Search
  • Follow NativePlanet
Share
» »ವಿಮಾನ ಪ್ರಯಾಣದಲ್ಲಿ ಮಾಡಲೇಬಾರದ ಕೆಲಸಗಳಿವು.....

ವಿಮಾನ ಪ್ರಯಾಣದಲ್ಲಿ ಮಾಡಲೇಬಾರದ ಕೆಲಸಗಳಿವು.....

ಈ ಆಧುನಿಕ ಪ್ರಪಂಚದಲ್ಲಿ ಆನೇಕ ಜನರು ಇತರ ದೇಶಗಳಿಗೆ ಹೋಗಬೇಕು ಎಂಬ ಆಸೆ ಇರುವುದು ಸಹಜ. ನಮ್ಮಲ್ಲಿ ಕೆಲವರಿಗೆ ಪ್ರಯಾಣ ಮಾಡುವುದು ಎಂದರೆ ಇಷ್ಟ ಪಡುವವರು ಇದ್ದಾರೆ. ನಾವು ಹೆಚ್ಚಾಗಿ ಬಸ್ಸುಗಳಲ್ಲಿ, ಕಾರುಗಳಲ್ಲಿ, ರೈಲಿನಲ್ಲಿ ಪ್ರಯಾಣ ಮಾಡುತ್ತಲೇ ಇರುತ್ತೇವೆ. ಆದರೆ ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಅತ್ಯಂತ ದೂರಕ್ಕೆ ತ್ವರಿತವಾಗಿ ಪ್ರಯಾಣ ಮಾಡಬೇಕು ಎಂದಾಗ ತಟ್ಟನೆ ನೆನಪಾಗುವುದು ವಿಮಾನಗಳು.

ಹಾಗಾಗಿಯೇ ಎಲ್ಲಾ ದೇಶದವರು ಈ ಸಾರಿಗೆ ಸಂಪರ್ಕವನ್ನು ಸಾಧಿಸಲು ಏರಪೋರ್ಟ್‍ಗಳ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಮೊದಲಬಾರಿಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಸಾಮಾನ್ಯವಾಗಿ ವಿಮಾನದಲ್ಲಿ ಹೇಗೆ ಇರಬೇಕು? ಎಂಬುದರ ಬಗ್ಗೆ ತಿಳಿಯದೇ ಇರಬಹುದು. ವಿಮಾನದಲ್ಲಿ ಏನು ಮಾಡಬೇಕು? ಏನು ಮಾಡಬಾರದು ಎಂಬ ಸಂಕ್ಷೀಪ್ತವಾದ ವಿವರವನ್ನು ಲೇಖನದ ಮೂಲಕ ತಿಳಿಯಿರಿ.

1.ಸಾಕ್ಸ್

1.ಸಾಕ್ಸ್

ವಿಮಾನದಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಪಾದಗಳಿಗೆ ಧರಿಸಿರುವ ಸಾಕ್ಸ್‍ಅನ್ನು ತೆಗೆಯಬಾರದು. ಏಕೆಂದರೆ ಹೆಚ್ಚು ಕಾಲ ಸಾಕ್ಸ್ ಅನ್ನು ಧರಿಸಿಕೊಳ್ಳುವುದರಿಂದ ನಮ್ಮ ಪಾದಗಳ ಮೇಲೆ ಸೆಕೆಯು ಮಾರ್ಪಾಟಾಗಿ ಒಂದು ರೀತಿಯ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಆ ಸೆಕೆ ಮತ್ತು ಬ್ಯಾಕ್ಟೀರಿಯಾವನ್ನು ಸಾಕ್ಸ್ ಹಾಗೆ ಹಿಡಿದುಕೊಂಡಿರುತ್ತದೆ. ಇಷ್ಟೇ ಅಲ್ಲ ವಿಮಾನದಲ್ಲಿ ಸಾಕ್ಸ್ ಅನ್ನು ತೆಗೆಯುವುದರಿಂದ ಒಂದು ರೀತಿಯ ದುರ್ವಾಸನೆ ಏರ್ಪಟ್ಟು, ಪಕ್ಕದ ಪ್ರಯಾಣಿಕರಿಗೂ ಕೂಡ ತೊಂದರೆಯಾಗಬಹುದು.

2.ಕಾಲುಗಳನ್ನು ಮುಂದಿನ ಸೀಟಿಗೆ ಇಡುವುದು

2.ಕಾಲುಗಳನ್ನು ಮುಂದಿನ ಸೀಟಿಗೆ ಇಡುವುದು

ಹಲವಾರು ಮಂದಿ ತಮ್ಮ ಕಾಲುಗಳನ್ನು ಮುಂದಿನ ಸೀಟಿಗೆ ತಾಗಿಸಿ ಇಡುತ್ತಾರೆ. ಹೀಗೆ ಮಾಡಲೇಬಾರದು. ಹೀಗೆ ಮಾಡುವುದರಿಂದ ಎದುರಿನ ವ್ಯಕ್ತಿಗಳಿಗೆ ತೊಂದರೆಯಾಗುವುದೇ ಅಲ್ಲದೇ, ನಿಮ್ಮದು "ಕೆಟ್ಟ ನಡವಳಿಕೆ" ಎಂದು ದೂರು ಕೂಡ ನೀಡುತ್ತಾರೆ.

3.ಅವರ ಸೀಟ್‍ಗಳನ್ನು ಹಿಂದೆ ಇಡುವುದು

3.ಅವರ ಸೀಟ್‍ಗಳನ್ನು ಹಿಂದೆ ಇಡುವುದು

ಹಲವಾರು ಮಂದಿ ಮಾಡುವ ದೊಡ್ಡ ತಪ್ಪು ಏನೆಂದರೆ, ಅವರ ಸೀಟ್‍ಗಳನ್ನು ಹಿಂದೆಗೆ ತಳ್ಳಿ ಮಲಗುವುದು. ಅದೇನೂ ನಮ್ಮ ಅನುಕೂಲಕ್ಕೆ ಅಲ್ಲವೇ ಏರ್‍ಲೈನ್ ಅವರು ಪೂಶ್ ಬ್ಯಾಕ್ ಸೀಟ್ ಅನ್ನು ನೀಡುವುದು. ಏಕೆ ಹಿಂದೆ ತಳ್ಳಬಾರದು ಎಂದು ಅಂದುಕೊಳ್ಳುತ್ತೀದ್ದೀರಾ? ನಿಮ್ಮ ಸೀಟ್ ಅನ್ನು ಪುಶ್ ಮಾಡುವುರಲ್ಲಿ ತಪ್ಪೇನಿಲ್ಲ. ಆದರೆ ಏರೋಪ್ಲೇನ್‍ನಲ್ಲಿ ಹೆಚ್ಚು ಸಮಯ ಪ್ರಯಾಣ ಮಾಡುವ ಸಮಯದಲ್ಲಿ ಹಲವಾರು ಮಂದಿ ತಮ್ಮ ಆಹಾರಗಳನ್ನು ಟ್ರೆಯಲ್ಲಿ ತೆಗೆದಿಟ್ಟುಕೊಳ್ಳುತ್ತಾರೆ.

4.ವಿಮಾನದ ಪರಿಸರವನ್ನು ಹಾಳು

4.ವಿಮಾನದ ಪರಿಸರವನ್ನು ಹಾಳು

ಮುಂದಿನ ವ್ಯಕ್ತಿ ಅದನ್ನು ನೋಡದಯೇ, ಬಸ್ಸಿನಲ್ಲಿ ಇರುವ ಹಾಗೆ ತಮ್ಮ ಸೀಟನ್ನು ಹಿಂದಕ್ಕೆ ಪುಶ್ ಮಾಡಿದರೆ ಹಿಂದೆ ಕುಳಿತಿರುವವರ ಆಹಾರವೆಲ್ಲಾ ಕೆಳಗೆ ಚೆಲ್ಲಿ ವಿಮಾನದ ಪರಿಸರವನ್ನು ಹಾಳು ಮಾಡಿದ ಹಾಗೆ ಆಗುತ್ತದೆ. ಹಾಗಾಗಿ ವಿಮಾನದಲ್ಲಿ ತಮ್ಮ ಸೀಟ್ ಅನ್ನು ಪುಶ್ ಮಾಡುವ ಸಮಯದಲ್ಲಿ ಹಿಂದಿರುವ ವ್ಯಕ್ತಿಯನ್ನು ಮನವಿಯನ್ನು ಕೋರಬೇಕು.

5.ಮಧುರವಾದ ಹಾಡುಗಳನ್ನು ಕೇಳುವುದು

5.ಮಧುರವಾದ ಹಾಡುಗಳನ್ನು ಕೇಳುವುದು

ವಿಮಾನಯಾನ ಮಾಡುವ ಸಮಯದಲ್ಲಿ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇರುವುದರಿಂದ ಆನೇಕ ಮಂದಿ ಪ್ರಯಾಣಿಕರಿಗೆ ತಲೆ ನೋವು, ಸ್ವಲ್ಪ ಮೈಂಡ್ ಅಪ್‍ಸೇಟ್ ಆಗುತ್ತದೆ. ಆ ಸಮಯದಲ್ಲಿ ನಿಮ್ಮ ಮೊಬೈಲ್‍ನಲ್ಲಿ ಮಧುರವಾದ ಹಾಡುಗಳನ್ನು ಕೇಳುವುದು ಅಥವಾ ಗೇಮ್ಸ್‍ಗಳನ್ನು ಆಡುವುದು ಒಳ್ಳೆಯದು.

6.

6. "ಬ್ರೇಸ್"

ವಿಮಾನ ಪ್ರಯಾಣ ಮಾಡುವ ಸಮಯದಲ್ಲಿ ಅಲ್ಲಿನ ಏರ್ ಹಾಸ್ಟೇಸ್ ಹೇಳುವ ಎಲ್ಲಾ ಸೇಫ್ಟಿಯನ್ನು ತಪ್ಪದೇ ಅನುಸರಿಸಬೇಕು. ಅವರು ಪ್ರಯಾಣಿಕರು ಅನುಸರಿಸಲೇಬೇಕಾದ ಪದ್ಧತಿಯ ಬಗ್ಗೆ ಹಾಗು "ಬ್ರೇಸ್" ಎಂಬ ಪದವು ಕಿವಿಗೆ ಬಿದ್ದಾಗ ಪ್ರಯಾಣಿಕರು ಇರಬೇಕಾದ ಸ್ಥಿತಿ(ಪೋಜಿಷನ್) ಬಗ್ಗೆ ವಿವರಿಸುತ್ತಾರೆ. ಅವುಗಳನ್ನು ಶ್ರದ್ಧೆಯಾಗಿ ಕೇಳಿಸಿಕೊಳ್ಳಬೇಕು. ಹಾಗೆಯೇ ಅವರು ಹೇಳಿದಂತೆ ಮಾಡಬೇಕು. ಹಾಗೆ ಮಾಡದೇ ಇರುವ ಕಾರಣವಾಗಿ ನಿಮಗೆ ಅಲ್ಲದೇ ನಿಮ್ಮ ಪಕ್ಕದವರ ಪ್ರಾಣಕ್ಕೂ ತೊಂದರೆಯಾಗುವ ಸಂಭವವಿರುತ್ತದೆ.

7.ಗಾಜಿನ ಕಿಟಕಿ

7.ಗಾಜಿನ ಕಿಟಕಿ

ವಿಮಾನ ಪ್ರಯಾಣ ಮಾಡುವ ಸಮಯದಲ್ಲಿ ವಿಮಾನದಲ್ಲಿನ ಗಾಜಿನ ಕಿಟಕಿಯೇ ಆಗಲೀ, ಸೀಟಿನ ಕೆಳಗಿನ ಭಾಗವಾಗಲೀ ಅದಷ್ಟು ಮುಟ್ಟದೇ ಇರುವುದೇ ಒಳ್ಳೆಯದು. ಏಕೆಂದರೆ ಸಾಮಾನ್ಯವಾಗಿ ವಿಮಾನದ ಪ್ರಯಾಣ ಮಾಡುವಾಗ ಪರಿಸರ ಹೇಗೆ ಕಾಣುತ್ತದೆ ಎಂದು ಹಲವಾರು ಮಂದಿ ಹೊರಗೆ ನೋಡುತ್ತಾರೆ. ಹೀಗೆ ಮಾಡಬಾರದು ಎಂದು ಡಾಕ್ಟಾರ್ ಕೂಡ ಹೇಳುತ್ತಾರೆ.

8.ವಿಮಾನ ಸಿಬ್ಬಂದಿ

8.ವಿಮಾನ ಸಿಬ್ಬಂದಿ

ವಿಮಾನದಲ್ಲಿ ದೂರದ ಪ್ರಯಾಣ ಮಾಡುವುದು, ಅದರಲ್ಲಿ ನೂರಾರು ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ವಿಮಾನಗಳು ಹೆಚ್ಚು ಟ್ರಿಪ್‍ಗಳು ಹೋಗುವುದರಿಂದ ವಿಮಾನ ಸಿಬ್ಬಂದಿಗಳು ಅಲ್ಲಿನ ಗಾಜಿನ ಕಿಟಕಿಗಳನ್ನು ಸ್ವಚ್ಛವಾಗಿಡಲು ಅವಕಾಶವಿರುವುದಿಲ್ಲ. ಹಾಗಾಗಿ ಅಲ್ಲಿ ಪೂರ್ತಿಯಾಗಿ ಶುದ್ಧವಾಗಿರುವುದಿಲ್ಲ. ಪ್ರಯಾಣಿಕರ ಮುಖಾಂತರ ಬರುವ ಕೆಮ್ಮು, ಬ್ಯಾಕ್ಟೀರಿಯಾ ನಂತಹ ಹೆಚ್ಚಾಗಿ ಕಿಟಕಿಗಳ ಭಾಗದಲ್ಲಿ ಹಾಗೆಯೇ ಮೂಲೆ-ಮೂಲೆಗಳಲ್ಲಿ ಗಲೀಜು ಸೇರಿಕೊಂಡಿರುತ್ತದೆ.

9.ತೀವ್ರವಾದ ಅನಾರೋಗ್ಯಕ್ಕೆ

9.ತೀವ್ರವಾದ ಅನಾರೋಗ್ಯಕ್ಕೆ

ಅಂತಹ ಸ್ಥಳಗಳಲ್ಲಿ ಕೈ ಇಡುವುದರಿಂದ ತೀವ್ರವಾದ ಅನಾರೋಗ್ಯಕ್ಕೆ ಗುರಿಯಾಗುವ ಅವಕಾಶ ಹೆಚ್ಚಾಗಿರುತ್ತದೆ. ನೀವು ಯಾವುದನ್ನು ಮುಟ್ಟದೇ ಇದ್ದರೂ ಕೂಡ ಆಹಾರವನ್ನು ಸೇವಿಸುವ ಸಮಯದಲ್ಲಿ ಖಚಿತವಾಗಿ ಕೈಯನ್ನು ಶುಭ್ರಗೊಳಿಸುವುದು ಉತ್ತಮ ಎಂದು ಡಾಕ್ಟರ್ ಹೇಳುತ್ತಾರೆ.

10.ಮಕ್ಕಳು

10.ಮಕ್ಕಳು

ವಿಮಾನದ ಪ್ರಯಾಣ ಮಾಡುವ ಸಮಯದಲ್ಲಿ ಮಕ್ಕಳ ಬಗ್ಗೆ ಹೆಚ್ಚು ಶ್ರದ್ಧೆಯನ್ನು ತೆಗೆದುಕೊಳ್ಳಬೇಕು. ಏಕೆಂದರೆ ಮಕ್ಕಳು ಒಂದೇ ಸ್ಥಳದಲ್ಲಿ ಇರುವುದರಿಂದ ಮಕ್ಕಳಿಗೆ ಬೇಜಾರಾಗಿ ಹೆಚ್ಚು ಅಳುವುದು, ತೊಂದರೆ ನೀಡುವುದು ಮಾಡುತ್ತಾರೆ. ಹೀಗೆ ಮಾಡುವುದರಿಂದ ಮುಂದಿನ ಹಾಗು ಹಿಂದಿನ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ.

11.ಗೇಮ್ಸ್

11.ಗೇಮ್ಸ್

ಇದನ್ನು ತಪ್ಪಿಸಲು ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯಬೇಕು. ಅಷ್ಟೇ ಅಲ್ಲ ಮಕ್ಕಳಿಗೆ ಗೇಮ್ಸ್‍ಗಳನ್ನು ನೀಡಿ ಅವರು ಪ್ರಶಾಂತವಾಗಿರಿಸಲು ತಂದೆ-ತಾಯಿಗಳು ಪ್ರಯತ್ನ ಮಾಡಬೇಕು.

 12. ಮದ್ಯ

12. ಮದ್ಯ

ಆನೇಕ ಮಂದಿ ಪ್ರಯಾಣ ಮಾಡುವ ಸಮಯದಲ್ಲಿ ಮದ್ಯವನ್ನು ಸೇವಿಸುತ್ತಾರೆ. ವಿಮಾನದಲ್ಲಿ ಮದ್ಯವನ್ನು ಎಷ್ಟು ಕೇಳಿದರೆ, ಅಷ್ಟು ನೀಡುತ್ತಿದ್ದಾರೆ ಎಂದು ಕುಡಿದರೆ ಹೆಚ್ಚು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಏಕೆಂದರೆ ವಿಮಾನ ಪ್ರಯಾಣದಲ್ಲಿ ಸಾಧಾರಣವಾಗಿಯೇ ಕೆಲವು ಪ್ರಯಾಣಿಕರಿಗೆ ತಲೆ ತಿರುಗುತ್ತಿದ್ದಂತೆ ಅನುಭವವಾಗುತ್ತದೆ. ಆ ಸಮಯದಲ್ಲಿ ಮದ್ಯವನ್ನು ಸೇವಿಸದರೆ ಗಟ್ಟಿ-ಗಟ್ಟಿಯಾಗಿ ಕಿರುಚಿ ತಮ್ಮ ಪ್ರಯಾಣವೇ ಅಲ್ಲದೇ ಇತರರ ಪ್ರಯಾಣವನ್ನು ಕೂಡ ಹಾಳು ಮಾಡಿದಂತಾಗುತ್ತದೆ.

13.ಆರೆಸ್ಟ್

13.ಆರೆಸ್ಟ್

ವಿಮಾನದಲ್ಲಿ ಮಾಡಲೇಬಾರದ ಕೆಲಸವೇನೆಂದರೆ ಅದು ಜಗಳ. ಪಕ್ಕದವರ ಅಸಭ್ಯತೆಯಿಂದಾಗಿ ಜಗಳಕ್ಕೆ ಇಳಿಯುವುದು ಸಾಮಾನ್ಯವಾದ ಸಂಗತಿಯೇ. ಏಕೆಂದರೆ ಜಗಳ ಮಾಡುವ ವ್ಯಕ್ತಿಗಳನ್ನು ಗುರುತಿಸಿ. ಅಂಥಹವರ ಮೇಲೆ " ಬ್ಯಾನ್ " ಮಾಡಿ. ಜೀವನದಲ್ಲಿ ಎಂದಿಗೂ ವಿಮಾನ ಏರಬಾರದ ಹಾಗೆ ಮಾಡುತ್ತಾರೆ. ಅಷ್ಟೇ ಅಲ್ಲ ಅಂಥಹ ವ್ಯಕ್ತಿಗಳನ್ನು ಆರೆಸ್ಟ್ ಮಾಡಿ, ಕೋರ್ಟ್‍ನ ಮೆಟ್ಟಿಲು ಕೂಡ ಏರುವ ಸಂದರ್ಭ ಕೂಡ ಒದಗಬಹುದು.

14.ಅನಾರೋಗ್ಯ

14.ಅನಾರೋಗ್ಯ

ಅದಷ್ಟು ನಿಮಗೆ ಆರೋಗ್ಯ ಸಮಸ್ಯೆ ಇದ್ದರೆ ಕೆಲವು ದಿನಗಳ ಕಾಲ ವಿಮಾನ ಪ್ರಯಾಣವನ್ನು ಮುಂದೆ ಹಾಕುವುದು ಒಳ್ಳೆಯದು. ಏಕೆಂದರೆ ವಿಮಾನದಲ್ಲಿ ಇರುವ ಸಮಯದಲ್ಲಿ ಅನಾರೋಗ್ಯ ಮನುಷ್ಯ ಕೆಮ್ಮಿದರೂ, ತಕ್ಷಣ ಪಕ್ಕದ ಪ್ರಯಾಣಿಕನಿಗೆ ಪರಿಣಾಮ ಬೀರಿ ಅವರಿಗೂ ಕೂಡ ಅನಾರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ನೀವು ವಿಮಾನ ಪ್ರಯಾಣ ಮಾಡುವ ವಾರದ ಮೊದಲು ಆರೋಗ್ಯ ತಪಾಸಣೆ ಮಾಡಿಸುವುದು ಉತ್ತಮ.

15.ಸಿಬ್ಬಂದಿ

15.ಸಿಬ್ಬಂದಿ

ವಿಮಾನದಲ್ಲಿನ ಸಿಬ್ಬಂದಿಗಳಿಗೆ ಉತ್ತಮವಾದ ಸಂಬಂಧವನ್ನು ಹೊಂದಬೇಕು. ವಿಮಾನ ಸಿಬ್ಬಂದಿಗಳ ಜೊತೆಗೆ ಯಾವುದೇ ಕಾರಣಕ್ಕೂ ಜಗಳವನ್ನು ಇಟ್ಟುಕೊಳ್ಳಬಾರದು. ಆ ಸಿಬ್ಬಂದಿ ತಮ್ಮ ಪರಿಮಿತದ ಮೇರೆಗೆ ಅವರಿಗಿರುವ ಸೂಚನೆಯ ಮೇರೆಗೆ ಅಲ್ಲಿ ಕೆಲಸ ಮಾಡುತ್ತಾರೆ. ಹಾಗೆ ಮಾಡುವ ಸಮಯದಲ್ಲಿ ನಿಮ್ಮ ಮೇಲೆ ದೂರನ್ನು ನೀಡುತ್ತಾರೆ. ಹೀಗೆ ಮಾಡಿದರೆ ನಂತರದ ಸ್ಟಾಪ್‍ನಲ್ಲಿ ನಿಮಗೆ ಇಳಿಸಿ, ಕಾನೂನು ಪ್ರಕಾರದ ಶಿಕ್ಷೆಗಳನ್ನು ವಿಧಿಸುವ ಎಲ್ಲಾ ಅವಕಾಶಗಳಿರುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X