Search
  • Follow NativePlanet
Share
» »ನೀವು ಎಂದೂ ಕಂಡು ಕೇಳರಿಯದ ಹಳ್ಳಿಗಳು ಇವು...

ನೀವು ಎಂದೂ ಕಂಡು ಕೇಳರಿಯದ ಹಳ್ಳಿಗಳು ಇವು...

ಭಾರತವನ್ನು "ಹಳ್ಳಿಗಳ ದೇಶ" ಎಂದೇ ಬಣ್ಣಿಸಲಾಗುತ್ತದೆ. ಲಕ್ಷಾಂತರ ಹಳ್ಳಿಗಳಿರುವ ನಮ್ಮ ಭಾರತ ದೇಶದಲ್ಲಿ ಭಾರತೀಯ ಸಂಸ್ಕøತಿಯನ್ನು ಹಾಗು ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಹಳ್ಳಿಗಳ ಚಿತ್ರಣವನ್ನು ನೆನೆಸಿಕೊಂಡರೆ ಒಮ್ಮೆಯಾದರೂ ಭೇಟಿ ನೀಡಲೇಬೇಕು ಅನ್ನಿಸುತ್ತದೆ. ಕೃಷಿ ಭೂಮಿಗಳು, ಟಾರುಗಳಿಲ್ಲದ ರಸ್ತೆಗಳು, ಸೊಂಪಾಗಿ ಬೆಳೆದ ಗಿಡ ಮರಗಳು, ತಂಪಾದ ಗಾಳಿ ಆಹಾ ಆಹ್ಲಾದಕರವಾಗಿರುತ್ತದೆ.

ಕೆಲವರಿಗೆ ಮಾತ್ರ ಹಳ್ಳಿಯನ್ನು ಸುತ್ತಾಡಬೇಕು ಎಂದರೆ ಇಷ್ಟವಾಗುವುದಿಲ್ಲ. ಸಾಮಾನ್ಯವಾಗಿ ನಗರ ಜೀವನಕ್ಕೆ ಒಗ್ಗಿ ಕೊಂಡವರಿಗಂತೂ ಹಳ್ಳಿಗಳಲ್ಲಿ ಕೆಲವು ದಿನಗಳು ಇರುವುದು ಸ್ವಲ್ಪವೇ ಕಷ್ಟ. ಕನಿಷ್ಟ ಮೂಲ ಸೌಕರ್ಯಗಳಿಲ್ಲ ಹಳ್ಳಿಗಳಲ್ಲಿ ಇರಲಾರೆವೂ ಎಂದು ಹೇಳುವುದುಂಟು. ನಮ್ಮ ಭಾರತ ದೇಶದಲ್ಲಿ ಚಕಿತಗೊಳಿಸುವ ಅಪರೂಪದ ಹಳ್ಳಿಗಳನ್ನು ಪ್ರಸ್ತುತ ಲೇಖನದಲ್ಲಿ ಸಂಕ್ಷೀಪ್ತವಾಗಿ ತಿಳಿಯೋಣ.

ಮವ್ಲಿನ್ನಾಂಗ್

ಮವ್ಲಿನ್ನಾಂಗ್

ಮೇಘಾಲಯ ರಾಜ್ಯದ ಪೂರ್ವ ಖಾಸಿ ಜಿಲ್ಲೆಯ ಪೈನುಸ್ರ್ಸಾ ಭಾಗದಲ್ಲಿರುವ ಈ ಹಳ್ಳಿಯು ಕೇವಲ ಭಾರತ ಮಾತ್ರವಲ್ಲ ಸಂಪೂರ್ಣ ಏಶಿಯಾ ಖಂಡದಲ್ಲಿಯೇ ಅತ್ಯಂತ ಸ್ವಚ್ಛವಿರುವ ಹಳ್ಳಿಯಾಗಿದೆ. ಈ ಅದ್ಭುತವಾದ ಹಳ್ಳಿಯಲ್ಲಿ ಸ್ವಲ್ಪವೂ ಕಸವಾಗಲೀ, ಗಲೀಜುಗಳಾಗಲೀ ಇಲ್ಲಿ ಕಾಣುವುದಿಲ್ಲ. ಇದೊಂದು ಸ್ವಚ್ಛವಾದ ಹಳ್ಳಿಯಾಗಿದೆ.


Ashwin Kumar

ಮವ್ಲಿನ್ನಾಂಗ್

ಮವ್ಲಿನ್ನಾಂಗ್

ಈ ಹಳ್ಳಿಯ ವಿಶೇಷವೆನೆಂದರೆ ನೂರಕ್ಕೆ ನೂರು ಸಾಕ್ಷರತೆ, ಸುಮಾರು 500 ಕ್ಕೂ ಹೆಚ್ಚು ಜನರು ವಾಸವಿರುವ ಈ ಗ್ರಾಮದ ಸುತ್ತಮುತ್ತಲಿನ ಪರಿಸರ ನಿಜಕ್ಕೂ ಸಂತೋಷದಾಯಕವಾಗಿದೆ. ಈ ಗ್ರಾಮದ ಮುಖ್ಯ ಕಸುಬು ವೀಳ್ಯದೆಲೆ ಬೆಳೆಯುವುದಾಗಿದೆ.

Ashwin Kumar


ಕುಲಧಾರ ಗ್ರಾಮ

ಕುಲಧಾರ ಗ್ರಾಮ

ಇದೊಂದು ಭಯಾನಕವಾದ ಗ್ರಾಮ ಎಂದು ಪ್ರಸಿದ್ಧತೆಯನ್ನು ಪಡೆದಿದೆ. ಸಂಜೆಯಾಗುತ್ತಿದ್ದಂತೆ ಈ ಗ್ರಾಮದಿಂದ ಎಲ್ಲಾ ಜನರು ಖಾಲಿಯಾಗುತ್ತಾರೆ. ಈ ಗ್ರಾಮಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಈ ಭಯಾನಕವಾದ ಗ್ರಾಮವು ರಾಜಸ್ಥಾನದಲ್ಲಿನ ಜೈಸಲ್ಮೇರ್ ನಗರದ ಪಶ್ಚಿಮಕ್ಕೆ ಸುಮಾರು 17 ಕಿ.ಮೀ ದೂರದಲ್ಲಿ ಕುಲಧಾರ ಗ್ರಾಮವಿದೆ.


Mirza Asad Baig

ಕುಲ್ಲು ಮನಾಲಿ

ಕುಲ್ಲು ಮನಾಲಿ

ಕುಲ್ಲು ಮನಾಲಿಯ ಕುರಿತು ಬಹುತೇಕರಿಗೆ ಗೊತ್ತಿರಲೇಬೇಕು. ಆದರೆ ಕುಲ್ಲು ಕಣಿವೆಯ ಬಳಿಯಲ್ಲಿ ಪಾರ್ವತಿ ಕಣಿವೆ ಹಾಗು ಪರ್ವತವೊಂದರ ನೆರಳಿನಲ್ಲಿ ಅಡಗಿ ಕುಳಿತಿರುವ ಮಲಾನಾ ಗ್ರಾಮದ ಕುರಿತು ಬಹುತೇಕ ಯಾರಿಗೂ ಗೊತ್ತಿರಲಿಕ್ಕಿಲ್ಲ.

RuckSackKruemel

ಕುಲ್ಲು ಮನಾಲಿ

ಕುಲ್ಲು ಮನಾಲಿ

ಈ ಗ್ರಾಮದ ವಿಶೇಷತೆ ಎಂದರೆ ಇಲ್ಲಿನ ನಿವಾಸಿಗಳು ತಾವು ಅಲೆಕ್ಸಾಂಡರ್ ದೊರೆಯ ಸೈನಿಕರ ವಂಶಸ್ಥರೆಂದು ನಂಬುತ್ತಾರೆ. ಜಂಬ್ಲು ದೇವಿ ಗ್ರಾಮ ದೇವಿಯಾಗಿದ್ದು ಗ್ರಾಮದ 11 ಆಯ್ದ ಜನರು ದೇವಿಯ ಪ್ರತಿನಿಧಿಗಳಾಗಿರುತ್ತಾರೆ. ಇವರು ತಮದೇ ಆದ ಪ್ರಜಾಪ್ರಭುತ್ವವನ್ನು ಹೊಂದಿದ್ದು, ಅದು ಜಗತ್ತಿನ ಅತಿ ಪುರಾತನ ಪ್ರಜಾಪ್ರಭುತ್ವವಾಗಿದೆ ಎಂದು ನಂಬುತ್ತಾರೆ.

RuckSackKruemel

ಹಿವಾರೆ ಬಜಾರ್

ಹಿವಾರೆ ಬಜಾರ್

ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯು ಬೇಸಿಗೆಯಲ್ಲಿ ಸಾಕಷ್ಟು ತಾಪಮಾನ ಅನುಭವಿಸುತ್ತದೆ. ಅಭಿವೃದ್ಧಿ ಕಾರ್ಯಗಳು ಇನ್ನೂ ಆಗಬೇಕು. ಇಷ್ಟೆಲ್ಲ ತೊಂದರೆಗಳ ನಡುವೆಯೂ ಈ ಜಿಲ್ಲೆಯ ಒಂದು ಹಳ್ಳಿಯು ಮಾತ್ರ ನಂಬಲು ಸಾಧ್ಯವಾದ ಸಾಧನೆ ಮಾಡಿದೆ. ಅದೇ ಹಿವಾರಿ ಬಜಾರ್. ನೀವು ನಂಬಲೇಬೇಕಾದ ಸತ್ಯ ಎಂದರೆ ಇದು ಭಾರತದಲ್ಲೆ ಅತಿ ಶ್ರೀಮಂತ ಹಳ್ಳಿ. ಇಲ್ಲಿ 60 ಕ್ಕೂ ಅಧಿಕ ಕುಟುಂಬಗಳು ಲಕ್ಷಧೀಶ್ವರರಲ್ಲ, ಮಿಲಿಯನಾಧಿಪತಿಗಳು. 1995 ರಲ್ಲಿ ಪರ್ ಕ್ಯಾಪಿಟಾ ಆದಾಯ ಮಾಸಿಕ 830 ರೂ ನಷ್ಟಿದ್ದು, 2015 ರಲ್ಲಿ 30.000 ರೂ ಅಧಿಕವಾಗಿದೆ.


Naga rick

ಪೊತನಿಕ್ಕಾಡ್

ಪೊತನಿಕ್ಕಾಡ್

ಇದು ಕೇರಳದ ಎರ್ನಾಕುಲಂ ಬಳಿಯಿರುವ ಈ ಗ್ರಾಮ ಒಂದು ವಿಶೇಷ ಹೆಗ್ಗಳಿಕೆಯನ್ನು ಹೊಂದಿದೆ. ಭಾರತದಲ್ಲೆ ನೂರು ಪ್ರತಿಶತದಷ್ಟು ಸಂಪೂರ್ಣ ಸಾಕ್ಷರತೆ ಹೊಂದಿದೆ ಪ್ರಪಥಮ ಹಳ್ಳಿ ಇದಾಗಿದೆ.

DanielbdaDirector


ಕೊದಿನಿ

ಕೊದಿನಿ

ಕೇರಳದ ಮಲ್ಲಪುರ್ ಜಿಲ್ಲೆಯಲ್ಲಿರುವ ಈ ಗ್ರಾಮವು ತನ್ನಲ್ಲಿರುವ ಅತಿ ಹೆಚ್ಚಿನ ಸಂಖ್ಯೆಯ ಅವಳಿಗಳಿಂದಾಗಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿಯೇ ಹೆಸರು ವಾಸಿಯಾಗಿದೆ. ಈ ಒಂದು ಪುಟ್ಟ ಗ್ರಾಮದಲ್ಲಿ ಸುಮಾರು 200 ಕ್ಕೂ ಅಧಿಕ ಜೊತೆಗಳ ಅವಳಿಗಳನ್ನು ಹಾಗು ತ್ರಿವಳಿಗಳನ್ನು ಕಾಣಬಹುದಾಗಿದೆ.

Perumalnadar

ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more