Search
  • Follow NativePlanet
Share
» »ಈ ಜ್ಯೋರ್ತಿಲಿಂಗದ ದರ್ಶನ ಮಾಡಿದ್ರೆ ಭೂತ, ಪ್ರೇತ ಕಾಟದಿಂದ ಮುಕ್ತಿ ಸಿಗುತ್ತಂತೆ!

ಈ ಜ್ಯೋರ್ತಿಲಿಂಗದ ದರ್ಶನ ಮಾಡಿದ್ರೆ ಭೂತ, ಪ್ರೇತ ಕಾಟದಿಂದ ಮುಕ್ತಿ ಸಿಗುತ್ತಂತೆ!

ಭಾರತ ದೇಶದಲ್ಲಿರುವ ಜ್ಯೋತಿರ್ಲಿಂಗಗಳಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಭೀಮಾಶಂಕರ ಜ್ಯೋತಿರ್ಲಿಂಗವು 12 ನೇ ಜ್ಯೋತಿರ್ಲಿಂಗ ಎನ್ನಲಾಗುತ್ತದೆ. ಇಲ್ಲಿ ಶಿವನ ಬೆವರಿನ ಹನಿಯು ನದಿಯಾಗಿ ಮಾರ್ಪಟ್ಟಿದೆ ಎನ್ನಲಾಗುತ್ತದೆ. ಸಹ್ಯಾದ್ರಿ ಪರ್ವತದಲ್ಲಿರುವ ಈ ಜ್ಯೋತಿರ್ಲಿಂಗವನ್ನು ನೋಡಲು ದೇಶ, ವಿದೇಶಗಳಿಂದಲೂ ಜನರು ಬರುತ್ತಾರೆ. ಪುರಾಣದಲ್ಲಿ ತಿಳಿಸಲಾದ ಕಾಮರೂಪ ದೇಶ ಇಲ್ಲಿದೆ ಎನ್ನಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಗುರುತುಗಳು ಈಗಲೂ ಕಾಣಸಿಗುತ್ತವೆ.

ಭೀಮಾಸುರನೆಂಬ ರಾಕ್ಷಸ

ಭೀಮಾಸುರನೆಂಬ ರಾಕ್ಷಸ

PC: wikipedia

ಈ ಹಿಂದೆ ಭೀಮಾಸುರ ಎನ್ನುವ ರಾಕ್ಷಸ ತನ್ನ ತಾಯಿ ಕರ್ಕತಿ ಜೊತೆ ಈ ಬೆಟ್ಟದ ಮೇಲೆ ವಾಸಿಸುತ್ತಿದ್ದನಂತೆ. ಈತ ರಾಕ್ಷಸ ವಂಶಸ್ಥನಾಗಿದ್ದರೂ ಪರಮ ಶಿವ ಭಕ್ತನಾಗಿದ್ದನು. ಭೀಮಾಸುರನಿಗೆ ತನ್ನ ತಂದೆ ಯಾರು ಎನ್ನುವುದರ ಬಗ್ಗೆ ವಿವರವಿಲ್ಲ. ತಾಯಿ ಬಳಿ ಎಷ್ಟು ಬಾರಿ ಕೇಳಿದರು ಅದಕ್ಕೆ ಉತ್ತರ ಸಿಕ್ಕಿಲ್ಲ. ಆದರೆ ಒಮ್ಮೆ ಭೀಮಾಸುರ ತನ್ನ ತಾಯಿಯಲ್ಲಿ ತನ್ನ ತಂದೆ ಹಾಗೂ ಅಜ್ಜನ ಬಗ್ಗೆಯೂ ತಿಳಿಸುವಂತೆ ಒತ್ತಾಯಿಸುತ್ತಾನೆ.

ಆತ್ಮಹತ್ಯೆ ಬೆದರಿಕೆ ಹಾಕಿದ ಭೀಮಾಸುರ

ಆತ್ಮಹತ್ಯೆ ಬೆದರಿಕೆ ಹಾಕಿದ ಭೀಮಾಸುರ

PC: SaurabhJain

ಇಲ್ಲವಾದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸುತ್ತಾನೆ. ಮಗನ ಬೆದರಿಕೆಗೆ ಹೆದರಿದ ಕರ್ಕತಿ ತನ್ನ ವಂಶದ ಬಗ್ಗೆ ತಿಳಿಸುತ್ತಾಳೆ. ಒಂದು ದಿನ ನನ್ನ ತಂದೆ ತಾಯಿ ಅಗಸ್ತ್ಯ ಋಷಿಯ ಶಿಷ್ಯರನ್ನು ಕೊಲ್ಲುತ್ತಾರೆ. ಇದರಿಂದ ಕೋಪಗೊಂಡ ಅಗಸ್ತ್ಯ ಋಷಿ ಅವರಿಬ್ಬರನ್ನು ಭಸ್ಮ ಮಾಡುತ್ತಾನೆ. ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಾನೆ. ಆದರೆ ನಾನು ತಪ್ಪಿಸಿಕೊಂಡು ಸಹ್ಯಾದ್ರಿ ಪರ್ವತದ ಮೇಲೆ ಬಂದು ಅಡಗಿರುವುದಾಗಿ ತಿಳಿಸಿದಳು.

ಕುಂಭಕರ್ಣನ ಮಗ

ಕುಂಭಕರ್ಣನ ಮಗ

PC:Unknown

ಲಂಕಾಧೀಪತಿ ರಾವಣನ ಸಹೋದರನಾದ ಕುಂಭಕರ್ಣ ನನ್ನ ಬಳಿ ಬಂದು ನನ್ನನ್ನು ಮೋಹಿಸಿದ. ಆ ಕಾರಣದಿಂದಾಗಿ ನೀನು ಜನಿಸಿದೆ. ಆದರೆ ಆತನನ್ನು ರಾವಣ ಸಂಹರಿಸಿದ. ಹಾಗಾಗಿ ನಾವು ದಿಕ್ಕು ಇಲ್ಲದವರಾಗಿದ್ದೇವೆ ಎಂದು ತಮ್ಮ ಕಥೆಯನ್ನು ಹೇಳಿ ರೋಧಿಸುತ್ತಾಳೆ.

ಶಿವಭಕ್ತನ ಪೂಜೆಗೆ ಭಂಗ

ಶಿವಭಕ್ತನ ಪೂಜೆಗೆ ಭಂಗ

ಶಿವನ ಭಕ್ತನೊಬ್ಬ ಜೈಲಿನಲ್ಲಿ ಆತ ಶಿವಲಿಂಗವೊಂದನ್ನು ತಯಾರಿಸಿ ಪ್ರತಿನಿತ್ಯ ಪೂಜಿಸುತ್ತಾನೆ. ಶಿವಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಾನೆ. ಆದರೆ ಇದನ್ನು ತಿಳಿದ ಭೀಮಾಸುರ ತನ್ನನ್ನು ದೇವರೆಂದು ಪೂಜಿಸಬೇಕು. ತನ್ನ ಹೆಸರಿನ ಜಪವನ್ನು ಮಾಡಬೇಕು ಎನ್ನುತ್ತಾನೆ. ಇದಕ್ಕೆ ಒಪ್ಪದಕ್ಕೆ ಆತನ ಶಿವಲಿಂಗವನ್ನು ತನ್ನ ಕತ್ತಿಯಿಂದ ತುಂಡರಿಸಲು ಸಿದ್ಧನಾಗುತ್ತಾನೆ.

ಶಿವನೊಂದಿಗೆ ಯುದ್ಧ

ಶಿವನೊಂದಿಗೆ ಯುದ್ಧ

PC: Pratik Kadam

ಕತ್ತಿ ಶಿವಲಿಂಗವನ್ನು ತಗುಲುವ ಮುನ್ನ ಶಿವ ಪ್ರತ್ಯಕ್ಷನಾಗಿ ತನ್ನ ಭಕ್ತನ ರಕ್ಷಣೆಗೆ ನಿಲ್ಲುತ್ತಾನೆ. ತನ್ನ ಮುಂದಿರುವುದು ಶಿವನೆಂದು ತಿಳಿಯದೇ ಭೀಮಾಸುರ ಯುದ್ಧಕ್ಕೆ ನಿಂತನು. ಪರಿಣಾಮವಾಗಿ ಶಿವನಿಂದ ಭೀಮಾಸುರ ಕೊಲ್ಲಲ್ಪಟ್ಟನು.
ಭೀಮಾಶಂಕರ ದೇವಾಲಯ

ಭೀಮಾಶಂಕರ ದೇವಾಲಯ

ಭೀಮಾಶಂಕರ ದೇವಾಲಯ

ಸಹ್ಯಾದ್ರಿ ಪರ್ವತ ಶ್ರೇಣಿಗಳ ದಟ್ಟ ಕಾನನದಲ್ಲಿ ನೆಲೆಸಿರುವ ಭೀಮಾಶಂಕರ ನಗರದ ಗೌಜುಗದ್ದಲಗಳಿಂದ ದೂರವಿದ್ದು ಪ್ರಶಾಂತತೆಯ ಅನಂತ ಆನಂದವನ್ನು ಭೇಟಿ ನೀಡುವ ಪ್ರವಾಸಿಗರಿಗೆ ಕರುಣಿಸುತ್ತದೆ. ಭೀಮಾ ನದಿ ಮಹಾರಾಷ್ಟ್ರದ ಪ್ರಮುಖ ನದಿಗಳ ಪೈಕಿ ಒಂದಾಗಿದ್ದು ಭೀಮಾಶಂಕರದಲ್ಲೆ ಹುಟ್ಟುತ್ತದೆ. ಹೀಗಾಗಿ ಈ ನದಿಯ ಮೂಲ, ಗುಪ್ತ ಭೀಮಾಶಂಕರದಂತಹ ತಾಣಗಳಿಗೆ ಚಾರಣದ ಮೂಲಕ ಭೇಟಿ ನೀಡಬಹುದು. ಈ ನದಿಯು ಶಿವನ ಬೆವರಿನಿಂದ ಹುಟ್ಟಿದ್ದು ಎನ್ನಲಾಗುತ್ತದೆ. ಇಲ್ಲಿ ಸ್ನಾನ ಮಾಡಿದ್ರೆ ನಿಮ್ಮ ಪಾಪವೆಲ್ಲಾ ಪರಿಹಾರವಾಗುತ್ತದೆ ಎನ್ನಲಾಗುತ್ತದೆ.

ಭೂತ, ಪ್ರೇತ ಕಾಟದಿಂದ ಮುಕ್ತಿ

ಭೂತ, ಪ್ರೇತ ಕಾಟದಿಂದ ಮುಕ್ತಿ

ಈ ದೇವಸ್ಥಾನವನ್ನು ಇಂದಿಗೂ ಕಾಕಿನಿ, ಡಾಕಿನಿ ಎನ್ನು ರಾಕ್ಷಸ ವಂಶ ಪೂಜಿಸುತ್ತಿದೆ ಎನ್ನಲಾಗುತ್ತದೆ. ಈ ದೇವಸ್ಥಾನವನ್ನು ಭೇಟಿ ನೀಡಿದರೆ ಭೂತ, ಪಿಶಾಚಿಗಳ ಕಾಟದಿಂದ ಮುಕ್ತಿ ಸಿಗುತ್ತದಂತೆ ಎನ್ನುವುದು ಭಕ್ತರ ನಂಬಿಕೆ. ಹಾಗಾಗಿ ಈ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚಿನ ಮಂದಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಹನುಮಾನ್ ಕೊಳ

ಹನುಮಾನ್ ಕೊಳ

PC: Nagraj Salian

ಭೀಮಾಶಂಕರ ದೇವಸ್ಥಾನದ ಸುತ್ತಮುತ್ತಲಿನಲ್ಲಿ ಕಲ್ಮಜಾ ದೇವಿಯ ದೇವಾಲಯ, ಹನುಮಾನ್ ಕೊಳ, ನಾಗ ಫಣಿ, ಬಾಂಬೆ ಪಾಯಿಂಟ್, ಸಾಕ್ಷಿ ವಿನಾಯಕ ಮುಂತಾದ ಆಕರ್ಷಣೆಗಳಿಗೆ ಭೇಟಿ ನೀಡಬಹುದು. ಅಲ್ಲದೆ ಭೀಮಾಶಂಕರ ದೇವಾಲಯದ ಅದ್ಭುತ ಘಂಟೆ ಹಾಗೂ ಹಿಂಬದಿಯಲ್ಲಿರುವ ಋಷಿ ಕೌಶಿಕರಿಗೆ ಸಂಬಂಧಿಸಿದ ಮೋಕ್ಷಕುಂಡವು ವಿಶೇಷ ಸ್ಥಳಗಳಾಗಿವೆ. ಹನುಮಾನ್ ಕೊಳ, ಇದನ್ನು ಚಾರಣ ಮಾಡುತ್ತ ತಲುಪಬಹುದು. ಭೀಮಾಶಂಕರದಲ್ಲಿರುವ ಚಾರಣ ಮಾಡುತ್ತ ಸೃಷ್ಟಿ ಸೌಂದರ್ಯ ಸವಿಯುತ್ತ ತಲುಪಹುದಾದ ಗುಪ್ತ್ ಭೀಮಾಶಂಕರ.

ಭೀಮಾಶಂಕರದ ಘಂಟೆ

ಭೀಮಾಶಂಕರದ ಘಂಟೆ

PC: Nagraj Salian

ಭೀಮಾಶಂಕರದಲ್ಲಿರುವ ಪ್ರಮುಖವಾಗಿ ಗೋಚರಿಸುವ ಘಂಟೆ. ಇದನ್ನು ನಾನಾ ಫಡ್ನವಿಸ್ ಎಂಬುವವರು ಹೇಮದ್ಪಂಥಿ ಶೈಲಿಯಲ್ಲಿ ನಿರ್ಮಿಸಿದ್ದಾರೆ. ಇದನ್ನು ಪೋರ್ಚುಗೀಸ್ ಘಂಟೆ ಎಂತಲೂ ಕರೆಯುತ್ತಾರೆ. ಇದರ ಹಿಂದೆ ಚಿಕ್ಕದಾದ ಶನಿ ದೇಗುಲವಿದೆ.

 ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

ಇದು ಮಹಾರಾಷ್ಟ್ರದ ಪೂಜೆಯ ಖೇಡ್ ತಾಲೂಕಿನ ಭಾವಗಿರಿ ಗ್ರಾಮದಲ್ಲಿದೆ. ಈ ಕ್ಷೇತ್ರವು ಪೂಜೆಯಿಂದ127 ಕಿ.ಮಿ ದೂರದಲ್ಲಿದೆ. ಮುಂಬೈನಿಂದ 120 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X