ. ಈ ಪಟ್ಟಣವು ತನ್ನಲ್ಲಿರುವ ತಾರಾಪೀಠದ ತಾರಾ ದೇವಿಯ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ತಾರಾ ದೇವಿಯು ತಾಂತ್ರಿಕ ಶಕ್ತಿಯ ಮುಖ್ಯ ದೇವತೆಯಾಗಿದ್ದು ತಾಂತ್ರಿಕ ಅನುಯಾಯಿಗಳಿಗೆ ಇದು ಪ್ರಮುಖ ಸ್ಥಳವಾಗಿದೆ. ಇಲ್ಲಿನ ರುದ್ರ ಭೂಮಿಯ ಸುತ್ತ ಮುತ್ತಲು ತಾಂತ್ರಿಕ ಆರಾಧನೆಗೆ ಆದರ್ಶಮಯ ಎಂದು ಹೇಳಲಾಗುತ್ತದೆ. ತಾರಾಪೀಠದ ದೇವಿಯ ವಿಗ್ರಹ.

ಚಿತ್ರಕೃಪೆ: Debojyoti Roy

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಪಶ್ಚಿಮ ಬಂಗಾಳ ರಾಜ್ಯದ ಪ್ರಮುಖ ಕೈಗಾರಿಕಾ ನಗರವಾದ ದುರ್ಗಾಪುರ ಒಂದು ರೋಮಾಂಚನಕಾರಿ ಪ್ರವಾಸಿ ಆಕರ್ಷಣೆಯಾಗಿದೆ. ರಾಜಯದ ಮಧ್ಯ ಭಾಗದಲ್ಲಿ ನೆಲೆಸಿರುವ ಈ ಪಟ್ಟಣವು ಕೈಗಾರಿಕೆಗಳ ನಗರವಾಗಿದ್ದರೂ ಸಹ ಇಲ್ಲಿ ಪ್ರವಾಸಿ ಆಕರ್ಷಣೆಗಳಿಗೇನೂ ಕಮ್ಮಿ ಇಲ್ಲ. ಪ್ರವಾಸಿ ವಿವರ.

ಚಿತ್ರಕೃಪೆ: Ethically Yours

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಪಶ್ಚಿಮ ಬಂಗಾಳದಲ್ಲಿರುವ ಕೊಲ್ಕತ್ತಾ ನಂತರದ ಎರಡನೆಯ ಅತಿ ದೊಡ್ಡ ನಗರ ಪ್ರದೇಶವೆ ಅಸನ್ಸೋಲ್. ಇದು ಬುರ್ದ್ವಾನ್ ಜಿಲ್ಲೆಯಲ್ಲಿದೆ. ಯುಕೆ ಮೂಲದ ಎನ್ ಜಿ ಒ ಒಂದರ ಪ್ರಕಾರ, ಈ ನಗರವು ಭಾರತದಲ್ಲಿ 11 ನೆಯ ಹಾಗೂ ಜಗತ್ತಿನಲ್ಲಿಯೆ 42 ನೆಯ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.

ಚಿತ್ರಕೃಪೆ: Smeet Chowdhury

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಬಂಕುರಾ ಈ ಮಾರ್ಗದಲ್ಲಿ ಬರುವ ಒಂದು ನಿಲುಗಡೆಯಾಗಿದೆ. ಇದು ಪಶ್ಚಿಮ ಬಂಗಾಳ ರಾಜ್ಯದ ಬಂಕುರಾ ಜಿಲ್ಲೆಯಲ್ಲಿದೆ. ಬಂಕುರಾ ಒಂದು ಐತಿಹಾಸಿಕ ಪಟ್ಟಣವಾಗಿದ್ದು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ. ಬಂಕುರಾದಿಂದ 30 ಕಿ.ಮೀ ದೂರದಲ್ಲಿರುವ ಬಿಷ್ಣುಪುರಿನ ಜೋರ ಮಂದಿರ.

ಚಿತ್ರಕೃಪೆ: Jonoikobangali

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಕಂಗ್ಸಬತಿ ನದಿ ದಡದಲ್ಲಿ ನೆಲೆಗೊಂಡಿರುವ ಪಟ್ಟಣ ಮಿಡ್ನಾಪೋರ್ ಈ ಮಾರ್ಗದ ಒಂದು ನಿಲುಗಡೆಯಾಗಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ಸಾಮೀಪ್ಯದಲ್ಲಿರುವ ಗದ್ದಲಮಯ ಪ್ರವಾಸಿ ತಾಣ ಇದಾಗಿದೆ. ಪ್ರವಾಸಿ ವಿವರ. ಗೋಪೇಗಡ್ ಇಕೊ ಉದ್ಯಾನದ ವೀಕ್ಷಣಾ ಗೋಪುರ.

ಚಿತ್ರಕೃಪೆ: Tirtha Tanay Mandal

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಬಾಲ ಈಶ್ವರ ನಂತರ ಬಾಲೇಶ್ವರ ಎಂದಾಗಿ ಕಾಲ ಉರುಳಿದಂತೆ ಬಾಲೇಸ್ವರ ಆಗಿ ಇಂದು ಒರಿಯಾ ಭಾಷೆಯಲ್ಲಿ ಬಾಲಸೊರ್ ಎಂಬ ಹೆಸರು ಪಡೆದುಕೊಂಡಿದೆ. ಬಾಲಸೊರ್ ಒಂದು ವಾಣಿಜ್ಯ ಹಾಗೂ ಔದ್ಯೋಗಿಕ ಕೇಂದ್ರವಾಗಿದ್ದು ಅಪಾರ ಜನತೆಗೆ ಬದುಕುವ ದಾರಿ ಕಲ್ಪಿಸಿದೆ. ಇಲ್ಲಿನ ಪ್ರವಾಸಿ ಆಕರ್ಷಣೆ ಎಂದರೆ ಸುಮಾರು 20 ಕಿ.ಮೀ ದೂರದಲ್ಲಿರುವ ಚಾಂದೀಪುರ ಎಂಬ ಸಮುದ್ರ ತೀರ. ಇದೊಂದು ಅಚ್ಚರಿಯ ಕಡಲ ತೀರವಾಗಿದೆ. ಅಂದರೆ ರಾತ್ರಿಯಲ್ಲಿ ಭೋರ್ಗರೆದು ರೌದ್ರತೆ ತೋರುವ ಸಮುದ್ರವು ಬೆಳಗಾಗುತ್ತಿದ್ದಂತೆ ಸೂರ್ಯನ ಪ್ರಖರತೆ ಪಸರಿಸಿದಂತೆ ಶಾಂತ ಮೂರ್ತವಾಗುತ್ತದೆ ಹಾಗೂ ನೀರು ಹೆಜ್ಜೆ ಹೆಜ್ಜಯಾಗಿ ಹಿಂದೆ ಸರಿಯ ತೊಡಗುತ್ತದೆ. ವಿಸ್ಮಯಕರ ವಿಷಯವೆಂದರೆ ಮಧ್ಯಾಹ್ನದ ಸುಮಾರಿಗೆ ನೀರನ್ನು ಮುಟ್ಟಲು ಸಮುದ್ರದ ತಳದ ಮೇಲೆ ಸುಮಾರು ಮೂರ್ನಾಲ್ಕು ಕಿ.ಮೀ ನಡೆದುಕೊಂಡೇ ಹೋಗ ಬೇಕು.

ಚಿತ್ರಕೃಪೆ: Sankara Subramanian

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಈ ಮಾರ್ಗದಲ್ಲಿರುವ ಮತ್ತೊಂದು ನಿಲುಗಡೆ. ಕಟಕ್ ಪಟ್ಟಣ. ಒಡಿಶಾ(ಒರಿಸ್ಸಾ)ದ ಪ್ರಸ್ತುತ ರಾಜಧಾನಿಯಾಗಿರುವ ಭುವನೇಶ್ವರ್ ನಿಂದ ಸುಮಾರು 28 ಕಿ.ಮೀ. ಗಳಷ್ಟು ದೂರದಲ್ಲಿರುವ ಕಟಕ್ ನಗವು ಹಿಂದೆ ಒಡಿಶಾದ ಮೊದಲಿನ ರಾಜಧಾನಿಯಾಗಿತ್ತು. ಇಂದು ಈ ನಗರವನ್ನು ಒರಿಸ್ಸಾದ ಸಾಂಸ್ಕೃತಿಕ ಮತ್ತು ವಾಣಿಜ್ಯ ರಾಜಧಾನಿ ಎಂದು ಪರಿಗಣಿಸಲಾಗಿದ್ದು, ರಾಜ್ಯದ ಅತ್ಯಂತ ದೊಡ್ಡ ಹಾಗೂ ಹಳೆ ನಗರಗಳ ಪಟ್ಟಿಯಲ್ಲಿ ಕಟಕ್ ಸಹ ಒಂದಾಗಿದೆ. ಕಟಕ್ ವಿವರ.

ಚಿತ್ರಕೃಪೆ: Kamalakanta777

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಕಟಕ್ ನಂತರ ಬರುವ ಮುಖ್ಯ ನಿಲುಗಡೆ, ಒಡಿಶಾದ ರಾಜಧಾನಿ ನಗರ ಭುವನೇಶ್ವರ. ರಾಜಧಾನಿ ಪಟ್ಟಣವಾಗಿರುವುದರಿಂದ ಭುವನೇಶ್ವರವು ಸಾಕಷ್ಟು ದೊಡ್ಡ ನಗರ ಪ್ರದೇಶವಾಗಿದ್ದು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ನೋಡಬಹುದಾಗಿದೆ. ಭುವನೇಶ್ವರ ಕುರಿತು ವಿವರ. ಭುವನೇಶ್ವರದಲ್ಲಿರುವ ಬಿಂದುಸಾಗರ ಕೆರೆ, ಚಂದನ ಮಂಟಪ ಹಾಗೂ ಅನಂತ ವಾಸುದೇವ ದೇವಾಸ್ಥಾನ.

ಚಿತ್ರಕೃಪೆ: Sarba

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ನಂತರ ಆಂಧ್ರಪ್ರದೇಶಕ್ಕೆ ಪ್ರವೇಶಗೊಳ್ಳುವ ರೈಲು ಮಾರ್ಗವು ಮೊದಲಿಗೆ ಪಲಾಸಾ ಪ್ರಾವೇಶಿಸಿ ನಂತರ ಶ್ರೀಕಾಕುಲಂ ಪಟ್ಟಣಕ್ಕೆ ಹೊಂದಿಕೊಂಡತೆ ಇರುವ ಶ್ರೀಕಾಕುಲಂ ರೋಡ್ ರೈಲು ನಿಲ್ದಾಣ ತಲುಪುತ್ತದೆ. ಶ್ರೀಕಾಕುಲಂ ಹಿಂದೆ ವೈಜಾಗ್ ಅಥವಾ ವಿಶಾಖಾಪಟ್ಟಣದಿಂದ ಪ್ರತ್ಯೇಕಿಸಲ್ಪಟ್ಟ ಜಿಲ್ಲೆಯಾಗಿದ್ದು ಶ್ರೀಕಾಕುಲಂ ತಾಲೂಕು ಇದರ ಜಿಲ್ಲಾ ಕೇಂದ್ರವಾಗಿದೆ. ಶ್ರೀಕಾಕುಲಂನಲ್ಲಿರುವ ಪ್ರಸಿದ್ಧ ಅರಸವಿಲ್ಲಿ ಸೂರ್ಯ ದೇಗುಲ.

ಚಿತ್ರಕೃಪೆ: Adityamadhav83

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಶ್ರೀಕಾಕುಲಂ ನಂತರ ಬರುವ ಸ್ಥಳ ವಿಜಯನಗರಂ. ಬಂಗಾಳ ಕೊಲ್ಲಿ ಸಮುದ್ರದಿಂದ 18 ಕಿ.ಮೀ ಒಳ ಪ್ರದೇಶದಲ್ಲಿ ಈ ಸ್ಥಳ ನೆಲೆಸಿದೆ. ಕಳಿಂಗ ರಾಜರುಗಳಿಂದಲೂ ಸಹ ಆಳಲ್ಪಟ್ಟ ಈ ನಗರವು ಐತಿಹಾಸಿಕವಾಗಿ ಮಹತ್ವ ಪಡೆದಿದೆ. ನಾಗವಲಿ, ವೇಗವತಿ, ಗೋಮುಖಿ, ಸುವರ್ಣಮುಖಿ, ಚಂಪಾವತಿ ಹಾಗೂ ಗೋಷ್ಟಾನಿ ನದಿಗಳು ಈ ನಗರದಲ್ಲಿ ಹರಿದಿದ್ದು ಸಾಕಷ್ಟು ನೀರಾವರಿ ಯೋಜನೆಗಳಿಗೆ ಸಹಾಯವಾಗಿವೆ. ಪ್ರವಾಸಿ ಆಕರ್ಷಣೆಯೂ ಆಗಿರುವ ಈ ಪಟ್ಟಣದಲ್ಲಿ ಐತಿಹಾಸಿಕ ಸ್ಮಾರಕ ರಚನೆಗಳನ್ನು ಕಾಣಬಹುದಾಗಿದೆ. ವಿಜಯನಗರಂನ ಕೋಟೆ.

ಚಿತ್ರಕೃಪೆ: Adityamadhav83

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ವೈಜಾಗ್ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವ ವಿಶಾಖಾಪಟ್ಟಣಂ ಆಂಧ್ರಪ್ರದೇಶ ರಾಜ್ಯದ ಅತಿ ದೊಡ್ಡ ಪಟ್ಟಣವಾಗಿದ್ದು, ಭಾರತದ ಪೂರ್ವ ಕರಾವಳಿ ತೀರದಗುಂಟ ನೆಲೆಸಿರುವ ಚೆನ್ನೈ ಹಾಗೂ ಕೊಲ್ಕತ್ತಾ ನಗರಗಳ ನಂತರದ ಅತೊ ದೊಡ್ಡ ಪಟ್ಟಣವೂ ಸಹ ಆಗಿದೆ. ವೈಶಾಕ ದೇವತೆಯ ಗೌರವಾರ್ಥಕವಾಗಿ ಈ ಪಟ್ಟಣಕ್ಕೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ವಿಶಿಷ್ಟ ಆಕರ್ಷಣೆಗಳ ವಿಶಾಖಾಪಟ್ಟಣಂ

ಚಿತ್ರಕೃಪೆ: Candeo gauisus

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಆಂಧ್ರಪ್ರದೇಶದ ಸಾಂಸ್ಕೃತಿಕ ರಾಜಧಾನಿ ಎಂದೇ ಪ್ರಸಿದ್ಧವಾಗಿರುವ ಪ್ರದೇಶ ರಾಜಮಂಡ್ರಿ. ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ತೆಲುಗಿನ ಮೊಟ್ಟಮೊದಲ ಕವಿ 'ಆದಿಕವಿ' ಎಂದೇ ಪ್ರಸಿದ್ಧನಾದ ನನ್ನಯ್ಯನವರು ಹುಟ್ಟಿ ಬೆಳೆದು ಪ್ರವರ್ಧಮಾನಕ್ಕೆ ಬಂದ ಪಟ್ಟಣ ಇದು. ತೆಲುಗು ಭಾಷೆಯ ಸಾಹಿತ್ಯವೂ ಕೂಡ ಜನ್ಮ ತಳೆದದ್ದು ಇಲ್ಲಿಯೇ. ಹೆಚ್ಚಿನ ವಿವರ. ರಾಜಮಂಡ್ರಿ ಗೋದಾವರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಆರ್ಚ್ ಸೇತುವೆ.

ಚಿತ್ರಕೃಪೆ: Tatiraju.rishabh

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ವಿಜಯವಾಡಾ: ಮನಸ್ಸಿಗೆ ಉಲ್ಲಾಸ ನೀಡುವ ಆಂಧ್ರ ಪ್ರದೇಶದ ಪ್ರಮುಖ ನಗರಗಳಲ್ಲೊಂದಾದ ವಿಜಯವಾಡಕ್ಕೆ ಪ್ರವಾಸಕ್ಕಾಗಿ ಒಮ್ಮೆಯಾದರೂ ಭೇಟಿ ನೀಡಲೇಬೇಕು. ಇಲ್ಲಿನ ಪ್ರಕೃತಿ ಸೌಂದರ್ಯದ ಒಂದೊಂದು ನೋಟವೂ ವಿಭಿನ್ನವೇ. ಈ ಸೊಬಗನ್ನು ಇಲ್ಲಿಗೆ ಬಂದೇ ಅನುಭವಿಸಬೇಕು. ಹೆಚ್ಚಿನ ಪ್ರವಾಸಿ ವಿವರ.

ಚಿತ್ರಕೃಪೆ: vijay chennupati

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ನೆಲ್ಲೂರು : ಆಂಧ್ರಪ್ರದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ನೆಲ್ಲೂರು ಸಹ ಪ್ರಮುಖವಾಗಿದೆ ಅಲ್ಲದೆ ಪ್ರವಾಸಿ ದೃಷ್ಟಿಯಿಂದ ಇದು ರಾಜ್ಯದ ಜನಪ್ರೀಯ ಪಟ್ಟಣವೂ ಸಹ ಆಗಿದೆ. ನೆಲ್ಲೂರು ಕುರಿತು ಹೆಚ್ಚಿನ ವಿವರ.

ಚಿತ್ರಕೃಪೆ: Ramakrishna Reddy Y

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಸೇಲಂ : ತಮಿಳುನಾಡಿನ ಒಂದು ನಗರ ಸೇಲಂ. ಇದು ರಾಜಧಾನಿ ಚೆನ್ನೈನಿಂದ ಸುಮಾರು 340 ಕಿ.ಮೀ ಗಳಷ್ಟು ದೂರದಲ್ಲಿದೆ. ಸೇಲಂ ಅನ್ನು ಮಾವಿನ ನಗರ ಎಂದು ಕೂಡ ಕರೆಯಲಾಗಿದೆ. ಇದು ರಾಜ್ಯದಲ್ಲಿಯೇ 5 ನೇಯ ದೊಡ್ಡ ನಗರವಾಗಿದೆ. ಸೇಲಂ ಹೆಚ್ಚಿನ ಪ್ರವಾಸಿ ವಿವರಗಳು.

ಚಿತ್ರಕೃಪೆ: Arulmuru182002

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಈರೋಡ್ : ಚೆನ್ನೈನಿಂದ ಸುಮಾರು 400 ಕಿ.ಮೀ ಮತ್ತು ವಾಣಿಜ್ಯ ನಗರಿ ಕೊಯಮತ್ತೂರಿನಿಂದ 80 ಕಿ.ಮೀ ದೂರದಲ್ಲಿರುವ ಈರೋಡ್ ಭಾರತದ ಟೆಕ್ಸಾ ವ್ಯಾಲಿ ಅಥವಾ ಲ್ಯೂಮ್ ಸಿಟಿ ಎಂದೆ ಪ್ರಸಿದ್ಧವಾಗಿದೆ. ಭವಾನಿ ಹಾಗೂ ಕಾವೇರಿ ನದಿಯ ದಡದಲ್ಲಿರುವುದು ಈ ನಗರದ ಇನ್ನೊಂದು ವಿಶೇಷಣ. ಇದು ಮಗ್ಗದ ತಯರಿಕೆಯಲ್ಲೂ ಹೆಸರುವಾಸಿ. ಹೆಚ್ಚಿನ ವಿವರ. ಭವಾನಿ ಹಾಗೂ ಕಾವೇರಿಗಳ ಸಂಗಮ.

ಚಿತ್ರಕೃಪೆ: Rsrikanth05

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ತಮಿಳುನಾಡು ರಾಜ್ಯದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿರುವ ಕೊಯಮತ್ತೂರು ಈ ಮಾರ್ಗದ ಮತ್ತೊಂದು ಪ್ರಮುಖ ನಿಲುಗಡೆ. ನಗರೀಕರಣದ ದೃಷ್ಟಿಯಿಂದ ದೇಶದ 15 ನೇ ದೊಡ್ಡ ನಗರವಾಗಿರುವ ಕೊಯಮತ್ತೂರು ದೇಶದ ಅತ್ಯಂತ ಪ್ರಮುಖ ಕೈಗಾರಿಕಾ ತಾಣವೂ ಸಹ ಹೌದು. ಅಲ್ಲದೆ ಇದನ್ನು "ದಕ್ಷಿಣ ಭಾರತದ ಮ್ಯಾಂಚೆಸ್ಟರ್ " ಎಂದು ಸಹ ಕರೆಯುತ್ತಾರೆ. ಹೆಚ್ಚಿನ ವಿವರ.

ಚಿತ್ರಕೃಪೆ: Ask27

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಪಾಲಕ್ಕಾಡ್ : ಪಾಲಕ್ಕಾಡ್ ಎಂಬುದು ಕೇರಳ ರಾಜ್ಯದಲ್ಲಿರುವ ಒಂದು ಜಿಲ್ಲೆಯಾಗಿದೆ. ಆಂಗ್ಲ ಭಾಷೆಯಲ್ಲಿ ಪಾಲ್ಗಾಟ್ ಎಂದು ಕರೆಯಲ್ಪಡುವ ಈ ಜಿಲ್ಲೆಯು ಅಂಕು ಡೊಂಕಾಗಿ ಹರಡಿಕೊಂಡಿರುವ ಪಶ್ಚಿಮ ಘಟ್ಟ ಶ್ರೇಣಿಯ ಗುಂಟ ನೆಲೆಸಿರುವ ಪ್ರದೇಶವಾಗಿದೆ. ಸಿರು ಹೊದ್ದ ಭೂಭಾಗಗಳು, ದಟ್ಟವಾದ ಉಷ್ಣವಲಯದ ಕಾಡುಗಳು ಮತ್ತು ಕಲುಷಿತವಲ್ಲದ ಬೆಟ್ಟಗಾಡು ಪ್ರದೇಶಗಳೆಲ್ಲವು ಕೂಡಿ ಪಾಲಕ್ಕಾಡನ್ನು ನೋಡುಗರಿಗೆ ದೃಶ್ಯವೈಭವವನ್ನೆ ಕಣ್ಮುಂದೆ ತರುತ್ತವೆ. ಪಾಲಕ್ಕಾಡ್ ಭೇಟಿ.

ಚಿತ್ರಕೃಪೆ: Dinuraj K

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ತ್ರಿಶ್ಶೂರ್ : ತ್ರಿಶ್ಶೂರ್ ಒಂದು ಕೇವಲ ವಿರಾಮಕಾಲವನ್ನು ಕಳೆಯುವ ಸ್ಥಳವಷ್ಟೇ ಅಲ್ಲದೆ ಕೇರಳದ ಸಾಂಸ್ಕ್ರತಿಕ ರಾಜಧಾನಿಯೆಂದೂ ಸಹ ಪ್ರೀತಿಯಿಂದ ಕರೆಯಲ್ಪಡುತ್ತದೆ. ಸಾಕಷ್ಟು ಸುಂದರವಾದ, ಕಣ್ಣಿಗೆ ಇಂಪನ್ನು ಕೊಡುವ ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ನೋಡಬಹುದಾಗಿದೆ. ಹೆಚ್ಚಿನ ವಿವರ.

ಚಿತ್ರಕೃಪೆ: Prasanth Chandran

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಕೊಚ್ಚಿ-ಎರ್ನಾಕುಲಂ ಇವೆರಡೂ ಅವಳಿ ನಗರಗಳು. ಎರ್ನಾಕುಲಂ ಈ ಮಾರ್ಗದಲ್ಲಿ ಬರುವ ಮತ್ತೊಂದು ಪ್ರಮುಖ ಸ್ಥಳ. ಇದರ ಪಕ್ಕದಲ್ಲಿರುವ ಕೊಚ್ಚಿಯೂ ಪ್ರವಾಸಿ ದೃಷ್ಟಿಯಿಂದ ಸಾಕಷ್ಟು ಪ್ರಸಿದ್ಧಿ ಪಡೆದ ಸ್ಥಳ.

ಚಿತ್ರಕೃಪೆ: Adam63

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಕೊಟ್ಟಾಯಂ : ಕೇರಳಾ ರಾಜ್ಯದ ಬಹು ಪುರಾತನ ನಗರ. ದೇವರ ಸ್ವಂತ ನಗರ ಎಂದು ಕರೆಸಿಕೊಳ್ಳುವ ಈ ಪಟ್ಟಣವು ಶಿಕ್ಷಣ ಹಾಗೂ ಮುದ್ರಣ ಮಾಧ್ಯಮಕ್ಕೆ ಹೆಸರುವಾಸಿಯಾಗಿರುವುದಲ್ಲದೆ ಅಪಾರ ಕೊಡುಗೆಯನ್ನೂ ಸಹ ನೀಡಿದೆ. ಆದ್ದರಿಂದ ಇಂದು ಈ ನಗರವನ್ನು 'ಅಕ್ಷರ ನಗರ' ಅಥವಾ 'ಸಿಟಿ ಆಫ್ ಲೆಟರ್ಸ್' ಎಂದು ಕರೆಯುತ್ತಾರೆ. ಹೆಚ್ಚಿನ ವಿವರ.

ಚಿತ್ರಕೃಪೆ: joseph

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ತಿರುವನಂತಪುರಂ : ಕೇರಳದ ರಾಜ್ಯದ ರಾಜಧಾನಿ ತಿರುವನಂತಪುರಂ ದೇವತೆಗಳ ನಾಡು ಎಂದೇ ಕರೆಯಲ್ಪಡುತ್ತದೆ. ತಿರುವನಂತಪುರಂ ನ್ನು ಕೆಲವೊಮ್ಮೆ ತ್ರಿವೇಂದ್ರಂ ಎಂದೂ ಕರೆಯಲಾಗುತ್ತದೆ. ನ್ಯಾಶನಲ್ ಜಿಯೋಗ್ರಫಿ ಟ್ರಾವೆಲರ್ ಈ ಸ್ಥಳವನ್ನು ನೋಡಲೇಬೇಕಾದ ಸ್ಥಳಗಳಲ್ಲಿ ಒಂದು ಎಂದು ಪಟ್ಟಿಮಾಡಿದ್ದಾರೆ. ಮಹಾತ್ಮಾ ಗಾಂಧಿ ಈ ಸ್ಥಳವನ್ನು 'ಭಾರತದ ಸದಾ ಹಸಿರಿನ ನಗರ' ಎಂದು ಶೀರ್ಷಿಕೆ ಬರೆದಿದ್ದಾರೆ. ತ್ರಿವೇಂದ್ರಂ ನಗರವು 'ಭಾರತದ 10 ಹಚ್ಚ ಹಸಿರಿನ ನಗರಗಳಲ್ಲಿ ಒಂದು ಎಂದು ಪರಿಗಣಿಸಲಾದೆ. ತಿರುವನಂತಪುರಂ ಕುರಿತು. ಅನಂತ ಪದ್ಮನಾಭಸ್ವಾಮಿ ದೇವಾಲಯ.

ಚಿತ್ರಕೃಪೆ: Psudeep01

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ನಾಗರಕೋಯಿಲ್ : ಇಂದು ನಾಗರಕೋಯಿಲ್ ತಮಿಳುನಾಡಿನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದೆ. ಈ ಪ್ರದೇಶವು ಒಂದು ಕಡೆ ಅರೆಬಿಯನ್ ಸಮುದ್ರ ಮತ್ತೊಂದೆಡೆ ಪಶ್ಚಿಮ ಘಟ್ಟಗಳ ನಡುವೆ ನೆಲೆಗೊಂಡಿದೆ. ಬೆಟ್ಟಗಳ ಇಳಿಜಾರು, ಹುಲ್ಲುಹಾಸಿದ ಭೂಮಿ ಮತ್ತು ನೀಲಿ ಸಮುದ್ರ ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಹೆಚ್ಚಿನ ವಿವರ.

ಚಿತ್ರಕೃಪೆ: Kkdrua

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಅಸ್ಸಾಂನಿಂದ ಕನ್ಯಾಕುಮಾರಿವರೆಗೆ:

ಭಾರತದಲ್ಲಿ ಪ್ರಸ್ತುತ ಕಾರ್ಯ ನಿರತವಾಗಿರುವ ಅತಿ ಉದ್ದನೆಯ ರೈಲು ಮಾರ್ಗದ ಕೊನೆಯ ಸ್ಥಳ ಅಥವಾ ನಿಗದಿತ ತಲುಪುವ ಸ್ಥಳವೆ ಕನ್ಯಾಕುಮಾರಿ. ಕೇಪ್ ಕಾಮೊರಿನ್ ಎಂದೇ ಹೆಸರುವಾಸಿಯಾದ ಕನ್ಯಾಕುಮಾರಿ ಭಾರತದ ದಕ್ಷಿಣದ ತುತ್ತ ತುದಿಯಲ್ಲಿದೆ. ಹೆಚ್ಚಿನ ಪ್ರವಾಸಿ ವಿವರ.

ಚಿತ್ರಕೃಪೆ: himanisdas

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X