
ರಾಜಸ್ಥಾನ ಹೆಚ್ಚಿನ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ಇಲ್ಲಿನ ಸಂಸ್ಕೃತಿ, ಇತಿಹಾಸ, ಆಹಾರ ಪದ್ಧತಿ ಎಲ್ಲಾ ವಿಭಿನ್ನವಾಗಿರುತ್ತದೆ. ಇವುಗಳೆಲ್ಲಾ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ರಾಜಸ್ಥಾನದ ಬಹುತೇಕ ವಿಷ್ಯ ಬಹಳಷ್ಟು ಮಂದಿಗೆ ತಿಳಿದಿಲ್ಲ. ಒಂದು ವೇಳೆ ನೀವೂ ರಾಜಸ್ಥಾನ ಸುತ್ತಾಡಲು ಬಯಸಿದರೆ ರಾಜಸ್ಥಾನದ ಬಗೆಗಿನ ಈ ಕೆಲವು ಸಂಗತಿಗಳನ್ನು ತಿಳಿದುಕೊಳ್ಳುವುದು ಮುಖ್ಯ. ಅವುಗಳು ಯಾವುವೆಂದರೆ...

ಪ್ರಾಣಿಗಳಿಗೆ ಹಿಂಸೆ ನೀಡಬೇಡಿ
ಕಾಡು ಪ್ರಾಣಿಗಳಿಗೆ ತೊಂದರೆ ಕೊಡಬೇಡಿ, ಪ್ರಾಣಿಗಳಿಗೆ ತೊಂದರೆ ಕೊಡುವುದು ಇಲ್ಲಿನ ಜನರಿಗೆ ಇಷ್ಟವಾಗುವುದಿಲ್ಲ. ರಾತ್ರಿ ಹೊತ್ತಿನಲ್ಲಿ ನಿರ್ಜನ ಪ್ರದೇಶದಲ್ಲಿ ಒಬ್ಬರೇ ಓಡಾಡಬೇಡಿ, ಹೊರಗಿನ ಪ್ರವಾಸಿಗರಾದರೆ ರಾಜಸ್ಥಾನದಲ್ಲಿ ಟ್ಯಾಕ್ಸಿ ಅಥವಾ ಆಟೋವನ್ನು ಸರಿಯಾಗಿ ಯೋಚಿಸಿ ಬುಕ್ ಮಾಡಿ.

ನೀರು ಪೋಲು ಮಾಡಬೇಡಿ
ರಾಜಸ್ಥಾನದಲ್ಲಿ ನೀರನ್ನು ಪೋಲು ಮಾಡಬೇಡಿ, ಇಲ್ಲಿನ ಜನರಲ್ಲಿ ನೀರಿನ ಸಮಸ್ಯೆಯ ಬಗ್ಗೆಯಂತೂ ಕೇಳಲೇ ಬೇಡಿ, ಯಾಕೆಂದರೆ ನೀರಿನ ಸಮಸ್ಯೆ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಇರುತ್ತದೆ, ನಗರದಲ್ಲಿರುವುದಿಲ್ಲ. ಇಲ್ಲಿನ ಜನರು ನೀರಿಗೆ ಹೆಚ್ಚುಮಹತ್ವ ನೀಡುತ್ತಾರೆ. ಮನೆಯಲ್ಲಿ ನೀರಿನ ಮಡಿಕೆ ಇಟ್ಟು ಅದಕ್ಕೆ ಪೂಜೆ ಮಾಡುತ್ತಾರೆ.

ಸಾಂಪ್ರದಾಯಿಕ ಬಟ್ಟೆ ಧರಿಸಿ
ರಾಜಸ್ಥಾನದ ಜನರು ಅಲ್ಲಿನ ಸಂಪ್ರದಾಯದ ಪ್ರಕಾರ ಸಾಂಪ್ರದಾಯಿಕ ಬಟ್ಟೆಯನ್ನೇ ಧರಿಸುತ್ತಾರೆ. ಒಂದು ವೇಳೆ ನೀವು ಜೀನ್ಸ್ ಟೀ ಶರ್ಟ್ ನಂತಹ ಮಾರ್ಡನ್ ಬಟ್ಟೆ ಧರಿಸಿದರೆ ನೀವು ಎಲ್ಲರಿಗಿಂತಲೂ ಭಿನ್ನವಾಗಿ ಕಾಣಿಸುತ್ತೀರಿ. ಇದರಿಂದ ನೀವು ಗುಂಪಿಗಿಂತ ಭಿನ್ನವಾಗಿ ಕಾಣುತ್ತೀರಿ. ಹಾಗಾಗಿ ಅಲ್ಲಿ ಅಲ್ಲಿನ ಸಾಂಪ್ರದಾಯಿಕ ಬಟ್ಟೆಯನ್ನೇ ಧರಿಸಲು ಪ್ರಯತ್ನಿಸಿ.

ರೆಡ್ ಮೀಟ್
ರಾಜಸ್ಥಾನದಲ್ಲಿ ನೀವು ರೆಡ್ ಮೀಟ್ ಬಗ್ಗೆ ಕೇಳಿರುವಿರಿ, ಆದರೆ ಇಲ್ಲಿ ಮಾಂಸ ಹಾಗೂ ಡ್ರಿಂಕ್ಸ್‌ನ್ನು ಒಳ್ಳೆಯ ದೃಷ್ಠಿಯಿಂದ ನೋಡೋದಿಲ್ಲ. ಬಹುತೇಕರು ಮಾಂಸಾಹಾರ ಸೇವನೆ ಮಾಡೋದಿಲ್ಲ. ಹಾಗಾಗಿ ನೀವು ರೆಸ್ಟೋರೆಂಟ್‌ನಲ್ಲಷ್ಟೇ ಮಾಂಸಾಹಾರವನ್ನು ಸವಿಯಬಹುದು.

ರಾಜಸ್ಥಾನದ ಚಿತ್ರಣ
ಇಲ್ಲಿ ಕಾಡು, ಮಹಲ್, ಮರುಭೂಮಿ ಇವುಗಳೆಲ್ಲ ಕಾಣಸಿಗುತ್ತದೆ. ರಾಜಸ್ಥಾನ ಎಂದ ತಕ್ಷಣ ಮೊದಲು ತಲೆಗೆ ಬರುವುದು ಒಂಟೆ ಸವಾರಿ, ಮರುಭೂಮಿ, ಇಲ್ಲವಾದಲ್ಲಿ ಮದುವೆ ಸಮಾರಂಭ ನಡೆಯುವ ಮಹಲ್‌ಗಳು. ಹೀಗೆ ಇನ್ನಿತರ ಚಿತ್ರಣಗಳನ್ನು ಮನಸ್ಸಿನಲ್ಲಿಟ್ಟುಕೊಂಡು ರಾಜಸ್ಥಾನ್ ತಿರುಗಾಡಲು ಬರುತ್ತಾರೆ. ಆದರೆ ನೀವು ರಾಜಸ್ಥಾನಕ್ಕೆ ಬರುವಾಗ ಅದನ್ನೆಲ್ಲಾ ತಲೆಯಿಂದ ಕಿತ್ತಾಕಿ.

ರಾಜಸ್ಥಾನದ ರಜಪೂತರು
ರಾಜಸ್ಥಾನದಲ್ಲಿನ ರಜಪೂತರ ಬಗ್ಗೆ ನೀವು ಕಥೆಗಳಲ್ಲಿ, ಇತಿಹಾಸಲ್ಲಿ ಬಹಳಷ್ಟು ಕೇಳಿರಬಹುದು. ಹಾಗಾಗಿ ರಾಜಸ್ಥಾನದಲ್ಲಿರುವವರೆಲ್ಲರೂ ರಜಪೂತರು ಎಂದು ತಿಳಿದಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ರಾಜಸ್ಥಾನವೆಂದರೆ ಬರೀಮರುಭೂಮಿ ಮಾತ್ರವಲ್ಲ, ಪಶ್ಚಿಮ ರಾಜಸ್ಥಾನದಲ್ಲಿ ಮರುಭೂಮಿ ಇದೆ. ರಾಜಸ್ಥಾನದ ಉಳಿದ ಭಾಗ ದೇಶದ ಇತರ ನಗರಗಳಂತೇ ಇದೆ.

ಐಷಾರಾಮಿ ಮಹಲ್
ನೀವು ರಾಜಸ್ಥಾನವನ್ನು ಟಿವಿಯಲ್ಲಿ ಅಥವಾ ಸಿನಿಮಾದಲ್ಲಿ ನೋಡಿದ್ದರೆ, ನಿಮ್ಮ ತಲೆಯಲ್ಲಿ ಬರೀ ಐಷಾರಾಮಿ ಮಹಲ್‌ಗಳೇ ಇರುತ್ತವೆ. ರಾಜ ಪರಿವಾರದವರು ಅರಮನೆಗಳಲ್ಲಿ ನೆಲೆಸುತ್ತಿದ್ದರು, ಅದನ್ನು ಹೊತರುಪಡಿಸಿ ಸಾಮಾನ್ಯ ಜನರು ತಮ್ಮ ತಮ್ಮ ಮನೆಗಳಲ್ಲಿ ನೆಲೆಸುತ್ತಿದ್ದರು. ಹಾಗಾಗಿ ಇಲ್ಲಿ ಎಲ್ಲಾ ಸ್ಥಳಗಳಲ್ಲಿ ಮಹಲ್ ಕಾಣಸಿಗುವುದಿಲ್ಲ. ಇಲ್ಲಿನವರು ದೊಡ್ಡ ಸ್ವರದಲ್ಲಿ ಮಾತನಾಡುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ನಮಗೆ ಬೈಯುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ಬೇಡ.