Search
  • Follow NativePlanet
Share
» » ಮೇಘಾಲಯದ ಜೈನ್ತಿಯಾ ಬೆಟ್ಟದ ವಿಶೇ‍ಷತೆ ಏನು ಗೊತ್ತಾ?

ಮೇಘಾಲಯದ ಜೈನ್ತಿಯಾ ಬೆಟ್ಟದ ವಿಶೇ‍ಷತೆ ಏನು ಗೊತ್ತಾ?

ಶಿಲ್ಲಾಂಗ್ ನ ರಾಜಧಾನಿಯಾಗಿರುವ ಜೊವಾಯಿ ಶಿಲ್ಲಾಂಗ್ ನಿಂದ 65 ಕಿ.ಮೀ. ದೂರದಲ್ಲಿದೆ. ಎರಡು ನಗರಗಳ ಮಧ್ಯೆ ಪ್ರಯಾಣ ಎರಡು ಗಂಟೆ ಬೇಕಾಗುತ್ತದೆ.

ಜೈನ್ತಿಯಾ ಬೆಟ್ಟ ಹಾಗೂ ಕಣೆವೆಗಳು ನೈಜ ಸೌಂದರ್ಯದಿಂದ ಮೈದಳೆದಿದೆ. ಅಲೆಯಾಕಾರದ ಬೆಟ್ಟಗಳ ಸಾಲುಗಳು, ದಾರಿಯುದ್ದಕ್ಕೆ ಭಯ ಹುಟ್ಟಿಸುವಂತಹ ನದಿಗಳ ಪ್ರಪಾತದ ಕೊರತೆಯಿಲ್ಲ. ಜೈನ್ತಿಯಾ ಹಿಲ್ಸ್ ಪ್ರವಾಸೋದ್ಯಮ ಕೇವಲ ನೈಸರ್ಗಿಕ ಸೌಂದರ್ಯ ಮಾತ್ರವಲ್ಲದೆ ಶ್ರೀಮಂತ ಇತಿಹಾಸ ಮತ್ತು ಪ್ರಸಕ್ತ ಬಾಂಗ್ಲಾದೇಶದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ.

ಜೈನ್ತಿಯಾ ಕಿಂಗ್

ಜೈನ್ತಿಯಾ ಕಿಂಗ್

PC:Arindam Das
ಜೈನ್ತಿಯಪುರ (ಈಗಿನ ಬಾಂಗ್ಲಾದೇಶ) ರಾಜ್ಯದ ರಾಜಧಾನಿಯಲ್ಲಿ ನೆಲೆಸಿದ್ದ ಜೈನ್ತಿಯಾ ಕಿಂಗ್ ಈ ಬೆಟ್ಟಗಳ ಸಾಲಿನಲ್ಲಿ ನರ್ತಿಂಗ್ ಎನ್ನುವ ಸಣ್ಣ ಗ್ರಾಮವನ್ನು ರಚಿಸಿ ಅದನ್ನು ಬೇಸಿಗೆಯ ರಾಜಧಾನಿಯಾಗಿ ಮಾಡಿದ್ದ. ಇದರ ಪರಿಣಾಮ ರಸ್ತೆಗಳು ಹೆಚ್ಚಾಗಿ ಸಾಂಸ್ಕೃತಿಕ ವಿನಿಮಯ ಬಲವಾಯಿತು. ಎರಡು ಜಿಲ್ಲೆಗಳಾದ ಪಶ್ಚಿಮ ಜೈನ್ತಿಯಾ ಬೆಟ್ಟಗಳು ಮತ್ತು ಪೂರ್ವ ಜೈನ್ತಿಯಾ ಬೆಟ್ಟಗಳಿಗೆ ಜೈನ್ತಿಯಾ ಬೆಟ್ಟಗಳು ಪದವನ್ನು ಬಳಸಲಾಗುತ್ತದೆ. ಪಶ್ಚಿಮ ಜೈನ್ತಿಯಾ ಹಿಲ್ಸ್ ನ ಜಿಲ್ಲಾ ಕಚೇರಿ ಜೊವಾಯಿಯಲ್ಲಿದ್ದರೆ, ಪೂರ್ವ ಜೈನ್ತಿಯಾ ಹಿಲ್ಸ್ ನ ಜಿಲ್ಲಾ ಕೇಂದ್ರ ಖಲೈರ್ಹಟ್ ನಲ್ಲಿದೆ. ಏಕಶಿಲೆಗಳ ಬೃಹತ್ ಸಂಗ್ರಹವನ್ನು ಹೊಂದಿರುವಂತಹ ನಾರ್ತಿಂಗ್ ನ್ನು ಜೈನ್ತಿಯ ಪ್ರವಾಸೋದ್ಯಮ ಒಳಗೊಂಡಿದೆ. ಇಲ್ಲಿರುವ ದುರ್ಗಾ ದೇವಸ್ಥಾನ ಕೂಡ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.

 ಜೊವಾಯಿ

ಜೊವಾಯಿ

PC:Tymphew
ಶಿಲ್ಲಾಂಗ್ ನ ರಾಜಧಾನಿಯಾಗಿರುವ ಜೊವಾಯಿ ಶಿಲ್ಲಾಂಗ್ ನಿಂದ 65 ಕಿ.ಮೀ. ದೂರದಲ್ಲಿದೆ. ಎರಡು ನಗರಗಳ ಮಧ್ಯೆ ಪ್ರಯಾಣ ಎರಡು ಗಂಟೆ ಬೇಕಾಗುತ್ತದೆ. ಜೈನ್ತಿಯಾ ಹಿಲ್ಸ್ ಗೆ ರಸ್ತೆಯೇ ಸಾರಿಗೆಗೆ ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಜೈನ್ತಿಯಾ ಹಿಲ್ಸ್ ನಲ್ಲಿರುವ ಪ್ರವಾಸಿ ತಾಣಗಳನ್ನು ನೋಡಲು ಪ್ರವಾಸಿಗಳು ಜೊವಾಯಿಯನ್ನು ತಮ್ಮ ಪ್ರಧಾನ ಶಿಬಿರವನ್ನಾಗಿ ಮಾಡಬಹುದು.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Psihrishi
ಜೈನ್ತಿಯಾ ಹಿಲ್ಸ್ ಹವಾಮಾನ ಜೈನ್ತಿಯಾ ಹಿಲ್ಸ್ ಮನ್ಸೂನ್ ಸಮಯದಲ್ಲಿ ಭಾರೀ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಆಹ್ಲಾದಕರವಾಗಿ ಬೆಚ್ಚಗಿರುತ್ತದೆ ಮತ್ತು ಚಳಿಗಾಲ ತುಂಬಾ ತಂಪಾಗಿರುತ್ತದೆ. ಪ್ರವಾಸಿಗಳು ಬೇಸಿಗೆಯಲ್ಲಿ ಮಳೆ ಕಡಿಮೆಯಿರುವಾಗ ಜೈನ್ತಿಯಾ ಹಿಲ್ಸ್ ಗೆ ಭೇಟಿ ನೀಡಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: AditiVerma2193
ತ್ರಿಪುರ ಮತ್ತು ಅಸ್ಸಾಂನನ್ನು ಸಂಪರ್ಕಿಸುವ ಶಿಲ್ಲಾಂಗ್ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 44 ಜೈನ್ತಿಯಾ ಹಿಲ್ಸ್ ಮೂಲಕ ಸಾಗುತ್ತದೆ. ಇದು ಎರಡು ಜಿಲ್ಲೆಗಳ ಆಕರ್ಷಣೆಗಳಿಗೆ ಜೀವನಾಡಿಯಾಗಿದೆ. ಶಿಲ್ಲಾಂಗ್ ನಿಂದ ಜೈನ್ತಿಯಾ ಹಿಲ್ಸ್ ನ ಎಲ್ಲಾ ಭಾಗಗಳಿಗೆ ಪ್ರವಾಸಿಗಳು ಸುಲಭವಾಗಿ ಸಾರಿಗೆ ವ್ಯವಸ್ಥೆಯಿದೆ. ಸ್ಥಳೀಯ ಬಸ್ ಗಳು ಮತ್ತು ಟ್ಯಾಕ್ಸಿಗಳು ಸುಲಭವಾಗಿ ಲಭ್ಯವಾಗುತ್ತದೆ.

ಮೇಘಾಲಯದಲ್ಲಿ ಯಾವುದೇ ರೈಲ್ವೆ ನಿಲ್ದಾಣಗಳಿಲ್ಲ ಮತ್ತು ಗುವಾಹಟಿ ರೈಲು ನಿಲ್ದಾಣ ಇಲ್ಲಿಗೆ ಸಮೀಪದ ನಿಲ್ದಾಣ. ರೈಲ್ವೆ ನಿಲ್ದಾಣದಿಂದ ಶಿಲ್ಲಾಂಗ್ ಗೆ ನೇರ ಸಾರಿಗೆಯಿದೆ. ಶಿಲ್ಲಾಂಗ್ ಗೆ ತಲುಪಿದ ಬಳಿಕ ಜೈನ್ತಿಯಾ ಹಿಲ್ಸ್ ಗೆ ಬಸ್ ಮತ್ತು ಟ್ಯಾಕ್ಸಿಗಳು ಲಭ್ಯವಿರುತ್ತದೆ.

ಉಮರೊಯಿ ವಿಮಾನ ನಿಲ್ದಾಣ ಜೈನ್ತಿಯಾ ಹಿಲ್ಸ್ ಗೆ ಸಮೀಪದ ವಿಮಾನ ನಿಲ್ದಾಣ. ಅದಾಗ್ಯೂ ಈ ವಿಮಾನ ನಿಲ್ದಾಣವೀಗ ಕಾರ್ಯನಿರ್ವಹಿಸದಿರುವ ಕಾರಣ ಗುವಾಹಟಿಯಲ್ಲಿ ಗೋಪಿನಾಥ ಬೊರ್ಡೊಲೊಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜೈನ್ತಿಯಾಗೆ ತಲುಪಲು ಅನೂಕೂಲಕರವಾಗಲಿದೆ. ಪ್ರವಾಸಿಗಳು ಶಿಲ್ಲಾಂಗ್ ಗೆ ತಲುಪಿ ಅಲ್ಲಿಂದ ರಸ್ತೆ ಮೂಲಕ ಜೊವಾಯಿ ಅಥವಾ ಖಲೈರ್ಹಟ್ ಗೆ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X