Search
  • Follow NativePlanet
Share
» »1850ರಲ್ಲಿ ನಮ್ಮ ಬೆಂಗಳೂರು ಹೇಗಿತ್ತು ಗೊತ್ತಾ?

1850ರಲ್ಲಿ ನಮ್ಮ ಬೆಂಗಳೂರು ಹೇಗಿತ್ತು ಗೊತ್ತಾ?

ಬೆಂಗಳೂರು ಸುತ್ತಾಡದವರೂ ಯಾರೂ ಇಲ್ಲ. ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರು ತನ್ನದೇ ಆದ ಮಹತ್ವವನ್ನು ಹೊಂದಿದೆ. ಈಗ ನಮ್ಮ ಬೆಂಗಳೂರು ಯಾವ ರೀತಿ ಇದೆ ಅನ್ನೋದು ನಮಗೆಲ್ಲರಿಗೂ ಗೊತ್ತು. ಆದರೆ 1850ನೇ ಇಸವಿಯಲ್ಲಿ ನಮ್ಮ ಈ ಬೆಂಗಳೂರು ಯಾವ ರೀತಿ ಇತ್ತು ಅನ್ನೋದು ಗೊತ್ತಿರಲಿಕ್ಕಿಲ್ಲ. ಈಗ ಇಷ್ಟೊಂದು ಅಭಿವೃದ್ಧಿ ಹೊಂದಿರುವ ಬೆಂಗಳೂರು ಆವಾಗ ಬ್ರಿಟಿಷರ ಕಾಲದಲ್ಲಿ ಹೇಗೆ ಕಾಣುತ್ತಿತ್ತು ಎನ್ನುವುದರ ಕೆಲವು ತುಣುಕು ಇಲ್ಲಿದೆ.

ಮೂರೇ ದಿನದ ಗೋವಾ ಟ್ರಿಪ್... ಬಾಡಿಗೆ ಬೈಕ್ ಪಡೆಯೋದನ್ನು ಮರೆಯಬೇಡಿ

ಕಬ್ಬನ್ ಪಾರ್ಕ್‌

ಕಬ್ಬನ್ ಪಾರ್ಕ್‌

PC: wikipedia

ಬೆಂಗಳೂರಿಗೆ ಚಿರಪರಿಚಿತರಾಗಿರುವವರಿಗೆ ಕಬ್ಬನ್ ಪಾರ್ಕ್‌ ಬಗ್ಗೆ ತಿಳಿದೇ ಇರುತ್ತದೆ. ಚಾಮರಾಜೇಂದ್ರ ಪಾರ್ಕ್ ಎಂದು ಕರೆಯಲ್ಪಡುವ 300 ಎಕರೆ ವಿಸ್ತೀರ್ಣದ ಕಬ್ಬನ್ ಪಾರ್ಕನ್ನು ಲಾರ್ಡ್ ಕಬ್ಬನ್‍ರವರು,1864ರಲ್ಲಿ ಸ್ಥಾಪಿಸಿದರು. ಇದು ಬೆಂಗಳೂರು ರೈಲ್ವೆ ಸ್ಟೇಷನ್‍ಗೆ ಕೇವಲ 5 ಕಿ. ಮೀ ದೂರದಲ್ಲಿದೆ. ಇದು

ಎಂಜಿ ರೋಡ್

ಎಂಜಿ ರೋಡ್

PC: wikipedia

ಬೆಂಗಳೂರಿನ ಅತ್ಯಂತ ಬ್ಯುಸಿ ನಗರಗಳಲ್ಲಿ ಎಂಜಿ ರೋಡ್ ಕೂಡಾ ಒಂದು. ಮಹಾತ್ಮಗಾಂಧಿ ರಸ್ತೆಯ ಒಂದು ಮಗ್ಗುಲಲ್ಲಿ ಟ್ರಿಂಟಿ ಸರ್ಕಲ್ ಇದ್ದರೆ ಇನ್ನೊಂದು ಬದಿಯಲ್ಲಿ ಅನಿಲ್ ಕುಂಬ್ಳೆ ಸರ್ಕಲ್ ಇದೆ. ಈ ರಸ್ತೆಯು ಅನೇಕ ಕಂಪನಿಗಳು, ರೆಸ್ಟೋರೆಂಟ್‌ಗಳಿಂದ ಕೂಡಿದೆ. ೧೯೪೮ರ ಫೆ. ೨೬ರಂದು ಈ ರಸ್ತೆಗೆ ಮಹಾತ್ಮಗಾಂಧಿ ರಸ್ತೆ ಎಂದು ಪುನನಾಮಕರಣ ಮಾಡಲಾಯಿತು.

ಲಾಲ್‌ಬಾಗ್

ಲಾಲ್‌ಬಾಗ್

PC: wikipedia

ಈ ಉದ್ಯಾನವನವನ್ನು ನಿರ್ಮಿಸಲು ಮೈಸೂರಿನ ಆಡಳಿತ ನಡೆಸುತ್ತಿದ್ದ ಹೈದರಾಲಿ ಸೂಚಿಸಿದ್ದನು. ಇದು ಪ್ರಸಿದ್ಧ ಗಾಜಿನ ಮನೆಯನ್ನು ಹೊಂದಿದೆ. ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಯದಲ್ಲಿ ಫಲ ಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತದೆ. ಇದಲ್ಲದೇ ಮತ್ಸ್ಯಾಗಾರ ಮತ್ತು ಕೆರೆಯನ್ನು ಹೊಂದಿದ್ದು ಬೆಂಗಳೂರಿನಲ್ಲಿರುವ ಒಂದು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ.

ಬೆಂಗಳೂರು ಅರಮನೆ

ಬೆಂಗಳೂರು ಅರಮನೆ

PC: wikipedia

ಬೆಂಗಳೂರು ಅರಮನೆಯು ಸದಾಶಿವನಗರ ಮತ್ತು ಜಯಮಹಲ್ ಮಧ್ಯದ, ನಗರದ ಹೃದಯ ಭಾಗವಾದ ಪ್ಯಾಲೇಸ್ ಗಾರ್ಡನನಲ್ಲಿದೆ. ಅರಮನೆ ಕೋಟೆಯ ಗೋಪುರಗಳು, ಕೋಟೆ ಮತ್ತು ಗೋಪುರಗಳನ್ನೊಳಗೊಂಡ ಟ್ಯೂಡರ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಯಿತು. ಒಳಾಂಗಣದಲ್ಲಿ ಸೊಗಸಾದ ಮರದ ಕೆತ್ತನೆಗಳು, ಹೂವಿನ ಅಲಂಕಾರ, ಸುಂದರ ಕಮಾನುಗಳು ಮತ್ತು ಸೂಕ್ಷ್ಮ ಕೆತ್ತೆನೆ ಒಳಗೊಂಡ ವರ್ಣಚಿತ್ರಗಳು ಮೇಲ್ಛಾವಣಿಯ ಮೇಲೆ ಅಲಂಕರಿಸಲಾಗಿತ್ತು. ಕಾಮಗಾರಿಯು 1862 ರಲ್ಲಿ ರೆವ್.ಗಾರೆಟ್ ಅವರಿಂದ ಪ್ರಾರಂಭವಾಯಿತು. ನಂತರ 1884 ರಲ್ಲಿ ಒಡೆಯರ್ ರಾಜವಂಶಸ್ಥರಾದ ಚಾಮರಾಜ ಒಡೆಯರ್ ಅವರಿಂದ ಇದು ಖರೀದಿಸಲ್ಪಟ್ಟಿತು.

ದರ್ಬಾರ ಹಾಲ್

ದರ್ಬಾರ ಹಾಲ್

PC: wikipedia

ರಾಜನು ಸಭೆ ನಡೆಸುತ್ತಿದ್ದ ವಿಶಾಲವಾದ ದರ್ಬಾರ ಹಾಲ್ ಅನ್ನು ಮೆಲ್ಮಹಡಿಯಲ್ಲಿ ಕಾಣಬಹುದು. ಅರಮನೆಯ ಒಳಗೊಡೆಗಳು ಗ್ರೀಕ್,ಡಚ್ ಮತ್ತು ಪ್ರಸಿದ್ಧನಾದ ರಾಜಾ ರವಿವರ್ಮನ ಚಿತ್ರಕಲೆಗಳಿಂದ ಅಲಂಕೃತಗೊಂಡಿದ್ದು ನೋಡಲು ಸುಂದರವಾಗಿವೆ.

ಬೆಂಗಳೂರು ಕೋಟೆ

ಬೆಂಗಳೂರು ಕೋಟೆ

PC: wikipedia

ಚಿಕ್ಕಪೇಟೆ ಸುತ್ತಾಡಿರುವವರು ಬೆಂಗಳೂರು ಕೋಟೆಯನ್ನು ನೋಡಿಯೇ ಇರುವರು. ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ ಕೆಂಪೇಗೌಡರು ಬೆ೦ಗಳೂರಿನಲ್ಲಿ 1537ರಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ನಂತರ 1761ರಲ್ಲಿ ಹೈದರ ಅಲ್ಲಿ ಮಣ್ಣಿನ ಕೋಟೆಯ ಬದಲಿಗೆ ಕಲ್ಲಿನ ಕೋಟೆಯನ್ನು ಕಟ್ಟಿದರು. ಅದು ನಾಲ್ಕು ಮೈಲಿ ಸುತ್ತಳತೆಯ, ನಾಲ್ಕು ಬತೇರಿಯ, ಒಂಬತ್ತು ದ್ವಾರಗಳ ಅಂಡಾಕಾರದ ಕೋಟೆ. ಹದಮಾಡಿದ ಮಣ್ಣಿನ ಹೆಂಟೆಗಳಿಂದ ನಿರ್ಮಿಸಿದ್ದು. ಒಳ ಹಾಗೂ ಹೊರಭಾಗದಲ್ಲಿ ದಿಂಡುಗಲ್ಲಿನ ಒತ್ತಾಸೆ. ಆ ಕಾಲಕ್ಕೆ ಅದು ಬಯಲು ಸೀಮೆಯ ದೊಡ್ಡ ಕೋಟೆ.

Read more about: bangalore india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more