Search
  • Follow NativePlanet
Share
» »1857 ರಲ್ಲಿ ಬ್ರಿಟಿಷರ ವಿರುದ್ದ ಮಹಾಯುದ್ದ ನಡೆದ ಸ್ಥಳವಾದ ಇದು

1857 ರಲ್ಲಿ ಬ್ರಿಟಿಷರ ವಿರುದ್ದ ಮಹಾಯುದ್ದ ನಡೆದ ಸ್ಥಳವಾದ ಇದು

ಹರಿಯಾಣದ ಮಹೇಂದ್ರಘಡ್ ಜಿಲ್ಲೆಯಲ್ಲಿರುವ ನಾರ್ನಲ್ ಒಂದು ಪ್ರಸಿದ್ದವಾದ ಐತಿಹಾಸಿಕ ನಗರವಾಗಿದೆ ಮತ್ತು ಇದು ಕಬ್ಬಿಣದ ಅದಿರು, ತಾಮ್ರ, ಕ್ಯಾಲ್ಸೈಟ್ ಮತ್ತು ಸ್ಫಟಿಕ ಶಿಲೆಗಳಂತಹ ಖನಿಜ ಸಂಪನ್ಮೂಲಗಳನ್ನುತನ್ನಲ್ಲಿ ಶ್ರೀಮಂತವಾಗಿ ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ.

1857ರಲ್ಲಿ ಬ್ರಿಟಿಷರ ಸೇನೆ ಮತ್ತು ಬಂಡಾಯದ ಸಮಯದಲ್ಲಿ ಪ್ರಬಲ ನಾಯಕರಲ್ಲಿ ಒಬ್ಬರಾದ ರಾವ್ ತುಲಾ ರಾಮ್ ಅವರ ನಡುವೆ ನಡೆದ ಮಹಾಯುದ್ದದ ಸ್ಥಳವು ಇದಾದುದರಿಂದ ಈ ಸ್ಥಳವು ಪ್ರವಾಸಿಗರಲ್ಲಿ ಮಾನ್ಯತೆಯನ್ನು ಪಡೆದಿದೆ. ಈ ಮರೆಯಲಾಗದ ಯುದ್ದವು ಬ್ರಿಟಿಷ್ ಸೇನೆಯ ವಿರುದ್ದ ನಡೆದ ಅತ್ಯಂತ ಜನಪ್ರಿಯ ಯುದ್ದಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ನರ್ನಾಲ್ ಇಂದು ಇತಿಹಾಸ ಪ್ರಿಯರಿಗೆ ಒಂದು ಜನಪ್ರಿಯ ವಾರಾಂತ್ಯದ ತಾಣವಾಗಿ ಮಾರ್ಪಟ್ಟಿದೆ.

ನಾರ್ನಲ್ ನ ಪ್ರಾಚೀನ ವೈಭವಗಳ ಪದರಗಳನ್ನು ಹತ್ತಿರದಿಂದ ನೋಡಲು ಉತ್ಸುಕರಾಗಿದ್ದಲ್ಲಿ ನೀವು ನಾರ್ನಲ್ ಮತ್ತು ಇಲ್ಲಿಯ ಪ್ರವಾಸೀ ಕೇಂದ್ರಗಳ ಬಗ್ಗೆ ಹಾಗೂ ಇಲ್ಲಿಗೆ ತಲುಪುವ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ಓದಿ ಮಾಹಿತಿ ಪಡೆಯಬಹುದು.

ನಾರ್ನಲ್ ಗೆ ಭೇಟಿ ಕೊಡಲು ಸೂಕ್ತ ಸಮಯ

ನಾರ್ನಲ್ ಗೆ ಭೇಟಿ ಕೊಡಲು ಸೂಕ್ತ ಸಮಯ

ನಾರ್ನಲ್ ಗೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅದು ಅಕ್ಟೋಬರ್ ನಿಂದ ಫೆಬ್ರವರಿ ಕೊನೆಯ ತನಕ. ಈ ಸಮಯದಲ್ಲಿ ಹವಾಮಾನವು ಆಹ್ಲಾದಕರ ಮತ್ತು ತಂಪಾಗಿರುತ್ತದೆ ಆದುದರಿಂದ ನಿಮಗೆ ಇಲ್ಲಿ ತಿರುಗಾಡಲು ಅನುಕೂಲಕರವಾಗಿರುತ್ತದೆ.

ಇದು ತೀವ್ರವಾದ ತಾಪಮಾನವನ್ನು ಹೊಂದಿರುವುದರಿಂದ ಬೇಸಿಗೆಯು ತುಂಬಾ ಬಿಸಿಯಾಗಿರುತ್ತದೆ ಆದುದರಿಂದ ಬೇಸಿಗೆಯಲ್ಲಿ ಈ ತಾಣವು ಪ್ರವಾಸಿಗರಿಂದ ಕಡಿಮೆ ಪ್ರಮಾಣದಲ್ಲಿ ಭೇಟಿ ನೀಡಲ್ಪಡುತ್ತದೆ. ಆದರೂ ಇತಿಹಾಸ ಪ್ರಿಯರಿಗೆ ನಾರ್ನಲ್ ವರ್ಷವಿಡಿ ಭೇಟಿ ಕೊಡಬಹುದಾದಂತಹ ತಾಣವಾಗಿದೆ.

ನಾರ್ನಲ್ ಗೆ ಜೈಪುರದಿಂದ ಹೋಗುವುದು ಹೇಗೆ?

ನಾರ್ನಲ್ ಗೆ ಜೈಪುರದಿಂದ ಹೋಗುವುದು ಹೇಗೆ?

ವಾಯು ಮಾರ್ಗ: ನಾರ್ನಲ್ ಗೆ ಹತ್ತಿರವಿರುವ ವಿಮಾನ ನಿಲ್ದಾಣವೆಂದರೆ ಅದು ಜೈಪುರ್ ವಿಮಾನ ನಿಲ್ದಾಣವಾಗಿದೆ ಇದಲ್ಲದೆ ನಾರ್ನಲ್ ಗೆ ಜೈಪುರ್ ನಿಂದ ಪ್ರಯಾಣ ಮಾಡುವುದಾದರೆ ಬೇರೆ ಆಯ್ಕೆಗಳಿರುವುದಿಲ್ಲ. ಆದುದರಿಂದ ಅಲ್ಲಿಂದ ನಾರ್ನಲ್ ಗೆ ನೇರವಾಗಿ ಬಾಡಿಗೆ ವಾಹನವನ್ನು ಮಾಡಿಕೊಂಡು ಪ್ರಯಾಣಿಸುವುದು ಸೂಕ್ತವಾದುದಾಗಿದೆ.

ರೈಲು ಮಾರ್ಗ : ನಾರ್ನಲ್ ಗೆ ಉತ್ತಮವಾದ ರೈಲು ಸಂಪರ್ಕವಿದ್ದರು ಜೈಪುರದಿಂದ ನಾರ್ನಲ್ ಗೆ ರೈಲಿನ ನೇರ ಸಂಪರ್ಕವಿರುವುದಿಲ್ಲವಾದುದರಿಂದ ನೀವು ಜೈಪುರದಿಂದ ರೆವಾರಿ ಜಂಕ್ಷನ್ ಗೆ ರೈಲಿನ ಮೂಲಕ ಪ್ರಯಾಣಿಸಿ ನಂತರ ಅಲ್ಲಿಂದ ನಾರ್ನಲ್ ಗೆ ಇನ್ನೊಂದು ರೈಲು ಹಿಡಿಯಬೇಕಾಗುತ್ತದೆ. ರೆವಾರಿ ಜೈಪುರದಿಂದ ಸುಮಾರು 190 ಕಿ.ಮೀ ಅಂತರ ಹಾಗೂ ನಾರ್ನಲ್ ನಿಂದ ಸುಮಾರು 60 ಕಿ.ಮೀ ಅಂತರದಲ್ಲಿದೆ.

ರಸ್ತೆಮೂಲಕ : ರಸ್ತೆ ಮೂಲಕ ನಾರ್ನಲ್ ಗೆ ಸುಲಭವಾಗಿ ಸಂಪರ್ಕಿಸಬಹುದಾಗಿದೆ. ಜೈಪುರದಿಂದ ನಾರ್ನಲ್ ಗೆ ನೇರವಾಗಿ ಬಸ್ಸು ಅಥವಾ ಬಾಡಿಗೆ ವಾಹನದ ಮೂಲಕ ಪ್ರಯಾಣಿಸಬಹುದಾಗಿದೆ.

ಮಾರ್ಗ 1 : ಜೈಪುರ- ಕೋಟ್ಪುತ್ಲಿ- ನಾರ್ನಲ್
ಮಾರ್ಗ 2 : ಜೈಪುರ- ಶ್ರೀಮಾದೋಪುರ್- ನಾರ್ನಲ್

ಬೇರೆ ಮಾರ್ಗಗಳಿಗೆ ಹೋಲಿಸಿದರೆ ಮಾರ್ಗ 1ರಲ್ಲಿ ಪ್ರಯಾಣಿಸಿದರೆ ನಾರ್ನಲ್ ತಲುಪಲು ಕಡಿಮೆ ಸಮಯವನ್ನು ತೆಗೆದುಕೊಳ್ಳುವುದು ಆದುದರಿಂದ ಈ ಮಾರ್ಗದಲ್ಲಿ ಪ್ರಯಾಣಿಸಿದರೆ ನೀವು ನಾರ್ನಲ್ ತಲುಪಲು 3 ಗಂ 30 ನಿಮಿಷಗಳ ಒಳಗಾಗಿ ತಲುಪಲು ಸಹಾಯವಾಗುತ್ತದೆ. ನೀವು ಈ ದಾರಿಯಲ್ಲಿ ಹೊರಟಾಗ ನೀವು ಕೊಟ್ಪುತ್ಲಿಯಲ್ಲಿ ಒಂದು ಸಣ್ಣ ವಿರಾಮವನ್ನು ಪಡೆದು ಅಲ್ಲಿಯ ಸುಂದರವಾದ ದೇವಾಲಯಗಳು ಮತ್ತು ಸುಂದರವಾದ ತಾಣಗಳ ಅನ್ವೇಷಣೆ ಮಾಡಬಹುದಾಗಿದೆ.

ಕೋಟ್ಪುತ್ಲಿ

ಕೋಟ್ಪುತ್ಲಿ

ಕೋಟ್ಪುತ್ಲಿ ಜೈಪುರದಿಂದ ಸುಮಾರು 117 ಕಿ.ಮೀ ಮತ್ತು ನಾರ್ನಲ್ ನಿಂದ ಸುಮಾರು 60 ಕಿ.ಮೀ ಅಂತರದಲ್ಲಿದೆ. ಆದುದರಿಂದ ವಿರಾಮ ಪಡೆಯಲು ಇದೊಂದು ಪರಿಪೂರ್ಣವಾದ ತಾಣವಾಗಿದೆ. ಇದರ ಗಡಿಯೊಳಗೆ ಅನ್ವೇಷಣೆ ಮಾಡಲು ಅನೇಕ ಸ್ಥಳಗಳು ಇಲ್ಲದಿದ್ದರೂ ಕೂಡಾ ಇದು ಪ್ರವಾಸಿಗರ ಅಚ್ಚುಮೆಚ್ಚಿನ ಭೇಟಿ ಕೊಡುವ ತಾಣವೆನಿಸಿದೆ.

ಕೋಟ್ಪುತ್ಲಿ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇದು 20ಕ್ಕಿಂತಲೂ ಹೆಚ್ಚಿನ ದೇವಾಲಯಗಳಿಗೆ ನೆಲೆಯಾಗಿದೆ. ಆದುದರಿಂದ ಈ ಧಾರ್ಮಿಕ ತಾಣಗಳ ಶಾಂತಿಯುತವಾದ ಪರಿಸರದಲ್ಲಿ ನಿಮ್ಮ ಮನಸ್ಸನ್ನು ಆಹ್ಲಾದಕರಗೊಳಿಲು ಇಷ್ಟ ಪಡುವುದಿಲ್ಲವೆ? ಇಲ್ಲಿಯ ಪ್ರಮುಖ ದೇವಾಲಯಗಳಲ್ಲಿ ಬಡಾ ಮಂದಿರ್, ತಾಲಾಬ್ ವಾಲಾ ಶಿವ್ ಮಂದಿರ, ಅವಧ್ ಬಿಹಾರಿ ಮಂದಿರ್, ಪರಶುರಾಮ್ ಮಂದಿರ್ ಮತ್ತು ಗಾಯತ್ರಿ ಮಾತಾ ಮಂದಿರ್ ಮುಂತಾದುವುಗಳು ಸೇರಿವೆ.

ಅಂತಿಮ ಗಮ್ಯಸ್ಥಾನ-ನಾರ್ನಲ್

ಅಂತಿಮ ಗಮ್ಯಸ್ಥಾನ-ನಾರ್ನಲ್

Priyanka1tamta

ಜೈಪುರ್ ನಿಂದ 170 ಕಿ.ಮೀ ದೂರದಲ್ಲಿ ನರ್ನಾಲ್ ಇದೆ, ಆದ್ದರಿಂದ ಇದನ್ನು 3 ಗಂಟೆಯೊಳಗೆ ತಲುಪಬಹುದು, ಇದರಿಂದಾಗಿ ಇದು ಇತಿಹಾಸ ಪ್ರೇಮಿಗಳಿಗೆ ಪರಿಪೂರ್ಣವಾದ ವಾರಾಂತ್ಯದ ಸ್ಥಳವಾಗಿದೆ. ಐತಿಹಾಸಿಕ ಸ್ಮಾರಕಗಳ ಹೊರತಾಗಿಯೂ ಇಲ್ಲಿಯ ದೇವಾಲಯಗಳ ಭಕ್ತಿ ಪರವಶ ಸೆಳೆವಿನಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದಾಗಿದೆ. ಈ ಕೆಳಗಿನ ಕೆಲವು ಪ್ರಮುಖ ಸ್ಥಳಗಳು ನಿಮ್ಮ ನಾರ್ನಲ್ ನ ಪ್ರವಾಸದ ಸಮಯದಲ್ಲಿ ಭೇಟಿ ಕೊಡಲೇ ಬೇಕಾದಂತವುಗಳಾಗಿವೆ.

ಜಲ್ ಮಹಲ್

ಜಲ್ ಮಹಲ್

PC- Priyanka1tamta

ಜಲ್ ಮಹಲ್ ಒಂದು ಸಣ್ಣ ಅರಮನೆಯಾಗಿದ್ದು ಇದನ್ನು ಖಾನ್ ಸರೋವರ್ ಕೊಳದ ಮಧ್ಯೆಯಲ್ಲಿ ನಿರ್ಮಿಸಲಾಗಿದೆ ಈ ಅರಮನೆಗೆ ಮೊಘಲ್ ದೊರೆ ಅಕ್ಬರನ ಆಳ್ವಿಕೆಯ ಕಾಲವಾದ 16ನೇ ಶತಮಾನಗಳಷ್ಟು ಹಳೆಯ ಇತಿಹಾಸವಿದ್ದು ಇದು ಅತ್ಯಂತ ಹೆಚ್ಚಾಗಿ ಭೇಟಿ ಕೊಡಲ್ಪಡುವ ಐತಿಹಾಸಿಕ ಸ್ಮಾರಕಗಳಲ್ಲೊಂದಾಗಿದೆ. ಸುಂದರವಾದ ವಾಸ್ತುಶಿಲ್ಪ ಮತ್ತು ಭವ್ಯವಾದ ರಚನೆಯನ್ನು ಒಳಗೊಂಡ ಈ ಪ್ರಾಚೀನ ಸೌಂದರ್ಯತೆಯು ನವಾಬ್ ಶಹಾ ಖಲಿ ಖಾನ್ ಅವರಿಂದ ನಿರ್ಮಿಸಲ್ಪಟ್ಟಿತು ಮತ್ತು ಇದು ನೀವು ಭೇಟಿ ಕೊಡಲೇ ಬೇಕಾದ ತಾಣವಾಗಿದೆ .ಈ ಹಳೆಯದಾದ ಸಂಕೀರ್ಣಕ್ಕೆ ಭೇಟಿ ಕೊಟ್ಟು ಅದರ ಸುತ್ತಮುತ್ತಲಿನ ಟ್ಯಾಂಕ್ ಬಳಿ ಕುಳಿತು ಇತಿಹಾಸದ ಪುಟಗಳನ್ನು ಮೆಲುಕು ಹಾಕುತ್ತಾ ಕಳೆದು ಹೋಗಲು ಬಯಸುವುದಿಲ್ಲವೆ?

ಬೀರ್ ಬಲ್ ಕಾ ಚಟ್ಟಾ

ಬೀರ್ ಬಲ್ ಕಾ ಚಟ್ಟಾ

Manoj Vashisth

ಮತ್ತೊಂದು ಅದ್ಬುತವಾದ ಸ್ಮಾರಕವೆಂದರೆ ಅದು ಬೀರ್ ಬಲ್ ಕಾ ಚಟ್ಟಾ . 17 ನೇ ಶತಮಾನದ ಆರಂಭದಲ್ಲಿಯ ಮೊಘಲ್ ಚಕ್ರಾಧಿಪತಿಯಾದ ಶಹಜಹಾನನ ಕಾಲದಲ್ಲಿ ನಾರ್ನಲ್ ನ ಮಂತ್ರಿಯಾದ ರಾಜ್ ಬಲ್ ಮುಕುಂದ್ ದಾಸ್ ಅವರಿಂದ ನಿರ್ಮಿಸಲ್ಪಟ್ಟ ಈ ಐತಿಹಾಸಿಕ ಸ್ಮಾರಕವಾಗಿದೆ. ಈ ಅರಮನೆಯು ಸುಂದರವಾದ ಕೊಠಡಿಗಳನ್ನು ಮತ್ತು ದೊಡ್ಡ ಸಭಾಂಗಣಗಳನ್ನು ಹೊಂದಿರುವ ಐದು ಅಂತಸ್ತಿನ ಕಟ್ಟಡವಾಗಿದ್ದು ಇದು ವಾಸ್ತುಶಿಲ್ಪ ಉತ್ಸಾಹಿಗಳನ್ನು ಕೂಡಾ ಆಕರ್ಷಿಸುತ್ತದೆ.

ಈ ಸ್ಮಾರಕದ ಆವರಣದಲ್ಲಿ ಸುಂದರವಾದ ಕಾರಂಜಿಯಿರುವುದು ಇದರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಇಲ್ಲಿಯ ಸ್ಥಳೀಯ ದಂತಕಥೆಗಳ ಪ್ರಕಾರ ಬೀರ್ ಬಲ್ ಕಾ ಚಟ್ಟಾದಲ್ಲಿ ಮುಂಚೆ ಅನೇಕ ಸುರಂಗ ಮಾರ್ಗಗಳಿದ್ದು ಇದು ಜೈಪುರ್ ನಲ್ಲಿ ತೆರೆಯಲಾಗುತ್ತಿತ್ತು ಮತ್ತು ಇದನ್ನು ಅಕ್ಬರ್ ಮತ್ತು ಅವರ ಮಂತ್ರಿ ಬೀರ್ ಬಲ್ ನಿಂದ ಉಪಯೋಗಿಸಲ್ಪಡುತ್ತಿತ್ತು ಎಂದು ಹೇಳಲಾಗುತ್ತದೆ.

7. ಖಾಲ್ದಾ ವಾಲೇ ಹನುಮಾನ್

7. ಖಾಲ್ದಾ ವಾಲೇ ಹನುಮಾನ್

ನಾರ್ನಲ್ ನ ಪ್ರಶಾಂತವಾದ ವಾತಾವರಣದಲ್ಲಿ ಶಾಂತಿಯುತವಾಗಿ ಮತ್ತು ನಿಶ್ಯಬ್ದತೆಯಿಂದ ಕೂಡಿದ ಜಾಗದಲ್ಲಿ ಆನಂದಿಸಬೇಕೆಂದು ಬಯಸುವಿರಾ ಹಾಗಿದ್ದಲ್ಲಿ ಖಾಲ್ದಾ ವಾಲೇ ಹನುಮಾನ್ ಗೆ ಭೇಟಿ ಕೊಡಿ. ಈ ಸುಂದರ ದೇವಾಲಯವು ಹನುಮಂತ ದೇವರಿಗೆ ಅರ್ಪಿತವಾದುದಾಗಿದ್ದು ಗುಡ್ಡದ ಮೇಲೆ ನೆಲೆಸಿದೆ ಮತ್ತು ನೂರಾರು ಸ್ಥಳೀಯ ಹಾಗೂ ಕಾಲೋಚಿತ ಪ್ರವಾಸಿಗರಿಂದ ಪ್ರತೀ ತಿಂಗಳು ಭೇಟಿ ನೀಡಲ್ಪಡುತ್ತದೆ.
ಮೇಲೆ ಚರ್ಚಿಸಲಾದ ಅದ್ಬುತಗಳು ಮತ್ತು ವೈಭವೋಪೇತ ಸ್ಥಳಗಳಿಂದ ಇನ್ನೂ ತೃಪ್ತರಾಗಿಲ್ಲವಾದಲ್ಲಿ ನೀವು ಇಲ್ಲಿಯ ಇನ್ನಿತರ ಐತಿಹಾಸಿಕ ಸೌಂದರ್ಯತೆಗಳಿಗೆ ಭೇಟಿ ನೀಡಬಹುದು ಅವುಗಳಲ್ಲಿ ಚೋರ್ ಗುಂಬಡ್ ಮತ್ತು ಮಿರ್ಜಾ ಅಲಿಜಾನ್ ಬಾವೋರಿ ಗಳು ಸೇರಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X