Search
  • Follow NativePlanet
Share
» » ಜಂಗಲ್‌ಬುಕ್‌ನ ಮೋಗ್ಲಿ ಮನೆಗೆ ಹೋಗೋಣ್ವಾ?

ಜಂಗಲ್‌ಬುಕ್‌ನ ಮೋಗ್ಲಿ ಮನೆಗೆ ಹೋಗೋಣ್ವಾ?

ಮಧ್ಯ ಪ್ರದೇಶದಲ್ಲಿರುವ ಸಿಯೋನಿ ಒಂದು ಸಣ್ಣ ಜಿಲ್ಲೆಯಾಗಿದೆ. ಇದು 9758 ಕಿ.ಮೀ ವಿಶಾಲವಾದ ಭೌಗೋಳಿಕ ಕ್ಷೇತ್ರಫಲದಲ್ಲಿ ಹಬ್ಬಿದೆ. ಈ ಸ್ಥಳದ ಹೆಸರಿನ ಹಿಂದೆ ಒಂದು ಕಥೆ ಇದೆ. ಜಗತ್ಗುರು ಒಮ್ಮೆ ಸುತ್ತಾಡಲು ಹೋಗಿದ್ದರು. ಯಾತ್ರೆಯ ಸಂದರ್ಭ ಈ ಸುಂದರವಾದ ಸ್ಥಳವನ್ನು ಕಂಡರು. ಈ ಸ್ಥಳಕ್ಕೆ ಶಿರೋನಿ ಎನ್ನುವ ಹೆಸರನ್ನಿಟ್ಟರು. ನಂತರ ಇದು ಶಿವ ನಗರಿ ಅಥವಾ ಸಿಯೋನಿ ಎನ್ನುವ ಹೆಸರಿನಿಂದ ಪ್ರಸಿದ್ಧಿ ಹೊಂದಿತು. ರೂಡ್‌ಯಾರ್ಡ್ ಕಿಪ್ಲಿಂಗ್ ಬರೆದಿರುವ ಜಂಗಲ್ ಬುಕ್‌ನ ಕಥೆ ಈ ಸ್ಥಳದ ಸುತ್ತಲೂ ಸುತ್ತುತ್ತದೆ.  ನಿಪಾಹ್‌ ವೈರಸ್‌ಗೆ ತುತ್ತಾಗಿರುವ ಕೇರಳದಲ್ಲಿ ನಡೆಯುತ್ತೆ ಬಾವಲಿ ಹಿಡಿಯುವ ಹಬ್ಬ ; ಏನಿದರೆ ವಿಶೇಷತೆ

 

ಸಿಯೋನಿ

ಸಿಯೋನಿ

ಜಂಗಲ್ ಬುಕ್‌ ಪುಸ್ತಕದಲ್ಲಿ ಸಿಯೋನಿ ಶಬ್ಧವನ್ನು ಸಿಯೋನಾ ಎಂದು ಬಳಸಲಾಗಿದೆ. ಈ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಒಂದು ದೊಡ್ಡ ಪ್ರಜಾತಿಯ ಮರ ಇದಾಗಿದೆ. ಈ ಮರದಿಂದ ಸಿಗುವ ಕಟ್ಟಿಗೆಯಿಂದ ಡೋಲನ್ನು ತಯಾರಿಸಲಾಗುತ್ತದೆ. ಇಷ್ಟೇ ಅಲ್ಲ ಮಧ್ಯಪ್ರದೇಶದ ಈ ಸಣ್ಣ ಜಿಲ್ಲೆಯು ತನ್ನೊಳಗೆ ಹಲವಾರು ಪರ್ಯಾಟನಾ ಸ್ಥಳಗಳನ್ನು ಹೊಂದಿದೆ.

ಭೀಮಗಡ ಸಂಜಯ್ ಸರೋವರ

ಭೀಮಗಡ ಸಂಜಯ್ ಸರೋವರ

ಇಂದು ಏಶಿಯಾದ ಅತ್ಯಂತ ದೊಡ್ಡ ಮಣ್ಣಿನ ಅಣೆಕಟ್ಟಿನ ಸರೋವರವಾಗಿದೆ. ಈ ಅಣೆಕಟ್ಟಿನಿಂದಾಗಿಯೇ ಕೃಷೀ ಉತ್ಪನ್ನಗಳ ವ್ಯವಸಾಯಕ್ಕೆ ಹೊಸ ಆಯಾಮ ದೊರಕಿದಂತಾಗಿದೆ. ವಿದ್ಯುತ್‌ನ ಕೊರತೆಯನ್ನು ಕಡಿಮೆ ಮಾಡಿದೆ. ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಿದೆ. ಆಸುಪಾಸಿನ ಇಲಾಖೆಗಳಿಗೂ ವಿದ್ಯುತ್ ಸಪ್ಲೈ ಮಾಡುತ್ತದೆ. ಈ ಅಣೆಕಟ್ಟಿನ ಸುತ್ತಲುತ್ತಲು ಅನೇಕ ಸುಂದರ ಪಕ್ಷಿಗಳನ್ನು ಕಾಣಬಹುದು. ಇನ್ನೂ ಪ್ರವಾಸಿಗರಿಗಾಗಿ ಇಲ್ಲಿ ಬೋಟಿಂಗ್, ಪೆಡಲ್ ಬೋಡ್ ಹಾಗೂ ಇನ್ನಿತರ ಜಲಕ್ರೀಡೆಗಳ ಆನಂದವನ್ನು ಪಡೆಯಬಹುದು.

ಮಹಾಕಾಲೇಶ್ವರ ಮಂದಿರ

ಮಹಾಕಾಲೇಶ್ವರ ಮಂದಿರ

ಸಿಯೋನಿ ಯಿಂದ 20 ಕಿ.ಮೀ ದೂರದಲ್ಲಿ ದಿಗಹೋರಿ ಎನ್ನುವ ಹಳ್ಳಿ ಇದೆ. ಅಲ್ಲಿ ಮಹಾಕಾಲೇಶ್ವರ ದೇವಸ್ಥಾನವಿದೆ. ಈ ಮಂದಿರ 8 ನೇ ಶತಮಾನದಲ್ಲಿ ಭಾರತದ ಮಹಾ ದಾರ್ಶನಿಕ ಆದಿ ಶಂಕರಾಚಾರ್ಯರು ನಿರ್ಮಿಸಿದ್ದರು ಎನ್ನಲಾಗುತ್ತದೆ. ಶಿವನಿಗೆ ಸಮರ್ಪಿತವಾಗಿರುವ ಈ ಮಂದಿರಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಆಶೀರ್ವಾದ ಪಡೆಯುತ್ತಾರೆ.

ಅಮೋಘ್ ಘಡ್

ಅಮೋಘ್ ಘಡ್

ಸಿಯೋನಿ-ಮಂಡಲ ರಾಜಮಾರ್ಗದಲ್ಲಿರುವ ಈ ಅಮೋಘ್ ಘಡ್ ಒಂದು ಸುಂದರವಾದ ತಾಣವಾಗಿದೆ. ರೂಡ್‌ಯಾರ್ಡ್ ಕ್ಲಿಪ್ಪಿಂಗ್ ತನ್ನ ಪುಸ್ತಕ ಜಂಗಲ್‌ಬುಕ್‌ನಲ್ಲಿ ಇದೇ ಸ್ಥಳವನ್ನು ವರ್ಣಿಸಿದ್ದಾನೆ ಎನ್ನಲಾಗುತ್ತದೆ. ಈ ಜಂಗಲ್‌ ಬುಕ್‌ನ ಪುಟಾಣಿ ನಾಯಕನೇ ಮೋಗ್ಲಿ.

 ಪೆಂಚ್ ರಾಷ್ಟ್ರೀಯ ಉದ್ಯಾನವನ

ಪೆಂಚ್ ರಾಷ್ಟ್ರೀಯ ಉದ್ಯಾನವನ

PC: Mayurisamudre

ಸಿಯೋನಿಯಿಂದ ಸುಮಾರು 61ಕಿ.ಮಿ ದೂರದಲ್ಲಿ ಪೆಂಚ್ ರಾಷ್ಟ್ರೀಯ ಉದ್ಯಾನವನವಿದೆ. ಪೆಂಚ್ ನದಿಯಿಂದಾಗಿ ಈ ಸ್ಥಳಕ್ಕೆ ಪೆಂಚ್ ಎನ್ನುವ ಹೆಸರು ಬಂದಿದೆ. ಇದು ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತದೆ. ಮಹಾರಾಷ್ಟ್ರ ಸರ್ಕಾರದ ಮೂಲಕ 1983ರಲ್ಲಿ ಇದನ್ನು ನ್ಯಾಷನಲ್ ಪಾರ್ಕ್ ಎಂದು ಘೋಷಿಸಲಾಯಿತು. ಇಲ್ಲಿ 1200ಕ್ಕೂ ಅಧೀಕ ಪ್ರಜಾತಿಯ ಮರಗಳನ್ನು ಕಾಣಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more