Search
  • Follow NativePlanet
Share
» »ಗ್ವಾಲಿಯರ್ ಕೋಟೆಯ ಐತಿಹಾಸಿಕ ಸೊಬಗು: ಒಮ್ಮೆ ಭೇಟಿ ನೀಡಲೇಬೇಕಾದ ತಾಣ

ಗ್ವಾಲಿಯರ್ ಕೋಟೆಯ ಐತಿಹಾಸಿಕ ಸೊಬಗು: ಒಮ್ಮೆ ಭೇಟಿ ನೀಡಲೇಬೇಕಾದ ತಾಣ

ಗ್ವಾಲಿಯರ್ 8 ನೇ ಶತಮಾನದ ಅತ್ಯಂತ ಪ್ರಾಚೀನವಾದ ಕೋಟೆಯಾಗಿದೆ. ಈ ಕೋಟೆಯ ಒಳಭಾಗದಲ್ಲಿ ಹಲವಾರು ಪ್ರವಾಸಿತಾಣಗಳಿವೆ. ಈ ಕೋಟೆ ಒಂದು ಐತಿಹಾಸಿಕವಾದ ಕೋಟೆಯಾಗಿದ್ದು, ಹಲವಾರು ರಾಜರು ಈ ಕೋಟೆಯನ್ನು ಆಳಿದ್ದಾರೆ. ಇಂಥಹ ಹೆಸರಾಂತ ಕೋಟೆಯು ಇರುವುದು ಮಧ್

ಕೋಟೆ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹದು. ಕೋಟೆಗಳಲ್ಲಿ ಮುಖ್ಯವಾಗಿ ಪ್ರಸಿದ್ಧಿಯನ್ನು ಪಟೆದಿರುವ ಕೋಟೆಯನ್ನು ಕಾಣಬೇಕು ಎಂಬ ಬಯಕೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಅಂತಹ ಕೋಟೆಗಳಲ್ಲಿ ಅತಿ ಮುಖ್ಯವಾದುದು ಗ್ವಾಲಿಯರ್ ಕೋಟೆ.

ಗ್ವಾಲಿಯರ್ 8 ನೇ ಶತಮಾನದ ಅತ್ಯಂತ ಪ್ರಾಚೀನವಾದ ಕೋಟೆಯಾಗಿದೆ. ಈ ಕೋಟೆಯ ಒಳಭಾಗದಲ್ಲಿ ಹಲವಾರು ಪ್ರವಾಸಿತಾಣಗಳಿವೆ. ಈ ಕೋಟೆ ಒಂದು ಐತಿಹಾಸಿಕವಾದ ಕೋಟೆಯಾಗಿದ್ದು, ಹಲವಾರು ರಾಜರು ಈ ಕೋಟೆಯನ್ನು ಆಳಿದ್ದಾರೆ. ಇಂಥಹ ಹೆಸರಾಂತ ಕೋಟೆಯು ಇರುವುದು ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ ಗ್ವಾಲಿಯರ್ ಕೋಟೆ ಇದೆ.

ಪ್ರಸ್ತುತ ಲೇಖನದ ಮೂಲಕ ಐತಿಹಾಸಿಕವಾಗಿ ಮಹತ್ವವನ್ನು ಪಡೆದಿರುವ ಗ್ವಾಲಿಯರ್ ಕೋಟೆಯ ಬಗ್ಗೆ ತಿಳಿಯೋಣ.

ಸುರಜ್ ಸೇನ

ಸುರಜ್ ಸೇನ

ಸುರಜ್ ಸೇನ ಎಂಬ ರಾಜನು ಭಯಾನಕ ರೋಗವಾದ ಕುಷ್ಟ ರೋಗದಿಂದ ಬಳಲುತ್ತಿದ್ದನು. ಒಮ್ಮೆ ಈ ಕೋಟೆಯ ಸಮೀಪದಲ್ಲಿ "ಸನ್ ಟ್ಯಾಂಕ್"ನಲ್ಲಿನ ನೀರನ್ನು ಕುಡಿದನು. ಆ ನೀರನ್ನು ಕುಡಿದ ನಂತರ ಸುರಜ್ ಸೇನನಿಗೆ ಸಂಪೂರ್ಣವಾಗಿ ಗುಣವಾಯಿತು.


PC:DAN

ಕೋಟೆಯ ಸೌಂದರ್ಯ

ಕೋಟೆಯ ಸೌಂದರ್ಯ

ಕೋಟೆಯು ಅತ್ಯಂತ ಸುಂದರವಾಗಿದೆ. ಇಷ್ಟೇ ಅದರೂ ರಾಜರ ಆಳ್ವಿಕೆಯಲ್ಲಿ ಮೇರೆದ ಕೋಟೆಯಲ್ಲವೇ?. ಈ ಕೋಟೆಯು ಸುಮಾರು 15 ಮೀಟರ್‍ಗಳಷ್ಟು ಎತ್ತರವಿರುವ ಗೋಡೆಗಳನ್ನು ಹಾಗೂ ಮಾನವ ನಿರ್ಮಿತ ಬಂಡೆಗಳನ್ನು ಇಲ್ಲಿ ಕಾಣಬಹುದಾಗಿದೆ.


PC:Varun Shiv Kapur

ಏನಿದೆ?

ಏನಿದೆ?

ಗ್ವಾಲಿಯರ್ ಕೋಟೆಯಲ್ಲಿ ನೋಡಬೇಕಾಗಿರುವುದು ಸಾಕಷ್ಟಿದೆ. ಕೋಟೆಯ ಎಡಭಾಗದಲ್ಲಿ ಪುರಾತತ್ವ ಇಲಾಖೆಯ ವಸ್ತು ಸಂಗ್ರಾಹಾಲಯ, ಮ್ಯೂಸಿಯಂ, ನೀರಿನ ಪೆವಿಲಿಯನ್ ಮೊಗಲರ ಆಳ್ವಿಕೆಯ ಸಮಯದಲ್ಲಿದ್ದ ಸಂಗೀತ ಪ್ರದರ್ಶನಕ್ಕೆ ಮೀಸಲಿಡಲಾಗಿದೆ.


PC:DAN

ರಾಜರು

ರಾಜರು

ಈ ಕೋಟೆಯಲ್ಲಿ ಹಲವಾರು ಪ್ರಸಿದ್ಧವಾದ ರಾಜರು ಆಳ್ವಿಕೆ ನಡೆಸಿದ್ದಾರೆ. ಇವರೆಲ್ಲರು ಕೂಡ ಕಲಾ ಪೋಷಕರಾಗಿದ್ದರು. ಇಲ್ಲಿನ ವಸ್ತು ಸಂಗ್ರಹಾಲಯವು ಅತ್ಯಂತ ಸುಂದರವಾಗಿದೆ. ವಸ್ತು ಸಂಗ್ರಹಾಲಯದಲ್ಲಿ 2 ಆಸಕ್ತಿದಾಯಕ ಫಲಕಗಳನ್ನು ಕಾಣಬಹುದಾಗಿದೆ.


PC:DAN

ಉಲ್ಲೇಖ

ಉಲ್ಲೇಖ

ಈ ವಸ್ತು ಸಂಗ್ರಹಾಲಯದಲ್ಲಿ ಹಿಂದೂ ಧರ್ಮದ ದೇವತೆಯಾದ ಮಹಾವಿಷ್ಣು ಅವತಾರ ಹಾಗೂ ಇನ್ನೊಂದು ಜೈನ ತೀರ್ಥಕಂರ ಕುರಿತು ಉಲ್ಲೇಖಗಳನ್ನು ಆ ಫಲಕಗಳಲ್ಲಿ ಕಾಣಬಹುದಾಗಿದೆ. ಇಲ್ಲಿ ಭಿನ್ನವಾದ ಮಹಾವಿಷ್ಣುವಿನ ಮೂರ್ತಿಯನ್ನು ಕಾಣಬಹುದಾಗಿದೆ.

PC:Tom Maloney

8 ನೇ ಶತಮಾನ

8 ನೇ ಶತಮಾನ

ಈ ಗ್ವಾಲಿಯರ್ ಕೋಟೆಯ ಇತಿಹಾಸಕ್ಕೆ ಬಂದರೆ, ಈ ಕೋಟೆಯನ್ನು ಸುಮಾರು 8 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಇದೊಂದು ದೊಡ್ಡ ವೈವಿದ್ಯಮಯವಾದ ಹಾಗೂ ಸಾಂಸ್ಕøತಿಕ ಪರಂಪರೆಯನ್ನು ಹೊಂದಿರುವ ಸಾಮ್ರಾಜ್ಯಶಾಹಿತ್ವವಾಗಿದೆ.


PC:Tom Maloney

ಆಳ್ವಿಕೆ

ಆಳ್ವಿಕೆ

ಈ ಐತಿಹಾಸಿಕವಾದ ಕೋಟೆಯನ್ನು ಹಲವಾರು ರಾಜ ಮನೆತನಗಳೇ ಅಲ್ಲದೇ ಬ್ರಿಟೀಷರು ಕೂಡ ಈ ಪ್ರದೇಶವನ್ನು ಆಳ್ವಿಕೆ ನಡೆಸಿದ್ದಾರೆ. ಹಾಗಾಗಿ ನಗರದ ಆನೇಕ ಸ್ಥಳಗಳಲ್ಲಿ ಸುಂದರವಾದ ಕಟ್ಟಡಗಳನ್ನು ನಿರ್ಮಿಸಿದರು.

ವಿಶೇಷವೆನೆಂದರೆ ಮೊಗಲ್ ಚಕ್ರವರ್ತಿಯಾದ ಬಾಬರ್ ಈ ಕೋಟೆಯ ಬಗ್ಗೆ ಉಲ್ಲೇಖಿಸಿದ್ದಾನೆ. ಅದೆನೆಂದರೆ " ಹಿಂದ್ ಕೋಟೆಯಲ್ಲಿನ ಹಾರದ ಮುತ್ತು" ಎಂದು ವರ್ಣಿಸಿದ್ದಾನೆ.

PC:Varun Shiv Kapur

ಅರಮನೆ

ಅರಮನೆ

ಗ್ವಾಲಿಯರ್ ಕೋಟೆಯ ಒಳಭಾಗದಲ್ಲಿ ಮ್ಯಾನ್ ಮಂದಿರ್ ಅರಮನೆ ಹಾಗೂ ಎರಡನೇ ಉಪ ಅರಮನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಕೋಟೆಯ ಮೊದಲ ಭಾಗವನ್ನು ಆರಂಭಿಕ ತೋಮರ್ ಆಡಳಿತದಲ್ಲಿ ನಿರ್ಮಿಸಲಾಯಿತು. 2 ನೇ ಭಾಗದಲ್ಲಿ ವಸ್ತುಸಂಗ್ರಹಾಲಯ ಹಾಗೂ ಅರಮನೆಗಳಿವೆ.


PC:DAN

ಹಿಂದೂ ರಾಜ್

ಹಿಂದೂ ರಾಜ್

1556 ರಲ್ಲಿ ಆಗ್ರಾ ಮತ್ತು ದೆಹಲಿಯಲ್ಲಿ ಅಕ್ಬರ್ ಸೈನಿಕ ಪಡೆಗಳನ್ನು ಸೋಲಿಸಿದ ನಂತರ ಉತ್ತರ ಭಾರತದಲ್ಲಿ ಹೆಮ್ ವಿಕ್ರನಮಾದಿತ್ಯ (ಹೆಮು) ರಾಜನಾಗಿ "ಹಿಂದೂ ರಾಜ್" ಅನ್ನು ಸ್ಥಾಪಿಸಲಾಯಿತು. ನವದೆಹಲಿಯ ಖಿಲಾದಲ್ಲಿ 1556 ರ ಅಕ್ಟೋಬರ್ 15 ರಂದು ಅವನ ಪಟ್ಟಾಭಿಷೇಕವಾಯಿತು.

PC:Varun Shiv Kapur

ಗ್ವಾಲಿಯರ್‍ನ ವಿಶೇಷ

ಗ್ವಾಲಿಯರ್‍ನ ವಿಶೇಷ

ಗ್ವಾಲಿಯರ್ ಪ್ರವಾಸಿತಾಣವು ಅತ್ಯಂತ ಸುಂದರವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಶಕ್ತಿಯನ್ನು ಹೊಂದಿದೆ. ಇಲ್ಲಿ ಗ್ವಾಲಿಯರ್ ಕೋಟೆ, ಪೂಲ್ ಬಾಗ್, ಸೂರಜ್ ಕುಂಡ, ಹಾಥಿ ಪೂಲ, ಮನಮಂದಿರ ಅರಮನೆ, ಜಯ ವಿಲಾಸ ಮಹಲ್ ಹೀಗೆ ಹಲವಾರು ಸ್ಥಳಗಳನ್ನು ಇಲ್ಲಿ ಕಾಣಬಹುದಾಗಿದೆ.

PC:swifant

ಭೇಟಿಗೆ ಸೂಕ್ತವಾದ ಸಮಯ

ಭೇಟಿಗೆ ಸೂಕ್ತವಾದ ಸಮಯ

ಗ್ವಾಲಿಯರ್ ಕೋಟೆಯು ವರ್ಷಪೂರ್ತಿಯು ತೆರೆದಿರುತ್ತದೆ. ಇದೊಂದು ಐತಿಹಾಸಿಕ ಕೋಟೆಯಾದ್ದರಿಂದ ಯಾವಾಗಬೇಕಾದರೂ ಭೇಟಿ ನೀಡಬಹುದಾಗಿದೆ. ಈ ಸುಂದರವಾದ ಕೋಟೆಗೆ ದೇಶ ವಿದೇಶಗಳಿಂದ ಭೇಟಿ ನೀಡುತ್ತಿರುತ್ತಾರೆ.


PC:Varun Shiv Kapur

ಪ್ರವೇಶ ಸಮಯ

ಪ್ರವೇಶ ಸಮಯ

ಪ್ರವಾಸಿಗರಿಗೆ ಈ ಐತಿಹಾಸಿಕ ಸುಂದರವಾದ ಕೋಟೆಯನ್ನು ಕಾಣಲು ಪ್ರವೇಶ ಸಮಯವೆಂದರೆ ಅದು ಬೆಳಗ್ಗೆ 8 ಗಂಟೆಯಿಂದ ಸಂಜೆ 5:30 ರವೆರೆಗೆ.

PC:carol mitchell

ಪ್ರವೇಶ ಶುಲ್ಕ

ಪ್ರವೇಶ ಶುಲ್ಕ

ಗ್ವಾಲಿಯರ್ ಕೋಟೆಯ ಒಳ ಪ್ರವೇಶಕ್ಕೆ ಪ್ರತ್ಯೇಕವಾದ ಪ್ರವೇಶ ಶುಲ್ಕವಿರುತ್ತದೆ. ದೊಡ್ಡವರಿಗೆ 75 ರೂ, ಮಕ್ಕಳಿಗೆ 40 ರೂ ಮತ್ತು ವಿದೇಶಿಯರಿಗೆ 250 ರೂ ಪ್ರವೇಶ ಶುಲ್ಕವನ್ನು ಪಡೆದುಕೊಳ್ಳಬೇಕಾಗುತ್ತದೆ.


PC:carol mitchell

ಸಮೀಪದ ವಿಮಾನ ನಿಲ್ದಾಣ

ಸಮೀಪದ ವಿಮಾನ ನಿಲ್ದಾಣ

ಈ ಗ್ವಾಲಿಯರ್‍ನ ಸುಂದರವಾದ ಕೋಟೆಗೆ ಒಮ್ಮೆ ಭೇಟಿ ನೀಡಲು ಸಮೀಪವಾದ ವಿಮಾನ ನಿಲ್ದಾಣವೆಂದರೆ ಅದು ಗ್ವಾಲಿಯರ್. ಗ್ವಾಲಿಯರ್ ನಗರದಲ್ಲಿಯೇ ನೇರ ವಿಮಾನ ನಿಲ್ದಾಣವಿರುವುದರಿಂದ ಇಲ್ಲಿಂದ ಕೇವಲ 8 ಕಿ,ಮೀ ಮೂಲಕ ನೀವು ಸುಲಭವಾಗಿ ಗ್ವಾಲಿಯರ್ ಕೋಟೆಗೆ ತೆರಳಬಹುದಾಗಿದೆ.

ಸಮೀಪದ ರೈಲ್ವೆ ನಿಲ್ದಾಣ

ಸಮೀಪದ ರೈಲ್ವೆ ನಿಲ್ದಾಣ

ರೈಲ್ವೆ ಮೂಲಕ ಗ್ವಾಲಿಯರ್ ಕೋಟೆಗೆ ತೆರಳಬೇಕಾದರೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಗ್ವಾಲಿಯರ್ ರೈಲ್ವೆ ಸ್ಟೇಷನ್. ಈ ರೈಲ್ವೆಯು ಹಲವಾರು ಪ್ರಸಿದ್ಧವಾದ ನಗರಗಳನ್ನು ದಾಟಿ ಬರುತ್ತದೆ. ಈ ರೈಲ್ವೆ ನಿಲ್ದಾಣದಿಂದ ಅತ್ಯಂತ ಸಮೀಪದಲ್ಲಿದೆ ಗ್ವಾಲಿಯರ್ ಐತಿಹಾಸಿಕ ಕೋಟೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X