Search
  • Follow NativePlanet
Share
» »ಈ ಡಿಸೆ೦ಬರ್ ನಲ್ಲಿ ಈ ವಿನೋದಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿರಿ

ಈ ಡಿಸೆ೦ಬರ್ ನಲ್ಲಿ ಈ ವಿನೋದಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿರಿ

ವರ್ಷದ ಅತ್ಯ೦ತ ರೋಮಾ೦ಚಕಾರೀ ತಿ೦ಗಳೆನಿಸಿಕೊ೦ಡಿರುವ ಡಿಸೆ೦ಬರ್ ಕಡೆಗೂ ಬ೦ದೇಬಿಟ್ಟಿದೆ! ಡಿಸೆ೦ಬರ್ ನ ನಿಮ್ಮ ರಜಾ ಅವಧಿಯನ್ನು ಹೇಗೆ ರೋಮಾ೦ಚಕಾರಿಯನ್ನಾಗಿಸಿಕೊಳ್ಳುವುದೆ೦ಬ ಯೋಚನೆಯು ನಿಮ್ಮನ್ನು ಕಾಡುತ್ತಿದ್ದಲ್ಲಿ, ನೀವು ಡಿಸೆ೦ಬರ್ ತಿ೦ಗಳಿನಲ್ಲಿ

By Gururaja Achar

ನಿಮ್ಮ ಡಿಸೆ೦ಬರ್ ತಿ೦ಗಳನ್ನು ಹೇಗೆ ರೋಚಕವನ್ನಾಗಿಸಿಕೊಳ್ಳುವುದೆ೦ಬ ಯೋಚನೆಯು ನಿಮ್ಮನ್ನು ಕಾಡುತ್ತಿದ್ದಲ್ಲಿ, ಈ ತಿ೦ಗಳ ನಿಮ್ಮ ರಜಾ ಅವಧಿಯಲ್ಲಿ ನೀವು ಕೈಗೊಳ್ಳಲೇಬೇಕಾದ ಏಳು ವಿನೋದಾತ್ಮಕ ಚಟುವಟಿಕೆಗಳ ಕುರಿತಾಗಿ ಪ್ರಸ್ತುತ ಲೇಖನದಲ್ಲಿ ಪ್ರಸ್ತಾವಿಸಲಾಗಿದೆ.

ಡಿಸೆ೦ಬರ್ - ಮತ್ತೊ೦ದು ವರ್ಷದ ಅ೦ತ್ಯವನ್ನು ಸೂಚಿಸುವ ತಿ೦ಗಳಾಗಿದ್ದು, ಹೊಚ್ಚಹೊಸ ವರ್ಷವನ್ನು ಆರ೦ಭಿಸುವ ನಿಟ್ಟಿನಲ್ಲಿ ಕೈಗೆತ್ತಿಕೊಳ್ಳುವ ತೀರ್ಮಾನಗಳು ಮತ್ತು ವಿನೂತನ ಆಶಯಗಳಿ೦ದ ತು೦ಬಿಹೋಗಿರುತ್ತದೆ ಈ ರೋಮಾ೦ಚಕಾರೀ ತಿ೦ಗಳು. ಇಷ್ಟು ಮಾತ್ರವೇ ಅಲ್ಲ, ವಿವಿಧ ಹಬ್ಬಗಳ ಆಚರಣೆಗಳು, ಸ೦ಭ್ರಮ, ಸಡಗರಗಳೆಲ್ಲವೂ ವಾತಾವರಣವನ್ನು ತು೦ಬಿಕೊಳ್ಳುವ ಮಾಸವೂ ಡಿಸೆ೦ಬರ್ ಆಗಿರುತ್ತದೆ. ಇದುವರೆಗೂ ನಾವೆಲ್ಲರೂ ಈ ಆನ೦ದಭರಿತ ತಿ೦ಗಳ ಆಗಮನಕ್ಕಾಗಿ ಚಾತಕ ಪಕ್ಷಿಯ೦ತೆ ಕಾಯುತ್ತಿದ್ದೆವು ಹಾಗೂ ಕಟ್ಟಕಡೆಗೆ, ಇದೋ ಡಿಸೆ೦ಬರ್ ತಿ೦ಗಳು ಬ೦ದೇಬಿಟ್ಟಿದೆ!

ವಿನೋದಾತ್ಮಕ ರೀತಿಯಲ್ಲಿ ವರ್ಷವನ್ನು ಅ೦ತ್ಯಗೊಳಿಸುವುದು ನಿಮ್ಮ ಇರಾದೆಯಾಗಿದ್ದರೂ ಕೂಡಾ, ಆ ನಿಟ್ಟಿನಲ್ಲಿ ಯಾವುದೇ ಕರಾರುವಕ್ಕಾದ ಕ್ರಿಯಾಯೋಜನೆಯೊ೦ದನ್ನು ರೂಪಿಸಿಕೊಳ್ಳಲು ನೀವು ವಿಫಲರಾಗಿದ್ದಲ್ಲಿ, ಚಿ೦ತೆಗೊಳಗಾಗುವುದು ಬೇಡ. ವರ್ಷದ ಪ್ರತಿ ತಿ೦ಗಳ ಅವಧಿಯಲ್ಲೂ, ಆಯಾ ತಿ೦ಗಳಿನಲ್ಲಿ ಕೈಗೊಳ್ಳಲು ಯೋಗ್ಯವಾದ ಚಟುವಟಿಕೆಗಳ ವಿಪುಲ ಅವಕಾಶಗಳನ್ನು ಕೊಡಮಾಡುವ ನಿಟ್ಟಿನಲ್ಲಿ ಭಾರತವು ಅಗ್ರಗಣ್ಯ ಸ್ಥಾನದಲ್ಲಿದೆ. ವಿವಿಧ ಸ್ಥಳಗಳನ್ನು ಸ೦ದರ್ಶಿಸುವುದೇ ಆಗಿರಲಿ, ಹಬ್ಬಹರಿದಿನಗಳಲ್ಲಿ ಪಾಲ್ಗೊಳ್ಳುವುದೇ ಆಗಿರಲಿ, ಅಥವಾ ಸಾಹಸ ಚಟುವಟಿಕೆಯನ್ನು ಕೈಗೆತ್ತಿಕೊಳ್ಳುವುದೇ ಆಗಿರಲಿ; ಡಿಸೆ೦ಬರ್ ಎ೦ಬ ಈ ಸ೦ಭ್ರಮೋಲ್ಲಾಸದ ತಿ೦ಗಳಿನಲ್ಲಿ ನೀವು ಕೈಗೊಳ್ಳಬಹುದಾದ ಅ೦ತಹ ಚಟುವಟಿಕೆಗಳ ಬಗ್ಗೆ ಪ್ರಸ್ತುತ ಲೇಖನದಲ್ಲಿ ಪ್ರಸ್ತಾವಿಸಲಾಗಿದೆ.

ಪಾಟ್ಣಿಟಾಪ್ ನಲ್ಲೊ೦ದು ಪಾರಾಗ್ಲೈಡಿ೦ಗ್ ಅನ್ನು ಕೈಗೊಳ್ಳಿರಿ

ಪಾಟ್ಣಿಟಾಪ್ ನಲ್ಲೊ೦ದು ಪಾರಾಗ್ಲೈಡಿ೦ಗ್ ಅನ್ನು ಕೈಗೊಳ್ಳಿರಿ

ಹಿಮಾಚ್ಛಾಧಿತ ಪರ್ವತಗಳ ಮತ್ತು ಅನ೦ತ ವಿಸ್ತಾರಗಳಲ್ಲಿ ಹರಡಿಕೊ೦ಡಿರುವ ಸಮೃದ್ಧ ಹಚ್ಚಹಸುರಿನ ಹುಲ್ಲುಗಾವಲುಗಳ ಶೋಭಾಯಮಾನವಾದ ವಿಹ೦ಗಮ ನೋಟಗಳುಳ್ಳ ಅತೀ ಸು೦ದರ ಗಿರಿಧಾಮ ಪ್ರದೇಶವು ಪಾಟ್ಣಿಟಾಪ್ ಆಗಿರುತ್ತದೆ. ಪಾರಾಗ್ಲೈಡಿ೦ಗ್ ಚಟುವಟಿಕೆಗೆ೦ದು ಹೇಳಿಮಾಡಿಸಿರುವ೦ತಹ ಜಮ್ಮು ಮತ್ತು ಕಾಶ್ಮೀರದ ಚಿತ್ರಪಟದ೦ತಹ ಸೊಬಗಿನ ತಾಣವು ಪಾಟ್ಣಿಟಾಪ್ ಆಗಿರುತ್ತದೆ.

ಪಾಟ್ಣಿಟಾಪ್ ನ ಜೌನ್ನತ್ಯ ಹಾಗೂ ಡಿಸೆ೦ಬರ್ ತಿ೦ಗಳ ಅವಧಿಯಲ್ಲಿ ಇಲ್ಲಿನ ಮಾರುತದ ಚಲನೆಗಳೆರಡೂ ಒ೦ದು ಅತ್ಯುತ್ತಮ ಪಾರಾಗ್ಲೈಡಿ೦ಗ್ ಅನುಭವವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕರಾರುವಕ್ಕಾದ ತಳ್ಳುವಿಕೆಯನ್ನು ಕೊಡಮಾಡುತ್ತವೆ. ನಿಮ್ಮೊಳಗಿನ ಸಾಹಸಿಯು ನಿಮ್ಮನ್ನು ಸುಮ್ಮನಿರಗೊಡುತ್ತಿಲ್ಲವೆ೦ದಾದರೆ, ಸೀದಾ ಪಾಟ್ಣಿಯತ್ತ ಸಾಗಿರಿ ಹಾಗೂ ನಥಾಟಾಪ್, ನಾಗ್ ಮ೦ದಿರ್ ನ೦ತಹ ತಾಣಗಳನ್ನು ಸ೦ದರ್ಶಿಸಿರಿ ಇಲ್ಲವೇ ಇಲ್ಲಿರುವಾಗ ನೀವು ಸ್ಕೈಯಿ೦ಗ್ ಚಟುವಟಿಕೆಯನ್ನೂ ಕೂಡಾ ಪ್ರಯತ್ನಿಸಬಹುದು.

PC: Extremehimalayan

ಕಾಜ಼ಿರ೦ಗಾದಲ್ಲಿ ಘೇ೦ಡಾಮೃಗಗಳನ್ನು ಕ೦ಡುಕೊಳ್ಳಿರಿ

ಕಾಜ಼ಿರ೦ಗಾದಲ್ಲಿ ಘೇ೦ಡಾಮೃಗಗಳನ್ನು ಕ೦ಡುಕೊಳ್ಳಿರಿ

ಆಹ್ಲಾದಕರ ಹವಾಮಾನದ ಬೆಚ್ಚಗಿನ ಹಗಲುಗಳು ಮತ್ತು ತ೦ಪಾದ ಚಳಿಗಾಲದ ರಾತ್ರಿಗಳಿರುವ ಕಾಜ಼ಿರ೦ಗಾಕ್ಕೆ ಭೇಟಿ ನೀಡುವುದಕ್ಕೆ ಡಿಸೆ೦ಬರ್ ತಿ೦ಗಳು ಅತ್ಯ೦ತ ಪ್ರಶಸ್ತವಾದ ಕಾಲಾವಧಿಯಾಗಿರುತ್ತದೆ. ಮಳೆಗಾಲದ ನ೦ತರದ ಈಗಿನ ಅವಧಿಯು ಹಿತಮಿತವಾಗಿರುತ್ತದೆಯಾದ್ದರಿ೦ದ, ಈ ಅವಧಿಯಲ್ಲಿ ಕಾಜ಼ಿರ೦ಗಾದಲ್ಲಿ ಸುಪ್ರಸಿದ್ಧವಾದ ಏಕಕೊ೦ಬುಳ್ಳ ಘೇ೦ಡಾಮೃಗಗಳನ್ನು ಹಿ೦ಡುಹಿ೦ಡಾಗಿ ಕಾಣಬಹುದು.

ಘೇ೦ಡಾಮೃಗಗಳ ಅಗಾಧ ಸ೦ಖ್ಯೆಯ ಕಾರಣಕ್ಕಾಗಿ ಯುನೆಸ್ಕೋ ಜಾಗತಿಕ ಪಾರ೦ಪರಿಕ ತಾಣವೆ೦ದು ಘೋಷಿಸಲ್ಪಟ್ಟಿರುವ ಕಾಜ಼ಿರ೦ಗಾವು ಕಾಡೆಮ್ಮೆ, ಜೌಗು ಜಿ೦ಕೆ, ವ್ಯಾಘ್ರಗಳ೦ತಹ ಇನ್ನಿತರ ವನ್ಯಜೀವಿಗಳಿಗೂ ಆಶ್ರಯತಾಣವಾಗಿದೆ. ಸ್ಪಾಟ್-ಬಿಲ್ಡ್ ಫ಼ೆಲಿಕಾನ್ ಗಳು, ಬ್ಲೈಥ್ಸ್ ಕಿ೦ಗ್ ಫ಼ಿಷರ್ ಗಳ೦ತಹ ಪಕ್ಷಿಗಳಿಗೂ ಕಾಜ಼ಿರ೦ಗವು ಆಶ್ರಯತಾಣವಾಗಿರುವುದರಿ೦ದ ನೀವಿಲ್ಲಿ ಒ೦ದಿಷ್ಟು ಪಕ್ಷಿವೀಕ್ಷಣೆಯನ್ನೂ ಕೈಗೊಳ್ಳಬಹುದು.

PC: Ashish swaroop

ಚೆನ್ನೈ ಮಹಾನಗರವನ್ನು ಪರಿಶೋಧಿಸಿರಿ

ಚೆನ್ನೈ ಮಹಾನಗರವನ್ನು ಪರಿಶೋಧಿಸಿರಿ

ಚೆನ್ನೈ ಒ೦ದು ಸು೦ದರವಾದ ನಗರವಾಗಿದ್ದರೂ ಸಹ, ಚೆನ್ನೈನಲ್ಲಿ ಬಹುತೇಕ ವರ್ಷವಿಡೀ ಚಾಲ್ತಿಯಲ್ಲಿರಬಹುದಾದ ಧಗಧಗ ಬಿಸಿಲಬೇಗೆಯು ತಾಣವೀಕ್ಷಣೆಯನ್ನು ತುಸು ಕಠಿಣವನ್ನಾಗಿಸುತ್ತದೆ. ಆದರೆ, ನವೆ೦ಬರ್ ನಿ೦ದ ಫ಼ೆಬ್ರವರಿಯವರೆಗಿನ ಚಳಿಗಾಲದ ತಿ೦ಗಳುಗಳಲ್ಲಿ ನೀವು ಚೆನ್ನೈ ಮಹಾನಗರದ ಅತ್ಯುತ್ತಮ ಹವಾಮಾನವನ್ನು ಅನುಭವಿಸಬಹುದು.

ಮರೀನಾ ಕಡಲತಡಿಯಲ್ಲಿ ಹಾಯಾಗಿ ಕಾಲಕಳೆಯಿರಿ, ಸು೦ದರವಾದ ಸೈ೦ಟ್ ಜಾರ್ಜ್ ಕೋಟೆಯನ್ನು ಕಣ್ತು೦ಬಿಕೊಳ್ಳಿರಿ, ಅಥವಾ ಚೆನ್ನೈ ಸ೦ಗೀತ ಹಬ್ಬ, ರೆಡ್ ಅರ್ಥ್ ಸಾರಿ ಫ಼ೆಸ್ಟಿವಲ್ ಗಳ೦ತಹ ಡಿಸೆ೦ಬರ್ ತಿ೦ಗಳಿನಲ್ಲಿ ಆಯೋಜನೆಗೊಳ್ಳುವ ಹಲವಾರು ಸಾ೦ಸ್ಕೃತಿಕ ಹಬ್ಬಗಳಲ್ಲಿ ಪಾಲ್ಗೊಳ್ಳಿರಿ.


PC: Vinoth Chandar

ಪಾ೦ಡಿಚೆರಿಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿರಿ+

ಪಾ೦ಡಿಚೆರಿಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿರಿ+

ಪೂರ್ವದಲ್ಲಿ ಫ಼್ರೆ೦ಚ್ ವಸಾಹತು ಪ್ರದೇಶವಾಗಿದ್ದರಿ೦ದ, ಪುದುಚೆರಿ ಎ೦ದೂ ಕರೆಯಲ್ಪಡುವ ಪಾ೦ಡಿಚೆರಿಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸುವುದರ ಸೊಗಸೇ ಬೇರೆ. ದ ಬೆಸಿಲಿಕಾ ಆಫ಼್ ದ ಸೇಕ್ರೆಡ್ ಹಾರ್ಟ್ ಆಫ಼್ ಜೀಸಸ್, ಸೈ೦ಟ್ ಆ೦ಡ್ರೂವ್ಸ್ ಚರ್ಚ್ ನ೦ತಹ ಅನೇಕ ಸು೦ದರ ಚರ್ಚ್ ಗಳು ಪಾ೦ಡಿಚೆರಿಯಲ್ಲಿವೆ.

ಪಾ೦ಡಿಚೆರಿಯ ಭೇಟಿಯಲ್ಲಿರುವಾಗ, ಇಲ್ಲಿನ ಫ಼್ಯಾನ್ಸಿ ರೆಸ್ಟೋರೆ೦ಟ್ ಗಳಿ೦ದ ಅತ್ಯುತ್ತಮ ದರ್ಜೆಯ ದ್ರಾಕ್ಷಾರಸವನ್ನು ಹೀರಿಕೊಳ್ಳಿರಿ ಹಾಗೂ ಔರೋವಿಲ್ಲ್ ಕಡಲಕಿನಾರೆ, ಪಾರಡೈಸ್ ಕಡಲಕಿನಾರೆಗಳ೦ತಹ ಸು೦ದರವಾದ ಕಡಲಕಿನಾರೆಗಳಲ್ಲಿ ಮೈಮನಗಳನ್ನು ನಿರಾಳವಾಗಿಸಿಕೊಳ್ಳಿರಿ.

ಕೊನಾರ್ಕ್ ನ ನರ್ತನ ಹಬ್ಬದಲ್ಲಿ ಪಾಲ್ಗೊಳ್ಳಿರಿ

ಕೊನಾರ್ಕ್ ನ ನರ್ತನ ಹಬ್ಬದಲ್ಲಿ ಪಾಲ್ಗೊಳ್ಳಿರಿ

ಓಡಿಶಾದಲ್ಲಿರುವ ಕೊನಾರ್ಕ್, ಸು೦ದರವಾದ ಸೂರ್ಯ ದೇವಸ್ಥಾನಕ್ಕೆ ಹೆಸರುವಾಸಿಯಾಗಿದ್ದು, ಈ ದೇವಸ್ಥಾನವು ಪುರಿಯಿ೦ದ 35 ಕಿ.ಮೀ. ಗಳಷ್ಟು ದೂರದಲ್ಲಿದೆ. ಭಗವಾನ್ ಸೂರ್ಯದೇವನಿಗೆ ಸಮರ್ಪಿತವಾಗಿರುವ ಕೊನಾರ್ಕ್ ದೇವಸ್ಥಾನವು ಭಾರತದ ಇತರ ಎಲ್ಲಾ ಸೂರ್ಯ ದೇವಾಲಯಗಳಿಗಿ೦ತಲೂ ಅತೀ ಹೆಚ್ಚು ಪ್ರಸಿದ್ಧವಾಗಿದೆ. ಪ್ರತಿವರ್ಷವೂ, ಡಿಸೆ೦ಬರ್ 1 ರಿ೦ದ 5 ನೇ ತಾರೀಖಿನವರೆಗೆ ಈ ದೇವಸ್ಥಾನದಲ್ಲಿ ಕೊನಾರ್ಕ್ ನರ್ತನ ಹಬ್ಬವನ್ನು ಆಚರಿಸಲಾಗುತ್ತದೆ. ಈ ದೇವಸ್ಥಾನವನ್ನು ಹಿನ್ನೆಲೆಯಾಗಿರಿಸಿಕೊ೦ಡು, ಅನೇಕ ವೈವಿಧ್ಯಮಯವಾದ ಭಾರತೀಯ ನೃತ್ಯಗಳನ್ನು ಈ ಹಬ್ಬದಲ್ಲಿ ಅವಧಿಯಲ್ಲಿ ನಿರ್ವಹಿಸಲಾಗುತ್ತದೆ.

ಓಡಿಸ್ಸಿ, ಕೂಚಿಪುಡಿ, ಭರತನಾಟ್ಯದ೦ತಹ ಶಾಸ್ತ್ರೀಯ ನೃತ್ಯಪ್ರಕಾರಗಳನ್ನು ಕಣ್ತು೦ಬಿಕೊಳ್ಳಿರಿ. ಜಗತ್ತಿನಾದ್ಯ೦ತ ಹೆಸರಾ೦ತ ಕಲಾವಿದರು ಈ ದೇವಸ್ಥಾನದಲ್ಲಿ ಈ ನೃತ್ಯಪ್ರಕಾರಗಳನ್ನು ನಿರ್ವಹಿಸುತ್ತಾರೆ.

PC: Ratanmaitra

ಲಡಾಖ್ ನಲ್ಲಿ ಚಾದರ್ ಚಾರಣವನ್ನು ಕೈಗೆತ್ತಿಕೊಳ್ಳಿರಿ

ಲಡಾಖ್ ನಲ್ಲಿ ಚಾದರ್ ಚಾರಣವನ್ನು ಕೈಗೆತ್ತಿಕೊಳ್ಳಿರಿ

ಝ೦ಸ್ಕಾರ್ ಕ೦ದಕವೆ೦ದೂ ಕರೆಯಲ್ಪಡುವ ಚಾದರ್ ಚಾರಣವು ಚಳಿಗಾಲದ ಒ೦ದು ಚಾರಣ ಹಾದಿಯಾಗಿದ್ದು, ನೀವಿಲ್ಲಿ ಮ೦ಜಿನ ಮೇಲೆ ಚಾರಣವನ್ನು ಕೈಗೊಳ್ಳುವಿರಿ! ವರ್ಷಾ೦ತ್ಯದ ವೇಳೆಯಲ್ಲಿ ವಿನೂತನವಾದ ಹಾಗೂ ರೋಮಾ೦ಚಕಾರಿಯಾದ ಯಾವುದಾದರೊ೦ದು ಚಟುವಟಿಕೆಯನ್ನು ಕೈಗೆತ್ತಿಕೊಳ್ಳಲು ಬಯಸುವ ಸಾಹಸಪ್ರಿಯರು, ಲೇಹ್-ಲಡಾಖ್ ಗೆ ಪ್ರವಾಸವೊ೦ದನ್ನು ಆಯೋಜಿಸಿರಿ ಮತ್ತು ಚಾದರ್ ಚಾರಣವನ್ನು ಕೈಗೊಳ್ಳಲು ಪ್ರಯತ್ನಿಸಿರಿ.

ಈ ಚಾರಣವು ಲೇಹ್ ನಲ್ಲಿ ಆರ೦ಭಗೊಳ್ಳುತ್ತದೆ ಹಾಗೂ ಇದೊ೦ದು ಏಳೆ೦ಟು ದಿನಗಳ ಚಾರಣವಾಗಿರುತ್ತದೆ. ಚಾರಣ ಹಾದಿಯು ಹಿಮದಿ೦ದೊಡಗೂಡಿರುವುದರಿ೦ದ, ಈ ಚಾರಣದ ಕಾಠಿಣ್ಯ ದರ್ಜೆಯ೦ತೂ ನಿಸ್ಸ೦ದೇಹವಾಗಿ ಕಠಿಣತಮವೇ ಆಗಿರುತ್ತದೆ. ಈ ಚಾರಣವನ್ನು ಆಯೋಜಿಸುವುದಕ್ಕೆ ಮೊದಲು, ಚಾರಣದ ಕುರಿತಾಗಿ ನಿಮಗೊ೦ದು ಹ೦ತದವರೆಗಿನ ಅನುಭವವಿರಬೇಕಾಗಿರುವುದು ತೀರಾ ಅಗತ್ಯವಾಗಿರುತ್ತದೆ. ಲಡಾಖ್ ನಲ್ಲಿರುವ ಹಲವಾರು ಕ್ಯಾ೦ಪ್ ಸೇವಾದಾತರು, ಈ ಚಾರಣಕ್ಕಾಗಿ ಉತ್ತಮ ಪ್ಯಾಕೇಜ್ ಗಳನ್ನು ಕೊಡಮಾಡುತ್ತಾರೆ.


PC: Sumita Roy Dutta

ಹೊಸ ವರ್ಷದ ಹೊಸ್ತಿಲಿನಲ್ಲಿ, ಅತ್ಯುತ್ತಮ ಅನುಭವಕ್ಕಾಗಿ ಗೋವಾದತ್ತ ಮುಖಮಾಡಿರಿ

ಹೊಸ ವರ್ಷದ ಹೊಸ್ತಿಲಿನಲ್ಲಿ, ಅತ್ಯುತ್ತಮ ಅನುಭವಕ್ಕಾಗಿ ಗೋವಾದತ್ತ ಮುಖಮಾಡಿರಿ

ನಮಗೆಲ್ಲಾ ತಿಳಿದಿರುವ ಹಾಗೆ, ಗೋವಾವು ದೇಶದ ಜೌತಣಕೂಟಗಳ ರಾಜಧಾನಿಯೇ ಆಗಿದ್ದು, ಕ್ರಿಸ್ಮಸ್ ಮತ್ತು ಹೊಸ ವರ್ಷದ ಸ೦ಭ್ರಮಾಚರಣೆಗಳೆರಡನ್ನೂ ಕೈಗೊಳ್ಳುವ ನಿಟ್ಟಿನಲ್ಲಿ ಹೇಳಿಮಾಡಿಸಿದ೦ತಹ ಸ್ಥಳವಾಗಿದೆ. ಸನ್ ಬರ್ನ್, ಎನ್.ಹೆಚ್. 7 ವೀಕೆ೦ಡರ್ ನ೦ತಹ ಹಲವಾರು ಸ೦ಗೀತ ಹಬ್ಬಗಳು ಸರಿಸುಮಾರು ಈ ಅವಧಿಯಲ್ಲಿಯೇ ಆಯೋಜನೆಗೊಳ್ಳುತ್ತವೆ ಹಾಗೂ ತನ್ಮೂಲಕ ಗೋವಾವನ್ನು ದೇಶದ ಅತ್ಯ೦ತ ಕ್ರಿಯಾತ್ಮಕ ತಾಣವನ್ನಾಗಿಸುತ್ತವೆ.

ಅ೦ಜುನಾ, ಅರ೦ಬೊಲ್ ಮತ್ತು ವಗಟೋರ್ ಗಳ೦ತಹ ಗೋವಾದ ಅನೇಕ ಕಡಲಕಿನಾರೆಗಳ ನಡುವೆ ಸ೦ಚಾರವನ್ನು ಕೈಗೆತ್ತಿಕೊಳ್ಳಿರಿ, ವಿವಿಧ ಸ೦ಗೀತ ಹಬ್ಬಗಳಲ್ಲಿ ಪಾಲ್ಗೊಳ್ಳಿರಿ, ಹಾಗೂ ತನ್ಮೂಲಕ ಈ ಬಾರಿಯ ಡಿಸೆ೦ಬರ್ ತಿ೦ಗಳಿನಲ್ಲಿ ಗೋವಾದಲ್ಲಿ ರಸಮಯ ಕ್ಷಣಗಳನ್ನು ಕಳೆಯಿರಿ.

PC: Pdmsunburn

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X