Search
  • Follow NativePlanet
Share
ಮುಖಪುಟ » ಸ್ಥಳಗಳು» ಮಂತ್ರಾಲಯಂ

ದಕ್ಷಿಣದ ವೃಂದಾವನ: ಮಂತ್ರಾಲಯಂ

13

ಭಾರತದ ದಕ್ಷಿಣದಲ್ಲಿರುವ ರಾಜ್ಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮಂತ್ರಾಲಯ.  ತುಂಗಭದ್ರಾ ನದಿಯ ದಂಡೆಯ ಮೇಲೆ ಸ್ಥಾಪಿತವಾಗಿರುವ ಈ ಪಟ್ಟಣ ಕರ್ನಾಟಕದ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇದನ್ನು ಜನಪ್ರಿಯವಾಗಿ ಮಂಚಾಲೆ ಎಂತಲೂ ಕರೆಯುವದುಂಟು.

ಗುರು ರಾಘವೇಂದ್ರ ಸ್ವಾಮಿಯಿಂದ ರೂಪಿಸಲ್ಪಟ್ಟ ವೃಂದಾವನವಿರುವದರಿಂದ ಈ ಪಟ್ಟಣವು ತೆಲುಗರಲ್ಲಿ  ಅತ್ಯಂತ ಜನಪ್ರಿಯವಾಗಿದೆ. ಪರಮ ಪೂಜ್ಯ ಗುರುಗಳು, ಶ್ರೀ ಮಧ್ವಾಚಾರ್ಯರ ಅನುಯಾಯಿಗಳಾಗಿದ್ದು  ಮಧ್ವ ಪಂಥ ಪಾಲಕರಾಗಿದ್ದರು. ಗುರು ರಾಘವೇಂದ್ರ ಸ್ವಾಮಿ ಕಳೆದ 339 ವರ್ಷಗಳ ಕಾಲ ದಕ್ಷಿಣದ ಈ ವೃಂದಾವನದಲ್ಲಿ ವಾಸಿಸುತ್ತಿದ್ದು ಮುಂದಿನ 361 ವರ್ಷಗಳ ಕಾಲ ಈ  ಸ್ಥಳದಲ್ಲೇ ಇರುವರೆಂಬ ನಂಬಿಕೆ ಇಲ್ಲಿನ  ಸ್ಥಳೀಯರಿಗಿದೆ. ಗುರುಗಳು ವೃಂದಾವನ ಪ್ರವೇಶಿಸಿದ ಸಂದರ್ಭದಲ್ಲಿ ತಾವು ಇನ್ನು 700 ವರ್ಷಗಳ ಕಾಲ ಈ ಸ್ಥಳದಲ್ಲೇ ವಾಸಿಸುವದಾಗಿ ಪ್ರಕಟಿಸಿದ್ದರು ಎಂತಲೂ ನಂಬಲಾಗುತ್ತದೆ. ಈ ಕಾರಣಕ್ಕಾಗಿ, ಮಂತ್ರಾಲಯವು ದೇಶದ ಹಿಂದೂಗಳ ಪವಿತ್ರ ಪಟ್ಟಣವೆಂದು ಪರಿಗಣಿಸಲಾಗಿದೆ.

ಮಂತ್ರಾಲಯದಲ್ಲಿ ಆಸಕ್ತಿ ಹುಟ್ಟಿಸುವಂತಹ  ಸ್ಥಳಗಳೆಂದರೆ, ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನ, ಬಿಕ್ಷಾಲಯ ಮತ್ತು ಪಂಚಮುಖಿ ಆಂಜನೇಯ ದೇವಸ್ಥಾನ. ಮಂತ್ರಾಲಯದಲ್ಲಿ  ವಿಮಾನನಿಲ್ದಾಣವಿಲ್ಲ ಆದರೆ ರಸ್ತೆ ಮತ್ತು ರೈಲುಗಳ ಮೂಲಕ ಸುಲಭವಾಗಿ ಇಲ್ಲಿಗೆ ಬರಬಹುದು. ರೈಲ್ವೆ ನಿಲ್ದಾಣವು ನಗರದ ಕೇಂದ್ರದಿಂದ ಸುಮಾರು 16 ಕಿ.ಮಿ. ದೂರದಲ್ಲಿದೆ. ಮಂತ್ರಾಲಯ ತಲುಪಲು ಅನೇಕ ಸರ್ಕಾರಿ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳ ವ್ಯವಸ್ಥೆಯೂ ಇದೆ. ಪಟ್ಟಣವು ತನ್ನ ಭೌಗೋಳಿಕ ಸ್ಥಾನದಿಂದಾಗಿ ಉಷ್ಣವಲಯದ ಹವಾಗುಣವನ್ನು ಹೊಂದಿದ್ದು ಬಹಳ ಬಿಸಿ ಮತ್ತು ಶುಷ್ಕ ಬೇಸಿಗೆಯನ್ನೂ ಮತ್ತು ಅಷ್ಟೇನೂ ಚಳಿ ಇಲ್ಲದ ಚಳಿಗಾಲವನ್ನು ಅನುಭವಿಸುತ್ತದೆ.

ಮಂತ್ರಾಲಯಂ ಪ್ರಸಿದ್ಧವಾಗಿದೆ

ಮಂತ್ರಾಲಯಂ ಹವಾಮಾನ

ಉತ್ತಮ ಸಮಯ ಮಂತ್ರಾಲಯಂ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಂತ್ರಾಲಯಂ

  • ರಸ್ತೆಯ ಮೂಲಕ
    ಮಂತ್ರಾಲಯವು ರಸ್ತೆಗಳ ಮೂಲಕ ನೆರೆಯ ನಗರಗಳು ಮತ್ತು ಪಟ್ಟಣಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಆಂಧ್ರ ರಾಜ್ಯ ಸರ್ಕಾರವು ವಿವಿಧ ಭಾಗಗಳಿಂದ ಮಂತ್ರಾಲಯಕ್ಕೆ ಅನೇಕ ಬಸ್ಸುಗಳನ್ನು ಓಡಿಸುತ್ತದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸಹ, ಈ ಸ್ಥಳದ ಧಾರ್ಮಿಕ ಪ್ರಾಮುಖ್ಯತೆಯನ್ನು ಅರಿತು ಅನೇಕ ಬಸ್ಸುಗಳ ಸೌಲಭ್ಯಗಳನ್ನು ಒದಗಿಸಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮಂತ್ರಾಲಯಂ ರೋಡ ಎಂದು ಕರೆಯಲ್ಪಡುವ ಒಂದು ಪುಟ್ಟ ರೈಲ್ವೆ ನಿಲ್ದಾಣವು ಮಂತ್ರಾಲಯದಿಂದ 16 ಕಿಮೀ ದೂರದಲ್ಲಿದೆ. ಇದು ದೇಶದ ಇತರ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೇ ಚೆನೈ, ಕೊಲ್ಕತ್ತಾ, ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿಯಿಂದ ರೈಲುಗಳು ಈ ಮಾರ್ಗವಾಗಿ ಬರುತ್ತವೆ. ರೈಲ್ವೆ ನಿಲ್ದಾಣದಿಂದ ಪಟ್ಟಣಕ್ಕೆ ಬಸ್, ಟ್ಯಾಕ್ಸಿ ಅಥವಾ ಆಟೋ ತೆಗೆದುಕೊಂಡು ಬರಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಂತ್ರಾಲಯದಲ್ಲಿ ಯಾವುದೇ ವಿಮಾನ ನಿಲ್ದಾಣವಿಲ್ಲ. ಹತ್ತಿರದ ವಿಮಾನ ನಿಲ್ದಾಣವೆಂದರೆ ಹೈದರಾಬಾದ್ ನಲ್ಲಿರುವ ಶಂಶಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಭಾರತದ ವಿವಿಧ ಪ್ರಮುಖ ನಗರಗಳ ಹಾಗೂ ಪ್ರಪಂಚದಾದ್ಯಂತ ವಿವಿಧ ದೇಶಗಳ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಮಂತ್ರಾಲಯಂ ಗೆ ತಲುಪಲು 4000 ರೂಪಾಯಿಗಳ ವೆಚ್ಚದಲ್ಲಿ ಟ್ಯಾಕ್ಸಿಗಳು ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City