Search
  • Follow NativePlanet
Share
» »ಬ್ರಹ್ಮಾಂಡದ ಮೊದಲ ಶಿವಲಿಂಗ ಇದು, ಇಲ್ಲಿ ಜನರು ಮೃತ್ಯುಂಜಯ ಪೂಜೆ ಮಾಡಿಸ್ತಾರೆ ಯಾಕೆ

ಬ್ರಹ್ಮಾಂಡದ ಮೊದಲ ಶಿವಲಿಂಗ ಇದು, ಇಲ್ಲಿ ಜನರು ಮೃತ್ಯುಂಜಯ ಪೂಜೆ ಮಾಡಿಸ್ತಾರೆ ಯಾಕೆ

ಜಾಗೇಶ್ವರ ದ ಶಿವಲಿಂಗವನ್ನು ಭೂಮಿಯ ಮೊದಲ ಶಿವಲಿಂಗ ಎನ್ನಲಾಗುತ್ತದೆ. ಇಲ್ಲಿಂದಲೇ ಶಿವಲಿಂಗದ ಪೂಜೆ ಪ್ರಾರಂಭವಾಗಿದ್ದು. ಮಂದಿರದ ಉತ್ಪತ್ತಿ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ದೇವಸ್ಥಾನದ ಹಾಗೂ ಅಲ್ಲಿರುವ ಶಿವಲಿಂಗದ ಬಗ್ಗೆ ಕೇವಲ ಕಥೆಗಳಿವೆ. ಬ್ರಹ್ಮಾಂಡದ ಮೊದಲ ಶಿವಲಿಂಗ ಇದಾಗಿದ್ದು, ಶಿವಲಿಂಗದ ಉತ್ಪತ್ತಿ ನೆಲದಿಂದ ಆಗಿದೆ. ಇಲ್ಲಿನ ಶಕ್ತಿ ಎಷ್ಟಿದೆಯೆಂದರೆ ಅಲ್ಲಿಗೆ ಹೋಗಲು ಯಮರಾಜ ಕೂಡಾ ಹೆದರ್ತಾನಂತೆ. ಯಾರು ಸ್ವಚ್ಛ ಮನಸ್ಸಿನಿಂದ ಜಾಗೇಶ್ವರ ಮಂದಿರದಲ್ಲಿ ಶಿವನ ಮುಂದೆ ತಲೆ ಬಾಗುತ್ತಾರೋ ಅವರ ಕೋರಿಕೆ ಈಡೇರುತ್ತಂತೆ.

ಎಲ್ಲಿದೆ ಈ ಶಿವಲಿಂಗ

ಎಲ್ಲಿದೆ ಈ ಶಿವಲಿಂಗ

PC: Mayankthapliyal1988

ಉತ್ತರಖಂಡದ ಅಲ್ಮೋರ ಜಿಲ್ಲೆಯಿಂದ ಸುಮಾರು 40 ಕಿ.ಮೀ ದೂರದಲ್ಲಿ ದೇವದಾರ್ ಕಾಡಿನ ಒಳಗೆ ಬೆಟ್ಟದ ಮೇಲೆ ಜಾಗೇಶ್ವರ ಮಂದಿರವಿದೆ. ಈ ಮಂದಿರ ಪರಿಸರದಲ್ಲಿ ಪಾರ್ವತಿ, ಹನುಮಾನ್, ಬೈರವ್, ಮೃತ್ಯುಂಜಯ, ಕೇದಾರನಾಥ್, ದುರ್ಗಾ ಸಹಿತ 124 ಮಂದಿರಗಳಿವೆ.

ಮೋಕ್ಷ ಪ್ರಾಪ್ತಿಗಾಗಿ ಇಲ್ಲಿ ಹೆಣಗಳೂ ಸರದಿಯಲ್ಲಿ ನಿಲ್ಲುತ್ತವೆ!ಮೋಕ್ಷ ಪ್ರಾಪ್ತಿಗಾಗಿ ಇಲ್ಲಿ ಹೆಣಗಳೂ ಸರದಿಯಲ್ಲಿ ನಿಲ್ಲುತ್ತವೆ!

 ಪೂಜೆ ಮಾಡಿದ್ರೆ ಸಮಸ್ಯೆ ಪರಿಹಾರ

ಪೂಜೆ ಮಾಡಿದ್ರೆ ಸಮಸ್ಯೆ ಪರಿಹಾರ

PC: Ankitkumarsaxena

ಈ ಮಂದಿರದ ನಿರ್ಮಾಣ ಮಾಡಿದ್ದು ಯಾರು ಎನ್ನುವುದು ಯಾರಿಗೂ ಗೊತ್ತಿಲ್ಲ. ಅದು ತನ್ನಿಂದ ತಾನೇ ನಿರ್ಮಾಣವಾಗಿದ್ದು ಎನ್ನಲಾಗುತ್ತದೆ. ಇಲ್ಲಿರುವ ಹವನಕುಂಡದಲ್ಲಿ ಪೂಜೆ ಮಾಡಿದ್ರೆ ಅವರ ಸಮಸ್ಯೆ ಎಲ್ಲಾ ಪರಿಹಾರವಾಗುತ್ತಂತೆ.

ಹವನಕುಂಡ

ಹವನಕುಂಡ

PC:Naman 237

ಲವಕುಶನಿಗೆ ಸಂಬಂಧಿಸಿದ ಕಥೆಯೂ ಇದೆ. ಲವ ಕುಶರು ರಾಮ ತನ್ನ ತಂದೆ ಎಂದು ತಿಳಿಯದೇ ರಾಮನೊಂದಿಗೆ ಯುದ್ಧ ಮಾಡುತ್ತಾರೆ. ಅವರಿಗೆ ರಾಮ ತಂದೆಯೆಂದು ಗೊತ್ತಾದಾಗ ಪಶ್ಚಾತ್ತಾಪ ಮಾಡಿಕೊಳ್ಳಲು ಈ ಹವನಕುಂಡದಲ್ಲಿ ಪೂಜೆ ಮಾಡಿದ್ದರು ಎನ್ನಲಾಗುತ್ತದೆ. ಈ ಯಜ್ಞಕುಂಡ ಇಂದು ಕಮಲಕುಂಡವಾಗಿದೆ.

ಧಾರವಾಡದ ನುಗ್ಗೇಕೇರಿ ಆಂಜನೇಯನ ಸನ್ನಿಧಿಗೆ ಹೋದ್ರೆ ಇಷ್ಟಾರ್ಥ ಸಿದ್ಧಿಧಾರವಾಡದ ನುಗ್ಗೇಕೇರಿ ಆಂಜನೇಯನ ಸನ್ನಿಧಿಗೆ ಹೋದ್ರೆ ಇಷ್ಟಾರ್ಥ ಸಿದ್ಧಿ

ಮೃತ್ಯುಂಜಯ ಪೂಜೆ

ಮೃತ್ಯುಂಜಯ ಪೂಜೆ

PC: Varun Shiv Kapur

ಸತ್ಯ ಮನಸ್ಸಿನಿಂದ ಮೃತ್ಯುಂಜಯ ಪೂಜೆ ಮಾಡಿದ್ರೆ ಯಮರಾಜ ಅವರ ತಪ್ಪನ್ನು ಕ್ಷಮಿಸುತ್ತಾನೆ. ಜೊತೆಗೆ ಅಕಾಲ ಮೃತ್ಯುವಿನ ಭಯವಿರೋದಿಲ್ಲ ಎನ್ನುವುದು ಇಲ್ಲಿನ ಜನರ ನಂಬಿಕೆ. ಈ ಮಂದಿರವು ಮೊದಲು ಕಟ್ಟಿಗೆಯಿಂದ ನಿರ್ಮಿಸಲಾಗಿತ್ತು. ೮ ನೇ ಶತಮಾನದಲ್ಲಿ ರಾಜರುಗಳು ಈ ಮಂದಿರವನ್ನು ಕಲ್ಲಿನಿಂದ ನಿರ್ಮಿಸಿದರು ಎನ್ನಲಾಗುತ್ತದೆ.

 ಪಾಂಡವರು ಮಂದಿರ ನಿರ್ಮಾಣ ಮಾಡಿದರು

ಪಾಂಡವರು ಮಂದಿರ ನಿರ್ಮಾಣ ಮಾಡಿದರು

PC: Hira Naaz

ಈ ದೇವಸ್ಥಾನಕ್ಕೆ ಸಂಬಂಧಿಸಿದಂತಹ ಹೆಚ್ಚಿನ ಯಾವುದೇ ವಿಷ್ಯವನ್ನು ಪುರಾಣದಲ್ಲಿ ಹೇಳಲಾಗಿಲ್ಲ . ಈ ದೇವಾಲಯವನ್ನು ಪಾಂಡವರು ನಿರ್ಮಿಸಿದರು ಎನ್ನಲಾಗುತ್ತದೆ. ಆದರೆ ಈ ಮಂದಿರದಲ್ಲಿನ ಶಿವಲಿಂಗ ಪಾಂಡವರು ಮಂದಿರ ನಿರ್ಮಾಣ ಮಾಡುವ ಮೊದಲೇ ನಿರ್ಮಾಣವಾಗಿತ್ತ ಅಥವಾ ನಂತರ ನಿರ್ಮಿಸಲಾಗಿದ್ದ ಎನ್ನುವುದು ತಿಳಿದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X