Search
  • Follow NativePlanet
Share
» »ಪ್ರಸ್ತುತ ಆಂಧ್ರದ ಪ್ರಮುಖ ಧಾರ್ಮಿಕ ಸ್ಥಳಗಳು

ಪ್ರಸ್ತುತ ಆಂಧ್ರದ ಪ್ರಮುಖ ಧಾರ್ಮಿಕ ಸ್ಥಳಗಳು

By Vijay

ಹೊಸದಾದ ನಕ್ಷೆ ಪಡೆದಿರುವ ಆಂಧ್ರಪ್ರದೇಶ ರಾಜ್ಯವು ಧಾರ್ಮಿಕವಾಗಿಯೂ ಪ್ರಮುಖವಾದ ರಾಜ್ಯವಾಗಿದೆ. ಪಕ್ಕದ ಕರ್ನಾಟಕ, ತಮಿಳುನಾಡು ಮಾತ್ರವಲ್ಲದೆ ಮಹಾರಾಷ್ಟ್ರ ಹಾಗೂ ಇತರೆ ಉತ್ತರ ಭಾರತದ ಅನೇಕ ಸ್ಥಳಗಳಿಂದಲೂ ಕೂಡ ಆಂಧ್ರಪ್ರದೇಶದ ಅನೇಕ ಧಾರ್ಮಿಕ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಜನ ಬರುತ್ತಲೆ ಇರುತ್ತಾರೆ.

ವಿಶೇಷ ಲೇಖನ : ತಿರುಪತಿ ಗಿರಿವಾಸ ಶ್ರೀವೆಂಕಟೇಶ

ಅಷ್ಟೆ ಏಕೆ, ವಿಶ್ವಪ್ರಸಿದ್ಧ ಹಾಗೂ ಭಾರತದ ಅಗ್ರಗಣ್ಯ ಶ್ರೀಮಂತ ದೇವಸ್ಥಾನಗಳ ಪೈಕಿ ಒಂದಾದ ಏಳು ಬೆಟ್ಟಗಳೊಡೆಯ ವೆಂಕಟೇಶ್ವರನ ದೇವಸ್ಥಾನವಿರುವ ತಿರುಪತಿ ತಿರುಮಲಗಳೂ ಕೂಡ ಇರುವುದು ಆಂಧ್ರಪ್ರದೇಶ ರಾಜ್ಯದಲ್ಲೆ. ಇದಲ್ಲದೆ ಇನ್ನೂ ಅನೇಕ ಪುರಾಣ ಪ್ರಸಿದ್ಧ ದಂತಕಥೆಗಳ ಹಿನ್ನಿಲೆಯಿರುವ ದೇವಸ್ಥಾನಗಳ ತೀರ್ಥಕ್ಷೇತ್ರಗಳನ್ನು ಈ ರಾಜ್ಯದಲ್ಲಿ ಕಾಣಬಹುದಾಗಿದೆ. ಪ್ರಸ್ತುತ, ಲೇಖನದ ಮೂಲಕ ಆಂಧ್ರದಲ್ಲಿರುವ ಕೆಲ ಜನಪ್ರೀಯ ಹಾಗೂ ಮಹತ್ತರವಾದ ತೀರ್ಥ ಕ್ಷೇತ್ರಗಳ ಕುರಿತು ತಿಳಿಯಿರಿ.

ಈ ದಿನದ ಕೊಡುಗೆ : ಹೋಟೆಲ್ ಬುಕ್ಕಿಂಗ್ ಮೇಲೆ 50% ರಷ್ಟು ವಿನಾಯಿತಿ ಪಡೆಯಿರಿ

ಸೂಚನೆ : ಪ್ರೀಯ ಓದುಗರೆ, ನೀವು ನಿಮ್ಮ ಪ್ರವಾಸಾನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದ್ದರೆ, ಇ-ಅಂಚೆ ಮೂಲಕ ನಮಗೆ ಬರೆದು ಕಳುಹಿಸಿ. ಲೇಖನವನ್ನು ಸೂಕ್ತವಾಗಿ ತಿದ್ದುಪಡಿ ಮಾಡಿ ನಿಮ್ಮ ಹೆಸರಿನಡಿಯಲ್ಲಿ ಪ್ರಕಟಿಸಲಾಗುವುದು. ನೀವು ಹೇಳಬಯಸುವ ಪ್ರವಾಸಿ ಸ್ಥಳದ ಕನಿಷ್ಠ ಮೂರು ಚಿತ್ರಗಳನ್ನು ಲಗತ್ತಿಸಿರಬೇಕು. ಧನ್ಯವಾದಗಳು.

ಇ-ಅಂಚೆ ವಿಳಾಸ : [email protected]

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರ ಪ್ರದೇಶದಲ್ಲಿ ಸಾಕಷ್ಟು ಧಾರ್ಮಿಕ ಕ್ಷೇತ್ರಗಳಿದ್ದು ಕೆಲವೆ ಕೆಲವು ಆಯ್ದ ಜನಪ್ರೀಯ ಹಾಗೂ ಹೆಚ್ಚಿನ ಮಹತ್ವವುಳ್ಳ ಕ್ಷೇತ್ರಗಳ ಕುರಿತು ಮಾತ್ರವೆ ಇಲ್ಲಿ ತಿಳಿಸಲಾಗಿದೆ.

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ತಿರುಪತಿ-ತಿರುಮಲ : ಏಳು ಬೆಟ್ಟಗಳ ಒಡೆಯ, ಸಂಕಟ ಹರಣ ದೇವನಾದ ಶ್ರೀ ವೆಂಕಟೇಶ್ವರನು ನೆಲೆಸಿರುವ ತಿರುಪತಿ ತಿರುಮಲ ದೇವಸ್ಥಾನವು ಜಗದ್ವಿಖ್ಯಾತವಾದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಆಂಧ್ರ ದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯಿರುವ ತಿರುಮಲ ಬೆಟ್ಟದ ಶ್ರೀ ವೆಂಕಟೇಶ್ವರನ ದೇವಸ್ಥಾನಕ್ಕೆ ಪ್ರತಿ ವರ್ಷ ಏನಿಲ್ಲವೆಂದರೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಹೈದರಾಬಾದ್ ನಗರದಿಂದ 600 ಕಿ.ಮೀ ದೂರವಿರುವ ಈ ಕ್ಷೇತ್ರವು ಚೆನ್ನೈನಿಂದ 138 ಕಿ.ಮೀ ಹಾಗು ಬೆಂಗಳೂರು ನಗರದಿಂದ 291 ಕಿ.ಮೀ ಗಳಷ್ಟು ಅಂತರದಲ್ಲಿದೆ.

ಚಿತ್ರಕೃಪೆ: Raji.srinivas

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಅಹೋಬಿಲಂ : "ಅಹೋ" ಅನ್ನುವುದು ಒಂದು ಉದ್ಗಾರವಾಚಕ ಪದವಾಗಿದ್ದು ಬಿಲಂ (ಬಲಂ) ಅಂದರೆ ಶಕ್ತಿ ಎಂದಾಗುತ್ತದೆ. ಆದ್ದರಿಂದ ಅಹೋಬಿಲಂ ಎಂಬ ಹೆಸರು ಅಗಾಧ ಶಕ್ತಿಯು ನೆಲೆಸಿರುವ ಪ್ರದೇಶವಾಗಿದೆ. ಪೌರಾಣಿಕ ಹಿನ್ನಿಲೆಯ ಪ್ರಕಾರ, ಭಗವಂತ ವಿಷ್ಣು ಅಸುರನಾದ ಹಿರಣ್ಯಕಶಿಪುವಿನನ್ನು ಸಂಹರಿಸಲು ಅರ್ಧ ಮನುಷ್ಯ ಅರ್ಧ ಸಿಂಹದ ರೂಪ ಪಡೆದು ನರಸಿಂಹನಾಗಿ ಅವತರಿಸಿದ್ದು ಈ ಸ್ಥಳದಲ್ಲಿಯೆ. ಪ್ರಸ್ತುತ ಅಹೋಬಿಲಂ ಕ್ಷೇತ್ರವು ಆಂಧ್ರದ ಕರ್ನೂಲ್ ಜಿಲ್ಲೆಯ ಅಲ್ಲಾಗಡ್ಡಾ ಮಂಡಲ (ತಾಲೂಕು) ದಲ್ಲಿ ನೆಲೆಸಿದೆ. ಅಹೋಬಿಲಂ ಕ್ಷೇತ್ರ ಮಹಿಮೆ

ಚಿತ್ರಕೃಪೆ: Ashwin Kumar

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಶ್ರೀಕಾಳಹಸ್ತಿ : ದಕ್ಷಿಣ ಭಾರತದಲ್ಲಿರುವ ಶಿವನ ಅತಿ ಪ್ರಮುಖ ದೇವಸ್ಥಾನಗಳ ಪೈಕಿ ಆಂಧ್ರಪ್ರದೇಶ ರಾಜ್ಯದ ಶ್ರೀಕಾಳಹಸ್ತಿಯ ಶಿವನ ದೇವಸ್ಥಾನವೂ ಸಹ ಒಂದಾಗಿದೆ. ಅಲ್ಲದೆ ಈ ಒಂದು ಸ್ಥಳದಲ್ಲೆ ಪರಮ ಶಿವ ಭಕ್ತನಾಗಿದ್ದ ಬೇಡರ ಕಣ್ಣಪ್ಪನು ತನ್ನ ಎರಡೂ ಕಣ್ಣುಗಳನ್ನು ಶಿವನಿಗೋಸ್ಕರ ತ್ಯಾಗ ಮಾಡಲು ಸಿದ್ಧಿನಿದ್ದವೆನ್ನಲಾಗಿದೆ. ಅಲ್ಲದೆ ಪಂಚಭೂತಗಳ ಪೈಕಿ ಇದು ವಾಯು ಲಿಂಗವನ್ನು ಪ್ರತಿನಿಧಿಸುತ್ತದೆ.

ಚಿತ್ರಕೃಪೆ: రవిచంద్ర

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಅನ್ನವರಂ : ಪಂಪಾ ನದಿಯ ತಟದಲ್ಲಿ ನೆಲೆಸಿರುವ ಆಂಧ್ರಪ್ರದೇಶ ರಾಜ್ಯದ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಅನ್ನವರಂ ಗ್ರಾಮವು ಪವಿತ್ರ ಪುಣ್ಯ ಕ್ಷೇತ್ರವಾಗಿದೆ. ತೆಲುಗು ಭಾಷೆಯಲ್ಲಿ ಅನ್ನ ಎಂದರೆ ಬೇಡು ಅಥವಾ ಇಛ್ಚಿಸು ಎಂದಾಗುತ್ತದೆ. ವರಂ ಎಂದರೆ ವರ. ಆದ್ದರಿಂದ ಅಕ್ಷರಶಃ ಈ ಕ್ಷೇತ್ರವು ಬೇಡಿದ್ದನು ಕೊಡುವ ಕ್ಷೇತ್ರವಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಪ್ರಮುಖವಾಗಿ ಇಲ್ಲಿನ ರತ್ನಗಿರಿ ಬೆಟ್ಟದ ಮೇಲಿರುವ ವೀರ ವೆಂಕಟ ಸತ್ಯನಾರಾಯಣ ಸ್ವಾಮಿ ದೇವಸ್ಥಾನವು ಬಹು ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Smuddu

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಅಂತರ್ವೇದಿ : ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಸಖಿನೇಟಿಪಲ್ಲಿ ತಾಲೂಕಿನ ಅಂತರ್ವೇದಿ ಒಂದು ಧಾರ್ಮಿಕ ಮಹತ್ವದ ಸ್ಥಳವಾಗಿದೆ. ಗೋದಾವರಿ ನದಿಯ ಉಪನದಿಯಾದ ವಸಿಷ್ಠ ಗೋದಾವರಿಯು ಬಂಗಾಳಕೊಲ್ಲಿ ಸಮುದ್ರದಲ್ಲಿ ಸಮಾಗಮವಾಅಗುವಲ್ಲಿ ಈ ಕ್ಷೇತ್ರವಿದೆ. ಇಲ್ಲಿನ್ ಶ್ರೀ ಲಕ್ಷ್ಮನರಸಿಂಹಸ್ವಾಮಿ ದೇವಸ್ಥಾನವು ಪ್ರಸಿದ್ಧಿ ಪಡೆದಿದ್ದು ಇದೊಂದು ನರಸಿಂಹ ಕ್ಷೇತ್ರವೂ ಸಹ ಆಗಿದೆ.

ಚಿತ್ರಕೃಪೆ: Adityamadhav83

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ದ್ರಕ್ಷರಾಮಂ : ಪಂಚರಾಮ ಕ್ಷೇತ್ರಗಳ ಪೈಕಿ ಒಂದಾದ ಶಕ್ತಿಯುತವಾದ ಭೀಮೇಶ್ವರಸ್ವಾಮಿ ದೇವಾಲಯದಿಂದಾಗಿ ಈ ಕ್ಷೇತ್ರವು ಪ್ರಸಿದ್ಧಿ ಪಡೆದಿದೆ. ದ್ರಕ್ಷರಾಮ ಒಂದು ಪಟ್ಟಣ ಪ್ರದೇಶವಾಗಿದ್ದು, ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯಲ್ಲಿದೆ. ರಾಜಮುಂಡ್ರಿ ಹಾಗೂ ಕಾಕಿನಾಡಾಗಲಿಂದ ಬಸ್ಸುಗಳು ದೊರೆಯುತ್ತವೆ. ದೇವಾಲಯ ಸಮಯ : ಬೆಳಿಗ್ಗೆ 6 ರಿಂದ 12 ಘಂಟೆ, ಮಧ್ಯಾಹ್ನ 3 ರಿಂದ ರಾತ್ರಿ 8 ಘಂಟೆ.

ಚಿತ್ರಕೃಪೆ: Aditya Gopal

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಕನಿಪಾಕಂ : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಕನಿಪಾಕಂ ಕ್ಷೇತ್ರವು ಗಣಪತಿ ಅಥವಾ ವಿನಾಯಕನ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. ಕನಿಅಪಾಕಂ ವರಸಿದ್ಧಿ ವಿನಾಯಕನು ಪ್ರಭಾವಶಾಲಿಯಾಗಿರುವನೆಂದು ನಂಬಲಾಗಿದ್ದು ವರ್ಷವೂ ಬೆಳೆಯುತ್ತಿದ್ದಾನೆ ಎಂದು ಹೇಳಲಾಗುತ್ತದೆ. ಚಿತ್ತೂರು, ತಿರುಪತಿಗಳಿಂದ ಇಲ್ಲಿಗೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಮಹಾನಂದಿ : ಆಂಧ್ರದ ಕರ್ನೂಲ್ ಜಿಲ್ಲೆಯ ನಾಂದ್ಯಾಳ ಬಳಿಯ ನಲ್ಲಮಲ್ಲ ಪರ್ವತಗಳ ಪೂರ್ವಕ್ಕೆ ಸ್ಥಿತವಿರುವ ಮಹಾನಂದಿಯು ಒಂದು ಧಾರ್ಮಿಕ ಮಹತ್ವವಿರುವ ಕ್ಷೇತ್ರವಾಗಿದೆ. ಮಹಾನಂದೀಶ್ವರ ದೇವಸ್ಥಾನವು ಇಲ್ಲಿರುವ ಪ್ರಮುಖ ದೇವಸ್ಥಾನವಾಗಿದೆ. ಮಹಾನಂದಿಯ 15 ಕಿ.ಮೀ ಸುತ್ತಳತೆಯ ಪ್ರದೇಶಗಳಲ್ಲಿ ಒಂಬತ್ತು ನಂದಿಗಳನ್ನು ಕಾಣಬಹುದಾಗಿದ್ದು ಇದನ್ನು ನವನಂದಿ ಎಂದು ಕರೆಯಲಾಗುತ್ತದೆ. ಪ್ರದೇಶವು ದಟ್ಟನೆಯ ಹಸಿರಿನ ಕಾಡುಗಳ ಮಧ್ಯದಲ್ಲಿ ನೆಲೆಸಿದ್ದು ಸುಂದರ ಪರಿಸರವನ್ನು ಹೊಂದಿದೆ. ನಾಂದ್ಯಾಳ, ಕರ್ನೂಲ್ ಗಳಿಂದ ಬಸ್ಸುಗಳು ಇಲ್ಲ್ಗೆ ದೊರೆಯುತ್ತವೆ.

ಚಿತ್ರಕೃಪೆ: sai sreekanth mulagaleti

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಮಂತ್ರಾಲಯ ಶ್ರೀಕ್ಷೇತ್ರ : ಮಂಚಾಲೆ ಎಂತಲೂ ಕರೆಯಲ್ಪಡುವ ಮಂತ್ರಾಲಯವು ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ತುಂಗಾ ನದಿ ತಟದ ಮೇಲೆ ನೆಲೆಸಿದೆ. ಗುರು ರಾಘವೇಂದ್ರರ ಬೃಂದಾವನವಿರುವ ಈ ಕ್ಷೇತ್ರವು ಪ್ರತಿ ವರ್ಷವೂ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ಶ್ರೀ ಗುರು ರಾಘವೇಂದ್ರರು ದ್ವೈತ ಪಂತದ ಸಂಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಅನುಯಾಯಿಯಾಗಿದ್ದು, ಅದರ ಪರಿಪಾಲಕರಾಗಿದ್ದರು. ಪ್ರಸ್ತುತ ಅವರ ಬೃಂದಾವನದಲ್ಲಿ ಸಮಾಧಿ ತೆಗೆದುಕೊಳ್ಳುವ ಮುಂಚೆ ಭಕ್ತರನ್ನು ಕುರಿತು ಮುಂದಿನ 700 ವರ್ಷಗಳವರೆಗೆ ಇದರಲ್ಲಿ ಜೀವಿಸಿರುವುದಾಗಿ ಅಭಯ ಹಸ್ತ ನೀಡಿದ್ದರು. ಅದರಂತೆ ಈಗಾಗಲೆ 339 ವರ್ಷಗಳು ಗತಿಸಿದ್ದು ಇನ್ನೂ ಮುಂದಿನ 361 ವರ್ಷಗಳವರೆಗೆ ರಾಯರು ಜಾಗೃತರಾಗಿದ್ದು ಭಕ್ತರನ್ನು ಹರಸುತ್ತಾರೆ ಎಂಬ ವಿಶ್ವಾಸ ಅವರ ಅನುಯಾಯಿಗಳಲ್ಲಿದೆ.

ಚಿತ್ರಕೃಪೆ: Simply CVR

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಶ್ರೀಶೈಲಂ : ಶ್ರೀಶೈಲಂ / ಶ್ರೀ ಶೈಲ ಹಿಂದುಗಳಿಗೆ ಧಾರ್ಮಿಕ ಸಂಪ್ರದಾಯಕ್ಕೆ ಪ್ರಾಮುಖ್ಯತೆಯನ್ನು ಪಡೆದಿರುವ ಪುಟ್ಟ ಪಟ್ಟಣ. ಈ ಪಟ್ಟಣವನ್ನು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಲ್ಲಮಲ ಬೆಟ್ಟದ ಮೇಲೆ ಕಾಣಬಹುದು. ಈ ನಗರವು ಕೃಷ್ಣಾ ನದಿಯ ತಟದಲ್ಲಿ ಸ್ಥಾಪಿತವಾಗಿದೆ. ಇಲ್ಲಿನ ಅತ್ಯಂತ ಪ್ರಮುಖವಾದ ದೇವಾಲಯಗಳೆಂದರೆ ಶಿವ ಹಾಗೂ ಆತನ ಪತ್ನಿ ದೇವಿ ಪಾರ್ವತಿಗೆ ಮೀಸಲಾದ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ. ಇಲ್ಲಿ ಭಗವಾನ್ ಶಿವನನ್ನು ಮಲ್ಲಿಕಾರ್ಜುನ ಸ್ವಾಮಿ ಎಂತಲೂ ಹಾಗೂ ಪಾರ್ವತಿ ದೇವಿಯನ್ನು ಭ್ರಮರಾಂಭ ಎಂದೂ ಪೂಜಿಸಲಾಗುತ್ತದೆ. ಈ ದೇವಾಲಯವು ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳ ಎಂದು ಕರೆಸಿಕೊಳ್ಳುವುದಕ್ಕೆ ಕಾರಣ, ಈ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳ ನಡುವೆ ಇರುವುದು.

ಚಿತ್ರಕೃಪೆ: sai sreekanth mulagaleti

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಅಮರಾವತಿ : ಆಂಧ್ರದ ಗುಂಟೂರು ಜಿಲ್ಲೆಯಲ್ಲಿರುವ ಅಮರಾವತಿಯು ಅಮರೇಶ್ವರ ದೇವಸ್ಥಾನದಿಂದಾಗಿ ಪ್ರಸಿದ್ಧಿಯಾಗಿದೆ. ವಿಜಯವಾಡಾ ಹಾಗೂ ಗುಂಟೂರುಗಳಿಂದ ಕ್ರಮವಾಗಿ 40 ಹಾಗೂ 33 ಕಿ.ಮೀ ಗಳಷ್ಟು ದೂರವಿರುವ ಈ ಕ್ಶೇತ್ರಕ್ಕೆ ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಇಲ್ಲಿ ಬೌದ್ಧರ ಮಹಾ ಚೈತ್ಯ ಹಾಗೂ ಸ್ತೂಪವನ್ನೂ ಸಹ ಕಾಣಬಹುದಾಗಿದೆ.

ಚಿತ್ರಕೃಪೆ: RameshSharma

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ವಿಜಯವಾಡಾದ ಕನಕಾ ದುರ್ಗಾ ದೇವಸ್ಥಾನ : ಆಂಧ್ರದ ವಿಜಯವಾಡಾ ಪಟ್ಟಣದಲ್ಲಿರುವ ಕನಕಾ ದುರ್ಗಾ ದೇವಿ ದೇವಸ್ಥಾನವು ಬಹು ಪ್ರಖ್ಯಾತಿ ಪಡೆದ ಹಾಗೂ ಅಷ್ಟೆ ಪ್ರಾಮುಖ್ಯತೆಯುಳ್ಳ ದೇವಸ್ಥಾನವಾಗಿದೆ. ಕೃಷ್ಣಾ ನದಿ ದಂಡೆಯ ಇಂದ್ರಕೀಲಾದ್ರಿ ಬೆಟ್ಟದ ಮೇಲೆ ಸ್ಥಿತವಿರುವ ಈ ದೇವಸ್ಥಾನವು ಕಾಳಿಕಾ ಪುರಾಣ, ದುರ್ಗಾ ಸಪ್ತಶತಿ ಹಾಗೂ ಇತರೆ ವೇದಗಳಲ್ಲಿ ಇಂದ್ರಕೀಲಾದ್ರಿ ಕನಕಾ ದುರ್ಗೆಯ ಕುರಿತು ಉಲ್ಲೇಖಿಸಲಾಗಿದ್ದು ಇಲ್ಲಿನ ಮೂರ್ತಿಯು ಸ್ವಯಂಭೂ ಎನ್ನಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Sridhar1000

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಮಂಗಳಗಿರಿ : ಆಂಧ್ರದ ಗುಂಟೂರು ಜಿಲ್ಲೆಯ ಮಂಗಳಗಿರಿಯು ಒಂದು ಪವಿತ್ರ ಕ್ಷೇತ್ರವಾಗಿದ್ದು ಮೂರು ನರಸಿಂಹಸ್ವಾಮಿ ದೇವಸ್ಥಾನಗಳಿಗೆ ಪ್ರಸಿದ್ಧಿ ಪಡೆದಿದೆ. ಅವುಗಳೆಂದರೆ ಪನಕಲ ನರಸಿಂಹಸ್ವಾಮಿ, ಲಕ್ಷ್ಮಿ ನರಸಿಂಹಸ್ವಾಮಿ ಹಾಗೂ ಗಂದಲ ನರಸಿಂಹ ಸ್ವಾಮಿ. ಇವು ಕ್ರಮವಾಗಿ ಮಧ್ಯದಲ್ಲಿ, ಬೆಟ್ಟದ ಕೆಳಗೆ ಹಾಗೂ ಬೆಟ್ಟದ ಮೇಲೆ ನೆಲೆಸಿವೆ.

ಚಿತ್ರಕೃಪೆ: Durgarao Vuddanti

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಆಂಧ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳು:

ಸಿಂಹಾಚಲಂ : ವೈಜಾಗ್ ನಿಂದ 16 ಕಿ.ಮೀ ಗಳಷ್ಟು ದೂರವಿರುವ ಸಿಂಹಾಚಲಂ ಅಥವಾ ಸಿಂಹಾದ್ರಿಯು ಒಂದು ಉಪನಗರ ಪ್ರದೇಶವಾಗಿದೆ. ವಿಷ್ಣುವಿನ ಪುನರಾವತಾರವಾದ ಒಂದು ದೈವಕ್ಕೆ ಮುಡಿಪಾದ ಪ್ರಸಿದ್ಧ ದೇಗುಲಕ್ಕೆ ಇದು ಹೆಸರುವಾಸಿಯಾಗಿದೆ. ವಿಶೇಷವೆಂದರೆ ಈ ದೇವಸ್ಥಾನದ ಮುಖ್ಯ ದೇವರು ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ 12 ಘಂಟೆಗಳಷ್ಟು ಕಾಲ ಮಾತ್ರವೆ ದರುಶನ ಕೊಡುತ್ತಾನೆ ಮಿಕ್ಕ ಸಮಯವೆಲ್ಲ ಸಂಪೂರ್ಣವಾಗಿ ಚಂದನದಿಂದ ಅಲಂಕರಿಸಲ್ಪಟ್ಟಿರುತ್ತಾನೆ.

ಚಿತ್ರಕೃಪೆ: Sureshiras

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+