Search
  • Follow NativePlanet
Share
» »ಜ.6ರಿಂದ 14ರವರೆಗೆ ನಡೆಯುವ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳಿ

ಜ.6ರಿಂದ 14ರವರೆಗೆ ನಡೆಯುವ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳಿ

ಆಕಾಶದಲ್ಲಿ ಹಾರುವ ಗಾಳಿಪಟವನ್ನು ದೂರದಿಂದಲೇ ನೋಡಿ ಸಂತೋಷ ಪಡುತ್ತೇವೆ. ಇನ್ನೂ ಗಾಳಿಪಟವನ್ನು ಹತ್ತಿರದಿಂದ ನೋಡಿದರೆ ಎಷ್ಟೊಂದು ಸಂತೋಷ ಪಡಲಿಕ್ಕಿಲ್ಲ ಹೇಳಿ. ಅದರಲ್ಲೂ ದೊಡ್ಡ ದೊಡ್ಡ ಚಿತ್ರ ವಿಚಿತ್ರ ಆಕಾರದ ಗಾಳಿಪಟವನ್ನು ನೋಡೋದು ನಿಜಕ್ಕೂ ಮನಸ್ಸಿಗೆ ಮುದನೀಡುತ್ತದೆ.

ಅಂತರಾಷ್ಟ್ರೀಯ ಗಾಳಿಪಟ ಉತ್ಸವ

ಅಂತರಾಷ್ಟ್ರೀಯ ಗಾಳಿಪಟ ಉತ್ಸವ

PC:gujarattourism

ಇವೆಲ್ಲವೂ ನಿಮಗೆ ಗಾಳಿಪಟ ಉತ್ಸವದಲ್ಲಿ ಕಾಣಸಿಗುತ್ತದೆ. ಅದರಲ್ಲೂ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಎಲ್ಲಾ ರೀತಿಯ ವಿವಿಧ ಆಕರ್ಷಕ ಗಾಳಿಪಟವನ್ನು ಕಣ್ತುಂಬಿಸುವ ಅವಕಾಶ ದೊರೆಯುತ್ತದೆ. ಅಂತಹ ಅವಕಾಶವನ್ನು ಒದಗಿಸುತ್ತಿದೆ ಅಹಮದಾಬಾದ್‌ನ ಅಂತರಾಷ್ಟ್ರೀಯ ಗಾಳಿಪಟ ಉತ್ಸವ.

ಹಿಮಾಲಯದಲ್ಲಿರುವ ಯಮುನೋತ್ರಿಯ ಬಗ್ಗೆ ಗೊತ್ತಾ?ಹಿಮಾಲಯದಲ್ಲಿರುವ ಯಮುನೋತ್ರಿಯ ಬಗ್ಗೆ ಗೊತ್ತಾ?

ಮಕರ ಸಂಕ್ರಾತಿ

ಮಕರ ಸಂಕ್ರಾತಿ

PC:gujarattourism

ಗುಜರಾತ್ ಪ್ರವಾಸೋಧ್ಯಮ ಇಲಾಖೆಯಡಿಯಲ್ಲಿ ಪ್ರತಿವರ್ಷ ಉತ್ತರಾಯಣ ಅಂದರೆ ಮಕರ ಸಂಕ್ರಾತಿಯ ಸಂದರ್ಭದಲ್ಲಿ ಗಾಳಿಪಟ ಉತ್ಸವವನ್ನು ಆಚರಿಸಲಾಗುತ್ತದೆ. ಹಾಗೆಯೇ ಈ ಬಾರಿ ಗಾಳಿಪಟ ಉತ್ಸವವವನ್ನು ಜನವರಿ 6 ರಿಂದ ಜನವರಿ 14 ರ ವರೆಗೆ ಆಯೋಜಿಸಲಾಗಿದೆ.

30 ನೇ ವರ್ಷದ ಗಾಳಿಪಟ ಉತ್ಸವ

30 ನೇ ವರ್ಷದ ಗಾಳಿಪಟ ಉತ್ಸವ

PC:gujarattourism

ಈ ಬಾರಿ 30ನೇ ವರ್ಷದ ಗಾಳಿಪಟ ಉತ್ಸವವನ್ನು ಆಚರಿಸಲಾಗುತ್ತದೆ. ಇದನ್ನು ಗುಜರಾತ್‌ನ ಸಬರಮತಿ ರಿವರ್‌ಫ್ರಂಟ್ ನಲ್ಲಿ ಆಯೋಜಿಸಲಾಗುತ್ತದೆ. ಉತ್ತರಾಯಣ ಸಂದರ್ಭದಲ್ಲಿ ಆಯೋಜಿಸಲಾಗುವ ಈ ಕಾರ್ಯಕ್ರಮದಲ್ಲಿ ಸ್ಥಳೀಯರ ಜೊತೆಗೆ ಪ್ರವಾಸಿಗರೂ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಚಳಿಗಾಲದಲ್ಲಿ ಕೇರಳದ ಈ 10 ತಾಣಗಳಲ್ಲಿ ಫ್ಯಾಮಿಲಿ ಜೊತೆ ಕಾಲಕಳೆಯಿರಿಚಳಿಗಾಲದಲ್ಲಿ ಕೇರಳದ ಈ 10 ತಾಣಗಳಲ್ಲಿ ಫ್ಯಾಮಿಲಿ ಜೊತೆ ಕಾಲಕಳೆಯಿರಿ

ಗಾಳಿಪಟ ಹಾರಿಸುವುದು

ಗಾಳಿಪಟ ಹಾರಿಸುವುದು

PC:gujarattourism
ಗುಜರಾತಿ ಫೇಮಸ್‌ ತಿನಿಸುಗಳನ್ನು ಸವಿಯುವ ಅವಕಾಶವೂ ಸಿಗುತ್ತದೆ. ಉತ್ತರಾಯಣದಂದು ಜನರು ಬೆಳಗ್ಗೆ ಬೇಗನೇ ಎದ್ದು ವಿವಿಧ ಸಿಹಿ ತಿನಿಸುಗಳನ್ನು ತಯಾರಿಸುತ್ತಾರೆ. ತಮ್ಮ ಫ್ಯಾಮಿಲಿ ಸದಸ್ಯರು, ಸ್ನೇಹಿತರ ಜೊತೆಗೂಡಿ ಮನೆಯ ಟೇರೆಸ್‌ ಮೇಲೆ ಗಾಳಿಪಟವನ್ನು ಹಾರಿಸುತ್ತಾರೆ.

ವಿದೇಶಿ ಪ್ರವಾಸಿಗರೂ ಪಾಲ್ಗೊಳ್ಳುತ್ತಾರೆ

ವಿದೇಶಿ ಪ್ರವಾಸಿಗರೂ ಪಾಲ್ಗೊಳ್ಳುತ್ತಾರೆ

PC:gujarattourism
ಈ ಗಾಳಿಪಟ ಉತ್ಸವವನ್ನು ಅಹಮದಾಬಾದ್‌ನ್ನು ಹೊರತುಪಡಿಸಿ ಸೂರತ್, ವಡೋದರ, ರಾಜ್‌ಕೋಟ್‌, ನಾಡಿಯಾದ್‌ನಲ್ಲಿ ನಡೆಸಲಾಗುತ್ತದೆ. ಒಂದು ವಾರದ ವರೆಗೆ ನಡೆಯುವ ಈ ಉತ್ಸವದಲ್ಲಿ ಭಾರತದ ವಿವಿಧ ಭಾಗಗಳಿಂದ ಮಾತ್ರವಲ್ಲದೇ, ಯುಕೆ, ಕೆನಡಾ, ಇಂಡೋನೇಷ್ಯಾ, ಬ್ರೆಜಿಲ್, ಆಸ್ಟ್ರೇಲಿಯಾ, ಯುಎಸ್‌ಎ, ಮಲೇಶಿಯಾ, ಸಿಂಗಾಪುರದಿಂದಲೂ ಜನರು ಬರುತ್ತಾರೆ.

2019ರಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇಲ್ಲಿಗೆ ಹೋಗಿ2019ರಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇಲ್ಲಿಗೆ ಹೋಗಿ

ಗಾಳಿಪಟ ಹಾರಿಸಬಹುದು

ಗಾಳಿಪಟ ಹಾರಿಸಬಹುದು

PC:gujarattourism

ಗಾಳಿಪಟ ಉತ್ಸವದಲ್ಲಿ ಸಾಂಸ್ಕೃತಿಕ, ಕ್ರೀಡೆ, ಕಾರ್ಟೂನ್ ಹೀಗೆ ಎಲ್ಲಾ ರೀತಿಯ ಬಣ್ಣಬಣ್ಣದ ಗಾಳಿಪಟವನ್ನು ಕಾಣಬಹುದು. ಇಲ್ಲಿ ಪ್ರವಾಸಿಗರಿಗೂ ಗಾಳಿಪಟವನ್ನು ಹಾರಿಸುವ ಅವಕಾಶ ಸಿಗುತ್ತದೆ. ಒಂದು ಗಾಳಿಪಟಕ್ಕೆ ಇಂತಿಷ್ಟು ಎಂದು ನಿಗಧಿಪಡಿಸಲಾಗಿರುತ್ತದೆ. ಗಾಳಿಪಟವನ್ನು ಖರೀದಿಸಿ ಹಾರಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X