Search
  • Follow NativePlanet
Share
» »ವನ್ಯಜೀವಿ ಛಾಯಾಗ್ರಹಣ ಒಂದು ಅದ್ಭುತ ಕಲೆ

ವನ್ಯಜೀವಿ ಛಾಯಾಗ್ರಹಣ ಒಂದು ಅದ್ಭುತ ಕಲೆ

By Vijay

ಕೆಲ ಪ್ರವಾಸಿಗರಿಗೆ ಕಾಡು ಮೇಡುಗಳಲ್ಲಿ ಅಲೆದಾಡುತ್ತ ಪ್ರಕೃತಿಯ ಸಹಜತೆಯಲ್ಲಿ ತನ್ಮಯವಾಗಿರುವ ಪ್ರಾಣಿ, ಪಕ್ಷಿಗಳ ವಿವಿಧ ಜೀವರಾಶಿಗಳ ಚಿತ್ರಗಳನ್ನು ಸೆರೆ ಹಿಡಿಯುವುದೆಂದರೆ ಬಲು ಇಷ್ಟವಾದರೆ ಇನ್ನೂ ಹಲವರಿಗೆ ಅದು ವೃತ್ತಿಯೂ ಸಹ ಆಗಿರುತ್ತದೆ. ಇದಕ್ಕೆಂದೆ ಪ್ರತ್ಯೇಕವಾದ ಅಧ್ಯಯನದ ವಿಷಯವೊಂದಿದ್ದು ಅದನ್ನು ವೈಲ್ಡ್ ಲೈಫ್ ಫೋಟೋಗ್ರಾಫಿ ಅಥವಾ ವನ್ಯಜೀವಿ ಛಾಯಾಗ್ರಹಣ ಎಂದು ಕರೆಯುತ್ತಾರೆ.

ಗೋ ಐಬಿಬೊದಿಂದ ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ್ ಮೇಲೆ 65% ರಷ್ಟು ಕಡಿತ

ವನ್ಯಜೀವಿ ಛಾಯಾಗ್ರಹಣ ಎನ್ನುವುದು ಒಂದು ಅದ್ಭುತವಾದ ಕಲೆಯಾಗಿದೆ. ತಾಂತ್ರಿಕವಾಗಿ ಬಳಸುವ ಕ್ಯಾಮೆರಾಗಳ ಕುರಿತು ಸ್ಪಷ್ಟ ಜ್ಞಾನ ಹೊಂದಿರಬೇಕಾಗಿರುವುದೂ ಅಲ್ಲದೆ ಪ್ರಕೃತಿಯ ಕುರಿತು ಗೌರವ, ಪ್ರೀತಿ ಆದರಗಳನ್ನೂ ಸಹ ಹೊಂದಿರಬೇಕು. ನೀವು ವನ್ಯಜೀವಿ ಛಾಯಾಗ್ರಾಹಕರಾಗ ಬಯಸಿದ್ದಲ್ಲಿ ಕೆಲವು ನೀತಿ, ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಯಾವೇಲ್ಲ ಅಂಶಗಳ ಕುರಿತು ಗಮನ ಹರಿಸಬೇಕೆಂಬುದರ ಕೈಪಿಡಿಯಾಗಿ ಈ ಲೇಖನವನ್ನು ಪ್ರಸ್ತುತಪಡಿಸಲಾಗಿದೆ.

ವಿಶೇಷ ಲೇಖನ : ಕರ್ನಾಟಕದ ವನ್ಯಜೀವಿ ಧಾಮಗಳು

ಉಪಯುಕ್ತ ಕೊಂಡಿಗಳು : ಬಂಡೀಪುರ ಹೋಟೆಲುಗಳು ನಾಗರಹೊಳೆ ಹೋಟೆಲುಗಳು ರಣಥಂಬೋರ್ ಹೋಟೆಲುಗಳು

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಸ್ಲೈಡುಗಳಲ್ಲಿ ಮೊದಲಿಗೆ ಅನುಸರಿಸ ಬೇಕಾದ ವಿಧಾನಗಳು ಹಾಗೂ ನಂತರದಲ್ಲಿ ವನ್ಯಜೀವಿ ಪ್ರವಾಸಿಗರಿಂದ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಲಾದ ಭಾರತದ ವಿವಿಧ ಕಾಡುಗಳಲ್ಲಿ ಕಂಡು ಬರುವ ವೈವಿಧ್ಯಮಯ ಜೀವಿಗಳ ಅತಿ ಸುಂದರ ಚಿತ್ರಗಳನ್ನು ನೋಡಿ ಆನಂದಿಸಿ.

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಮುಖ್ಯವಾಗಿ ತಿಳಿದುಕೊಳ್ಳ ಬೇಕಾಗಿರುವ ಅಂಶವೆಂದರೆ ಮನುಷ್ಯರಂತೆ ಪ್ರಾಣಿ ಪಕ್ಷಿಗಳೂ ಸಹ ಭಾವನಾ ಜೀವಿಗಳಾಗಿರುತ್ತವೆ. ಒಂದೊಮ್ಮೆ ಅವುಗಳಿಗೆ ಪ್ರತಿರೋಧ ಎದುರಾದಲ್ಲಿ ಅಥವಾ ಕಿರಿಕಿರಿ ಉಂಟಾದಲ್ಲಿ ಕೆರಳಬಹುದು ಇಲ್ಲವೆ ಭಯದಿಂದ ಓಡಬಹುದು ಇಲ್ಲವೆ ಆಕ್ರಮಣವನ್ನೂ ಸಹ ಮಾಡಬಹುದು. ಆದ್ದರಿಂದ ಅವುಗಳಿಗೆ ತೊಂದರೆ ಕೊಡದ ರೀತಿಯಲ್ಲಿ ನಿಧಾನವಾಗಿ ನಾವು ನಮ್ಮ ಕಾರ್ಯದಲ್ಲಿ ಮಗ್ನರಾಗಬೇಕು.

ಚಿತ್ರಕೃಪೆ: Teddy Fotiou

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಾಹಕರಲ್ಲಿ ತಾಳ್ಮೆ ಎಂಬುದು ಖಂಡಿತವಾಗಿಯೂ ಇರಲೇ ಬೇಕಾದ ಗುಣ. ಪ್ರಾಣಿ ಪಕ್ಷಿಗಳು ಕಾಡುಗಳಲ್ಲಿ ತಮಗೆ ಬೇಕಾದ ಹಾಗೆ ಸ್ವಚ್ಛಂದವಾಗಿ ವಿಹರಿಸುತ್ತಿರುತ್ತವೆ. ನಮಗೆ ಬೇಕಾದ ಕೋನಗಳಲ್ಲಿ ತಕ್ಷಣ ಸೆರೆ ಹಿಡಿಯುವುದು ಕಷ್ಟಕರ. ಆದ್ದರಿಂದ ಸಾಕಷ್ಟು ತಾಳ್ಮೆಯಿಂದ ಇದ್ದು ಚಿತ್ರಗಳನ್ನು ಸೆರೆ ಹಿಡಿಯ ಬೇಕಾಗುತ್ತದೆ.

ಚಿತ್ರಕೃಪೆ: shankar s.

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಬಣ್ಣ ಬಣ್ಣದ ಉಡುಗೆ ತೊಡುಗೆಗಳನ್ನು ಹಾಕಿಕೊಳ್ಳಬಾರದು ಹಾಗೂ ಸಾಧ್ಯವಿದ್ದಷ್ಟು ಕಂದು ಬಣ್ಣದ ಇಲ್ಲವೆ ಸುತ್ತಲಿನ ವಾತಾವರಣದಲ್ಲಿ ಹೆಚ್ಚಾಗಿ ಕಂಡು ಬರುವ ಬಣ್ಣದಂತಹ ಬಟ್ಟೆಗಳನ್ನು ತೊಡುವುದು ಉತ್ತಮ.

ಚಿತ್ರಕೃಪೆ: Teddy Fotiou

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಹುಲಿ, ಸಿಂಹ, ಕರಡಿ, ಆನೆ ಮುಂತಾದ ಪ್ರಾಣಿಗಳ ಚಿತ್ರಗಳನ್ನು ಸೆರೆ ಹಿಡಿಯುವಾಗ ಸಾಕಷ್ಟು ಜಾಗರೂಕತೆ ವಹಿಸಬೇಕು ಹಾಗೂ ಸುರಕ್ಷಿತ ಅಂತರವನ್ನು ಕಾಪಾಡಿ ಕೊಂಡಿರಬೇಕು. ಮತ್ತೊಂದು ವಿಷಯವೆಂದರೆ, ಪ್ರಾಣಿಗಳ ದೃಷ್ಟಿಯಿಂದ ನೀವು ಅವುಗಳ ಲೋಕದಲ್ಲಿ ಅನಧಿಕೃತವಾಗಿ ಪ್ರವೇಶಿಸಿರುತ್ತೀರಿ ಬದಲಾಗಿ ಅವುಗಳಲ್ಲ. ಆದ್ದರಿಂದ ಅವುಗಳ ಕುರಿತು ನಮ್ಮ ನಡೆ ನುಡಿಗಳು ಗೌರವಪೂರ್ವಕವಾಗಿರಬೇಕು. ಯಾವುದೇ ರೀತಿಯ ತೊಂದರೆ, ಕೀಟಲೆಗಳನ್ನು ಮಾಡ ಕೂಡದು.

ಚಿತ್ರಕೃಪೆ: Michael Henderson

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಕಾಡುಗಳಲ್ಲಿ ಸಾಮಾನ್ಯವಾಗಿ ಒಂದು ಜೀವಿಯು (ಸಸ್ಯಾಹಾರಿಗಳನ್ನು ಹೊರತು ಪಡಿಸಿ) ಬದುಕಲು ಮತ್ತೊಂದು ಜೀವಿಯ ಮೇಲೆ ಅವಲಂಬಿತವಾಗಿರುವುದರಿಂದ ಬೇಟೆಗಳು ಜರುಗುತ್ತಲೇ ಇರುತ್ತವೆ. ನೀವೇನಾದರೂ ಆ ರೀತಿಯ ಪ್ರಸಂಗ ಎದುರಿಸಿದಲ್ಲಿ ಅದಕ್ಕೆ ಯಾವ ರೀತಿಯ ತಡೆ ಒಡ್ಡದೆ ಅದು ನೈಸರ್ಗಿಕವಾಗಿಯೆ ನಡೆಯುವುದರಲ್ಲಿ ಗಮನ ಹರಿಸಬೇಕು.

ಚಿತ್ರಕೃಪೆ: epSos .de

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಯುವ ಜನಾಂಗಕ್ಕೆ ವನ್ಯಜೀವಿ ಛಾಯಾಗ್ರಹಣ ಎಂಬುದು ಸಾಹಸ ಪ್ರಧಾನವಾಗಿರುವುದರಿಂದ ನೆಚ್ಚಿನ ಚಟುವಟಿಕೆಯಾಗಿ ಆಕರ್ಷಿಸುತ್ತದೆ. ಅದರಿಂದ ಪ್ರಭಾವಿತರಾಗಿ ಹಲವರು ಕ್ಯಾಮೆರಾ ಕೊಂಡು ಕೊಂಡು ಹೊರಟೇ ಬಿಡುತ್ತಾರೆ. ಆದರೆ ಈ ರೀತಿ ಮಾಡದಿರಿ. ನೀವು ಭೇಟಿ ನೀಡುತ್ತಿರುವ ಅಭಯಾರಣ್ಯ ಅಥವಾ ಕಾಡುಗಳ ಕುರಿತು ಮೊದಲೆ ವಿವರವಾಗಿ ತಿಳಿದುಕೊಳ್ಳಿ. ಕೆಲವು ಸಾಕಷ್ಟು ಅಪಾಯಕರ ಸ್ಥಳಗಳಾಗಿರುವುದರಿಂದ ಅವುಗಳ ಕುರಿತು ಮುಂಚಿತವಾಗಿ ತಿಳಿದುಕೊಳ್ಳುವುದರಿಂದ ಪ್ರಾಣಾಪಯಗಳಿಂದ ತಪ್ಪಿಸಿ ಕೊಳ್ಳಬಹುದು.

ಚಿತ್ರಕೃಪೆ: Paul White

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಸಾಮಾನ್ಯವಾಗಿ ಈ ಚಟುವಟಿಕೆಯಲ್ಲಿ ಅರಣ್ಯ ಇಲಾಖೆಯ ಅನುಮತಿಯು ಬೇಕಾಗಿರುವುದು ಅವಶ್ಯಕವಾಗಿರುವುದರಿಂದ ಮೊದಲೆ ಈ ಕುರಿತು ಸಮಗ್ರವಾಗಿ ಯೋಜನೆ ರೂಪಿಸಿ ಅನುಮತಿಯನ್ನು ಪಡೆಯುವುದು ಬಲು ಉತ್ತಮ. ಇದರಿಂದ ಕೊನೆ ಕ್ಷಣದಲ್ಲುಂಟಾಗುವ ಗಲಿಬಿಲಿಗಳಿಂದ ದೂರವಿರಬಹುದು.

ಚಿತ್ರಕೃಪೆ: Kesara Rathnayake

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಇನ್ನೂ ಕ್ಯಾಮೆರಾ ಹಾಗೂ ಇತರೆ ವಿಷಯಗಳಿಗೆ ಬಂದರೆ ಅತ್ಯುತ್ತಮ ಗುಣ ಲಕ್ಷಣಗಳಿರುವ ಕ್ಯಾಮೆರಾಗಳನ್ನು ಹೊಂದಿರುವುದು ಉತ್ತಮ. ಅಲ್ಲದೆಕ್ಯಾಮೆರಾ ಕುರಿತು ಅದನ್ನು ನಿಖರವಾಗಿ ಬಳಸುವಿಕೆ, ತಾಂತ್ರಿಕ ಜ್ಞಾನ ಇರಲೇಬೇಕು. ಛಾಯಾಗ್ರಹಣಕ್ಕೆ ಹೊರಡುವ ಮುಂಚೆಯೆ ಕ್ಯಾಮೆರಾ ಕುರಿತು ಸಕ ಸಿದ್ಧತೆಗಳನ್ನು ಮೊದಲೆ ಮಾಡಿಟ್ಟುಕೊಳ್ಳಿ. ಅದರಂತೆ ನಿಮ್ಮ ಕಡೆಗೂ ಗಮನಹರಿಸಿ ಬೇಕಾದ ಎಲ್ಲ ರೀತಿಯ ವಸ್ತುಗಳನ್ನು (ಊಟ, ಬಟ್ಟೆಗಳು, ನೀರು, ಇತ್ಯಾದಿ) ಒಂದು ಬ್ಯಾಗಿನಲ್ಲಿ ಇರಿಸಿಕೊಂಡು ಸಿದ್ಧಪಡಿಸಿಟ್ಟುಕೊಳ್ಳಿ.

ಚಿತ್ರಕೃಪೆ: Mdf

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಮತ್ತೊಂದು ವಿಷಯವೆಂದರೆ ನೀವಿ ತಿಂದಾದ ಮೇಲೆ ಪ್ಲಾಸ್ಟಿಕ್ ಪೌಚುಗಳು, ಬಾಟಲಿಗಳನ್ನು ಕಾಡಿನಲ್ಲೆ ಎಲ್ಲೆಂದರಲ್ಲಿ ಬಿಸಾಡ ಬೇಡಿ. ಅವುಗಳನ್ನು ಸುರಕ್ಷಿತವಾಗಿ ನಿಮ್ಮ ಬಳಿಯಲ್ಲಿ ಇಟ್ಟು ಕೊಂಡಿದ್ದು ಒಂದೊಮ್ಮೆ ಕಾಡಿನಿಂದ ಹೊರ ಬಂದ ತಕ್ಷಣ ಅದಕ್ಕೆ ಮೀಸಲಾದ ಜಾಗದಲ್ಲೆ ಬಿಸಾಡಿ.

ಚಿತ್ರಕೃಪೆ: U.S. Fish and Wildlife Service Northeast Region

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಇಲ್ಲಿಂದ ಮುಂದಿನ ಸ್ಲೈಡುಗಳಲ್ಲಿ ವಿವಿಧ ಪ್ರವಾಸಿಗರಿಂದ ಸೆರೆ ಹಿಡಿಯಲಾದ ವಿವಿಧ ಕಾಡುಗಳ ಪ್ರಾಣಿ ಪಕ್ಷಿಗಳ ಸುಂದರವಾದ ಚಿತ್ರಗಳನ್ನು ನೋಡಿ. ಭಾರತದಲ್ಲಿ ಕಂಡು ಬರುವ ಕಾಡು ನಾಯಿ.

ಚಿತ್ರಕೃಪೆ: Vinoth Chandar

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಪಶ್ಚಿಮ ಘಟ್ಟಗಳಲ್ಲಿರುವ ಮುದು ಮಲೈ ಅರಣ್ಯದ ಚಿತಾಲ್ ಅಥವಾ ಚುಕ್ಕೆ ಜಿಂಕೆಯ ಅದ್ಭುತ ಚಿತ್ರ.

ಚಿತ್ರಕೃಪೆ: Mahesh Balasubramanian

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಭಾರತದೆಲ್ಲೆಡೆ ಬಹುತೇಕ ಎಲ್ಲ ಕಾಡುಗಳಲ್ಲಿ ಕಂಡು ಬರುವ ಅಂಟಾಲೋಪ್ ಅಥವಾ ಚಿಗರೆ.

ಚಿತ್ರಕೃಪೆ: Justin Jensen

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಪಶ್ಚಿಮ ಬಂಗಾಳ ರಾಜ್ಯದ ಏಕೈಕ ಗಿರಿಧಾಮ ಪ್ರದೇಶವಾದ ದಾರ್ಜೀಲಿಂಗ್ ಸುತ್ತಲಿನ ಕಾಡಿನಲ್ಲಿ ಕಂಡು ಬರುವ ಕೆಂಬಣ್ಣದ ಪಾಂಡಾ.

ಚಿತ್ರಕೃಪೆ: flowcomm

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಸದೃಢ ಕಾಯದ ಏಷಿಯನ್ ಆನೆ. ಏಷಿಯಾ ಖಂಡದಲ್ಲೆ ಅತಿ ದೈತ್ಯಾಕಾರದ ಜೀವಿಗಳಾಗಿವೆ ಈ ಆನೆಗಳು. ಇದು ಸಾಮಾನ್ಯವಾಗಿ ಭಾರತದ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಕಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ಚಿತ್ರಕೃಪೆ: Srikaanth Sekar

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ದಿನದ ಭೋಜನ ಏರ್ಪಾಡು ಮಾಡಿಕೊಂಡು ನಿಧಾನವಾಗಿ ಚಲಿಸುತ್ತಿರುವ ಹುಲಿ.

ಚಿತ್ರಕೃಪೆ: Bharat Bolasani

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಪಶ್ಚಿಮ ಬಂಗಾಳ ರಾಜ್ಯದ ಜಲ್ಪೈಗುರಿ ಜಿಲ್ಲೆಯಲ್ಲಿರುವ ಗೋರುಮಾರಾ ರಾಷ್ಟ್ರೀಯ ಅಭಯಾರಣ್ಯದಲ್ಲಿನ ರಸ್ತೆ ಮಾರ್ಗದಲ್ಲಿ ಸವಾಲೆಸೆಯುವಂತೆ ನಿಂತಿರುವ ಕಾಡೆಮ್ಮೆ.

ಚಿತ್ರಕೃಪೆ: Matthias Rosenkranz

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಕೇರಳ ರಾಜ್ಯದ ಮುನ್ನಾರ್ ಪ್ರವಾಸಿ ಸ್ಥಳ ಬಳಿಯಿರುವ ಎರವಿಕುಲಂ ರಾಷ್ಟ್ರೀಯ ಅಭಯಾರಣ್ಯದಲ್ಲಿ ಕಂಡುಬರುವ ನೀಲ್ಗಿರಿ ತಾಹ್ರ್.

ಚಿತ್ರಕೃಪೆ: Sankara Subramanian

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಗುಜರಾತ್ ರಾಜ್ಯದ ಲಿಟಲ್ ಕಚ್ ಸುತ್ತಲಿನ ಅರಣ್ಯಗಳಲ್ಲಿ ಕಂಡು ಬರುವ ಬ್ರಾಹ್ಮಿನಿ ಮೈನಾ ಹಕ್ಕಿಯ ಸುಂದರ ಚಿತ್ರ.

ಚಿತ್ರಕೃಪೆ: Lip Kee

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಕರ್ನಾಟಕದ ಕಬಿನಿಯ ಹಿನ್ನೀರಿನ ಅರಣ್ಯ ಪ್ರದೇಶಗಳಲ್ಲಿ ಆನಂದದಿಂದ ಮುಖವರಳಿಸಿದ ವಾಟರ್ ಲಿಲಿ ಪುಷ್ಪ.

ಚಿತ್ರಕೃಪೆ: Srikaanth Sekar

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಕರ್ನಾಟಕದ ನಾಗರಹೊಳೆ, ಕೊಡಗು ಹಾಗೂ ಕೇರಳದ ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಮುಂಗುಸಿಗಳು.

ಚಿತ್ರಕೃಪೆ: Srikaanth Sekar

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಮುಂಗುಸಿ ಜಾತಿಯ ಚತುಷ್ಪಾದಿ ಸಸ್ತನಿ. ಹಿಮಾಚಲ ರಾಜ್ಯದ ಲಾಹೌಲ್ ಜಿಲ್ಲೆಯ ಜಿಸ್ಪಾ ಎಂಬ ಗ್ರಾಮದ ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಕಂಡು ಬರುವ ಜೀವಿ. ಇದು ಇಲಿ, ಹೆಗ್ಗಣಗಳಂತಹ ಸಸ್ತನಿಗಳನ್ನು ತಿಂದು ಬದುಕುತ್ತದೆ.

ಚಿತ್ರಕೃಪೆ: soumyajit nandy

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಗುಜರಾತ್ ರಾಜ್ಯದ ಲಿಟಲ್ ಕಚ್ ಸುತ್ತಲಿನ ಅರಣ್ಯಗಳಲ್ಲಿ ಕಂಡು ಬರುವ ಚಿಕ್ಕ ಕಿವಿಗಳುಳ್ಳ ಗೂಬೆ.

ಚಿತ್ರಕೃಪೆ: Lip Kee

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಕೇರಳ ರಾಜ್ಯದ ಕುಟ್ಟಿಕಾನಂ ಎಂಬ ಸ್ಥಳದ ಬಳಿಯಿರುವ ಪ್ರವಾಸಿ ಆಕರ್ಷಣೆಯಾದ ಪೆರಿಯಾರ್ ಅಭಯಾರಣ್ಯದ ನೀರಿನ ಕೊಳವೊಂದರ ಬಳಿ ವಿಹರಿಸುತ್ತಿರುವ ಸೀಲ್ ಅಥವಾ ನೀರುನಾಯಿಗಳು.

ಚಿತ್ರಕೃಪೆ: Cleavers

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಮರಿಗೆ ಹಾಲುಣಿಸುತ್ತಿರುವ ತಾಯಿ ಕೋತಿ. ಆಂಗ್ಲದಲ್ಲಿ ಇದನ್ನು ಗ್ರೇ ಲಂಗೂರ್ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Koshy Koshy

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಕೇರಳ ರಾಜ್ಯದ ಕುಟ್ಟಿಕಾನಂ ಎಂಬ ಸ್ಥಳದ ಬಳಿಯಿರುವ ಪ್ರವಾಸಿ ಆಕರ್ಷಣೆಯಾದ ಪೆರಿಯಾರ್ ಅಭಯಾರಣ್ಯದ ನೀರಿನ ಕೊಳವೊಂದರ ಬಳಿ ವಿಹರಿಸುತ್ತಿರುವ ಕಾಡು ಹಂದಿಗಳು. ಆಫ್ರಿಕನ್ ಕಾಡು ಹಂದಿಗಳು ಎಮ್ದು ಕರೆಯಲಾಗುವ ಈ ಹಂದಿಗಳು ಮೊನಚಾದ ಕೋರೆ ಹಲ್ಲುಗಳನ್ನು ಹೊಂದಿರುತ್ತವೆ.

ಚಿತ್ರಕೃಪೆ: Lian Chang

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಗುಜರಾತ್ ರಾಜ್ಯದ ಭಾವನಗರ ಜಿಲ್ಲೆಯಲ್ಲಿರುವ ವೇಲಾವದಾರ ಕೃಷ್ಣ ಮೃಗ ಅಭಯಾರಣ್ಯದಲ್ಲಿ ಕಂಡು ಬರುವ ವಿಶಿಷ್ಟ ಕೃಷ್ಣ ಮೃಗಗಳು.

ಚಿತ್ರಕೃಪೆ: nevil zaveri

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ರಾಜಸ್ಥಾನದ ಸೊಂಖಾಲಿಯಾ ಎಂಬಲ್ಲಿ ಕಂಡು ಬಂದ ಹಾರುತ್ತಿರುವ ಜಾಕೋಬಿನ್ ಕುಕೂ ಹಕ್ಕಿ.

ಚಿತ್ರಕೃಪೆ: Koshy Koshy

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಅಸ್ಸಾಂ ರಾಜ್ಯದ ಕಾಜಿರಂಗಾ ಅರಣ್ಯದಲ್ಲಿ ಕ್ಯಾಮೆರಾಗೆ ಪೋಸು ನೀಡುತ್ತಿರುವ ಕೋತಿ.

ಚಿತ್ರಕೃಪೆ: cirdantravels

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಅಸ್ಸಾಂ ರಾಜ್ಯದ ಕಾಜಿರಂಗಾ ಅರಣ್ಯದಲ್ಲಿ ಕಂಡುಬರುವ ಘೇಂಡಾಮೃಗಗಳು.

ಚಿತ್ರಕೃಪೆ: Sankara Subramanian

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಭಯ ಹುಟ್ಟಿಸುವಂತಹ ಭಂಗಿಯಲ್ಲಿ ರೆಕ್ಕೆ ಚಾಚಿರುವ ಸೊಗಸಾದ ಹಕ್ಕಿ. ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಕಂಡು ಬಂದಂತಹ ಒಂದು ಚಿತ್ರ.

ಚಿತ್ರಕೃಪೆ: Yogendra Joshi

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಗುಜರಾತಿನ ಗೀರ್ ಅರಣ್ಯದಲ್ಲಿ ಕಂಡು ಬಂದ ಕಾಡಿನ ರಾಜ ಸೀಂಹದ ಗಂಭೀರ ನೋಟ.

ಚಿತ್ರಕೃಪೆ: Jason Wharam

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಭಾರತೀಯ ತೆಳು ಕವಚದ ನೀರಾಮೆ. ಸ್ಥಳ: ಗೀರ್ ಅರಣ್ಯ, ಗುಜರಾತ್.

ಚಿತ್ರಕೃಪೆ: Shaunak Modi

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಭಾರತೀಯ ಸಾಂಬಾರ್ ಮೃಗ. ಸ್ಥಳ: ಗೀರ್ ಅರಣ್ಯ, ಗುಜರಾತ್.

ಚಿತ್ರಕೃಪೆ: Shaunak Modi

ವನ್ಯಜೀವಿ ಛಾಯಾಗ್ರಹಣ:

ವನ್ಯಜೀವಿ ಛಾಯಾಗ್ರಹಣ:

ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಕಂಡು ಬಂದ ಗ್ರೇಟ್ ಹಾರ್ನ್ ಬಿಲ್ ಹಕ್ಕಿಯ ಹಾರುತ್ತಿರುವ ಸುಂದರ ನೋಟ.

ಚಿತ್ರಕೃಪೆ: Koshy Koshy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X