Search
  • Follow NativePlanet
Share
» »ರೈಲ್ವೆ ಟಿಕೆಟ್ ಕನ್ಫರ್ಮ್ ಆಗಿಲ್ವಾ, ಈ ರೀತಿ ರದ್ದು ಮಾಡಿ ಐಆರ್‘ಸಿಟಿಸಿಯಿಂದ ಮರುಪಾವತಿ ಪಡೆಯಿರಿ…

ರೈಲ್ವೆ ಟಿಕೆಟ್ ಕನ್ಫರ್ಮ್ ಆಗಿಲ್ವಾ, ಈ ರೀತಿ ರದ್ದು ಮಾಡಿ ಐಆರ್‘ಸಿಟಿಸಿಯಿಂದ ಮರುಪಾವತಿ ಪಡೆಯಿರಿ…

ಕೊರೊನಾ ನಂತರ ಐಆರ್ ಸಿಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡುವವರ ಸಂಖ್ಯೆ ತುಸು ಹೆಚ್ಚಾಗಿದೆ. ಹೀಗೆ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಕೆಲವು ಬಾರಿ ನಿಮಗೆ ಏಕಕಾಲದಲ್ಲಿ ಹಲವಾರು ಜನರಿಗೆ ಕಾದಿರಿಸುವ ಸಂದರ್ಭ ಬರುತ್ತದೆ. ನಾವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದರೆ ಸಾಮಾನ್ಯವಾಗಿ ರೈಲ್ವೆ ಟಿಕೆಟ್ ಕಾಯ್ದಿರಿಸುತ್ತೇವೆ. ಆದರೆ ಕೆಲವೊಮ್ಮೆ ನಮ್ಮ ಯೋಜನೆಯಲ್ಲಿ ಬದಲಾವಣೆಯಿಂದಾಗಿ ನಾವು ನಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಬೇಕಾಗುತ್ತದೆ.

ಇಂತಹ ಸಮಯದಲ್ಲಿ ಯಾರಾದರೂ ಒಬ್ಬ ವ್ಯಕ್ತಿಯ ಟಿಕೆಟ್ ಅನ್ನು ರದ್ದುಗೊಳಿಸಲು ಬಯಸಿದರೆ ನೀವು ಅದನ್ನು ಹೇಗೆ ಮಾಡುತ್ತೀರಿ?. ಟಿಕೆಟ್ ರದ್ದುಗೊಳಿಸುವುದು ಸುಲಭವೇ. ಬಹುತೇಕರಿಗೆ ಈ ವಿಧಾನ ತಿಳಿದಿದೆ. ಆದರೆ ಆರಂಭಿಕರಿಗೆ ಸ್ವಲ್ಪ ಕಷ್ಟವಾಗಬಹುದು. ಆದ್ದರಿಂದ ಇಲ್ಲಿ ಟಿಕೆಟ್ ರದ್ದತಿಯನ್ನು ಹೇಗೆ ಮಾಡಲಾಗುತ್ತದೆ ಎಂಬ ಗೊಂದಲವಿರುವವರಿಗೆ ಮಾಹಿತಿ ಕೊಡಲಾಗಿದೆ ನೋಡಿ. ಜೊತೆಗೆ ರೈಲ್ವೆ ಟಿಕೆಟ್ ಕನ್ಫರ್ಮ್ ಆಗದಿದ್ದಾಗ ಈ ರೀತಿ ರದ್ದು ಮಾಡಿದರೆ ಐಆರ್ ಸಿಟಿಸಿ ಸಂಪೂರ್ಣ ದುಡ್ಡನ್ನು ಮರುಪಾವತಿ ಮಾಡುತ್ತದೆ.

ರೈಲ್ವೆ ಟಿಕೆಟ್ ಕೌಂಟರ್‌ಗಳಲ್ಲಿ ಅನುಮತಿಯಿಲ್ಲ

ಅಂದಹಾಗೆ ನೀವು 3-4 ಸೀಟ್‌ಗಳನ್ನು ಬುಕ್ ಮಾಡಿದ್ದು, 1 ಅಥವಾ 2 ಸೀಟ್‌ಗಳನ್ನು ಸಹ ರದ್ದುಗೊಳಿಸಬಹುದು. ಇ-ಟಿಕೆಟ್ ಅನ್ನು ರದ್ದುಗೊಳಿಸುವವರು ಐಆರ್ ಸಿಟಿಸಿ ಇ-ಟಿಕೆಟಿಂಗ್ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು. ಐಆರ್ ಸಿಟಿಸಿ ವೆಬ್‌ಸೈಟ್ ಚಾರ್ಟ್ ಸಿದ್ಧಪಡಿಸುವವರೆಗೆ ದೃಢೀಕರಿಸಿದ ಭಾರತೀಯ ರೈಲ್ವೆಯ ರೈಲ್ವೆ ಟಿಕೆಟ್ ಅನ್ನು ರದ್ದುಗೊಳಿಸುವ ಸೌಲಭ್ಯವನ್ನು ಒದಗಿಸುತ್ತದೆ. ಆದರೆ ರೈಲ್ವೆ ಟಿಕೆಟ್ ಕೌಂಟರ್‌ಗಳಲ್ಲಿ ಇ-ಟಿಕೆಟ್‌ಗಳ ರದ್ದತಿಯನ್ನು ಅನುಮತಿಸಲಾಗುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಐಆರ್ ಸಿಟಿಸಿ ಇ-ಟಿಕೆಟಿಂಗ್ ವೆಬ್‌ಸೈಟ್

ಐಆರ್ ಸಿಟಿಸಿ ಇ-ಟಿಕೆಟಿಂಗ್ ವೆಬ್‌ಸೈಟ್

ನೀವು ನಿಮ್ಮ ಟಿಕೆಟ್ ಅನ್ನು ರದ್ದುಗೊಳಿಸಲು ಬಯಸಿದರೆ ಕೇವಲ ಒಬ್ಬ ವ್ಯಕ್ತಿಯ ಐಆರ್ ಸಿಟಿಸಿ ಇ-ಟಿಕೆಟ್ ಅನ್ನು ರದ್ದುಗೊಳಿಸಲು ಹಂತ ಹಂತದ ಪ್ರೊಸೆಸರ್ ಇಲ್ಲಿದೆ. ಐಆರ್ ಸಿಟಿಸಿ ಇ-ಟಿಕೆಟಿಂಗ್ ವೆಬ್‌ಸೈಟ್ ತೆರೆಯಿರಿ ಮತ್ತು ಲಾಗಿನ್ ಪರದೆಯಲ್ಲಿ ಸರಿಯಾದ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಲಾಗಿನ್ ಮಾಡಿ. ಈ ರೀತಿಯಾಗಿ, ಬಳಕೆದಾರರು ಟಿಕೆಟ್ ರದ್ದತಿಯ ಮೇಲೆ ಸಂಪೂರ್ಣ ಮರುಪಾವತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

ರೈಲ್ವೆ ಟಿಕೆಟ್ ಅನ್ನು ರದ್ದುಗೊಳಿಸುವುದು ಹೇಗೆ?

ರೈಲ್ವೆ ಟಿಕೆಟ್ ಅನ್ನು ರದ್ದುಗೊಳಿಸುವುದು ಹೇಗೆ?

*ಈಗ ನಿರ್ದಿಷ್ಟ ಇ-ಟಿಕೆಟ್ ಅನ್ನು ರದ್ದುಗೊಳಿಸಲು, My Transactionಗೆ ಹೋಗಿ.

*ಈಗ ಮೈ ಅಕೌಂಟ್ ಮೆನುವಿನಲ್ಲಿ "ಬುಕ್ ಮಾಡಿದ ಟಿಕೆಟ್ ಇತಿಹಾಸ" ಲಿಂಕ್ ಅನ್ನು ಕ್ಲಿಕ್ ಮಾಡಿ.

*ಸೆಕ್ಷನ್ ನಲ್ಲಿ ನೀವು ಬುಕ್ ಮಾಡಿದ ಟಿಕೆಟ್‌ಗಳನ್ನು ನೋಡುತ್ತೀರಿ. ಈಗ ರದ್ದುಗೊಳಿಸಬೇಕಾದ ಟಿಕೆಟ್ ಅನ್ನು ಆಯ್ಕೆ ಮಾಡಿ ಮತ್ತು ಟಿಕೆಟ್ ರದ್ದುಗೊಳಿಸಿ (Cancel Ticket) ಕ್ಲಿಕ್ ಮಾಡಿ.

*ಟಿಕೆಟ್‌ಗಳನ್ನು ರದ್ದುಪಡಿಸಿದ ಪ್ರಯಾಣಿಕರ ಹೆಸರನ್ನು ಆಯ್ಕೆ ಮಾಡುವ ಮೂಲಕ ರದ್ದತಿಯನ್ನು ಪ್ರಾರಂಭಿಸಿ.

*ಈಗ ಪ್ರಯಾಣಿಕರ ಹೆಸರಿನ ಮೊದಲು ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿ ಮತ್ತು ಟಿಕೆಟ್ ರದ್ದುಗೊಳಿಸು (Cancel Ticket) ಬಟನ್ ಕ್ಲಿಕ್ ಮಾಡಿ.

*ರದ್ದತಿಯನ್ನು ಖಚಿತಪಡಿಸಲು ದೃಢೀಕರಣ ಪಾಪ್ ಮೇಲೆ ಕ್ಲಿಕ್ ಮಾಡಿ.

*ಯಶಸ್ವಿಯಾಗಿ ರದ್ದತಿಯಾದ ನಂತರ, ರದ್ದತಿ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಟಿಕೆಟ್ ಹಣವನ್ನು ನಿಮ್ಮ ಖಾತೆಗೆ ಎರಡು ಅಥವಾ ಮೂರು ದಿನದ ಬಳಿಕ ಮರುಪಾವತಿಸಲಾಗುತ್ತದೆ.

*ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್‌ನಲ್ಲಿ ನೀವು ದೃಢೀಕರಣ ಎಸ್ ಎಂ ಎಸ್ ಮತ್ತು ರದ್ದತಿ ಇಮೇಲ್ ಅನ್ನು ಸಹ ಸ್ವೀಕರಿಸುತ್ತೀರಿ.

*ಭಾಗಶಃ ರದ್ದತಿಯ ಸಂದರ್ಭದಲ್ಲಿ ನೀವು ಪ್ರಯಾಣಿಕರಿಗೆ ಪ್ರಯಾಣಿಸುವಾಗ ERS ಎಲೆಕ್ಟ್ರಾನಿಕ್ ರಿಸರ್ವೇಶನ್ ಸ್ಲಿಪ್‌ನ ತಾಜಾ ಮುದ್ರಣವನ್ನು ಪಡೆಯಬೇಕು ಎಂಬುದನ್ನು ಗಮನಿಸಬೇಕಾದ ಅಂಶವಾಗಿದೆ.

ತತ್ಕಾಲ್ ಟಿಕೆಟ್ ಬುಕ್ ಮಾಡ್ಬೋದು

ತತ್ಕಾಲ್ ಟಿಕೆಟ್ ಬುಕ್ ಮಾಡ್ಬೋದು

ಹಬ್ಬದ ಸೀಸನ್ ಶುರುವಾಗಿದೆ. ದಸರಾ ಮಗಿಯಿತು. ಈಗ ದೀಪಾವಳಿ ಬರುತ್ತೆ, ತುಂಬಾ ಜನ ಊರಿಗೆ ಹೊರಡಲು ತಯಾರಿ ಕೂಡ ನಡೆಸಿರುತ್ತಾರೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು, ಕೆಲವು ದಿನಗಳ ಹಿಂದೆ ಐಆರ್ ಸಿಟಿಸಿ ಪ್ರತ್ಯೇಕ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು. ಅದರ ಮೂಲಕ ನೀವು ಸುಲಭವಾಗಿ ತತ್ಕಾಲ್ ಟಿಕೆಟ್ ಗಳನ್ನು ಬುಕ್ ಮಾಡಬಹುದು. ಐಆರ್ ಸಿಟಿಸಿ ತತ್ಕಾಲ್ ಟಿಕೆಟ್ ಬುಕಿಂಗ್‌ಗಾಗಿ Confirm Tatkal ಎಂಬ ಹೊಸ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.

ಡೌನ್ ಲೋಡ್ ಮಾಡಿಕೊಳ್ಳಿ..

ಡೌನ್ ಲೋಡ್ ಮಾಡಿಕೊಳ್ಳಿ..

ಹೊಸ ಅಪ್ಲಿಕೇಶನ್ ಮೂಲಕ ನೀವು ಯಾವುದೇ ಮಾರ್ಗದಲ್ಲಿ ಚಲಿಸುವ ರೈಲುಗಳಲ್ಲಿ ಇಂದು, ನಾಳೆ ಮತ್ತು ನಂತರದ ದಿನದ ತತ್ಕಾಲ್ ಕೋಟಾದ ಅಡಿಯಲ್ಲಿ ಲಭ್ಯವಿರುವ ಸೀಟುಗಳ ವಿವರಗಳನ್ನು ಸುಲಭವಾಗಿ ಬುಕ್ ಮಾಡಬಹುದು ಮತ್ತು ಪಡೆಯಬಹುದು. ಅಂದರೆ, ನೀವು ವಿವಿಧ ರೈಲು ಸಂಖ್ಯೆಗಳನ್ನು ನಮೂದಿಸುವ ಮೂಲಕ ಲಭ್ಯವಿರುವ ಸೀಟುಗಳನ್ನು ಹುಡುಕುವ ಅಗತ್ಯವಿಲ್ಲ. ಆ ಮಾರ್ಗದಲ್ಲಿ ಚಲಿಸುವ ಎಲ್ಲಾ ರೈಲುಗಳಲ್ಲಿ ಲಭ್ಯವಿರುವ ಟಿಕೆಟ್‌ಗಳ ವಿವರಗಳನ್ನು ನೀವು ಒಂದೇ ಬಾರಿಗೆ ಪಡೆಯುತ್ತೀರಿ. ಇದರ ನಂತರ ನೀವು ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಟಿಕೆಟ್‌ಗಳನ್ನು ಸುಲಭವಾಗಿ ಬುಕ್ ಮಾಡಬಹುದು. ನೀವು ಈ ಅಪ್ಲಿಕೇಶನ್ ಅನ್ನು Google Play Store ಅಥವಾ IRCTC ಅಪ್ಲಿಕೇಶನ್ ಮೂಲಕ ಡೌನ್‌ಲೋಡ್ ಮಾಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X