Search
  • Follow NativePlanet
Share
» »ಕರ್ನಾಟಕ ಭಾರತದ ಪ್ರವಾಸಿ ತಾಣವಾಗಿದೆ

ಕರ್ನಾಟಕ ಭಾರತದ ಪ್ರವಾಸಿ ತಾಣವಾಗಿದೆ

ಭಾರತದ ನೈರುತ್ಯ ಭಾಗದಲ್ಲಿರುವ ಕರ್ನಾಟಕವು ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿದ್ದು, ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಐಟಿ ಕೇಂದ್ರ ಬಿಂದುವೂ ಆಗಿರುವ ರಾಜಧಾನಿ ಬೆಂಗಳೂರು ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಮಹತ್ವವನ್ನು ತಂದು ಕೊಟ್ಟಿದೆ. ಇವೆಲ್ಲವು ಬೆಂಗಳೂರಿನಲ್ಲಿರುವ ಕಾರಣದಿಂದಾಗಿ ಪ್ರವಾಸೋದ್ಯಮವು ಉತ್ತಮವಾದ ರೆಸಾರ್ಟ್ ಗಳು ಹೋಂ ಸ್ಟೇ ಗಳನ್ನು ರಾಜ್ಯದಾದ್ಯಂತ ತೆರೆಯಲು ಉತ್ತಮ ಅವಕಾಶ ಮಾಡಿಕೊಟ್ಟಿದುದಲ್ಲದೆ ಉತ್ತಮವಾದ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಿಕೊಡಲೂ ಸಹಕಾರಿಯಾಗಿದೆ.

ಕರ್ನಾಟಕವು ಭೌಗೋಳಿಕವಾಗಿ ಕರಾವಳಿ ಭಾಗ, ಗುಡ್ದಗಾಡು ಅಥವಾ ಮಲೆನಾಡು ಎಂದು ವಿಭಾಗಮಾಡಲಾಗಿದೆ ಇದು ಪಶ್ಚಿಮ ಘಟ್ಟಗಳು ಮತ್ತು ಬಯಲು ಸೀಮೆಗಳನ್ನೊಳಗೊಂಡಿದ್ದು ಉತ್ತರ ಮತ್ತು ಮತ್ತು ದಕ್ಷಿಣ ಭಾಗಗಳಾಗಿ ವಿಂಗಡಿಸಲಾಗಿದೆ.

ಹವಾಮಾನ

ಕರ್ನಾಟಕದಲ್ಲಿ ಮುಖ್ಯವಾಗಿ ಬೇಸಿಗೆ, ಮಾನ್ಸೂನ್, ನಂತರದ ಮಾನ್ಸೂನ್ ಮಳೆಗಾಲ ಮತ್ತು ಚಳಿಗಾಲ ಹೀಗೆ ಒಂದು ವರ್ಷದಲ್ಲಿ ನಾಲ್ಕು ಋತುಗಳನ್ನು ಹೊಂದಿದೆ. ಅಕ್ಟೋಬರ್-ಡಿಸೆಂಬರ್‌ನಿಂದ ಮಾನ್ಸೂನ್ ನಂತರ ಮತ್ತು ಜನವರಿಯಿಂದ ಫೆಬ್ರವರಿವರೆಗಿನ ಚಳಿಗಾಲವು ಭೇಟಿ ನೀಡಲು ಅತ್ಯಂತ ಆಹ್ಲಾದಕರ ಸಮಯವಾಗಿದೆ.

Mangalore festival

ಭಾಷೆಗಳು

ಕನ್ನಡವು ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿದೆ. ತುಳು, ಕೊಡವ ಮತ್ತು ಕೊಂಕಣಿ ಇವು ಇನ್ನಿತರ ಸ್ಥಳೀಯ ಭಾಷೆಗಳಾಗಿವೆ. ಅಲ್ಲದೆ ರಾಷ್ಟ್ರೀಯ ಭಾಷೆ ಹಿಂದಿಯನ್ನೂ ಸಹ ಸ್ಥಳಿಯರು ಮಾತನಾಡುತ್ತಾರೆ. ಕರ್ನಾಟಕದಲ್ಲಿರುವ ಐಟಿ ಕ್ಷೇತ್ರದ ಬೆಳವಣಿಗೆಯಿಂದಾಗಿ ಇತರ ರಾಜ್ಯಗಳಿಂದಲೂ ಜನರು ಉದ್ಯೋಗಕ್ಕಾಗಿ ವಲಸೆ ಬಂದಿರುವುದರಿಂದ ರಾಜ್ಯದಲ್ಲಿ ಈಗ ತಮಿಳು ತೆಲುಗು ಮಲೆಯಾಳಂ ಭಾಷೆಗಳನ್ನೂ ಮಾತನಾಡುವವರನ್ನು ಇಲ್ಲಿ ಕಾಣಬಹುದಾಗಿದೆ ಅಲ್ಲದೆ ಕರ್ನಾಟಕದಲ್ಲಿ ಇಂಗ್ಲೀಷ್ ಭಾಷೆಯನ್ನು ವ್ಯಾಪವಾಗಿ ಮಾತಾಡುತ್ತಾರೆ ಎಂಬುದನ್ನು ಹೇಳಬೇಕಾಗಿಯೇ ಇಲ್ಲ.

ಕರ್ನಾಟಕ ಪ್ರವಾಸೋದ್ಯಮ

ಮೂವತ್ತು ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ರಾಜ್ಯ ವು ಪ್ರವಾಸೋದ್ಯಮಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ಅಲ್ಲದೆ ಸಾಹಲಿ ಅನ್ವೇಷಕರಾಗಲಿ, ಅಥವಾ ಸಾಮಾನ್ಯ ಪ್ರಯಾಣಿಕನಾಗಲಿ ಎಲ್ಲಾ ತರಹದ ಪ್ರವಾಸ ಪ್ರಿಯರಿಗೆ ರಾಜ್ಯವು ಹಲವಾರು ತರಹದ ರಮಣೀಯ ಮತ್ತು ಕುತೂಹಲಭರಿತ ಪ್ರವಾಸೀ ತಾಣಗಳನ್ನು ಒದಗಿಸುತ್ತದೆ.

ಹಸಿರು ಹುಲ್ಲುಗಾವಲುಗಲು, ಅದ್ಭುತ ಕಣಿವೆಗಳು ಮುಂತಾದ ರಮಣೀಯ ಸ್ಥಳಗಳನ್ನೊಳಗೊಂಡ ಕೂರ್ಗ್ ಭಾರತದ ಸ್ಕಾಟ್ ಲ್ಯಾಂಡ್ ಎಂಬ ಹೆಸರನ್ನು ಪಡೆದಿದ್ದು, ಈ ಗಿರಿಧಾಮ ಪ್ರದೇಶವು ಕರ್ನಾಟಕ ಪ್ರವಾಸೋದ್ಯಮದ ಪ್ರಮುಖ ಭಾಗವಾಗಿದೆ. ಕರ್ನಾಟಕದ ಕಾಫಿನಾಡೆನಿಸಿದ ಚಿಕ್ಕಮಗಳೂರು, ಧುಮುಕುವ ಜಲಪಾತಗಳನ್ನೊಳಗೊಂಡ ಕೆಮ್ಮಣ್ಣುಗುಂಡಿ, ಹಚ್ಚ ಹಸಿರಿನಿಂದ ಕೂಡಿದ ಕುದುರೆಮುಖ, ಇವೆಲ್ಲವನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯೂ ಸಹ ಸುಂದರ ಹಾಗೂ ರಮಣೀಯ ಗಿರಿಧಾಮಗಳನ್ನು ಹೊಂದಿದೆ.

ಸುಂದರವಾದ ಕರಾವಳಿ ಪ್ರದೇಶವನ್ನು ಒಳಗೊಂಡ ಮಂಗಳೂರು ಪ್ರವಾಸಿಗರನ್ನು ಹೆಚ್ಚಿನ ಮಟ್ಟದಲ್ಲಿ ಆಕರ್ಷಿಸುವುದಲ್ಲದೆ ಇದರ ಸುತ್ತ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಉಡುಪಿ ಕೃಷ್ಣ ದೇವಸ್ಥಾನ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿ ಶಾರದ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮುಂತಾದ ರಾಜ್ಯದ ಪ್ರಮುಖ ಯಾತ್ರಾ ಕೇಂದ್ರಗಳಿವೆ ಇವೆಲ್ಲವುಗಳನ್ನು ಒಳಗೊಂಡ ಮಂಗಳೂರು ರಜಾದಿನಗಳನ್ನು ಕಳೆಯಲು ಪ್ರಮುಖವಾದ ಸ್ಥಳವಾಗಿದೆ ಹೀಗೆ ಕರವಳಿಯೂ ಕೂಡ ಕರ್ನಾಟಕ ಪ್ರವಾಸೋದ್ಯಮಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ.

ಮರವಂತೆ ಬೈಂದೂರು, ಮಲ್ಪೆ, ಕಾರವಾರದಂತಹ ಕಡಲತೀರಗಳೂ ಸುಂದರವಾದ ಕರಾವಳಿಯ ಕೆಲವು ಉದಾಹರಣೆಯಾಗಿದೆ.

ಕರ್ನಾಟಕ ರಾಜ್ಯವು ತನ್ನಲ್ಲಿ ಅಸಂಖ್ಯಾತ ಐತಿಹಾಸಿಕ ಸ್ಥಳಗಳನ್ನು ತನ್ನಲ್ಲಿ ಹೊಂದಿದ್ದು ಇದು ಪ್ರವಾಸೋದ್ಯಮಕ್ಕೆ ಒಂದು ಪ್ರಮುಖವಾದ ಅಂಶವಾಗಿದೆ. ಗತಕಾಲದ ಸಾವಿರಾರು ಕಥೆಗಳನ್ನು ಹೇಳುವ ಮತ್ತು ಶಿಲ್ಪಕಲಾ ಅದ್ಭುತಗಳನ್ನು ತನ್ನಲ್ಲಿ ಹೊಂದಿರುವ ಕರ್ನಾಟಕದ ಮೈಸೂರು, ಬಾದಾಮಿ, ಹಂಪಿ, ಬೇಲೂರು, ಹಳೆಬೀಡು, ಶ್ರವಣಬೆಳಗೊಳ ಇತ್ಯಾದಿ., ಇವು ಪ್ರವಾಸೋದ್ಯಮಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುತ್ತದೆ.

ಸಾಹಸ ಪ್ರಿಯರಿಗೆ ಕರ್ನಾಟಕದಲ್ಲಿ ಹಲವಾರು ಸಾಹಸ ಚಟುವಟಿಕೆಗನ್ನೊಳಗೊಂಡ ಅಲ್ಲಲ್ಲಿ ಸಾಕಷ್ಟು ಸ್ಥಳಗಳಿವೆ. ಕಾವೇರಿ ಮೀನುಗಾರಿಕೆ ಶಿಬಿರಗಳು-ಭೀಮೇಶ್ವರಿ, ಗಾಳಿಬೋರ್ ಮತ್ತು ದೊಡ್ಡಮಕಲಿ ಸುಂದರವಾದ ಮೀನುಗಾರಿಕೆ ಅನುಭವವನ್ನು ನೀಡುತ್ತವೆ. ಸಾವನದುರ್ಗ, ಅಂತರಗಂಗೆ, ಶಿವಗಿರಿ, ರಾಮನಗರ, ಮುಂತಾದೆಡೆ ರಾಕ್ ಕ್ಲೈಂಬಿಂಗ್ ಮತ್ತು ಟ್ರೆಕ್ಕಿಂಗ್ ಗೆ ಪ್ರಿಯರು ಭೇಟಿ ನೀಡುತ್ತಾರೆ. ಹೊನ್ನೆಮರಡು, ಶಿವಗಂಗೆ, ಶಿವನಸಮುದ್ರ, ಸಂಗಮ ಮುಂತಾದೆಡೆ ಬೋಟಿಂಗ್, ರಿವರ್ ರಾಫ್ಟಿಂಗ್, ಕೊರಾಕಲ್ ರೈಡ್ ಮತ್ತಿತರ ನೀರಿನ ಚಟುವಟಿಕೆಗಳೊಂದಿಗೆ ಮನರಂಜನೆಗಳನ್ನು ನೀಡಲಾಗುತ್ತದೆ.

ವನ್ಯಜೀವಿಗಳು ಕರ್ನಾಟಕದ ಪ್ರಸಿದ್ಧ ಹುಲಿ ಸಂರಕ್ಷಿತ ಪ್ರದೇಶವಾದ ಬಂಡೀಪುರದಂತಹ ಸ್ಥಳಗಳಿಗೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕಬಿನಿ ಮತ್ತು ನಾಗರಹೊಳೆ ಆನೆಗಳನ್ನು ಹೊಂದಿದ್ದು, ಬಿ ಆರ್ ಹಿಲ್ಸ್, ದಾಂಡೇಲಿ ಮತ್ತು ಭದ್ರಾ ವನ್ಯಜೀವಿ ಅಭಯಾರಣ್ಯಗಳು ತಮ್ಮ ವನ್ಯಜೀವಿ ಮತ್ತು ಅರಣ್ಯದಿಂದ ಸಂತೋಷಪಡುತ್ತವೆ.

ಬೆಂಗಳೂರು ತನ್ನ ವೈವಿಧ್ಯಮಯ ಸಂಸ್ಕೃತಿ, ಐಟಿ ಕಂಪನಿಗಳು, ಮಾಲ್ ಗಳು ಇತ್ಯಾದಿಗಳನ್ನು ಒಳಗೊಂಡ ಮೆಟ್ರೋ ಪಾಲಿಟನ್ ನಗರವು ಒಂದೆಡೆಯಾದರೆ ಇನ್ನೊಂದೆಡೆ ಮೈಸೂರು ಮಂಗಳೂರಿನಂತಹ ಸ್ಥಳಗಳೂ ಜನರನ್ನು ಆಕರ್ಷಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ.

ರಜೆಯ ಅಗತ್ಯಗಳಿಗೆ ಅನುಗುಣವಾಗಿ ಕರ್ನಾಟಕದ ವಿವಿಧ ಸ್ಥಳಗಳನ್ನು ಮೇಲೆ ವರ್ಗೀಕರಿಸಿ ನೀಡಲಾಗಿದೆ.

Read more about: mysore udupi badami hampi belur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X