Search
  • Follow NativePlanet
Share
» »ಡಿಸೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಭೇಟಿ ನೀಡಲು ಯೋಗ್ಯವಾದಂತಹ ಗಿರಿಧಾಮಗಳು

ಡಿಸೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಭೇಟಿ ನೀಡಲು ಯೋಗ್ಯವಾದಂತಹ ಗಿರಿಧಾಮಗಳು

ಗಿರಿಧಾಮಗಳು ಭೂಮಿಯ ಮೇಲಿರುವ ವಿಶಿಷ್ಟ ಅದ್ಭುತಗಳಾಗಿವೆ, ಅದು ಯಾವುದೇ ಇತರ ನೈಸರ್ಗಿಕ ವರಗಳನ್ನು ಇವು ಯಾವುದೇ ನೈಸರ್ಗಿಕ ಸೌಂದರ್ಯಗಳಿಗೂ ಕಡಿಮೆ ಎನಿಸಲಾರದು! ಹಸಿರು ಸೌಂದರ್ಯ, ಎತ್ತರದ ಪೈನ್ ಮರಗಳು, ಹಿಮದಿಂದ ಆವೃತವಾದ ಪರ್ವತಗಳು, ಹುಲ್ಲುಹಾಸಿನ ಹಸಿರು ಕಾರ್ಪೆಟ್ ಮತ್ತು ಸಂತೋಷಕರ ತಾಪಮಾನಗಳೊಂದಿಗೆ ಗಿರಿಧಾಮಗಳು ಪ್ರವಾಸಿಗರು ಮತ್ತು ಪ್ರಯಾಣಿಕರನ್ನು ವಿಶ್ರಾಂತಿಗಾಗಿ ಹುಚ್ಚೆಬ್ಬಿಸುವಂತೆ ಮಾಡುತ್ತವೆ.

ಎಲ್ಲಕ್ಕಿಂತ ಮಿಗಿಲಾಗಿ ಗಿರಿಧಾಮಗಳು ನಿಮ್ಮನ್ನೆಂದಿಗೂ ಬೇಸರವಾಗಲಿ ಅತೃಪ್ತಿಗೊಳಿಸುವುದಾಗಲಿ, ಮಾಡಲು ಸಾಧ್ಯವೇ ಇಲ್ಲ ಆದುದರಿಂದ ಇಂತಹ ಸ್ಥಳಗಳಿಗೆ ಪ್ರವಾಸಿಗರು ಪದೇ ಪದೇ ಭೇಟಿ ನೀಡ ಬಯಸುತ್ತಾ ತಮ್ಮನ್ನು ತಾವು ಪ್ರಕೃತಿ ಸೌಂದರ್ಯದಲ್ಲಿ ಮೈ ಮರೆಯಲು ಬಯಸುತ್ತಾರೆ.

ಇಂದು ಜಾಗತಿಕ ತಾಪಮಾನದಲ್ಲಿಏರುಪೇರು ಮತ್ತು ಹವಾಮಾನವೂ ಸಹ ಎಲ್ಲಾ ಕಡೆ ಅನಿರೀಕ್ಷಿತವಾಗಿರುವುದರಿಂದ ಪ್ರಪಂಚದಾದ್ಯಂತದ ಪ್ರವಾಸಿಗರು ಮತ್ತು ಪ್ರಯಾಣಿಕರು ಬೇರೆ ಹಾಟ್ ಸ್ಪಾಟ್ ಗಳಿಗಿಂತ ಗಿರಿಧಾಮಗಳಲ್ಲಿಯ ಅನುಕೂಲಕರ ವಾತಾವರಣಗಳು ಸುಂದರ ಭೂದೃಶ್ಯಗಳಿಂದಾಗಿ ಅವುಗಳಿಗೆ ಭೇಟಿ ಕೊಡುವುದನ್ನುಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತದಾದ್ಯಂತ ಹಲವಾರು ಕಡೆ ಅನೇಕ ಗಿರಿಧಾಮಗಳಿದ್ದು, ಇವುಗಳು ಅತ್ಯಂತ ಹೆಚ್ಚಾಗಿ ರಜಾದಿನಗಳಲ್ಲಿ ಪ್ರಯಾಣಿಕರು ಮತ್ತು ಪ್ರವಾಸಿಗರಿಂದ ಭೇಟಿ ಕೊಡಲ್ಪಡುವ ಪ್ರಮುಖ ತಾಣಗಳಲ್ಲಿ ಒಂದೆನಿಸಿವೆ. ನೀವೇನಾದರು ಪ್ರವಾಸವನ್ನು ಆಯೋಜಿಸುತ್ತಿರುವಿರಾದಲ್ಲಿ ನೇಟಿವ್ ಪ್ಲಾನೆಟ್ ನಿಮಗಾಗಿ ಮಾನ್ಸೂನ್ ಋತುವಿನಲ್ಲಿ ಭೇಟಿ ನೀಡಬಹುದಾದ ಭಾರತದ ಅತ್ಯುತ್ತಮ ಗಿರಿಧಾಮಗಳ ಪಟ್ಟಿಯನ್ನು ನೀಡುತ್ತಿದೆ.ಇದರಿಂದಾಗಿ ನಿಮ್ಮ ಗಮ್ಯಸ್ಥಾನವನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಲು ಸಹಾಯವಾಗುತ್ತದೆ.

ಮೌಂಟ್ ಅಬು

ಮೌಂಟ್ ಅಬು

ಇದು ರಾಜ್ಯದ ಏಕೈಕ ಗಿರಿಧಾಮವಾಗಿರುವುದರಿಂದ ಸ್ಥಳೀಯರು ಇದನ್ನು ರಾಜಸ್ಥಾನದ ಬೇಸಿಗೆಯ ರಾಜಧಾನಿ ಎಂದು ಕರೆಯುತ್ತಾರೆ. ಮೌಂಟ್ ಅಬು ಇಲ್ಲಿಯ ದಿಲ್ವಾರಾ ಜೈನ ದೇವಾಲಯಗಳಿಗೆ ಪ್ರಸಿದ್ದವಾಗಿದೆ. ಇದು ಅನೇಕ ಮನಮೋಹಕ ಸೂರ್ಯೋದಯ ಸೂರ್ಯಾಸ್ತವಾಗುವ ಸ್ಥಳವನ್ನು ಹೊಂದಿದ್ದು, ಈ ಜಾಗದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದಾಗಿದೆ. ಗುಜರಾತ್ ನ ಗಡಿಯಲ್ಲಿರುವ ಈ ಸ್ಥಳವು ರಾಜಸ್ಥಾನಿ ಮತ್ತು ಗುಜರಾತಿ ಕೈಮಗ್ಗಗಳು, ಕಲಾಕೃತಿಗಳು, ಜವಳಿ ಮತ್ತು ಇನ್ನಿತರ ವಸ್ತುಗಳನ್ನು ತನ್ನಲ್ಲಿ ಹೊಂದಿದೆ.

ಮನಾಲಿ

ಮನಾಲಿ

ರಜಾ ದಿನಗಳಲ್ಲಿ ಗಿರಿಧಾಮಗಳಿಗೆ ಭೇಟಿಕೊಡುವ ಬಗ್ಗೆ ಯೋಚನೆ ಮಾಡಿದಲ್ಲಿ ಹೆಚ್ಚಾಗಿ ಎಲ್ಲರ ಮನಸ್ಸಿನಲ್ಲಿ ಬರುವ ಸ್ಥಳವೆಂದರೆ ಅದು ಮನಾಲಿ. ಇದು ಏಕೆಂದರೆ ಈ ಸ್ಥಳದಲ್ಲಿ ಹಿಮಪಾತದ ಸೌಂದರ್ಯತೆ ಒಂದೆಡೆಯಾದರೆ ಇನ್ನೊಂದೆಡೆ ಇಳಿಜಾರು ಬೆಟ್ಟಗಳನ್ನು ಹೊಂದಿದ್ದು ಸುಂದರವಾದ ನೈಸರ್ಗಿಕ ಪ್ರಕೃತಿ ಸೌಂದರ್ಯವನ್ನು ತನ್ನಲ್ಲಿ ಹೊಂದಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ 6796 ಅಡಿ ಎತ್ತರದಲ್ಲಿದ್ದು, ಪ್ರಸಿದ್ದ ಹಿಮಾಲಯನ್ ಎಕ್ಸ್ಟ್ರೀಮ್ ಸೆಂಟರ್ ನಂತಹ ಪ್ರಸಿದ್ದ ಸ್ನೋ ರೆಸಾರ್ಟ್ ನ ನೆಲೆಯಾಗಿದೆ ಹಾಗೂ ಸಾಹಸ ಪ್ರಿಯರು ಮತ್ತು ಮೋಜು ಪ್ರಿಯರಿಗಾಗಿ ಇಲ್ಲಿ ಸ್ಕೈಯಿಂಗ್, ಸ್ನೊ ಬೊರ್ಡಿಂಗ್, ಐಸ್ ಸ್ಕೇಟಿಂಗ್ ನಂತಹ ಅತ್ಯಂತ ಆಕರ್ಷಕ ಚಟುವಟಿಕೆಗಳನ್ನು ತನ್ನಲ್ಲಿ ಬರುವವರಿಗಾಗಿ ಒದಗಿಸಿಕೊಡುತ್ತದೆ.

ಝೈರೊ

ಝೈರೊ

ಝೈರೋ ಸಮುದ್ರ ಮಟ್ಟದಿಂದ 1500 ಮೀ ಎತ್ತರದಲ್ಲಿದ್ದು ಈಶಾನ್ಯ ಭಾರತದಲ್ಲಿಯ ಅತ್ಯಂತ ಹೆಚ್ಚು ಭೇಟಿ ಕೊಡಲ್ಪಡುವ ಗಿರಿಧಾಮಗಳಲ್ಲಿ ಒಂದೆನಿಸಿದೆ. ಇಲ್ಲಿಯ ಸೊಂಪಾದ ತೋಟಗಳು, ಬೆಟ್ಟಗಳು, ಮತ್ತು ಪ್ರಶಾಂತವಾದ ಸರೋವರಗಳ ಸೌಂದರ್ಯತೆಗಳು ಭಾರತಾದ್ಯಂತದ ಸಾವಿರಾರು ಜನರನ್ನು ಆಕರ್ಷಿಸುತ್ತದೆ. ಈ ಪ್ರದೇಶದಲ್ಲಿ ಅಪಾಟಮಿ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದು, ಇಲ್ಲಿಗೆ ಭೇಟಿ ನೀಡಿ ಇಲ್ಲಿಯ ಸ್ಥಳೀಯ ಸಂಸ್ಕೃತಿಯ ಬಗ್ಗೆ ಇನ್ನಷ್ಟು ತಿಳಿಯಬಹುದಾಗಿದೆ. ಈ ಸ್ಥಳವು ಎತ್ತರವಾದ ಪೈನ್ ಮತ್ತು ಬಿದಿರಿನ ಮರಗಳಿಂದ ಅಲಂಕೃತವಾಗಿದೆ ಇದಲ್ಲದೆ ಇಲ್ಲಿಯ ಪರ್ವತಗಳು ಅಲ್ಲಿರುವ ದಟ್ಟ ಸಸ್ಯವರ್ಗಗಳಿಂದಾಗಿ ನೈಸರ್ಗಿಕವಾದ ಹೊಗೆಭರಿತ ಮಂಜಿನಿಂದ ಆವೃತವಾಗಿರುತ್ತದೆ. ಯುನೆಸ್ಕೋ ಈ ಸ್ಥಳವನ್ನು ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದ್ದು, ಇಲ್ಲಿಯ ನೈಸರ್ಗಿಕ ಸೌಂದರ್ಯ ಮತ್ತು ಹಸಿರಿನ ಅದ್ಬುತ ನೋಟವು ಎಲ್ಲಾ ತರಹದ ಜನರನ್ನು ಆಕರ್ಷಿಸುತ್ತದೆ ಅಲ್ಲದೆ ಇಲ್ಲಿ ನೈಸರ್ಗಿಕ ಸೌಂದರ್ಯತೆ ಮತ್ತು ಅಚ್ಚ ಹಸುರಿನ ಸುಂದರ ನೋಟಗಳನ್ನು ಕಾಣಬಹುದಾಗಿದೆ.

ಡಾರ್ಜಿಲಿಂಗ್

ಡಾರ್ಜಿಲಿಂಗ್

ಡಾರ್ಜಿಲಿಂಗ್ ಪೂರ್ವದ ಒಂದು ಸುಂದರವಾದ ಕಾಲ್ಪನಿಕ ಭೂಮಿ ಎಂದು ಗುರುತಿಸಲ್ಪಟ್ಟಿದೆ. ಇದು ತನ್ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಬೇಕಾದಷ್ಟು ನೈಸರ್ಗಿಕ ಸೌಂದರ್ಯತೆಯನ್ನು ಒಳಗೊಂಡಿದ್ದು, ಪದೇ ಪದೇ ಭೇಟಿ ನೀಡುವಂತೆ ಪ್ರೇರೆಪಿಸುತ್ತದೆ. ಮನಮೋಹಕ ಹಾಗೂ ಅಪರೂಪದ ಜಲಪಾತಗಳು, ಬಣ್ಣ ಬಣ್ಣದ ಅರಳಿದ ಹೂವುಗಳಿಂದ ಕೂಡಿದ ಪರ್ವತಗಳು, ಚಹಾ ತೋಟಗಳು ಇತ್ಯಾದಿಗಳನ್ನು ಹೊಂದಿರುವ ಡಾರ್ಜಿಲಿಂಗ್ ನ ಚಹಾವು ವಿಶ್ವದ ಅತ್ಯಂತ ಜನಪ್ರಿಯ ಚಹಾಗಳಲ್ಲಿ ಒಂದಾಗಿದೆ.

ಶ್ರೀನಗರ

ಶ್ರೀನಗರ

ಜಮ್ಮು ಮತ್ತು ಕಾಶ್ಮೀರ ಪ್ರಾಚೀನ ಭೂಮಿಯಾಗಿದ್ದು ಇದು ಅತ್ಯಂತ ಮನಮೋಹಕ ಪರ್ವತ ಶ್ರೇಣಿಗಳು ಮತ್ತು ಅತ್ಯಧಿಕ ಸಂಖ್ಯೆಯ ಗಿರಿಧಾಮಗಳಿಗಾಗಿ ಪ್ರಖ್ಯಾತಿಯನ್ನು ಪಡೆದಿದೆ. ಭೂಮಿಯ ಮೇಲಿನ ಸ್ವರ್ಗವೆಂದೇ ಹಿಂದಿನಿಂದಲೂ ಕರೆಯಲ್ಪಡುವ ಜಮ್ಮು ಮತ್ತು ಕಾಶ್ಮೀರದಲ್ಲಿ ಶ್ರೀನಗರವಿದ್ದು ಇದು ಸುಂದರ ಝೇಲಮ್ ನದಿಯ ದಡದಲ್ಲಿ ನೆಲೆಸಿದೆ. ಇಲ್ಲಿಯ ಸ್ವರ್ಗ ಸದೃಶವಾದ ನೋಟಗಳು ಪ್ರವಾಸಿಗರು ಮತ್ತು ಪ್ರಯಾಣಿಕರನ್ನು ಅದರ ಸಾಂಪ್ರದಾಯಿಕ ಆಕರ್ಷಣೆಯೊಂದಿಗೆ ಆಕರ್ಷಿಸುತ್ತವೆ. ದಾಲ್ ಸರೋವರದ ಉತ್ಕೃಷ್ಟತೆಯನ್ನು ಅನುಭವಿಸಲು ಮತ್ತು ನೋಡಲು ಶ್ರೀನಗರಕ್ಕೆ ಭೇಟಿ ನೀಡಿ ಮತ್ತು ಇತರ ನೈಸರ್ಗಿಕ ಕೊಡುಗೆಗಳಿಗೆ ಸಮ ತಳದ ದೋಣಿ ಸವಾರಿ (ಶಿಕಾರ) ಆನಂದಿಸಿ. ಅಂದವಾದ ಹೌಸ್‌ಬೋಟ್‌ಗಳು ಮತ್ತು ಗಮನಾರ್ಹವಾದ ಉದ್ಯಾನವನಗಳೊಂದಿಗೆ, ಶ್ರೀನಗರವು ಭಾರತದ ಅತ್ಯಂತ ರೋಮ್ಯಾಂಟಿಕ್ ಗಿರಿಧಾಮಗಳಲ್ಲಿ ಒಂದಾಗಿದೆ.

ಕೂರ್ಗ್

ಕೂರ್ಗ್

ಹೆಕ್ಟೇರುಗಟ್ಟಲೆ ಪ್ರದೇಶಗಳಲ್ಲಿ ಹರಡಿಕೊಂಡಿರುವ ಹಸಿರು ಬೆಟ್ಟಗಳು ಮತ್ತು ತೋಟಗಳೊಂದಿಗೆ, ಕೂರ್ಗ್ ಡಿಸೆಂಬರ್‌ನಲ್ಲಿ ಹಚ್ಚ ಹಸಿರಿನ ಕಾರ್ಪೆಟ್ ಆಗಿ ರೂಪಾಂತರಗೊಳ್ಳುತ್ತದೆ! ಭಾರತದ ಸ್ಕಾಟ್ಲೆಂಡ್ ಎಂದೇ ಪ್ರಸಿದ್ಧವಾಗಿರುವ ಕೂರ್ಗ್ ತನ್ನ ಅಧಿಕೃತ ಪಾಕಪದ್ಧತಿ, ದೇವಾಲಯಗಳು ಮತ್ತು ಪುರಾತನ ಅವಶೇಷಗಳಿಂದ ಜನರನ್ನು ಆಕರ್ಷಿಸುತ್ತದೆ. ಕೂರ್ಗನ ನೈಸರ್ಗಿಕ ಕೊಡುಗೆಗಳ ಜೊತೆಗೆ, ಕೂರ್ಗ್ ಬೈಲಕುಪ್ಪೆಯಲ್ಲಿರುವ ಟಿಬೆಟಿಯನ್ನರ ಅತ್ಯಂತ ಮಹತ್ವದ ಮಠಕ್ಕೆ ನೆಲೆಯಾಗಿದೆ. ನಿಮ್ಮ ಮನಸ್ಸು ಮತ್ತು ದೇಹವನ್ನು ಪುನಶ್ಚೇತನಗೊಳಿಸಲು ನೀವು ಮಠದಲ್ಲಿ ಒಂದು ಅಥವಾ ಎರಡು ದಿನಗಳನ್ನು ಕಳೆಯಬಹುದು! ಕೂರ್ಗ್ ಎಲ್ಲಾ ವರ್ಗದ ಹಾಗೂ ಎಲ್ಲಾ ವಯೋಮಾನದ ಜನರಿಗೂ ಬೇಕಾದ ಎಲ್ಲವನ್ನೂ ನೀಡುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+