• Follow NativePlanet
Share
» » ಭಾರತದ ಕೇಂದ್ರಾಡಳಿತ ಪ್ರದೇಶಗಳು ಮತ್ತು ಅವುಗಳ ವಿಶೇಷತೆಗಳು

ಭಾರತದ ಕೇಂದ್ರಾಡಳಿತ ಪ್ರದೇಶಗಳು ಮತ್ತು ಅವುಗಳ ವಿಶೇಷತೆಗಳು

Posted By: Manjula Balaraj Tantry

ಭಾರತವು ತನ್ನಲ್ಲಿಗೆ ಭೇಟಿಕೊಡುವ ಪ್ರವಾಸಿಗರನ್ನು ತನ್ನ ವಿಶಾಲವಾದ ಸೌಂದರ್ಯತೆ ಹಾಗೂ ವಿಸ್ಮಯಕರ ಸ್ಥಳಗಳ ಮೂಲಕ ಅಚ್ಚರಿಗೊಳಿಸುವಲ್ಲಿ ಸಫಲವಾದ ದೇಶವೆನಿಸಿದೆ. ಭಾರತದ ಕೇಂದ್ರಾಡಳಿತ ಪ್ರದೇಶಗಳೂ ಕೂಡಾ ಅಂತಹ ಪ್ರದೇಶಗಳಲ್ಲಿ ಸೇರಿವೆ. ನೀವು ಇಂತಹ ಒಕ್ಕೂಟ ಪ್ರ್ಯಾಂತ್ಯಗಳು ಮತ್ತು ಅವುಗಳ ವಿಶೇಷತೆಗಳ ಬಗ್ಗೆ ತಿಳಿಯಬೇಕೆಂದಿರುವಲ್ಲಿ ನೀವು ಸರಿಯಾದ ಪುಟವನ್ನೇ ತಿರುವಿರುವಿರಿ. ಭಾರತದ ರೋಮಾಂಚಕ ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಓದಿ ಮತ್ತು ಅವುಗಳ ಬಗ್ಗೆ ತಿಳಿಯಿರಿ

ಭಾರತವು ಒಂದು ಎಂತಹ ದೇಶವೆಂದರೆ ಇಲ್ಲಿಯ ಪ್ರತೀ ಸ್ಥಳದಲ್ಲಿಯೂ ತನ್ನದೇ ಆದ ಇತಿಹಾಸ ಮತ್ತು ಅಸ್ತಿತ್ವವನ್ನು ಸಾರುವಂತೆ ಕಾಣುತ್ತದೆ. ಇಲ್ಲಿ ಅನೇಕ ಪ್ರಸಿದ್ದವಾದ ಸ್ಥಳಗಳಿವೆ ಕೆಲವು ಪರ್ವತಗಳ ಮೇಲಿದ್ದರೆ ಇನ್ನು ಕೆಲವು ಘನವಾದ ಅರಣ್ಯಪ್ರದೇಶದ ಒಳಗಿದೆ ಮತ್ತು ಕೆಲವು ಸುಂದರವಾದ ಬಯಲು ಪ್ರದೇಶದಲ್ಲಿ ನೆಲೆಸಿವೆ.

29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳೊಂದಿಗೆ, ಭಾರತವು ಶ್ರೀಮಂತ ಜೀವವೈವಿಧ್ಯ, ಸಂಸ್ಕೃತಿ ಮತ್ತು ಮರೆಯಲಾಗದ ಇತಿಹಾಸವನ್ನು ಹೊಂದಿರುವ ದೇಶವಾಗಿದೆ. ಈ ದೇಶದ ಪ್ರತೀ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ಜೀವನ ಶೈಲಿ ಮತ್ತು ಇತಿಹಾಸವನ್ನು ಹೊಂದಿದೆ ಮತ್ತು ಅವು ತುಂಬಾ ಒಂದಲ್ಲ ಒಂದು ಕಾರಣದಿಂದ ವಿಶೇಷವಾದುದಾಗಿದೆ. ನೀವು ಇಂತಹ ಪ್ರತೀ ಕೇಂದ್ರಾಡಳಿತ ಪ್ರದೇಶದ ವಿಷೇಶತೆಯ ಬಗ್ಗೆ ತಿಳಿಯ ಬಯಸಿದರೆ ಇಲ್ಲಿ ಓದಿ.

ಇಲ್ಲಿ ಭಾರತದ ವಿವಿಧ ಕೇಂದ್ರಾಡಳಿತ ಪ್ರದೇಶ ಮತ್ತು ಅವುಗಳ ವಿಶೇಷತೆಗಳನ್ನು ಪಟ್ಟಿ ಮಾಡಲಾಗಿದೆ.

1) ದೆಹಲಿ

1) ದೆಹಲಿ

ಭಾರತದ ಅಧಿಕೃತ ರಾಜಧಾನಿಯಾದ ದೆಹಲಿಯು ಭಾರತದಲ್ಲೇ ಅತ್ಯಂತ ಹಳೆಯ, ಇನ್ನೂ ಜನರು ವಾಸವಾಗಿರುವ ನಗರಗಳಲ್ಲಿ ಒಂದಾಗಿದೆ. ಅಸಂಖ್ಯಾತ ಮಿಲೇನಿಯರ್ ಗಳು ಮತ್ತು ಅತಿದೊಡ್ಡ ಮೆಟ್ರೊ ಆಗಿರುವ ದೆಹಲಿಯು, ಮಾಲಿನ್ಯದ ಸಮಸ್ಯೆಗಳ ಹೊರತಾಗಿಯೂ ವಿಶ್ವದಲ್ಲೇ ಅತ್ಯಂತ ಬೇಡಿಕೆಯಿರುವ ನಗರಗಳಲ್ಲಿ ಒಂದಾಗಿದೆ. ನಿಜಾಂಶವೆಂದರೆ ಇದರ ಐತಿಹಾಸಿಕ , ಸಾಂಸ್ಕೃತಿಕ ಮತ್ತು ರಾಜಕೀಯ ಮಹತ್ವದಿಂದಾಗಿ ಇದು ಭಾರತದ ಅತ್ಯಂತ ಪ್ರಸಿದ್ದ ನಗರವೆನಿಸುವುದರಲ್ಲಿ ಸಂಶಯವಿಲ್ಲ.

ಇಲ್ಲಿಯ ಪ್ರಮುಖ ಆಕರ್ಷಣೆಗಳಲ್ಲಿ, ಇಂಡಿಯಾ ಗೇಟ್, ಲೋಟಸ್ ದೇಮಾಲಯ, ಪಾರ್ಲಿಮೆಂಟ್ ಹೌಸ್, ರೆಡ್ ಪೋರ್ಟ್(ಕೆಂಪುಕೋಟೆ), ಮತ್ತು ಕೆಲವು ಧಾರ್ಮಿಕ ಸ್ಥಳಗಳಾದ ಅಕ್ಷರಧಾಮ ದೇವಾಲಯ, ಜಾಮಾ ಮಸೀದಿ, ಇತ್ಯಾದಿಗಳು ಸೇರಿವೆ. ಚಾಂದಿನಿ ಚೌಕ್, ಕುತುಬ್ ಮಿನಾರ್ ರಾಷ್ಟ್ರಪತಿ ಭವನ, ಜಂತರ್ ಮಂತರ್ ಇತ್ಯಾದಿಗಳು ಇಲ್ಲಿಯ ಪ್ರವಾಸಿ ಕೇಂದ್ರಗಳಾಗಿವೆ.

PC- Imahesh3847


2) ಪುದುಚೇರಿ

2) ಪುದುಚೇರಿ

ಇದನ್ನು ಪಾಂಡಿ ಎಂದೂ ಕರೆಯಲಾಗುತ್ತದೆ ಈ ಸುಂದರವಾದ ಕೇಂದ್ರಾಡಳಿತ ಪ್ರದೇಶವು ಈಗ ಗುಪ್ತ ಸ್ಥಳವಲ್ಲ. ಈ ಸುಂದರವಾದ ಸಣ್ಣ ಸ್ಥಳವು ಖಂಡಿತವಾಗಿಯೂ ಅದರ ಅಸ್ಥಿತ್ವವನ್ನು ವಿಶ್ವ ನಕ್ಷೆಯಲ್ಲಿ ಗುರುತಿಸಲ್ಪಟ್ಟಿದೆ. ಪ್ರಶಾಂತ ಕಡಲ ತೀರಗಳು ಮತ್ತು ಫ್ರಾಂಕೋ-ತಮಿಳು ವಾಸ್ತುಶೈಲಿಗೆ ಹೆಸರುವಾಸಿಯಾದ ಪುದುಚೆರಿಯು ವರ್ಷದುದ್ದಕ್ಕೂ ಅತ್ಯಂತ ಪ್ರಸಿದ್ಧ ಮತ್ತು ಅತಿ ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ.

ಪ್ರಶಾಂತವಾದ ಸುತ್ತಮುತ್ತಲು ಮತ್ತು ಪ್ರಶಾಂತವಾದ ವಾತಾವರಣವು ಪ್ರತಿ ವರ್ಷ ಪ್ರವಾಸಿಗರು ತಮ್ಮ ಪ್ರಯಾಣದ ಪಟ್ಟಿಯಲ್ಲಿ ಈ ಹೆಸರನ್ನು ಹಾಕಿಕೊಂಡಿರುತ್ತಾರೆ. ಪ್ರಮುಖ ಸ್ಥಳಗಳಾದ ಪ್ರೊಮೆನೇಡ್ ಬೀಚ್, ಪ್ಯಾರಡೈಸ್ ಬೀಚ್, ಅರಬಿಂದೋ ಆಶ್ರಮ, ಆರೊವಿಲ್ಲೆ ಮತ್ತು ಫ್ರೆಂಚ್ ಯುದ್ಧ ಸ್ಮಾರಕಗಳಂತಹ ಕೆಲವು ಐತಿಹಾಸಿಕ ಸ್ಮಾರಕಗಳು ಮತ್ತು ಗಾಂಧಿ ಪ್ರತಿಮೆ ಇತ್ಯಾದಿಗಳನ್ನು ಇಲ್ಲಿ ನೋಡಬಹುದು .


PC- Karthik Easvur

3) ಲಕ್ಷದ್ವೀಪ

3) ಲಕ್ಷದ್ವೀಪ

ಸುಮಾರು 39 ದ್ವೀಪಗಳ ಒಂದು ಗುಂಪಾದ ಲಕ್ಷದ್ವೀಪವು ಪ್ರತಿ ಪ್ರಕೃತಿ ಪ್ರೇಮಿ ಮತ್ತು ಸಾಹಸಿ ಅನ್ವೇಷಕರಿಗೆ ಕನಸಿನ ತಾಣವಾಗಿದೆ. ಬೆರಗುಗೊಳಿಸುವ ಭೂದೃಶ್ಯಗಳಿಂದ ಹಿಡಿದು ಕಚ್ಚಾ ದ್ವೀಪಗಳವರೆಗೆ ಈ ದ್ವೀಪವು ಒಂದು ಆದರ್ಶ ನೈಸರ್ಗಿಕ ಸ್ಥಳವು ಹೊಂದಬೇಕಾದ ಎಲ್ಲಾ ವಿಶೇಷತೆಗಳನ್ನು ಹೊಂದಿದೆ.

ಕವರಾಟ್ಟಿ ಇದರ ರಾಜಧಾನಿಯಾಗಿದ್ದಿ, ಈ ದ್ವೀಪಗಳು 32 ಚದರ ಕಿಮೀ ಭೂಪ್ರದೇಶವನ್ನು ಹೊಂದಿವೆ ಮತ್ತು ಹವಳದ ದಿಬ್ಬಗಳು ಮತ್ತು ಹವಳಗಳಿಗೆ ಸಹ ಪ್ರಸಿದ್ಧವಾಗಿವೆ.ಸಂದರ್ಶಕರಲ್ಲಿ ದೈವತ್ವದ ಭಾವನೆಯನ್ನು ಪ್ರಚೋದಿಸುವಂತೆ ಮಾಡುವಂತಹ ಪ್ರಮುಖ ಸ್ಥಳಗಳೆಂದರೆ ಕದ್ಮತ್ ದ್ವೀಪ, ಕವರಾಟ್ಟಿ ದ್ವೀಪ, ಬಂಗಾರಮ್ ಅಟಾಲ್ ಮತ್ತು ಹಲವಾರು ಇತರ ದ್ವೀಪಗಳು.

PC- Lenish Namath

4) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

4) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಹಿಂದೂ ಮಹಾಸಾಗರದಲ್ಲಿರುವ, ಈ ದ್ವೀಪಗಳ ಗುಂಪು ಸಾಹಸ ಹುಡುಕುವ ಪ್ರವಾಸಿಗರಿಗೆ ಅಪ್ರತಿಮ ತಾಣವಾಗಿದೆ. ಸುರಕ್ಷಿತ ದ್ವೀಪಗಳಿಂದ ಹಿಡಿರು ಅಪಾಯದ ಸ್ಥಳಗಳನ್ನೂ ಹೊಂದಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಅನ್ವೇಷಿಸಲು ಬೇಕಾದಿಷ್ಟಿದೆ.

ಉಷ್ಣವಲಯದ ಮಳೆಕಾಡುಗಳು ಮತ್ತು ಹಲವಾರು ಅದ್ಭುತ ಬೀಚುಗಳೊಂದಿಗೆ, ಸೌಂದರ್ಯದಿಂದ ತುಂಬಿರುವ ಈ ದ್ವೀಪಗಳು ಅದರ ಭೇಟಿಗಾರರನ್ನು ಅಚ್ಚರಿಗೊಳಿಸುವಲ್ಲಿ ಹಿಂದೆ ಉಳಿದಿಲ್ಲ. ಈ ದ್ವೀಪಗಳ ಪ್ರಮುಖ ಆಕರ್ಷಣೆಗಳು ಮತ್ತು ಪ್ರವಾಸಿ ತಾಣಗಳೆಂದರೆ ಸೆಲ್ಯೂಲಾರ್ ಜೈಲು, ಹಾವ್ಲಾಕ್ ದ್ವೀಪ, ನೀಲ್ ದ್ವೀಪ, ರಂಗತ್, ದ ಗ್ರೇಟ್ ನಿಕೋಬಾರ್ ದ್ವೀಪ ಇತ್ಯಾದಿ.


PC- Venkatesh K

5) ದಾಮನ್ ಮತ್ತು ದಿಯು

5) ದಾಮನ್ ಮತ್ತು ದಿಯು

ಭಾರತದ ಪಶ್ಚಿಮ ಕರಾವಳಿಯಲ್ಲಿ ಈ ಸುಂದರವಾದ ಒಕ್ಕೂಟ ಪ್ರದೇಶವಾದ ದಮನ್ ಮತ್ತು ದಿಯು ನೆಲೆಸಿದೆ. ಇದು ಇನ್ನೂ ಭಾರತದ ಕಡಿಮೆ ಪ್ರಚಾರಕ್ಕೆ ಒಳಗಾದ ಪ್ರದೇಶವಾಗಿದೆ. ಇಲ್ಲಿಯ ಭವ್ಯವಾದ ಭೂಪ್ರದೇಶ ಮತ್ತು ಮಾನವ ನಿರ್ಮಿತ ಸೌಂದರ್ಯಗಳು ಮತ್ತು ಪೋರ್ಚುಗೀಸರ ಸಂಸ್ಕೃತಿ ಗಳ ಮಧ್ಯೆ ಪ್ರವಾಸಿಗರು ತಮ್ಮನ್ನು ತಾವು ಇಂತಹ ಪ್ರಶಾಂತವಾದ ಸ್ಥಳಗಳಲ್ಲಿ ನಡೆದಾಡಲು ಇಚ್ಚಿಸುವಂತೆ ಮಾಡುತ್ತದೆ.

ಈ ಮೊದಲ ಭೂಮಿಯಲ್ಲಿ ಭೇಟಿ ನೀಡ ಬಹುದಾದ ಪ್ರಮುಖ ಸ್ಥಳಗಳೆಂದರೆ ದಿಯು ಕೋಟೆ, ನಗೊವಾ ಬೀಚ್, ಸೇಂಟ್ ಪಾಲ್ಸ್ ಚರ್ಚ್, ಮಿರಾಸಾಲ್ ಲೇಕ್ ಗಾರ್ಡನ್, ಜಲಂಧರ್ ಬೀಚ್, ಇತ್ಯಾದಿ.


PC- Travelshot

6) ದಾದ್ರಾ ಮತ್ತು ನಗರ್ ಹವೇಲಿ

6) ದಾದ್ರಾ ಮತ್ತು ನಗರ್ ಹವೇಲಿ

ಈ ಅದ್ಭುತವಾದ ಸೌಂದರ್ಯವು ದಾಮನ್ ಮತ್ತು ದಿಯುಗಳಂತೆಯೇ ಇದೆ. ಭಾರತದ ಕನಿಷ್ಠ ಭೇಟಿ ನೀಡಲ್ಪಡುವ ಒಕ್ಕೂಟ ಪ್ರದೇಶಗಳಾಗಿದ್ದು ಈ ಕಡಿಮೆ ಅನ್ವೇಷಣೆಗೊಳಗಾದ ಭೂಮಿ ಮಹಾರಾಷ್ಟ್ರ ಮತ್ತು ಗುಜರಾತ್ ನಡುವೆ ಇದೆ.

ಹಲವಾರು ತೋಟಗಳು ಮತ್ತು ಸರೋವರಗಳನ್ನೊಳಗೊಂಡ , ಈ ಸ್ಥಳವು ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವಗಳನ್ನು ಹೊಂದಿದೆ.ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಭೇಟಿ ನೀಡುವ ಸ್ಥಳಗಳಲ್ಲಿ ಸ್ವಾಮಿನಾರಾಯಣ ದೇವಸ್ಥಾನ, ದೂಧಿನಿ ಸರೋವರ, ನಕ್ಷತ್ರ ಉದ್ಯಾನ, ಬುಡಕಟ್ಟು ವಸ್ತು ಸಂಗ್ರಹಾಲಯ, ವಂಗಂಗ ಸರೋವರ, ಬಟರ್ಫ್ಲೈ ಪಾರ್ಕ್, ಓಂ ದೇವಾಲಯ ಇತ್ಯಾದಿಗಳು ಸೇರಿವೆ.

PC- Sharada Prasad CS

7) ಚಂಡೀಗಢ

7) ಚಂಡೀಗಢ

ಭಾರತದ ಸುಸಂಘಟಿತ ಮತ್ತು ಸುಸಜ್ಜಿತವಾಗಿ ನಿರ್ವಹಿಸಲ್ಪಡುವ ನಗರಗಳಲ್ಲಿ ಒಂದಾದ ಚಂಡೀಗಢವು ದಿನದಿಂದ ದಿನಕ್ಕೆ ಬೆಳೆಯುತ್ತಾ ಇದೆ. ಈ ಸ್ವಚ್ಚವಾದ ಹಾಗೂ ಹಸಿರುಮಯ ನಗರದ ಜೀವನ ಶೈಲಿಯ ಮಟ್ಟವು ಉನ್ನತ ಮಟ್ಟಕ್ಕೆ ಬೆಳೆಯುತ್ತಾ ಬರುತ್ತಿದೆ. ಹರಿಯಾಣ ಮತ್ತು ಪಂಜಾಬ್ ಎರಡಕ್ಕೂ ಒಂದೇ ರಾಜಧಾನಿಯಾದ ಚಂಡೀಗಢವು ತನ್ನ ಉದ್ಯಾನಗಳಿಗೆ ವಿಶೇಷವಾಗಿ ರಾಕ್ ಗಾರ್ಡನ್ ಗೆ ಹೆಸರುವಾಸಿಯಾಗಿದೆ.

ಹಿಮಾಲಯ ಪರ್ವತಗಳ ತಪ್ಪಲಲ್ಲಿ ನೆಲೆಗೊಂಡ, ಈ ಮನಮೋಹಕ ಮತ್ತು ಸೊಗಸಾದ ಸ್ಥಳವು ಅನೇಕ ಅಚ್ಚರಿಗಳಿಂದ ತುಂಬಿದೆ ಮತ್ತು ಖಂಡಿತವಾಗಿಯೂ ಭೇಟಿಗೆ ಯೋಗ್ಯವಾಗಿದೆ.ರಾಕ್ ಗಾರ್ಡನ್, ಪಿಂಜೋರ್ ಗಾರ್ಡನ್ಸ್, ಇಂಟರ್ನ್ಯಾಷನಲ್ ಡಾಲ್ಸ್ ಮ್ಯೂಸಿಯಂ, ಟೆರೇಸ್ಡ್ ಗಾರ್ಡನ್, ಚಟ್ಬೀರ್ ಝೂ, ಮುಂತಾದವುಗಳು ಇಲ್ಲಿಯ ಪ್ರಮುಖ ಆಕರ್ಷಣೆಗಳಾಗಿವೆ.

PC- Vijendra Trighatia

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ