• Follow NativePlanet
Share
» »ಪ್ರಳಯವನ್ನು ತಡೆಯುವ ಶಕ್ತಿ ಹೊಂದಿರುವ ಪ್ರದೇಶವಿದು

ಪ್ರಳಯವನ್ನು ತಡೆಯುವ ಶಕ್ತಿ ಹೊಂದಿರುವ ಪ್ರದೇಶವಿದು

Written By:

ಕಲಿಯುಗದ ಅಂತ್ಯ ಸಮೀಪಿಸುತ್ತಿದೆ ಜಲಪ್ರಳಯವಾಗುತ್ತದೆ, ಭೂಕಂಪನವಾಗುತ್ತದೆ ಎಂದೂ ಹಲವಾರು ವರ್ಷಗಳಿಂದ ಕೇಳುತ್ತಾ ಬರುತ್ತಿದ್ದೇವೆ. ಸಾಮಾನ್ಯವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಜಲಪ್ರಳಯ ಹಾಗೂ ಭೂ ಕಂಪನದಿಂದ ಸಾಕಷ್ಟು ಧನ ಹಾನಿ ಮತ್ತು ಪ್ರಾಣ ಹಾನಿಗಳು ನಡೆದಿವೆ. ಆಚಾರ, ವಿಚಾರ, ಪವಿತ್ರವಾದ ದೈವ ಭಕ್ತಿ, ಮಹೋನ್ನತ ಸಂಪ್ರದಾಯಗಳನ್ನು ಹೊಂದಿರುವ ಭಾರತ ದೇಶವೂ ಕೂಡ ಜಲಪ್ರಳಯವಾಗಿ ಜೀವಹಾನಿಯಾಗುತ್ತದೆ ಎಂದು ಹಲವಾರು ಪಂಡಿತರು, ಜ್ಞಾನಿಗಳ ಹೇಳಿಕೆಯಾಗಿದೆ.

ಜಲಪ್ರಳಯ ಸಂಭವಿಸಿದರೆ ಭೂಮಿ ಮೇಲೆ ಏನೂ ಇರುವುದಿಲ್ಲ. ಸಮಸ್ತ ಜೀವರಾಶಿ ಜಲಪ್ರಳದಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಆದರೆ ಜಲಪ್ರಳಯವಾದರೂ ಕೂಡ ತಡೆದುಕೊಳ್ಳುವ ಶಕ್ತಿ ಕೇವಲ ಈ ಒಂದು ಪ್ರದೇಶಕ್ಕೆ ಇದೆ ಎಂದು ಹಿಂದೂ ಪುರಾಣಗಳು ಹೇಳುತ್ತಿವೆ.

ಆ ದೇವಾಲಯವಿರುವ ಪ್ರದೇಶ ಯಾವುದು? ಅ ಪ್ರದೇಶದ ಮಹಿಮೆಯ ಬಗ್ಗೆ ತಿಳಿಯಿರಿ.

ಬನಾರಸ್

ಬನಾರಸ್

ಈ ಮಾಹಿಮಾನ್ವಿತ ಪ್ರದೇಶದ ಮಹಿಮೆ ಏನೆಂದರೆ ಸೃಷ್ಟಿ ಸ್ಥಿತಿ, ಲಯಕಾರನಾದ ಪರಮಶಿವನು ನೆಲೆಸಿರುವ ಪುಣ್ಯಕ್ಷೇತ್ರ ಕಾಶಿಕ್ಷೇತ್ರ. ಸ್ವಯಂ ಕೈಲಾಸ ನಾಥನೇ ವಾರಾಣಾಸಿಯನ್ನು ಸೃಷ್ಟಿಸಿದ ಪವಿತ್ರ ಸ್ಥಳ ನಮ್ಮ ಭಾರತ ದೇಶದಲ್ಲಿರುವುದು ನಮ್ಮ ಅದೃಷ್ಟ.

ಬ್ರಹ್ಮ ದೇವ

ಬ್ರಹ್ಮ ದೇವ

ಬ್ರಹ್ಮ ದೇವ ಸೃಷ್ಟಿಸಿದ ಸಕಲ ಜೀವ ಕೋಟಿ ಚರಾಚರಗಳಿಗೂ ಕೂಡ ಅಂತ್ಯ ಎಂಬುದು ಖಚಿತವಾದುದು. ಆದರೆ ವಾರಾಣಾಸಿಯನ್ನು ಮಹಾ ಶಿವನು ಸೃಷ್ಟಿಸಿದ ಕಾರಣ ಯಾವುದೇ ಪ್ರಳಯ ಸಂಭವಿಸಿದರು ಕೂಡ ಮಹಾಶಿವನು ರಕ್ಷಿಸುತ್ತಾನೆ ಎಂಬುದು ಪಂಡಿತರ ವಿಶ್ವಾಸವಾಗಿದೆ.

ಮೋಕ್ಷವನ್ನು ನೀಡುವ ಕ್ಷೇತ್ರ

ಮೋಕ್ಷವನ್ನು ನೀಡುವ ಕ್ಷೇತ್ರ

ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿರುವ ಹಾಗೂ ಮೋಕ್ಷವನ್ನು ಪ್ರಸಾಧಿಸುವ ಕ್ಷೇತ್ರವಾಗಿ ಕಾಶಿಯನ್ನು ಹೇಳುತ್ತಾರೆ. ಸತ್ತವರ ಬೂದಿಯನ್ನು ಈ ಕ್ಷೇತ್ರದಲ್ಲಿನ ಪವಿತ್ರವಾದ ಗಂಗ ನದಿಯಲ್ಲಿ ಲೀನಗೊಳಿಸಿದರೆ ಸತ್ತವರ ಆತ್ಮ ಪರಮ ಶಿವನಲ್ಲಿ ಲೀನವಾಗುತ್ತದೆ ಎಂದು ತಿಳಿಸುತ್ತಾರೆ.

ಹಿಂದೂಗಳ ನಂಬಿಕೆ

ಹಿಂದೂಗಳ ನಂಬಿಕೆ

ಪವಿತ್ರವಾದ ಪುಣ್ಯ ಕ್ಷೇತ್ರವಾದ ಕಾಶಿಯಲ್ಲಿ ಮರಣಿಸಿದರೆ ಆ ಪರಮಶಿವನಲ್ಲಿ ಐಕ್ಯರಾಗುತ್ತಾರೆ. ಹಾಗೆಯೇ ಮೋಕ್ಷ ಕೂಡ ಲಭಿಸುತ್ತದೆ ಎಂಬುದು ಹಿಂದೂಗಳ ನಂಬಿಕೆಯಾಗಿದೆ. ವಿಶೇಷವೆನೆಂದರೆ ಈ ಪ್ರದೇಶದಲ್ಲಿ ತಮ್ಮ ಪ್ರಾಣ ಆ ಮಹಾ ಶಿವನಿಗೆ ಅರ್ಪಣೆ ಮಾಡಬೇಕು ಎಂದು ಹಲವಾರು ಭಕ್ತರು ದೇವರಲ್ಲಿ ಕೇಳಿಕೊಳ್ಳುವುದುಂಟು.

ವಾರಾಣಾಸಿ

ವಾರಾಣಾಸಿ

ಸ್ವಾಮಿಯ ಮುಂದೆ ಪ್ರಹಿಸುತ್ತಿರುವ ಪವಿತ್ರ ಗಂಗ ನದಿಯು ವಾರಾಣಾ ಹಾಗೂ ಅಸಿ ಎಂಬ 2 ಪವಿತ್ರವಾದ ನದಿಗಳು ಇಲ್ಲಿ ಸೇರುತ್ತದೆ. ಹಾಗಾಗಿಯೇ ಈ ಪ್ರದೇಶಕ್ಕೆ ವಾರಾಣಾಸಿ ಎಂದು ಹೆಸರು ಬಂದಿತು. ಪುಣ್ಯ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಪಾಪವೆಲ್ಲಾ ತೋಲಗಿ ಹೋಗುತ್ತದೆ ಎಂದು ಭಕ್ತರ ನಂಬಿಕೆಯಾಗಿದೆ.

ಗಂಗ ಮಾತಾ

ಗಂಗ ಮಾತಾ

ಜೀವಿತ ಕಾಲದಲ್ಲಿ ಒಮ್ಮೆಯಾದರೂ ಈ ಪವಿತ್ರವಾದ ಕಾಶಿ ಪುಣ್ಯಕ್ಷೇತ್ರ ಗಂಗೆಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ಮಹಾ ಶಿವನು ಪರಿಹರಿಸುತ್ತಾನೆ ಎಂದು ಭಕ್ತರ ವಿಶ್ವಾಸವಾಗಿದೆ.

ವಿಶ್ವೇಶ್ವರ ಲಿಂಗ

ವಿಶ್ವೇಶ್ವರ ಲಿಂಗ

ದ್ವಾದಶ ಜ್ಯೋತಿರ್‍ಲಿಂಗಗಳಲ್ಲಿ ಒಂದಾಗಿರುವ ವಿಶ್ವೇಶ್ವರ ಲಿಂಗವು ಎಲ್ಲಿದೆ ಗೊತ್ತ?. ವಾರಾಣಾಸಿ ನಗರದಲ್ಲಿ. ವಾರಾಣಾಸಿ ಪಟ್ಟಣವು ದೇಶದ ಆಧ್ಯಾತ್ಮಿಕ ರಾಜಧಾನಿ, ಸಾಂಸ್ಕøತಿಕ ರಾಜಧಾನಿ, ವಿದ್ಯಾನಗರ ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.

ಪುರಾತನವಾದುದು

ಪುರಾತನವಾದುದು

ಅಮೆರಿಕಾ ರಚನೆಕಾರನು ವಾರಾಣಾಸಿಯ ಚರಿತ್ರೆಯನ್ನು ಪುರಾತನವಾದ ನದಿಯ ಪರ್ಯಾಟನ ನಡೆಯಿತು ಎಂದು ಬಣ್ಣಿಸಿದ್ದಾನೆ.

5000 ವರ್ಷಗಳ ಹಿಂದೆ

5000 ವರ್ಷಗಳ ಹಿಂದೆ

ಸುಮಾರು 5000 ವರ್ಷಗಳ ಪೂರ್ವದಲ್ಲಿ ಶಿವನು ವಾರಾಣಾಸಿ ನಗರವನ್ನು ಸ್ಥಾಪಿಸಿದನು. ಈ ಪುಣ್ಯ ಕ್ಷೇತ್ರವು ಹಿಂದೂಗಳ 7 ಪವಿತ್ರ ನಗರಗಳಲ್ಲಿ ಅತಿ ಮುಖ್ಯವಾದುದು.

ಕಾಶಿ ನಗರ

ಕಾಶಿ ನಗರ

ಋಗ್ವೇದ, ಸ್ಕಂದಪುರಾಣ, ಇತಿಹಾಸಗಳಲ್ಲಿ ಕಾಶಿ ನಗರದ ಪ್ರಸ್ಥಾವನೆಗಳಿವೆ. 18 ನೇ ಶತಮಾನದಲ್ಲಿಯೇ ವಾರಾಣಾಸಿ ಪ್ರತ್ಯೇಕವಾದ ರಾಜ್ಯವಾಗಿ ಪ್ರಸಿದ್ದಿ ಹೊಂದಿತು.

ರಾಮನಗರ ಕೋಟೆ

ರಾಮನಗರ ಕೋಟೆ

ಆದರೆ ಬ್ರಿಟೀಷರವರ ಆಳ್ವಿಕೆಯಲ್ಲಿ ಸುಮಾರು 1910ರಲ್ಲಿ ರಾಮನಗರ ರಾಜಧಾನಿಯಾಗಿ ಬ್ರಿಟೀಷರು ರಾಜ್ಯಾಂಗವನ್ನು ಮಾರ್ಪಾಟು ಮಾಡಿದರು. ಅಂದಿನ ರಾಜರ ವಂಶಕ್ಕೆ ಸೇರಿದ ಕಾಳಿ ನರೇಶ್ ಮಹಾರಾಜ್ ಅಲ್ಲಿನ ರಾಮನಗರ ಕೋಟೆಯಲ್ಲಿ ಇದ್ದನಂತೆ.

ಪುರಾತ್ತತ್ವ ಅವಶೇಷಗಳು

ಪುರಾತ್ತತ್ವ ಅವಶೇಷಗಳು

ಸಪ್ತ ಮುಕ್ತಿ ನಗರಗಳೆಂದರೆ ಅಯೋದ್ಯ, ಗಯ, ಕಾಶಿ, ಅವಂತಿಕ, ಕಂಚಿ, ದ್ವಾರಕ ನಗರಗಳು ಎಂದು ಹೇಳುತ್ತಾರೆ. ಪುರಾತ್ತತ್ವ ಅವಶೇಷಗಳು ವಾರಣಾಸಿ ವೇದಗಳ ಕಾಲದ ಪ್ರಜೆಗಳ ಆವಾಸ ಸ್ಥಾನ ಎಂದು ಗುರುತಿಸಲಾಗಿದೆ.

ತ್ರಿವೇಣಿ ಸಂಗಮ

ತ್ರಿವೇಣಿ ಸಂಗಮ

ವಾರಾಣಾಸಿಯಲ್ಲಿ 1389ರಲ್ಲಿ ರಾಮಭಕ್ತನಾದ ಕಬೀರ ದಾಸ ಜನಿಸಿದನು. ಇಲ್ಲಿ ಗಂಗೆ, ಯಮುನೆ ಮತ್ತು ಸರಸ್ವತಿ ನದಿಗಳಿಂದ ತ್ರಿವೇಣಿ ಸಂಗಮ ಎಂದು ಬಣ್ಣಿಸಲಾಗಿದೆ.

ಮಣಿಕರ್ಣಿಕ ಘಾಟ್

ಮಣಿಕರ್ಣಿಕ ಘಾಟ್

ವಾರಾಣಾಸಿಯಲ್ಲಿ ಸುಮಾರು 84 ಸ್ನಾನ ಮಾಡಲು ಘಾಟ್‍ಗಳಿವೆಯಂತೆ. ಇದು ಸ್ನಾನ ಮಾಡಿಕೊಳ್ಳಲು ನಿರ್ಮಿಸಲಾಗಿರುವ ಘಾಟ್ ಆಗಿದೆ. ಘಾಟ್‍ಗಳಲ್ಲೇ ಅತ್ಯಂತ ಪುರಾತನವಾದುದು. ಪುರಾಣಗಳ ಪ್ರಕಾರ ಸತ್ಯಹರಿಶ್ಚಂದ್ರ ಮಹಾರಾಜ ಸ್ಮಾಶಾನವನ್ನು ಕಾಯುವ ಕೆಲಸಕ್ಕೆ ನೇಮಕಗೊಂಡ ಸ್ಥಳವಿದು.

ಮಹಾ ಸ್ಮಶಾನ

ಮಹಾ ಸ್ಮಶಾನ

ಇಲ್ಲಿಯೇ ಅಧಿಕವಾಗಿ ದಹನಸಂಸ್ಕಾರವನ್ನು ಮಾಡಲಾಗುತ್ತದೆ. ಇದನ್ನು ಮಹಾಸ್ಮಶಾನ ಎಂದು ಕರೆಯಲಾಗುತ್ತದೆ.

ತಾರಕೇಶ್ವರ ದೇವಾಲಯ

ತಾರಕೇಶ್ವರ ದೇವಾಲಯ

ಈ ಘಾಟ್‍ನ ಸಮೀಪದಲ್ಲಿ ತಾರಕೇಶ್ವರ ದೇವಾಲಯವಿದೆ. ಇಲ್ಲಿಂದ ಪರಮ ಶಿವನು ಮರಣಿಸುತ್ತಿರುವವರಿಗೆ ಕಿವಿಯಲ್ಲಿ ತಾರಕ ನಾಮವನ್ನು ಜಪಿಸುತ್ತಾನೆ ಎಂದು ಅದ್ದರಿಂದಲೇ ಇಲ್ಲಿ ಮರಣಿಸಿದವರಿಗೆ ಮೋಕ್ಷ ಲಭಿಸುತ್ತದೆ ಎಂದು ಹೇಳುತ್ತಾರೆ.

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಈ ಸುಂದವಾದ ವಾರಾಣಾಸಿಗೆ ಭೇಟಿ ನೀಡಲು ಸಮೀಪದ ವಿಮಾನ ನಿಲ್ದಾಣವೆಂದರೆ ವಾರಾಣಾಸಿ ವಿಮಾನ ನಿಲ್ದಾಣ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ