• Follow NativePlanet
Share
Menu
» »ಹಿಮಾಲಯದಲ್ಲಿನ ಕುತೂಹಲಕಾರಿ ರಹಸ್ಯಗಳು!!

ಹಿಮಾಲಯದಲ್ಲಿನ ಕುತೂಹಲಕಾರಿ ರಹಸ್ಯಗಳು!!

Written By:

ಆಸೆ ಒಂದು ನಿಜವನ್ನು ಅಡಗಿಸಿ ಇಟ್ಟರೆ ಸ್ವಾರ್ಥ ಅದನ್ನು ಕದಿಯುತ್ತದೆ ಎಂಬ ಮಾತು ಸತ್ಯ. ಕಾಲವೇ ಇವೆರಡನ್ನೂ ಕಸಿದು ಭವಿಷ್ಯಕ್ಕೆ ಶೂನ್ಯವನ್ನು ಉಳಿಸಿತು. ಕೆಲವು ಸಾವಿರ ವರ್ಷಗಳ ಹಿಂದಿನ ಭಾರತೀಯ ಪುರಾತನ ಶಾಸ್ತ್ರವೇ ಆ ನಿಜ. ಆ ಶಾಸ್ತ್ರದ ಉಪಯೋಗವೇ ಮಾನವನಿಗೆ ದೊರೆಯುವ ನೂರು ವರ್ಷಗಳ ಆಯಸ್ಸು.

ಕೆಲವು ಶಾಸ್ತ್ರವನ್ನು ಉಪಯೋಗಿಸಿ ಮಾಡಿದ ಒಂದು ವಿಗ್ರಹ ಮಾನವನಿಗೆ ನೂರು ವರ್ಷಗಳಿಗಿಂತ ಹೆಚ್ಚು ಆಯಸ್ಸನ್ನು ನೀಡುತ್ತದೆ ಎಂದರೆ ನಂಬುತ್ತೀರಾ? ಆದರೆ ಇದು ಅಕ್ಷರಶಃ ನಿಜ. ಈ ಮಧ್ಯೆ ಬೆಳಕಿಗೆ ಬಂದ ಆಧಾರಗಳು ಹೇಳುತ್ತಿವೆ. ಈ ಆಧಾರಗಳು ನಮ್ಮ ಭಾರತ ದೇಶದಲ್ಲಿಯೊ, ಪ್ರಪಂಚದ ಇತರೆ ದೇಶಗಳ ಹತ್ತಿರ ಇಲ್ಲ. ಬದಲಾಗಿ ದೇಶಗಳ ಕೆಲವು ವಿಶೇಷತೆಗಳ ಮೇಲೆ ಮೂರನೇ ಕಣ್ಣು ಇಟ್ಟಿರುವ ಸಿ.ಐ.ಎ ಸಂಸ್ಥೆ ಹತ್ತಿರ ಇದೆ.

ಅಷ್ಟಕ್ಕೂ ಆ ಶಾಸ್ತ್ರ ಏನು ಎಂದು ಕೇಳುತ್ತಿದ್ದೀರಾ? ಹಾಗಾದರೆ ಲೇಖನದ ಮೂಲಕ ತಿಳಿಯಿರಿ.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಶಾಸ್ತ್ರದ ಆಧಾರವಾಗಿ ಮಾಡಿರುವ ವಿಗ್ರಹ ಮಾನವನಿಗೆ 100 ವರ್ಷಗಳ ಆಯಸ್ಸನ್ನು ಹೇಗೆ ನೀಡುತ್ತದೆ ಎಂಬ ಅನುಮಾನ ಎಲ್ಲರಿಗೂ ಮೂಡುವುದು ಸಾಮಾನ್ಯವಾದುದು. ಆ ವಿಷಯ ತಿಳಿದುಕೊಳ್ಳಬೇಕು ಎಂದರೆ ಕಳೆದ ಕಾಲಕ್ಕೆ ಹಿಂದಿರುಗಿ ಅನ್ವೇಷಿಸಬೇಕು.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಈ ವಿಷಯವನ್ನು ತಿಳಿದುಕೊಳ್ಳಬೇಕು ಎಂದರೆ ಟಿಬೆಟ್, ನೇಪಾಳ ಸರಿಹದ್ದುಗಳಲ್ಲಿರುವ ದವಳಗಿರಿ ಎಂಬ ಪರ್ವತ ಪ್ರದೇಶದಲ್ಲಿನ ಮಂತಾಂಗ್ ಎಂಬ ಬೌದ್ಧ ಕ್ಷೇತ್ರಕ್ಕೆ ತೆರಳಬೇಕು.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಕೆಲವು ಸಾವಿರ ವರ್ಷಗಳ ಹಿಂದೆ ನಮ್ಮ ಋಷಿಮುನಿಗಳು, ಯೋಗಿಗಳು ಆ ಪ್ರದೇಶವನ್ನು ಮನುಧಾಮ ಎಂದು ಕರೆಯುತ್ತಿದ್ದರು. ಈ ವಿಷಯವನ್ನು ನಮ್ಮ ಜನರು ಮರೆತು ಕೆಲವು ಶತಮಾನಗಳೇ ಕಳೆದವು.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಇಂದಿಗೂ ಆ ಪ್ರದೇಶದಲ್ಲಿನ ಪ್ರಜೆಗಳು ದುರ್ಗಾ ಮಾತೆಯನ್ನು ಮತ್ತು ಹನುಮಂತನಿಗೆ ಅಪಾರವಾದ ಭಕ್ತಿ, ಶ್ರದ್ಧೆಗಳಿಂದ ಪೂಜೆ ಮಾಡುತ್ತಾರೆ. ಹಾಗೆಯೇ ಮಹಾನವಮಿಯಂದು ಭಗವಾನ್ ವಿಶ್ವಕರ್ಮನನ್ನು ಪೂಜಿಸುವುದು ಅವರ ಪದ್ಧತಿಯಾಗಿದೆ.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಈ ಪದ್ಧತಿಗೆ ಕೆಲವು ಸಾವಿರ ವರ್ಷಗಳ ಚರಿತ್ರೆ ಇವೆ ಎಂದು ಪುರಾಣಗಳು ಹೇಳುತ್ತವೆ. ಋಗ್ವೇದದ ಪ್ರಕಾರ ದೇವ ಶಿಲ್ಪಿ ವಿಶ್ವಕರ್ಮ ವಂಶಕ್ಕೆ ಸೇರಿದ ಸಾನಗ, ಸನಾತನ, ಅಹಭೂನ, ಪ್ರಜ್ಞ, ಸುಪೂರರ್ಣ ಎಂಬ ಪಂಚ ಬ್ರಹ್ಮರ್ಷಿಗಳು ಇರುತ್ತಿದ್ದರಂತೆ. ಇವರೇ ನಮ್ಮ ಸನಾತನ ವೈಜ್ಞಾನಿಕ ನಾಗರಿಕತೆಯ ಕತೃಗಳು.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಇವರನ್ನೇ ಮನು, ಮಾಯ, ತ್ವಷ್ಟ, ಶಿಲ್ಪಿ, ಇವರನ್ನು ವಿಶ್ವಜ್ಞ ಬ್ರಹ್ಮ ಎಂದೂ ಸಹ ಕರೆಯುತ್ತಾರೆ. ಇವರು ಒಂದೊಂದು ಶಾಸ್ತ್ರಕ್ಕೆ ಪ್ರಸಿದ್ಧ ಪಡೆದಿರುವವರು. ಮನು ಬ್ರಹ್ಮ ವ್ಯವಸಾಯ ನಾಗರೀಕತೆಗೆ ಕತೃ.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಆತನ ವಂಶಸ್ಥರು ಎಲ್ಲರೂ ವ್ಯವಸಾಯ ಕ್ಷೇತ್ರಕ್ಕೆ ಲೇಖಿಸಿದರು. ಮಯ ಬ್ರಹ್ಮ ಮತ್ತು ಆ ವಂಶಸ್ಥರು ಕಾಷ್ಟಶಿಲ್ಪ, ವಾಸ್ತು ಶಿಲ್ಪ ನಿರ್ಮಾಣ, ಯಂತ್ರ ನಿರ್ಮಾಣ ವಿದ್ಯೆಗಳಿಗೆ ಕತೃಗಳು.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ತ್ವಷ್ಟ ಬ್ರಹ್ಮ ಮತ್ತು ಅವರ ವಂಶಿಕರು ಲೋಹ ಶಿಲ್ಪಗಳು ಮತ್ತು ರಾಸಾಯನಿಕ ಶಾಸ್ತ್ರಗಳಲ್ಲಿ ಅದ್ವೀತಿಯರು. ಶಿಲ್ಪಿ ಬ್ರಹ್ಮ ಶಿಲಾ ಶಿಲ್ಪಗಳು ಮತ್ತು ರಾಸಯನ ಶಾಸ್ತ್ರ ವಿದ್ಯೆಗಳಲ್ಲಿ ಅದ್ವೀಯರು. ವಿಶ್ವಜ್ಞ ಬ್ರಹ್ಮ ಮತ್ತು ಆತನ ವಂಶಿಕರು ಜ್ಯೋತ್ಯಿರ್ ವಿದ್ಯೆಯಲ್ಲಿ, ಸ್ವರ್ಣ ಶಿಲ್ಪಗಳಲ್ಲಿ ಅದ್ವೀತಿಯರು.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಇವರಲ್ಲಿ ತ್ವಷ್ಟ ಬ್ರಹ್ಮನಿಗೆ ಲೋಹಗಳ ಬಗ್ಗೆ ಮತ್ತು ರಾಸಾಯನಗಳ ಬಗ್ಗೆ ಪೂರ್ತಿಯಾಗಿ ಅವಗಹನೆ ಇದ್ದ ಕಾರಣ ಕೆಲವು ಪಂಚಲೋಹ, ತ್ರಿಲೋಹಗಳನ್ನು ತಯಾರು ಮಾಡಿದನು. ಅವುಗಳನ್ನು ಅಭಿಷೇಕ ಮಾಡಿ ಆ ಅಭಿಷೇಕ ಜಲವನ್ನು ಮನುಷ್ಯ ಸ್ವೀಕರಿಸಿದರೆ ಅದರಿಂದ ಆಗುವ ಲಾಭಗಳ ಕುರಿತು ಸಂಪೂರ್ಣವಾಗಿ ಗ್ರಂಥದಲ್ಲಿ ವಿವರಿಸಿದ್ದಾರೆ.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ನಂತರ ಆತನ ವಂಶಿಕರು ಇದರ ಬಗ್ಗೆ ಅವಗಹನೆ ನೀಡಿ. ಮುಂದಿನ ಸಂತತಿಗೆ ನೀಡಿದರು. ಪೂರ್ವದಲ್ಲಿ ಋಷಿಗಳು, ಮುನಿಗಳು ಮತ್ತು ಮಹಾಮುನಿಗಳು ಇಂತಹ ವಿಗ್ರಹಗಳಿಗೆ ಅಭಿಷೇಕ ಮಾಡಿದ ಜಲವನ್ನು ತೀರ್ಥವಾಗಿ ಸ್ವೀಕರಿಸುತ್ತಿದ್ದರು.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಹಾಗಾಗಿಯೇ ಅವರು ನೂರಾರು ವರ್ಷಗಳ ಕಾಲ ಅನಾರೋಗ್ಯದಂತಹ ಯಾವುದೇ ರೋಗಗಳಿಂದ ಬಳಲುತ್ತಿರಲಿಲ್ಲ. ಕಾಲ ಗಮನದಲ್ಲಿ ಹೊಸ ಸಿದ್ಧಾಂತಗಳು, ಹೊಸ ಮತಗಳು ಹುಟ್ಟಿ, ಇತರ ರಾಜ್ಯಗಳ ಮೇಲೆ ದಾಳಿ ಮಾಡಿ ವಿದ್ಯಾ ಸಂಪತ್ತನ್ನು ನಾಶ ಮಾಡಿದ್ದರಿಂದ ಆ ಮಹತ್ತರವಾದ ವಿಚಾರಗಳು ದೂರವಾಯಿತು.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಆದರೆ ಆ ಕಾಲದಲ್ಲಿ ತಯಾರು ಮಾಡಿದ ಕೆಲವು ವಿಗ್ರಹಗಳು ಇದ್ದರು ಕೂಡ ಅವುಗಳು ಎಲ್ಲಿವೆ ಎಂಬ ವಿಷಯ ತಿಳಿಯದೆ ಒಂದು ವಿಸ್ಮಯವಾಗಿಯೇ ಉಳಿದು ಹೋಯಿತು. ಆದರೆ ವಿಶ್ವ ಕರ್ಮ ವಂಶಿಕನಾದ ತ್ವಷ್ಟಬ್ರಹ್ಮ ಪ್ರಸ್ತುತವಿರುವ ಮಂತಾಂಗ್ ಪ್ರದೇಶದಲ್ಲಿ ನೆಲೆಸಿದ್ದಾನೆ ಎಂಬ ವಿಷಯ ಅಲ್ಲಿನ ಜನರ ನಂಬಿಕೆಯಾಗಿದೆ.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಆ ವಂಶಿಕರು ತಯಾರು ಮಾಡಿದ ಒಂದು ವಿಗ್ರಹ ರಹಸ್ಯವೇ ಅದಕ್ಕೆ ಮೂಲಾಂಶ. 1951 ರಲ್ಲಿ ಚೈನಾ, ಟಿಬೆಟ್ ಪ್ರದೇಶ ಆಕ್ರಮಣ. 1959 ರಲ್ಲಿ ಕೆಂಪು ಸೈನ್ಯವು ಟಿಬೆಟ್ ಪ್ರದೇಶವನ್ನು ಸುಮಾರರಷ್ಟು ಆಕ್ರಮಿಸಿಕೊಂಡಿತು.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಆ ಸಮಯದಲ್ಲಿ ಟಿಬೆಟ್‍ನ ಬೌದ್ಧ ಸನ್ಯಾಸಿಗಳೆಲ್ಲರೂ ಬೇರೆ ಪ್ರದೇಶಕ್ಕೆ ತೆರಳುವ ಸಮಯದಲ್ಲಿ ಸರಿಹದ್ದು ಪ್ರದೇಶವಾದ ಮಂತಾಂಗ್‍ನಲ್ಲಿದ್ದ ಕೆಲವು ಸನ್ಯಾಸಿಗಳು ಕೂಡ ಅಲ್ಲಿಂದ ತೆರಳಿದರು. ಆ ಸಮಯದಲ್ಲಿ ಅಲ್ಲಿನ ಪರಿಸ್ಥಿತಿಗಳನ್ನು ಗಮನಿಸಿದ ಸಿ.ಐ.ಎ ಗೆ ಸಂಬಂಧಿಸಿದ ಗೂಢಚಾರಿ ಅಲ್ಲಿನ ಬೌದ್ಧ ಸನ್ಯಾಸಿಗಳಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದನಂತೆ.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಆತನ ಸಾಹಯಕ್ಕೆ ಪ್ರತ್ಯುಪಕಾರವಾಗಿ ಒಬ್ಬ ಸನ್ಯಾಸಿ ತನ್ನ ಕೈಯಲ್ಲಿದ್ದ ಭಾರವಾದ ಮರದ ಪೆಟ್ಟಿಗೆಯನ್ನು ನೀಡಿದನಂತೆ. ಹಾಗೆಯೇ ಅದರಲ್ಲಿನ ವಿಗ್ರಹ ಮಹತ್ವದ ಬಗ್ಗೆ ತಿಳಿಸಿ ಅಲ್ಲಿಂದ ತೆರಳಿದನಂತೆ.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಅದರಲ್ಲಿ ಶ್ರೀ ವಿಷ್ಣುವಿನ ಪಂಚ ಲೋಹ ವಿಗ್ರಹ ಒಂದು ಇತ್ತಂತೆ. ಅದನ್ನು "ಕಲ್ಪ ರಾಸಾಯನ ವಿಗ್ರಹ" ಎಂದೂ ಸಹ ಕರೆಯುತ್ತಾರೆ. ಆ ವಿಗ್ರಹ ಅತ್ಯಂತ ಸುಂದರವಾಗಿದ್ದು ಮಿಂಚುತ್ತಿತ್ತಂತೆ.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಆ ವಿಗ್ರಹವನ್ನು ಒಂದು ರಾಗಿ ಪಾತ್ರೆಯಲ್ಲಿ ನೀರು ಸೇರಿಸಿ 9 ದಿನಗಳ ಕಾಲ ಇಟ್ಟು, 3 ದಿನಗಳ ಕಾಲ ಆ ಪವಿತ್ರವಾದ ನೀರನ್ನು ಸೇವಿಸಿದರೆ ಅಂಥಹ ವ್ಯಕ್ತಿ 100 ರಿಂದ 115 ವರ್ಷಗಳ ಕಾಲ ಬದುಕಬಲ್ಲನಂತೆ. ಈ ವಿಷಯವನ್ನು ಸಿ.ಐ.ಎ ಸಂಸ್ಥೆಯವರು ಗುಪ್ತವಾಗಿ ಇಟ್ಟಿದಾರಂತೆ.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಇದನ್ನು ಪರಿಶೋಧನೆ ಮಾಡಬೇಕು ಎಂದುಕೊಂಡ ಆ ಸಂಸ್ಥೆ ಲ್ಯಾಬ್ ಟೆಸ್ಟ್‍ಗೆ ಕಳುಹಿಸುದರಂತೆ. ಆ ವಿಗ್ರಹವನ್ನು ತಯಾರು ಮಾಡಿ ಸುಮಾರು 25,000 ವರ್ಷಗಳು ಕಳೆದಿವೆ ಎಂದು ತಿಳಿಸಿದರಂತೆ. ಈ ಲೆಕ್ಕವನ್ನು ಕಂಡ ಪರಿಶೋಧನೆಗಾರರು ಈ ವಿಷಯವನ್ನು ನಂಬದೇ ಬೇರೆ ಲ್ಯಾಬ್‍ಗೆ ಕಳುಹಿಸಿದರಂತೆ.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಅದರಲ್ಲಿಯೂ ಅದೇ ಸಮಯವನ್ನು ತೋರಿಸುತ್ತಿತ್ತಂತೆ. ಆ ಲೆಕ್ಕದ ಪ್ರಕಾರ ನಾಗರೀಕತೆ ಹುಟ್ಟಿ 5,000 ವರ್ಷಗಳು ಕಳೆದಿವೆ. ಹಾಗಿದ್ದಾಗ ಅಷ್ಟು ಸಾವಿರ ವರ್ಷಗಳ ಹಿಂದೆಯೆ ಇಂತಹ ವಿಗ್ರಹವನ್ನು ಹೇಗೆ ತಯಾರು ಮಾಡಿದರು? ಎಂಬ ವಿಷಯ ಕುತೂಹಲ ಎಲ್ಲರಲ್ಲಿಯೂ ಮೂಡಿಸಿತು.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಆ ವಿಗ್ರಹದ ಭಾರವು ಸುಮಾರು 48 ಗ್ರಾಂಗಳು. ಆ ವಿಗ್ರಹದಲ್ಲಿಯೇ ಒಂದು ಪ್ರಾಚೀನವಾದ ಲಿಪಿ ಇದೆ. ಆ ಲಿಪಿಯನ್ನು ಡಿ ಕೋಡ್ ಮಾಡಿದಾಗ ಅದನ್ನು "ಕಲ್ಪರಸಾಯನಾಮೃತ ವಿಗ್ರಹ" ಎಂದು ಗುರುತಿಸಲಾಯಿತಂತೆ. ಹಾಗಾಗಿ ಆ ಸನ್ಯಾಸಿ ಹೇಳಿದಂತೆ ಮಾನವರ ಮೇಲೆ ವಿಗ್ರಹದ ನೀರನ್ನು ಇಟ್ಟು ಪರೀಕ್ಷಿಸಿದರಂತೆ. ಅದರಲ್ಲಿ ಅವರು ಸಫಲವಾದರಂತೆ.

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

100 ವರ್ಷಗಳ ಆಯಸ್ಸನ್ನು ನೀಡುವ ಶಕ್ತಿ

ಆದರೆ ಆ ವಿಗ್ರಹ ಈಗ ಕಳುವಾಗಿದೆ. ಕೆಲವು ಮಂದಿ ಕುತಂತ್ರದಿಂದ ನಮ್ಮ ಸನಾತನ ಧರ್ಮದ ಸಂಪತ್ತು ನಾಶವಾಗಿದೆ. ಪ್ರಸ್ತುತ ಅದು ಎಲ್ಲಿದೆ ಎಂಬ ವಿಷಯ ಯಾರಿಗೂ ತಿಳಿದಿಲ್ಲ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ