• Follow NativePlanet
Share
Menu
» »ಈ ಗ್ರಾಮದ ಒಂದೇ ಪ್ರದೇಶದಲ್ಲಿ 54 ದೇವಾಲಯಗಳಿವೆ

ಈ ಗ್ರಾಮದ ಒಂದೇ ಪ್ರದೇಶದಲ್ಲಿ 54 ದೇವಾಲಯಗಳಿವೆ

Written By:

ನಮ್ಮ ಶರೀರವೇ ದೇವಾಲಯ ಎಂದು ಪುರಾಣಗಳು ತಿಳಿಸುತ್ತವೆ. ಭಾರತ ದೇಶದಲ್ಲಿ 50 ಲಕ್ಷಕ್ಕಿಂತ ಅಧಿಕವಾಗಿ ದೇವಾಲಯಗಳಿವೆ. ಸ್ವಯಂ ಭೂ ದೇವಾಲಯ, ಪುರಾಣದಲ್ಲಿನ ಪ್ರಖ್ಯಾತವಾದ ಶಕ್ತಿಪೀಠ, ಶಂಕರಾಚಾರ್ಯ-ರಾಮಾನುಜಾಚಾರ್ಯ- ಮಧ್ವಾಚಾರ್ಯ ಇನ್ನೂ ಹಲವಾರು ದಿವ್ಯ ಪುರುಷರು ಪ್ರತಿಷ್ಟಾಪಿಸಿದ ಮಹಿಮಾನ್ವಿತವಾದ ದೇವಾಲಯಗಳನ್ನು ಕಾಣಬಹುದಾಗಿದೆ.

ರಾಜ ಮನೆತನದ ಹಲವಾರು ಅರಸರು ಸುಂದರವಾದ ಕಟ್ಟಡಗಳು ಹಾಗೂ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಇವೆಲ್ಲವೂ ಆಧ್ಯಾತ್ಮಿಕವಾದ ಕೇಂದ್ರಗಳಾಗಿವೆ. ಪ್ರತಿಯೊಬ್ಬ ಮಾನವನು ತಮ್ಮ ಕೆಲವು ಬೇಡಿಕೆಗಳ ಈಡೇರಿಕೆಗಾಗಿ ದೇವಾಲಯಗಳಿಗೆ ಭೇಟಿಯಾಗುವುದುಂಟು.

ಆದರೆ ಒಂದೇ ಗ್ರಾಮದಲ್ಲಿ ಸುಮಾರು 54 ದೇವಾಲಯಗಳಿವೆ. ಈ ದೇವಾಲಯವು ಹಿಂದೂ ದೇವಾಲಯವಾಗಿದ್ದು, ಒಂದೇ ಪ್ರದೇಶದಲ್ಲಿ ಎಲ್ಲಾ ದೇವರ ದರ್ಶನ ಭಾಗ್ಯ ಪಡೆಯಲು ಈ ಲೇಖನದಲ್ಲಿನ ಗ್ರಾಮಕ್ಕೆ ಒಮ್ಮೆ ಭೇಟಿ ಕೊಡಿ. ಈ ಗ್ರಾಮದಲ್ಲಿರುವ ದೇವಾಲಯಗಳನ್ನು ಒಮ್ಮೆ ಭೇಟಿ ನೀಡಿದರೆ ಸಂಪೂರ್ಣವಾದ ತೀರ್ಥಕ್ಷೇತ್ರವನ್ನು ಮಾಡಿದಂತೆಯೇ ಸರಿ.

ಶಕ್ತಿ ಪೀಠ

ಶಕ್ತಿ ಪೀಠ

ದೇಶದಲ್ಲಿನ ಪ್ರಧಾನವಾದ ವೈಷ್ಣವ ಕ್ಷೇತ್ರಗಳಲ್ಲಿ ಶೈವ ದೇವಾಲಯಗಳ ವಿವಿಧ ಶಕ್ತಿ ಪೀಠಗಳು ಈ ಪ್ರದೇಶದ ಸ್ಥಳದಲ್ಲಿಯೇ ಇದೆ.

ಸಂಪೂರ್ಣ ತೀರ್ಥಕ್ಷೇತ್ರ

ಸಂಪೂರ್ಣ ತೀರ್ಥಕ್ಷೇತ್ರ

ಮೂಲವಿರಾಟನ ಪೂಜೆಗಳು, ನೈವೇದ್ಯಗಳು ನಿಜ ಕ್ಷೇತ್ರಗಳಲ್ಲಿ ಇದ್ದೆವೇನೊ ಎಂಬ ಅನುಭೂತಿಯನ್ನು ಉಂಟು ಮಾಡುತ್ತದೆ. ಈ 54 ದೇವಾಲಯಗಳು ಆಂಧ್ರ ಪ್ರದೇಶದ ರಾಜಮಂಡ್ರಿ ಪಟ್ಟಣದ ಸಮೀಪದ ಗಾದರಾಡ ಎಂಬ ಗ್ರಾಮದಲ್ಲಿವೆ. ಇಲ್ಲಿ ಒಮ್ಮೆ ಪ್ರವಾಸ ಮಾಡಿದರೆ ಅಲ್ಲಿನ ದೇವಾಲಯಗಳ ದರ್ಶನದಿಂದ ನಿಮ್ಮ ಸಂಪೂರ್ಣವಾದ ತೀರ್ಥಕ್ಷೇತ್ರವಾಗುತ್ತದೆ ಎಂತೆ.

ಓಂ ಶಿವಶಕ್ತಿ ಪೀಠ

ಓಂ ಶಿವಶಕ್ತಿ ಪೀಠ

ಆಂಧ್ರದ ರಾಜಮಂಡ್ರಿ ಸಮೀಪದಲ್ಲಿನ ಗಾದರಾಡ ಗ್ರಾಮದಲ್ಲಿ ಕೋಟಿಗಟ್ಟಲೇ ವೆಚ್ಚ ಮಾಡಿ "ಓಂ ಶಿವಶಕ್ತಿ ಪೀಠ" ಹೆಸರಿನಲ್ಲಿ ಸಕಲ ದೇವತಾ ಮೂರ್ತಿಗಳ ದೇವಾಲಯವನ್ನು ನಿರ್ಮಿಸಿದರು. ಈ ದೇವಾಲಯವನ್ನು ಬಲರಾಮಕೃಷ್ಣ ಮತ್ತು ವೆಂಕಟ ಲಕ್ಷ್ಮಿ ದಂಪತಿಗಳು ನಿರ್ಮಿಸಿದರು.

ಸೇವಾ ಕಾರ್ಯಕ್ರಮಗಳು

ಸೇವಾ ಕಾರ್ಯಕ್ರಮಗಳು

ಬಲರಾನಕೃಷ್ಣ ಮೂಲತಃ ವ್ಯಾಪಾರಸ್ಥ. ಹಲವಾರು ವರ್ಷಗಳಿಂದಲೂ ಬಲರಾಮ ರಾಜಮಂಡ್ರಿಯ ನಿವಾಸಿ. ಈತ ಸಾಮಾನ್ಯರಂತೆ ಅಲ್ಲದೇ ಹಾಲವಾರು ರೀತಿಯ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.

ಸುಂದರವಾದ ದೇವಾಲಯಗಳು

ಸುಂದರವಾದ ದೇವಾಲಯಗಳು

ಗ್ರಾಮದ ಪ್ರದೇಶದಲ್ಲಿ ಚಿಕ್ಕ ಚಿಕ್ಕ ಹಲವಾರು ದೇವಾಲಯಗಳು ಇದ್ದರೂ ಕೂಡ ಸುಂದರವಾದ ದೇವಾಲಯ ಎಂದು ಹೇಳಿಕೊಳ್ಳುವ ಯಾವ ದೇವಾಲಯಗಳು ಕೂಡ ಇರಲಿಲ್ಲ. ಊರೆಲ್ಲಾ ಗರ್ವ ಪಡುವ ಹಾಗೇ ಸುಂದರವಾದ ದೇವಾಲಯಗಳನ್ನು ನಿರ್ಮಿಸಬೇಕು ಎಂದು ತೀರ್ಮಾನಿಸಿದರು.

ಯಾವ ದೇವಾಲಯವನ್ನು ನಿರ್ಮಿಸಬೇಕು?

ಯಾವ ದೇವಾಲಯವನ್ನು ನಿರ್ಮಿಸಬೇಕು?

ಯಾವ ದೇವಾಲಯವನ್ನು ನಿರ್ಮಿಸಬೇಕು? ಎಂಬ ಪ್ರೆಶ್ನೆ ಉದ್ಭವಿಸಿದಾಗ ಅದೆಷ್ಟೊ ಮಂದಿ ಮಠಾಧಿಪತಿಗಳ ಹಾಗೂ ಗುರುಗಳನ್ನು ಭೇಟಿ ಮಾಡಿದರು. ಕೆಲವರು ವೈಷ್ಣವ ದೇವಾಲಯವನ್ನು ನಿರ್ಮಿಸು ಎಂದೂ ಹಾಗೂ ಇನ್ನೂ ಕೆಲವರು ಶಿವ ಲಿಂಗವನ್ನು ಪ್ರತಿಷ್ಟಾಪಿಸು ಎಂದೂ, ಇನ್ನೂ ಕೆಲವರು ತಾಯಿ ಚಾಮುಂಡಿಯ ದೇವಾಲಯವನ್ನು ನಿರ್ಮಿಸು ಎಂದು ಸಲಹೆಗಳನ್ನು ನೀಡಿದರು.

ಕುಟುಂಬ ಸಭ್ಯರು

ಕುಟುಂಬ ಸಭ್ಯರು

ಈ ಸಲಹೆಗಳನ್ನು ಆಲಿಸಿ ಸರ್ವ ದೇವತೆಗಳ ದೇವಾಲಯವನ್ನು ನಿರ್ಮಿಸಬೇಕು ಎಂಬ ಆಲೋಚನೆಯು ಉದ್ಭವಿಸಿತು. ಬಲರಾಮಕೃಷ್ಣ ಹಾಗೂ ಗ್ರಾಮದ ಕೆಲವು ಕುಟುಂಬ ಸಭ್ಯರು ಈ ಪವಿತ್ರವಾದ ಕಾರ್ಯಕ್ಕೆ ಮುಂದೆಬಂದರು.

ನಿಯಮ

ನಿಯಮ

ಸುಂದರವಾದ ದೇವಾಲಯಗಳನ್ನು ನಿರ್ಮಿಸಬೇಕು ಎಂದು ತೀರ್ಮಾನಿಸಿದ ನಂತರ ಒಂದು ನಿಯಮದ ಪಾಲನೆಯನ್ನು ಕೂಡ ಅನುಸರಿಸಿದರು. ಅದೇನೆಂದರೆ ಯಾವುದೇ ರೀತಿಯಲ್ಲೂ ಸಹಾಯಧನವನ್ನು ಹಾಗೂ ಕಾಣಿಕೆಯನ್ನು ತೆಗೆದುಕೊಳ್ಳಬಾರದು ಎಂದು. ದೇವಾಲಯಗಳ ನಿರ್ಮಾಣಗಳಿಗೆ ಶಿಲ್ಪಿಗಳನ್ನು, ಇಂಜಿನಿಯರ್‍ಗಳನ್ನು ಕರೆಸಿದರು.

ನಾಲ್ಕು ವರ್ಷ

ನಾಲ್ಕು ವರ್ಷ

ಸುಂದವಾರ ದೇವಾಲಯಗಳನ್ನು ನಿರ್ಮಿಸಲು ಸುಮಾರು 4 ವರ್ಷಗಳ ಶ್ರಮದಿಂದ ಪೂರ್ತಿಗೊಂಡಿತು.

ಹಲವಾರು ದೇವಾಲಯಗಳು

ಹಲವಾರು ದೇವಾಲಯಗಳು

ಪೀಠದ ಅವರಣದಲ್ಲಿ ಸುಮಾರು 54 ದೇವಾಲಯಗಳನ್ನು ನಿರ್ಮಿಸಿದರು ಹಾಗೂ 84 ದೇವತಾ ಮೂರ್ತಿಗಳನ್ನು ಪ್ರತಿಷ್ಟಾಪಿಸಿದರು.

ಕೈಲಾಸ ಮಹಾ ಕ್ಷೇತ್ರಗಳು

ಕೈಲಾಸ ಮಹಾ ಕ್ಷೇತ್ರಗಳು

ಕೈಲಾಸ ಮಹಾ ಕ್ಷೇತ್ರಗಳು (21), ವೈಕುಂಠ ಕ್ಷೇತ್ರಗಳು (15), ಶಕ್ತಿಪೀಠಗಳು (18) ಎಂದು ಮೂರು ರೀತಿಯಾಗಿ ದೇವಾಲಯಗಳನ್ನು ವಿಭಜಿಸಿದರು.

12 ಲಿಂಗಗಳು

12 ಲಿಂಗಗಳು

ಕೈಲಾಸ ಕ್ಷೇತ್ರದಲ್ಲಿ ದ್ವಾದಶ ಜ್ಯೋತೀರ್‍ಲಿಂಗಗಳಾದ ಸೌರಾಷ್ಟ್ರದಲ್ಲಿನ ಸೋಮನಾಥ ಲಿಂಗ, ಶ್ರೀ ಶೈಲದಲ್ಲಿನ ಮಲ್ಲಿಕಾರ್ಜುನ ಲಿಂಗ, ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ಲಿಂಗ....... ಹೀಗೆ 12 ಲಿಂಗಗಳನ್ನು ಈ ಗ್ರಾಮದಲ್ಲಿರುವ ದೇವಾಲಯಗಳಲ್ಲಿ ಕಾಣಬಹುದಾಗಿದೆ.

ವೆಂಕಟೆಶ್ವರ ಸ್ವಾಮಿ ದೇವಾಲಯ

ವೆಂಕಟೆಶ್ವರ ಸ್ವಾಮಿ ದೇವಾಲಯ

ಇಲ್ಲಿ ಆನಂದನಿಲಯ ವಾಸುದೇವನ ದರ್ಶನ ಕೂಡ ಮಾಡಬಹುದಾಗಿದೆ. ಭೂ ದೇವಿ, ಶ್ರೀ ದೇವಿ ಸಮೇತವಾಗಿ ಕಲ್ಯಾಣ ವೆಂಕಟೇಶ್ವರ ಸ್ವಾಮಿಯ ದೇವಾಲಯ ಕೂಡ ಇಲ್ಲಿ ಕಾಣಬಹುದಾಗಿದೆ.

ಸದ್ಗುರು ಸಾಯಿ ಬಾಬಾ ದೇವಾಲಯ

ಸದ್ಗುರು ಸಾಯಿ ಬಾಬಾ ದೇವಾಲಯ

ಸದ್ಗುರು ಸಾಯಿ ಬಾಬಾ ದೇವಾಲಯ ಕೂಡ ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಭದ್ರಾದಿ, ಅನ್ನವರಂ, ಯಾದಾದ್ರಿ, ಅರಸವಲ್ಲಿ ಕೊದಂಡ ರಾಮಸ್ವಾಮಿ, ಸತ್ಯನಾರಾಯಣ ಸ್ವಾಮಿ, ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ, ಸೂರ್ಯ ನಾರಾಯಣ ಮೂರ್ತಿ ದೇವಾಲಯಗಳನ್ನು ಇಲ್ಲಿಯೇ ಕಾಣಬಹುದಾಗಿದೆ.

ಪೂಜೆಗಳು

ಪೂಜೆಗಳು

ಶಿವನ ಪರಿವಾರದ ದೇವತಾ ಮೂರ್ತಿಗಳಿಗೆ ಶೈವ ಆರಾಧನ ಸಂಪ್ರದಾಯಗಳ ಹಾಗೂ ವೈಷ್ಣವ ದೇವತಾ ಮೂರ್ತಿಗಳಿಗೆ ವೈಷ್ಣವ ಸಂಪ್ರದಾಯಗಳ ಪ್ರಕಾರ ಪೂಜೆಗಳನ್ನು ನಡೆಸಲಾಗುತ್ತದೆ.

ಪ್ರತಿಷ್ಟಾಪನ

ಪ್ರತಿಷ್ಟಾಪನ

ವಿಗ್ರಹ ಪ್ರತಿಷ್ಟಾಪನ ತಮಿಳುನಾಡು ರಾಜ್ಯಕ್ಕೆ ಸೇರಿದ 108 ಮಂದಿ ವೇದ ಪಂಡಿತರ ಸಾರಥ್ಯದಲ್ಲಿ ನಡೆಯಿತು. ಆಶ್ರಮದಲ್ಲಿ ಒಂದು ಗೋಶಾಲ ಕೂಡ ಇದೆ. ವೇದ ಪಾಠಶಾಲ ನಿರ್ಮಾಣಕ್ಕೆ ಪ್ರಯತ್ನಗಳು ನಡೆಯುತ್ತದೆ.

ಅರ್ಧ ನಾರೀಶ್ವರ

ಅರ್ಧ ನಾರೀಶ್ವರ

ದೇವಾಲಯದ ಪ್ರವೇಶದಲ್ಲಿಯೇ 32 ಅಡಿ ಎತ್ತರದ ಅರ್ಧನಾರಿಶ್ವರ ಭಕ್ತರಿಗೆ ಸ್ವಾಗತವನ್ನು ಮಾಡುತ್ತಾರೆ.

ಈ ಗ್ರಾಮಕ್ಕೆ ತಲುಪುವ ಬಗೆ?

ಈ ಗ್ರಾಮಕ್ಕೆ ತಲುಪುವ ಬಗೆ?

ಆಂಧ್ರ ಪ್ರದೇಶದಲ್ಲಿನ ರಾಜಮಂಡ್ರಿಗೆ ಬೆಂಗಳೂರಿನಿಂದ 810. ಕಿ,ಮೀ ದೂರದಲ್ಲಿದೆ. ಇಲ್ಲಿಂದ ಗಾದರಾಡ ಗ್ರಾಮಕ್ಕೆ ಹಲವಾರು ಬಸ್ ಮತ್ತು ರೈಲು ಮಾರ್ಗಗಳ ಸೌಕರ್ಯಗಳಿವೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ