Search
  • Follow NativePlanet
Share
» »ಗುಂಡಿಗೆಯಿರುವವರಿಗೆ ಮಾತ್ರ ಜಲ್ಲಿಕಟ್ಟು ಆಟ

ಗುಂಡಿಗೆಯಿರುವವರಿಗೆ ಮಾತ್ರ ಜಲ್ಲಿಕಟ್ಟು ಆಟ

By Vijay

ತಮಿಳುನಾಡಿನಲ್ಲಿ ಅತ್ಯಂತ ಸಡಗರದಿಂದ ಆಚರಿಸಲಾಗುವ ಪೊಂಗಲ್ ಉತ್ಸವದ ಒಂದು ಭಾಗವಾದ "ಜಲ್ಲಿಕಟ್ಟು" ಅಥವಾ "ಮಂಜು ವೀರಟ್ಟು" ಸಾಹಸ ಪ್ರಧಾನ ರೋಮಾಂಚನಕಾರಿಯಾದ ಆಟವಾಗಿದೆ. ಈ ಆಟವು ಇನ್ನೂ ಜೀವಂತವಿರುವ ಜಗತ್ತಿನ ಪುರಾತನ ಆಟಗಳಲ್ಲಿ ಒಂದಾಗಿದ್ದು ಹಳ್ಳಿ ಉತ್ಸವದ ಅಡಿಯಲ್ಲಿ ತಮಿಳುನಾಡಿನ ವಿವಿಧ ಹಳ್ಳಿಗಳಲ್ಲಿ ಜನವರಿಯಿಂದ ಹಿಡಿದು ಜುಲೈ ತಿಂಗಳಿನವರೆಗೆ ಪ್ರತಿ ವರ್ಷವು ಈ ಆಟವನ್ನು ಆಯೋಜಿಸಲಾಗುತ್ತಿರುತ್ತದೆ. ಮದುರೈ ಬಳಿಯಿರುವ ಅಲಂಗನಲ್ಲೂರು ಹಳ್ಳಿಯಲ್ಲಿ ಆಯೋಜಿಸಲಾಗುವ ಆಟವು ಬಹಳಷ್ಟು ಜನಪ್ರಿಯವಾಗಿದೆ.

ಮೂಲತಃ ಈ ಆಟವು "ಪಾರಾಗು ಇಲ್ಲವೆ ಹೋರಾಡು" ಎಂಬ ಪ್ರಧಾನ ಅಂಶವನ್ನು ಹೊಂದಿದೆ. ದಷ್ಟಪುಷ್ಟವಾದ ಕೊಬ್ಬಿದ ಎತ್ತುಗಳನ್ನು ಪಳಗಿಸುವುದು ಈ ಆಟದ ಮುಖ್ಯ ಉದ್ದೇಶವಾಗಿದೆ. ತಮಿಳುನಾಡಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಈ ಪುರಾತನ ಆಟವು ಹಿಂದಿನ ರಜರುಗಳ ಕಾಲದಿಂದಲೆ ನಡೆದುಬಂದಿದೆ. ಅಂದಿನ ಕಾಲದಲ್ಲಿ ಯೋಧರ ಧೈರ್ಯ, ಪರಾಕ್ರಮಗಳನ್ನು ನಿರೂಪಿಸುವ ಉದ್ದೇಶದಿಂದ ಈ ಆಟವನ್ನು ಆಡಲಾಗುತ್ತಿತ್ತು. ದಂತಕಥೆಯ ಪ್ರಕಾರ, ಅಂದಿನ ಸ್ತ್ರೀಯರು ತಮಗೆ ಯೋಗ್ಯವಾದ ಪರಾಕ್ರಮಿ ಪತಿಯನ್ನು ಹುಡುಕಲು ಈ ಆಟದ ಮೊರೆ ಹೋಗುತ್ತಿದ್ದರು.

ಆಟದ ಪ್ರಕಾರಗಳು:

ಈ ಆಟದಲ್ಲಿ ಮುಖ್ಯವಾಗಿ ಮೂರು ಪ್ರಕಾರಗಳನ್ನು ಕಾಣಬಹುದು. ಅವುಗಳೆಂದರೆ ವಡಿ ಮಂಜು ವಿರಟ್ಟು, ವೇಲಿ ವಿರಟ್ಟು ಹಾಗು ವದಂ ಮಂಜು ವಿರಟ್ಟು. ವಡಿ ಮಂಜುವಿರಟ್ಟು ಆಟವು ಬಹಳಷ್ಟು ಅಪಾಯಕಾರಿ ಎಂದೆ ಹೇಳಬಹುದು.ಇದರಲ್ಲಿ ಒಬ್ಬ ವ್ಯಕ್ತಿಯು ಮಾತ್ರ ಪುಟಿದೆದ್ದು ಓಡುತ್ತಿರುವ ಗೂಳಿಯ ಡುಬ್ಬದ ಮೇಲೆ ಹಾರಿ ಕುಳಿತುಕೊಳ್ಳಬೇಕು. ಆತ ಅದರ ಬೆನ್ನ ಮೇಲೆ ಕುಳಿತು ಎಷ್ಟು ದೂರ ಚಲಿಸುತ್ತಾನೆ ಎಂಬುದರ ಮೇಲೆ ಪ್ರಶಸ್ತಿ ನೀಡಲಾಗುತ್ತದೆ.

ವೇಲಿ ವಿರಟ್ಟು ಆಟದಲ್ಲಿ ಎತ್ತುಗಳನ್ನು ಒಂದು ಮೈದಾನದಲ್ಲಿ ಬೀಡಲಾಗುತ್ತದೆ. ಈ ಎತ್ತುಗಳು ಯಾವುದೆ ದಿಕ್ಕಿನಲ್ಲಿ ತಮಗೆ ಬೇಕಾಬಿಟ್ಟಿಯಾಗಿ ಓಡಾಡುತ್ತವೆ. ಇವುಗಳಲ್ಲಿ ಬಹಳಷ್ಟು ಎತ್ತುಗಳು ಮನುಷ್ಯರ ಬಳಿ ಸುಳಿಯದೆ ಇದ್ದರೂ ಕೆಲವು ಎತ್ತುಗಳು ಹತ್ತಿರವಿರುವ ಮನುಷ್ಯರ ಮೇಲೆ ಆಕ್ರಮಿಸುತ್ತಿರುತ್ತವೆ.

ಮೂರನೆಯ ಆಟವಾದ ವಡಿ ಮಂಜು ವಿರಟ್ಟು ಸುರಕ್ಷಿತವಾಗಿದೆ. ಇದರಲ್ಲಿ ಎತ್ತನ್ನು 50 ಅಡಿ ಉದ್ದದ ಹಗ್ಗದಿಂದ ಬಿಗಿದಿರುತ್ತಾರೆ. ಆದ್ದರಿಂದ ಆ ಎತ್ತು ಹಗ್ಗದ ಅಳತೆಯ ಮಿತದಲ್ಲೆ ಓಡಾಡುತ್ತದೆ. ಏಳರಿಂದ ಒಂಬತ್ತು ಜನರಿರುವ ಗುಂಪು ಆ ಎತ್ತನ್ನು ಪಳಗಿಸಬೇಕು.

ಜಲ್ಲಿಕಟ್ಟು ಜರುಗುವ ವಿವಿಧ ಸ್ಥಳಗಳು:

ಅಲಂಗನಲ್ಲೂರು, ಅವನಿಯಪುರಂ, ಪುದುಕೊಟ್ಟೈ ಬಳಿಯಿರುವ ತಿರುವಪುರ್, ಸೇಲಂನಲ್ಲಿರುವ ಕೊಂಡಲಾಂಪಟ್ಟಿ ಹಾಗು ತಮ್ಮಂಪಟ್ಟಿ, ಮದುರೈ ಬಳಿಯಿರುವ ಪಳೆಮೇಡು, ಕಾರೈಕುಡಿ ಬಳಿಯಿರುವ ಸ್ರವಯಲ್, ಸಿವಗಂಗೈ ಬಳಿಯಿರುವ ಕಂದುಪ್ಪಟ್ಟಿ, ವೆಂತಾನಪಟ್ಟಿ, ಕುಂಬಂ ಬಳಿಯಿರುವ ಪಲ್ಲವರಾಯನಪಟ್ಟಿ ಈ ಸ್ಥಳಗಳಲ್ಲಿ ಜಲ್ಲಿಕಟ್ಟು ಆಟವು ಜರುಗುತ್ತದೆ.

ಅಲಂಗನಲ್ಲೂರು:

ಅಲಂಗನಲ್ಲೂರು:

ಮದುರೈ ಜಿಲ್ಲೆಯಲ್ಲಿರುವ ಅಲಂಗನಲ್ಲೂರು ಒಂದು ಪಂಚಾಯತಿ ಪಟ್ಟಣವಾಗಿದೆ. ಇಲ್ಲಿನ ಜಲ್ಲಿಕಟ್ಟು ಉತ್ಸವ ಹೆಸರುವಾಸಿಯಾಗಿದೆ

ಚಿತ್ರಕೃಪೆ: Iamkarna

ಅವನಿಯಪುರಂ:

ಅವನಿಯಪುರಂ:

ಜಲ್ಲಿಕಟ್ಟು ಆಟಕ್ಕೆ ಪ್ರಸಿದ್ಧವಾಗಿರುವ ಅವನಿಯಪುರಂ ಇರುವುದು ತಮಿಳುನಾಡಿನ ಮದುರೈ ಜಿಲ್ಲೆಯಲ್ಲಿ.

ಚಿತ್ರಕೃಪೆ: Amshudhagar

ತಿರುವಪುರ್:

ತಿರುವಪುರ್:

ಜಲ್ಲಿಕಟ್ಟು ಆಟಕ್ಕೆ ಪ್ರಸಿದ್ಧವಾಗಿರುವ ತಿರುವಪುರ್ ಇರುವುದು ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ.

ಚಿತ್ರಕೃಪೆ: Amshudhagar

ಕೊಂಡಲಾಂಪಟ್ಟಿ:

ಕೊಂಡಲಾಂಪಟ್ಟಿ:

ಜಲ್ಲಿಕಟ್ಟು ಆಟಕ್ಕೆ ಪ್ರಸಿದ್ಧವಾಗಿರುವ ಕೊಂಡಲಾಂಪಟ್ಟಿ ಇರುವುದು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ.

ಚಿತ್ರಕೃಪೆ: Amshudhagar

ಪಳೆಮೇಡು:

ಪಳೆಮೇಡು:

ಜಲ್ಲಿಕಟ್ಟು ಆಟಕ್ಕೆ ಪ್ರಸಿದ್ಧವಾಗಿರುವ ಪಳೆಮೇಡು ಇರುವುದು ತಮಿಳುನಾಡಿನ ಮದುರೈ ಜಿಲ್ಲೆಯಲ್ಲಿ.

ಚಿತ್ರಕೃಪೆ: Thaya nanth

ಸ್ರವಯಲ್:

ಸ್ರವಯಲ್:

ಜಲ್ಲಿಕಟ್ಟು ಆಟಕ್ಕೆ ಪ್ರಸಿದ್ಧವಾಗಿರುವ ಪಳೆಮೇಡು ಇರುವುದು ತಮಿಳುನಾಡಿನ ಕಾರೈಕುಡಿ ಜಿಲ್ಲೆಯಲ್ಲಿ.

ಚಿತ್ರಕೃಪೆ: Mahendrabalan

ಕಂದುಪ್ಪಟ್ಟಿ:

ಕಂದುಪ್ಪಟ್ಟಿ:

ಜಲ್ಲಿಕಟ್ಟು ಆಟಕ್ಕೆ ಪ್ರಸಿದ್ಧವಾಗಿರುವ ಕಂದುಪ್ಪಟ್ಟಿ ಇರುವುದು ತಮಿಳುನಾಡಿನ ಸಿವಗಂಗೈನಲ್ಲಿ.

ಚಿತ್ರಕೃಪೆ: Justinvijesh

ವೆಂತಾನಪಟ್ಟಿ:

ವೆಂತಾನಪಟ್ಟಿ:

ಜಲ್ಲಿಕಟ್ಟು ಆಟಕ್ಕೆ ಪ್ರಸಿದ್ಧವಾಗಿರುವ ವೆಂತಾನಪಟ್ಟಿ ಇರುವುದು ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಪೊನ್ನಮರವತಿ ಎಂಬಲ್ಲಿ.

ಚಿತ್ರಕೃಪೆ: Selvam4win

ಪಲ್ಲವರಾಯನಪಟ್ಟಿ:

ಪಲ್ಲವರಾಯನಪಟ್ಟಿ:

ಜಲ್ಲಿಕಟ್ಟು ಆಟಕ್ಕೆ ಪ್ರಸಿದ್ಧವಾಗಿರುವ ಪಲ್ಲವರಾಯನಪಟ್ಟಿ ಇರುವುದು ತಮಿಳುನಾಡಿನ ಕುಂಬಂ ಬಳಿಯಿದೆ.

ಚಿತ್ರಕೃಪೆ: எஸ்ஸார்

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X