» »ಚಿತೆಯ ಭಸ್ಮದಲ್ಲಿ ಹೋಲಿ ಆಡ್ತಾರೆ ಇಲ್ಲಿಯ ಜನ!

ಚಿತೆಯ ಭಸ್ಮದಲ್ಲಿ ಹೋಲಿ ಆಡ್ತಾರೆ ಇಲ್ಲಿಯ ಜನ!

Written By: Rajatha

ಇಡೀ ಭಾರತದಲ್ಲಿ ಹೋಳಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಾಗೆಯೇ ಕಾಶಿಯಲ್ಲೂ ಹೋಲಿಯನ್ನು ಆಚರಿಸುವುದಕ್ಕೆ ವಿಶೇಷ ಮಹತ್ವವಿದೆ. ವಿಶ್ವನಾಥನಿಗಾಗಿಯೇ ಪ್ರಖ್ಯಾತವಾಗಿರುವ ಕಾಶಿಯಲ್ಲಿ ಉರಿಯುತ್ತಿರುವ ಚಿತೆಗಳ ನಡುವೆ ಹೋಳಿ ಆಡೋದು ಇಲ್ಲಿನ ಪರಂಪರೆಯಾಗಿದೆ. ಇದು ಬಹಳ ಹಿಂದಿನಿಂದಲೂ ನಡೆಯುತ್ತಾ ಬಂದಿದೆ.

ಮಣಿಕರ್ಣಿಕ ಘಾಟ್‌ನಲ್ಲಿ ನಡೆಯುತ್ತೇ ಭಸ್ಮದ ಹೋಳಿ

ಮಣಿಕರ್ಣಿಕ ಘಾಟ್‌ನಲ್ಲಿ ನಡೆಯುತ್ತೇ ಭಸ್ಮದ ಹೋಳಿ

ಕಾಶಿಯ ಪ್ರಸಿದ್ಧ ಮಣಿಕರ್ಣಿಕ ಘಾಟ್‌ನಲ್ಲಿ ಢಮರು ಹಾಗೂ ಹರ ಹರ ಮಹದೇವ ಉದ್ಘೋಷದ ನಡುವೆ ಪಾನ್ ಹಾಗೂ ಬಾಂಗ್‌ ಜೊತೆಗೆ ಚಿತೆಯಲ್ಲಿನ ಭಸ್ಮವನ್ನು ತೆಗೆದುಕೊಂಡು ಒಬ್ಬರು ಇನ್ನೊಬ್ಬರ ಮೇಲೆ ಹಚ್ಚುತ್ತಾ ಹೋಳಿಯನ್ನು ಆಚರಿಸುತ್ತಾರೆ. ಈ ವಿಶೇಷ ಹೋಳಿ ಆಚರಣೆಯನ್ನು ನೋಡಲು ದೇಶ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಇದು ಇಡೀ ವಿಶ್ವದಲ್ಲಿ ಬರೀ ಕಾಶಿಯಲ್ಲೇ ಕಾಣಲು ಸಿಗುತ್ತದೆ.

ಏಕಾದಶಿಯ ಮರುದಿನ ಭಸ್ಮದ ಹೋಲಿಯನ್ನು ಆಡಲಾಗುತ್ತದೆ.

ಏಕಾದಶಿಯ ಮರುದಿನ ಭಸ್ಮದ ಹೋಲಿಯನ್ನು ಆಡಲಾಗುತ್ತದೆ.

ಬಣ್ಣದ ಏಕಾದಶಿಯ ಮರುದಿನ ಬಾಬಾ ಸ್ಮಶಾನ್ ನಾಥ್‌ ಚಿತೆಗೆ ಆರತಿ ಎತ್ತುವ ಮೂಲಕ ಈ ಭಸ್ಮದ ಹೋಳಿಯನ್ನು ಪ್ರಾರಂಭಿಸಲಾಗುತ್ತದೆ. ಡೋಲು ಹಾಗೂ ಢಮರುಗದ ಜೊತೆಗೆ ಇಡೀ ಸ್ಮಶಾನ ಹರ್ ಹರ್ ಮಹಾದೇವ್ ಎನ್ನುವ ಘೋಷದಿಂದ ಕೂಡಿರುತ್ತದೆ.

ವಿಶ್ವನಾಥನ ದರ್ಬಾರ್‌ನಲ್ಲಿ ಹೋಳಿ ಶುರುವಾಗುತ್ತದೆ

ವಿಶ್ವನಾಥನ ದರ್ಬಾರ್‌ನಲ್ಲಿ ಹೋಳಿ ಶುರುವಾಗುತ್ತದೆ

ವಿಶ್ವನಾಥನ ದರ್ಬಾರ್‌ನಿಂದ ಹೋಲಿಯನ್ನು ಆಡಲಾಗುತ್ತದೆ. ಹೋಳಿ ಇಲ್ಲಿ ಬಹಳ ಮುಖ್ಯವಾದುದು ಯಾಕೆಂದರೆ ಬರೀ ಭಸ್ಮವನ್ನೇ ಹೋಳಿಯ ಬಣ್ಣವನ್ನಾಗಿ ಬಳಸಲಾಗುತ್ತದೆ. ಯಾಕೆಂದರೆ ಶಿವನಿಗೆ ಭಸ್ಮವೆಂದರೆ ಅತೀ ಪ್ರೀಯವಾದುದು.

ಮಸಣದ ಹೋಳಿ ಎಂದೇ ಪ್ರಸಿದ್ಧವಾಗಿದೆ

ಮಸಣದ ಹೋಳಿ ಎಂದೇ ಪ್ರಸಿದ್ಧವಾಗಿದೆ

ಕಾಶಿಯ ಈ ಹೋಳಿಯನ್ನು ಮಸಣದ ಹೋಳಿ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಚಿತೆಯ ಬೂದಿಯನ್ನೇ ಬಳಸಲಾಗುತ್ತದೆ. ಈ ಹೋಳಿಯನ್ನು ಆಡುವವರ ಜೊತೆ ಸ್ವತಃ ಶಿವನೇ ಹೋಳಿ ಆಡುತ್ತನೇ ಎನ್ನುವ ನಂಬಿಕೆ ಇಲ್ಲಿಯ ಜನರದ್ದು.