Search
  • Follow NativePlanet
Share
ಮುಖಪುಟ » ಸ್ಥಳಗಳು » ಸ್ಪಿತಿ » ಹವಾಮಾನ

ಸ್ಪಿತಿ ಹವಾಮಾನ

ಪ್ರವಾಸಿಗರು ಸ್ಪಿತಿಗೆ ಬೇಸಿಗೆಯಲ್ಲಿ ಆಗಮಿಸುವುದು ಸೂಕ್ತ. ಈ ಸಂದರ್ಭದಲ್ಲಿ ತಾಪಮಾನ ಸಹನೀಯವಾಗಿರುತ್ತದೆ. ಅಲ್ಲದೇ ಎಲ್ಲಾ ಮಾರ್ಗಗಳೂ ತೆರೆದಿರುತ್ತವೆ.

ಬೇಸಿಗೆಗಾಲ

(ಮೇನಿಂದ ಅಕ್ಟೋಬರ್‌): ಬೇಸಿಗೆ ಕಾಲ ಇಲ್ಲಿ ಮೇ ತಿಂಗಳಲ್ಲಿ ಆರಂಭವಾಗಿ ಅಕ್ಟೋಬರ್‌ವರೆಗೂ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ಕಡೆಗಳಿಂದಲೂ ಪ್ರವೇಶಕ್ಕೆ ಉತ್ತಮ ಸೌಕರ್ಯ ಇರುತ್ತದೆ. ಈ ಸಂದರ್ಭದಲ್ಲಿ ವಾತಾವರಣದಲ್ಲಿ ತಾಪಮಾನ 15 ಡಿಗ್ರಿ ಸೆಲ್ಶಿಯಸ್‌ ಆಸುಪಾಸು ಇರುತ್ತದೆ. ಇದು ಸ್ಪಿತಿಯ ಅತ್ಯಂತ ಉತ್ತಮ ಸಮಯ.

ಮಳೆಗಾಲ

ಸ್ಪಿತಿಯು ಮಳೆ ನೆರಳು ಪ್ರದೇಶ ಎಂದು ಗುರುತಾಗಿದೆ. ಇದರಿಂದ ಇಲ್ಲಿ ಮಳೆಗಾಲಕ್ಕೆ ಯಾವುದೇ ಕಾಲ ಇಲ್ಲ. ಇದರಿಂದ ಈ ಮಳೆಗಾಲ ಎಂದು ಕರೆಸಿಕೊಳ್ಳುವ ಅವಧಿಯಲ್ಲಿ ವಾತಾವರಣ ಒಣದಾಗಿರುತ್ತದೆ. ಹಗಲು ಸೆಖೆ ಹಾಗೂ ರಾತ್ರಿ ಚಳಿ ಇರುತ್ತದೆ.

ಚಳಿಗಾಲ

(ನವೆಂಬರ್‌ನಿಂದ ಏಪ್ರಿಲ್‌): ಚಳಿಗಾಲ ಇಲ್ಲಿ ನವೆಂಬರ್‌ನಲ್ಲಿ ಆರಂಭವಾಗಿ ಏಪ್ರಿಲ್‌ನಲ್ಲಿ ಕೊನೆಗೊಳ್ಳುತ್ತದೆ. ಪೂರ್ವ ದಿಕ್ಕಿನಿಂದ ಗಾಳಿ ಬೀಸುವುದರಿಂದ ಇಲ್ಲಿ ಹೆಚ್ಚು ಹಿಮಪಾತ ಆಗುತ್ತದೆ. ವಾತಾವರಣದಲ್ಲಿ ತಾಪಮಾನ ಶೂನ್ಯ ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ.