Search
  • Follow NativePlanet
Share
» »ಅಗೋಚರ ಶಕ್ತಿಗಳ ವಾಸಸ್ಥಾನಗಳಿವು...

ಅಗೋಚರ ಶಕ್ತಿಗಳ ವಾಸಸ್ಥಾನಗಳಿವು...

By Sowmyabhai

ನಮ್ಮ ಭಾರತ ದೇಶದಲ್ಲಿ ಅನೇಕ ಅಗೋಚರವಾದ ಶಕ್ತಿಗಳು ಇರುವ ತಾಣಗಳಿವೆ. ಆ ತಾಣಗಳೆಲ್ಲಾ ಅತ್ಯಂತ ಭಯಾನಕತೆಯನ್ನು ಹೊಂದಿದೆ. ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯಗಳಿಂದ ಶ್ರೀಮಂತವಾಗಿರುವ ಭಾರತವು ಪ್ರಸ್ತುತ ಆಧುನಿಕರಣ, ಜಾಗತೀಕರಣದತ್ತ ಸಾಗುತ್ತಿದ್ದರೂ ಇಲ್ಲಿ ಕಂಡುಬರುವ ಮೌಢ್ಯಗಳಿಗೇನೂ ಕಮ್ಮಿಯಿಲ್ಲ.

ಹೆಚ್ಚಿನವರಿಗೆ ಭೂತ-ಪಿಶಾಚಗ್ರಸ್ಥ ಸ್ಥಳಗಳಿಗೆ ತೆರಳುವುದೆಂದರೆ ಬಹಳ ಇಷ್ಟ . ಇಂತಹ ಸ್ಥಳಗಳಿಗೆ ಪ್ರಪಂಚದಲ್ಲೇನೂ ಕೊರತೆಯಿಲ್ಲ. ಅದರಂತೆ ಭಾರತದಲ್ಲೂ ಸಹ ಈ ರೀತಿಯ ಭಯಾನಕ ಹಿನ್ನಿಲೆಯುಳ್ಳ, ಅಸ್ವಾಭಾವಿಕ ಶಕ್ತಿಗಳ ಪ್ರಭಾವವಿರುವ ಸಾಕಷ್ಟು ಕುತೂಹಲಕಾರಿ ಸ್ಥಳಗಳಿವೆ.

ಹಾಗಾದರೆ ಬನ್ನಿ ಆ ಸ್ಥಳಗಳು ಯಾವುವು? ಎಂಬುದನ್ನು ಸಂಕ್ಷೀಪ್ತವಾಗಿ ನೇಟಿವ್ ಪ್ಲಾನೆಟ್‍ನ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

1.ಭಾನಗಡ್ ಕೋಟೆ

1.ಭಾನಗಡ್ ಕೋಟೆ

PC: Arindambasu2

ಭಾನಗಡ್ ರಾಜಸ್ಥಾನ ರಾಜ್ಯದ ಅಲ್ವಾರ್ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಇಲ್ಲಿರುವ ಭಾನಗಡ್ ಕೋಟೆಯಲ್ಲಿ ಆತ್ಮಗಳಿವೆಯೆಂದು ಹೇಳಲಾಗುತ್ತದೆ. ರಾಜಸ್ಥಾನದ ಅಧಿಕೃತ ಪ್ರವಾಸಿ ತಾಣವಾಗಿದ್ದರೂ ಸಹ ಈ ಕೋಟೆಯಲ್ಲಿ ಸೂರ್ಯಾಸ್ತದ ನಂತರ ಹಾಗು ಸೂರ್ಯೊದಯದ ಮುಂಚೆ ಯಾರಿಗೂ ಪ್ರವೇಶಿಸಲು ಅನುಮತಿಯಿಲ್ಲ. ಇದರ ಹಿಂದಿರುವ ಸ್ವಾರಸ್ಯಕರ ಕಥೆ: ಹಿಂದೆ ಈ ರಾಜ್ಯದಲ್ಲಿ ರತ್ನಾವತಿ ಎಂಬ ಸುಂದರ ರಾಜಕುವರಿಯಿದ್ದಳು.

ಇದೆ ಪ್ರದೇಶದಲ್ಲಿದ್ದ ತಾಂತ್ರಿಕನೊಬ್ಬ ಈಕೆಯನ್ನು ತುಂಬ ಪ್ರೀತಿಸುತ್ತಿದ್ದ ಹಾಗು ಮದುವೆ ಮಾಡಿಕೊಳ್ಳಲು ಬಯಸಿದ್ದ. ಆದರೆ ಇದು ಅಸಾಧ್ಯವಗಿದ್ದುದರಿಂದ ಮಾಟಮಂತ್ರಗಳ ಮೂಲಕ ಆಕೆಯನ್ನು ಪಡೆಯಲು ಪ್ರಯತ್ನಿಸಿದ. ಇದರ ಸುಳಿವು ರಾಜಕುಮಾರಿಗೆ ಗೊತ್ತಾಗಿ ಅವನ ಪ್ರಾಣ ಕಳೆದುಕೊಳ್ಳಬೇಕಾಯಿತು. ಆದರೆ ಸಾಯುವ ಮುನ್ನ ಈ ಕೋಟೆಗೆ ಶಾಪವನ್ನಿತ್ತು ಸತ್ತ. ಅಂದಿನಿಂದ ಇಲ್ಲಿ ಆತ್ಮಗಳು ನೆಲೆಸಿವೆ ಎಂದು ಹೇಳಲಾಗುತ್ತದೆ.

2.ನಿಮತಲಾ ಸ್ಮಶಾನ ಘಾಟ್

2.ನಿಮತಲಾ ಸ್ಮಶಾನ ಘಾಟ್

PC:YOUTUBE

ನಿಮತಲಾ ಬರ್ನಿಂಗ್ ಘಾಟ್ ಕೊಲ್ಕತ್ತಾದ ಅತ್ಯಂತ ಹಳೆಯ ಘಾಟ್‍ಗಳಲ್ಲಿ ಒಂದಾಗಿದೆ. ಇಲ್ಲಿ ಅನೇಕ ಮಾಂತ್ರಿಕರು ಸ್ಮಶಾನ ಕಾಳಿಯನ್ನು ಆರಾಧಿಸಲು ಹಾಗು ಕ್ಷುದ್ರ ಪೂಜೆಗಳನ್ನು ಮಾಡಲು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಸ್ಥಳೀಯರು ಆ ತಾಯಿಯ ಹೆಸರನ್ನು ದೊಡ್ಡದಾಗಿ ಹೇಳಬಾರದು ಎಂದು ನಂಬುತ್ತಾರೆ. ಸುಟ್ಟ ದೇಹದ ಮಾಂಸವನ್ನು ಇಲ್ಲಿನ ಮಾಂತ್ರಿಕರು, ಅಘೋರಿಗಳು ಸೇವಿಸುತ್ತಾರೆ. ನಿಗೂಢ ಶಕ್ತಿಗಳನ್ನು ತಮ್ಮೊಳಗೆ ಸೃಷ್ಟಿ ಮಾಡಿಕೊಳ್ಳುವ ಸಲುವಾಗಿ ಈ ಆಚರಣೆಗಳನ್ನು ಮಾಡುತ್ತಾರೆ.

3.ಶನಿವಾರವಾಡಾ

3.ಶನಿವಾರವಾಡಾ

PC: Ramakrishna Reddy

ಶನಿವಾರವಾಡಾ ಪುಣೆಯಲ್ಲಿರುವ ಮತ್ತೊಂದು ಐತಿಹಾಸಿಕ ಸ್ಥಳ. ಸಾಕಷ್ಟು ಪ್ರವಾಸಿಗರಿಂದ ನಿತ್ಯವೂ ಇದು ಭೇಟಿ ನೀಡಲ್ಪಡುತ್ತದೆ. ಮರಾಠಾ ಸಾಮ್ರಾಜ್ಯದ ಪೇಶ್ವೆಗಳು ವಾಸಿಸುತ್ತಿದ್ದ ಈ ಕೋಟೆಯು ಪಿಶಾಚಗ್ರಸ್ಥವಾಗಿದೆ ಎಂದು ಹೇಳಲಾಗುತ್ತದೆ. ಇಂದಿಗೂ ಕೆಲ ಸಮಯಗಳಲ್ಲಿ ರಾತ್ರಿಯ ಹೊತ್ತು ಬಾಲಾಜಿ ಬಾಜೀರಾವ್ ಮಗನಾಗಿದ್ದ ನಾರಾಯಣ ರಾವನ ಆಕ್ರಂದದ ಧ್ವನಿ ಕೇಳಿ ಬರುತ್ತದೆ ಎನ್ನಲಾಗಿದೆ. ಈ ಒಂದು ಕೋಟೆಯಲ್ಲೆ ನಾರಾಯಣ ರಾವನನ್ನು ಅಟ್ಟಾಡಿಸಿಕೊಂಡು ಕೊಲ್ಲಲಾಗಿತ್ತೆನ್ನಲಾಗಿದೆ. "ಕಾಕಾ ಮಲಾ ಬಚಾವ್" ಎಂದು ಧ್ವನಿ ಒಮ್ಮೊಮ್ಮೆ ಇಲ್ಲಿ ಕೇಳಿ ಬರುತ್ತದಂತೆ! ಶನಿವಾರವಾಡಾದ ಘೋರ ರಹಸ್ಯ.

4.ರಬೀಂದ್ರ ಸರೋಬರ್ ಮೆಟ್ರೋ ನಿಲ್ದಾಣ

4.ರಬೀಂದ್ರ ಸರೋಬರ್ ಮೆಟ್ರೋ ನಿಲ್ದಾಣ

PC:YOUTUBE

ಆನಂದ ನಗರದಲ್ಲಿ ಮೆಟ್ರೋ ನಿಲ್ದಾಣವನ್ನು ನೋಡುವುದು ಸರ್ವೇ ಸಾಮಾನ್ಯವಾದ ಸಂಗತಿ. ಈ ಜಾಗವು ನಗರದ 50% ರಷ್ಟು ಆತ್ಮಹತ್ಯೆ ನಡೆಯುವ ಸ್ಥಳವೆಂಬ ಕುಖ್ಯಾತಿಯನ್ನು ಪಡೆದಿದೆ. ಮೆಟ್ರೋ ರೈಲುಗಳ ಸುಗಮ ಚಾಲನೆಯಲ್ಲಿರುವ ನಿಲ್ದಾಣದ ಒಳಗೆ ಒಂದು ಉನ್ನತ-ವೋಲ್ಟೇಜ್ ಶಕ್ತಿ ರೇಖೆಯನ್ನು ಹೊಂದುವ ಈ ನಿಲ್ದಾಣವು ನಗರದ ಆತ್ಮಹತ್ಯಾ ಕೇಂದ್ರವಾಗಿ ಮಾರ್ಪಟ್ಟಿದೆ.

ಈಗ ಈ ನಿಲ್ದಾಣದ ಒಳಗಿನ ಸ್ಥಳದಲ್ಲಿ ಕೆಲವೊಮ್ಮೆ ಅಪರಾತ್ರಿಯ ಸಮಯದಲ್ಲಿ ಕೆಲವು ಅಸ್ಪಸ್ಟವಾದ ಬಿಳಿ ಆಕಾರಗಳು ಇಲ್ಲಿ ಗೋಚರಿಸುತ್ತವೆ ಎಂಬುದನ್ನು ಕಣ್ಣಾರೆ ಕಂಡ ಕೆಲವು ಜನರು ಒಪ್ಪಿಕೊಳ್ಳುತ್ತಾರೆ. ಕೆಲವು ವರ್ಷಗಳ ಹಿಂದೆ, ಇಲ್ಲಿಯ ರೈಲ್ವೇ ಹಳಿಯ ಉದ್ದಕ್ಕೂ ವಿಚಿತ್ರ ರೀತಿಯ ಬಿಳಿ ಬಟ್ಟೆಯಿಂದ ಮುಚ್ಚಿರುವ ಕೆಲವು ಆಕಾರಗಳು ಕಂಡುಬರುತ್ತವೆ ಎಂಬುದನ್ನು ರೈಲಿನ ಚಾಲಕರು ಹೇಳುತ್ತಾರೆ ಮತ್ತು ರೈಲುಗಳನ್ನು ನಿಲ್ಲಿಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ.

5.ಡುಮಾಸ್ ಕಡಲ ತೀರ

5.ಡುಮಾಸ್ ಕಡಲ ತೀರ

PC: Marwada

ಅರೇಬಿಯನ್ ಸಮುದ್ರದ ಈ ಕಡಲ ತೀರವು ಗುಜರಾತ್ ರಾಜ್ಯದ ಸುರತ್ ನಗರದಿಂದ ನೈರುತ್ಯ ದಿಕ್ಕಿಗೆ ಸುಮಾರು 21 ಕಿ.ಮೀ ಗಳಷ್ಟು ದೂರದಲ್ಲಿದೆ. ಒಂದು ಉತ್ತಮ ಪ್ರವಾಸಿ ಆಕರ್ಷಣೆಯಾಗಿರುವ ಇದು ಪಿಶಾಚಗ್ರಸ್ತ (ಹಾಂಟೆಡ್) ಕೂಡ ಆಗಿದೆ ಎಂದು ಹೇಳಲಾಗುತ್ತದೆ. ಮಧ್ಯರಾತ್ರಿಯ ಸಮಯದಲ್ಲಿ ಕಡಲ ತೀರದ ಒಂದು ನಿರ್ದಿಷ್ಟ ಜಾಗದಲ್ಲಿ ಆತ್ಮಗಳ ಕಾಟವಿದೆಯೆಂದು ಹೇಳಲಾಗುತ್ತದೆ. ಎಷ್ಟೊ ಜನರು ಇಲ್ಲಿಂದ ಅದೃಶ್ಯರಾಗಿದ್ದು ಮರಳಿ ಬಂದೆ ಇಲ್ಲ ಎಂತಲೂ ಹೇಳಲಾಗುತ್ತದೆ. ಹಿಂದೊಮ್ಮೆ ಇಲ್ಲಿ ಶವಗಳ ದಹನಕ್ರಿಯೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದ್ದು ಆ ಆತ್ಮಗಳು ಇಲ್ಲಿ ಸುತ್ತಾಡುತ್ತಿರುತ್ತವೆ ಎನ್ನಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more