Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂತ್ರಾಲಯಂ » ಹವಾಮಾನ

ಮಂತ್ರಾಲಯಂ ಹವಾಮಾನ

ಅಕ್ಟೋಬರ್ ಹಾಗು ಫೆಬ್ರುವರಿ ತಿಂಗಳ ನಡುವಿನ ಕಾಲವು ಮಂತ್ರಾಲಯ ಬೇಟಿಗೆ ಸೂಕ್ತ ಸಮಯ ಎನ್ನಬಹುದು. ಈ ಸಮಯದಲ್ಲಿ ತಾಪಮಾನವು 30 ಡಿಗ್ರಿ ಸೆಲ್ಶಿಯಸ್ ಗಿಂತ ಹಿಚ್ಚಿರದೇ ಹವಾಮಾನವು ಆಹ್ಲಾದಕರವಾಗಿರುತ್ತದೆ. ಚಳಿಗಾಲದಲ್ಲಿ ಸೂರ್ಯನು ಅಷ್ಟೊಂದು ಮುನಿಸಿಕೊಳ್ಳಲಾರದೆ ಪ್ರಯಾಣಕ್ಕೆ ಸಹಕರಿಸುತ್ತಾನೆ.

ಬೇಸಿಗೆಗಾಲ

ಮಂತ್ರಾಲಯದಲ್ಲಿ ಬೇಸಿಗೆಯು ಅತ್ಯಂತ ಬಿಸಿ ಮತ್ತು ಶುಷ್ಕವಾಗಿರುತ್ತದೆ. ಬೇಸಿಗೆಯಲ್ಲಿ  ತಾಪಮಾನ 42 ಡಿಗ್ರಿ ಸೆಲ್ಶಿಯಸ್ ನಷ್ಟಿದ್ದು ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್, ಮೇ, ಜೂನ್ ಮತ್ತು ಜುಲೈ ವರೆಗೆ ಬೇಸಿಗೆಯ ಬಿಸಿ ಇರುತ್ತದೆ. ಬೇಸಿಗೆಯಲ್ಲಿ ಈ ಪ್ರದೇಶ ಒಣ ಹಾಗೂ ಬಿಸಿಲ ಬೇಗೆಯಿಂದ ಕೂಡಿದ್ದು ಪ್ರವಾಸಕ್ಕೆ ಅನುಕೂಲಕರವಲ್ಲದ ವಾತಾವರಣವಿರುತ್ತದೆ.

ಮಳೆಗಾಲ

ಸಾಮಾನ್ಯವಾಗಿ  ಜುಲೈನಲ್ಲಿ  ಆರಂಭವಾಗುವ ಮಳೆಗಾಲವು ಆಗಸ್ಟ್ ಮತ್ತು ಸೆಪ್ಟೆಂಬರ್ ವರೆಗೆ  ಮುಂದುವರೆಯುತ್ತದೆ. ಆದರೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿಯೂ ಸಣ್ಣನೆ ತುಂತುರು ಮಳೆ ಮುಂದುವರೆದುರುತ್ತದೆ. ಮಳೆಗಾಲದಲ್ಲಿಯೂ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಕ್ಕಿಂತ ಕಡಿಮೆಯಾಗದು.ಆದರೆ ತೇವಾಂಶದ ಮಟ್ಟಮಾತ್ರ ಹೆಚ್ಚಿರುತ್ತದೆ. ಮಂತ್ರಾಲಯದಲ್ಲಿ ಮಳೆಗಾಲವು ಮದ್ಯಮಗತಿಯಲ್ಲಿರುತ್ತದೆ.

ಚಳಿಗಾಲ

ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರುವರಿಗಳು ಚಳಿಗಾಲದ ತಿಂಗಳುಗಳಾಗಿದ್ದರೂ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಅತ್ಯಂತ ಹೆಚ್ಚು ಚಳಿ ಇರುತ್ತದೆ. ಆದಾಗ್ಯೂ, ಈ ಪ್ರದೇಶದ ಚಳಿಗಾಲವು ಅಷ್ಟೇನೂ ತಂಪು ಅಥವಾ ಶೀತದಿಂದ ಕೂಡಿರುವದಿಲ್ಲ. ಚಳಿಗಾಲದಲ್ಲಿ ಉಷ್ಣತೆ 25 ಡಿಗ್ರಿ ಸೆಲ್ಶಿಯಸ್ ಇರುತ್ತಿದ್ದು, ಅಷ್ಟೇನೂ ತಂಪೂ ಅಲ್ಲದೇ ಬಿಸಿಯೂ ಅಲ್ಲದೆ ಸೌಮ್ಯವಾಗಿರುತ್ತದೆ. ಚಳಿಗಾಲದಲ್ಲಿ ಮಂತ್ರಾಲಯವು ಮಧ್ಯಾಹ್ನ ಹಿತಕರವಾದ ಮತ್ತು ಸಂಜೆ ಆಹ್ಲಾದಕರವಾದ ವಾತಾವರಣವನ್ನು ಹೊಂದಿರುತ್ತದೆ.