Search
  • Follow NativePlanet
Share
» »ಐಆರ್‌ಸಿಟಿಸಿ ಆಫರ್; 12 ದಿನದ ಪ್ಯಾಕೇಜ್‌ನಲ್ಲಿ ಜ್ಯೋತಿರ್ಲಿಂಗದ ದರ್ಶನ

ಐಆರ್‌ಸಿಟಿಸಿ ಆಫರ್; 12 ದಿನದ ಪ್ಯಾಕೇಜ್‌ನಲ್ಲಿ ಜ್ಯೋತಿರ್ಲಿಂಗದ ದರ್ಶನ

ಜ್ಯೋತಿರ್ಲಿಂಗದ ದರ್ಶನ ಮಾಡೋದಂದ್ರೆ ಸುಲಭನಾ ಹೇಳಿ. ಅದಕ್ಕೆ ಅಷ್ಟೇ ಸಮಯಾನು ಬೇಕು ಹಾಗೆಯೇ ದುಡ್ಡೂ ಬೇಕು. ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಜ್ಯೋತಿರ್ಲಿಂಗದ ದರ್ಶನ ಪಡೆಯಲೇ ಬೇಕು. ನಿಮಗೂ ಜ್ಯೋತಿರ್ಲಿಂಗದ ದರ್ಶನ ಪಡೆಯಬೇಕೆಂಬ ಆಸೆ ಇದ್ದರೆ ಇಲ್ಲಿದೆ ಒಂದು ಸುವರ್ಣಾವಕಾಶ. ಅದೂ ಕೂಡಾ ಕಡಿಮೆ ಬೆಲೆಯಲ್ಲಿ ಜ್ಯೋತಿರ್ಲಿಂಗದ ದರ್ಶನ ಪಡೆಯುವ ಅವಕಾಶವನ್ನು ಭಾರತೀಯ ರೈಲ್ವೆ ಇಲಾಖೆ ನೀಡುತ್ತಿದೆ.

ಬಂಪರ್ ಆಫರ್

ಬಂಪರ್ ಆಫರ್

ಭಾರತೀಯ ರೈಲ್ವೆಯು ಒಂದು ಹೊಸ ಪ್ಯಾಕೇಜ್‌ನ್ನು ನೀಡಿದೆ. ಈ ಮೂಲಕ ನೀವು ಕಡಿಮೆ ದರದಲ್ಲಿ ಏಳು ಜ್ಯೋತಿರ್ಲಿಂಗದ ದರ್ಶನ ಮಾಡಬಹುದು. ಐಆರ್‌ಸಿಟಿಸಿ ರಾಮೇಶ್ವರ, ಮಧುರೈ, ತಿರುಪತಿ, ಮಲ್ಲಿಕಾರ್ಜುನ, ಪರಲಿ ವೈದ್ಯನಾಥ್, ನಾಗನಾಥ್, ಘ್ರಷ್ಣೇಶ್ವರ್, ರಥಂಭಕೇಶ್ವರ್ ಹಾಗೂ ಭೀಮಾಶಂಕರ್ ಪ್ರವಾಸದ ಪ್ಯಾಕೇಜ್‌ನ್ನು ನೀಡುತ್ತಿದೆ. ಏಳು ಜ್ಯೋತಿರ್ಲಿಂಗದ ಯಾತ್ರೆ ಎನ್ನುವ ಹೆಸರಿನಲ್ಲಿ ಈ ಪ್ಯಾಕೇಜ್ ಒದಗಿಸುತ್ತಿದೆ.

ಬಿ.ಎಂ.ಟಿ.ಸಿ ಬಸ್‌ನಲ್ಲಿ ಓಡಾಡಿರೋರಿಗೆಲ್ಲಾ ಈ ಸ್ಥಳ ಗೊತ್ತಿರ್ಲೇ ಬೇಕು

ರಾಜ್‌ಕೋಟ್‌ನಿಂದ ಆರಂಭ

ರಾಜ್‌ಕೋಟ್‌ನಿಂದ ಆರಂಭ

ಸ್ಲೀಪರ್ ಕ್ಲಾಸ್‌ನಲ್ಲಿ ಇಡೀ ಯಾತ್ರೆ ಕೈಗೊಳ್ಳಬಹುದಾಗಿದೆ. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟ ಎಲ್ಲವೂ ಈ ಪ್ಯಾಕೇಜ್‌ನಲ್ಲೇ ಬರುತ್ತದೆ. ಏಳು ಜ್ಯೋತಿರ್ಲಿಂಗದ ಯಾತ್ರೆಯು ಇದೇ 20 ಜುಲೈಯಿಂದ ಪ್ರಾರಂಭವಾಗಲಿದೆ. ರಾಜ್‌ಕೋಟ್‌ನಿಂದ ರಾತ್ರಿ 12 ಗಂಟೆಗೆ ಯಾತ್ರೆ ಪ್ರಾರಂಭವಾಗುತ್ತದೆ. ಈ 12 ದಿನದ ಯಾತ್ರೆಯ ಒಟ್ಟು ದರ 12, 285 ರೂ.

ಬೋರ್ಡಿಂಗ್ ಪಾಯಿಂಟ್‌ಗಳು ಯಾವ್ಯಾವುವು

ಬೋರ್ಡಿಂಗ್ ಪಾಯಿಂಟ್‌ಗಳು ಯಾವ್ಯಾವುವು

ರಾಜ್‌ಕೋಟ್, ಸುರೇಂದ್ರ ನಗರ್, ವಿರಮ್‌ಗಮ್, ಸಬರಮತಿ, ಅಣಂದ, ವಡೋದರಾ, ಬರೂಚ್, ಸೂರಜ್, ವಾಪಿ, ಕಲ್ಯಾಣ್ ಹಾಗು ಪುಣೆ ರೈಲ್ವೆ ನಿಲ್ದಾಣವಾಗಿದೆ. ಅದುವೆ ಇಳಿಯುವ ಪಾಯಿಂಟ್‌ಗಳು ಕೂಡಾ ಇವೇ ಆಗಿದೆ.

ದಾಂಡೇಲಿಯಲ್ಲಿರುವ ಈ ಸಿಂಥೇರಿ ರಾಕ್‌ ನೋಡಿದ್ದೀರಾ?

ಯಾತ್ರೆಯ ಬಗ್ಗೆ ಒಂದಿಷ್ಟು

ಯಾತ್ರೆಯ ಬಗ್ಗೆ ಒಂದಿಷ್ಟು

27 ಜುಲೈಗೆ ವೈದ್ಯನಾಥ ಜ್ಯೋತಿರ್ಲಿಂಗದ ದರ್ಶನ ಪಡೆದು, 28 ಜುಲೈಗೆ ನಾಗನಾಥ ಜ್ಯೋತಿರ್ಲಿಂಗದ ದರ್ಶನ ಪಡೆದು, 29 ಜುಲೈಗೆ ಘಷ್ಣೇಶ್ವರ ಜ್ಯೋತಿರ್ಲಿಂಗದ ದರ್ಶನ ಪಡೆಯಲಾಗುತ್ತದೆ. 30 ಜುಲೈಗೆ ತೃಂಬಕೇಶ್ವರ ಜ್ಯೋತಿರ್ಲಿಂಗದ ದರ್ಶನ ಪಡೆದು, 31ಕ್ಕೆ ಪುಣೆಯ ಭೀಮಾಶಂಕರ ಜ್ಯೋತಿರ್ಲಿಂಗದ ದರ್ಶನ ಪಡೆದು ಅದೇ ದಿನ ರಾತ್ರಿ ರಾಜ್‌ಕೋಟ್‌ಗೆ ಹೊರಡಲಾಗುತ್ತದೆ. ಆಗಸ್ಟ್ 1 ಕ್ಕೆ ಮತ್ತೆ ರಾಜ್‌ಕೋಟ್ ತಲುಪಲಾಗುತ್ತದೆ.

ಕಾಫಿ ತೋಟದ ನಡುವೆ ಧುಮ್ಮಿಕ್ಕುವ ಈ ಜಲಧಾರೆಯಲ್ಲಿ ಸ್ನಾನ ಮಾಡಿದ್ರೆ ಚರ್ಮವ್ಯಾಧಿ ಗುಣವಾಗುತ್ತಂತೆ!

ಪ್ಯಾಕೇಜ್‌ನಲ್ಲಿ ಏನೆಲ್ಲಾ ಬರುತ್ತದೆ

ಪ್ಯಾಕೇಜ್‌ನಲ್ಲಿ ಏನೆಲ್ಲಾ ಬರುತ್ತದೆ

ಉಳಿಯಲು ಹೋಟೆಲ್ ವ್ಯವಸ್ಥೆ, ತರಕಾರಿ ಊಟ, ಟೂರಿಸ್ಟ್‌ ಬಸ್‌ಗಳ ಮೂಲಕ ದಾರ್ಶನಿಕ ಸ್ಥಳಗಳನ್ನು ಸುತ್ತಾಡಿಸಲಾಗುತ್ತದೆ. ಟೂರಿಸ್ಟ್‌ ಗೈಡ್‌ ಕೂಡಾ ಇರುತ್ತಾರೆ. ರೈಲಿನ ಪ್ರತಿಯೊಂದು ಕೋಚ್‌ನಲ್ಲೂ ಸುರಕ್ಷತೆಯ ವ್ಯವಸ್ಥೆ ಮಾಡಲಾಗಿರುತ್ತದೆ. ರೈಲಿನಲ್ಲಿ ಐಆರ್‌ಸಿಟಿಸಿಯ ಅಧಿಕಾರಿಗಳು ಇರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X