• Follow NativePlanet
Share
Menu
» »ದಿನಕ್ಕೆ 2 ಬಾರಿ ಕಣ್ಮರೆಯಾಗುವ ಬೀಚ್: ಒಡಿಶಾದ ಹೈಡ್ ಆಂಡ್ ಸೀಕ್ ಬೀಚ್

ದಿನಕ್ಕೆ 2 ಬಾರಿ ಕಣ್ಮರೆಯಾಗುವ ಬೀಚ್: ಒಡಿಶಾದ ಹೈಡ್ ಆಂಡ್ ಸೀಕ್ ಬೀಚ್

Written By:

ಏನು ದಿನಕ್ಕೆ 2 ಬಾರಿ ಕಣ್ಮರೆಯಾಗುವ ಬೀಚ್? ಎಂದು ಆಶ್ಚರ್ಯ ಪಡುತ್ತಿದ್ದೀರಾ? ಹೌದು ನೀವು ಓದುತ್ತಿರುವುದು ಅಕ್ಷರಶಃ ನಿಜ. ಒಡಿಶಾದಲ್ಲಿರುವ ಒಂದು ಬೀಚ್ ದಿನಕ್ಕೆ ಎರಡು ಬಾರಿ ಕಣ್ಮರೆಯಾಗುತ್ತದೆ. ಈ ಬೀಚ್ ಚಂಡಿಪುರ ಸಮುದ್ರ ತೀರವನ್ನು ಹೈಡ್ ಆಂಡ್ ಸೀಕ್ ಬೀಚ್ ಎಂದೂ ಸಹ ಕರೆಯುತ್ತಾರೆ. ಎತ್ತರವಾದ ಅಲೆಗಳು ಹಾಗು ಕಡಿಮೆ ಎತ್ತರವಾದ ಅಲೆಗಳನ್ನು ಕಾಣಬಹುದಾಗಿದೆ.

ಈ ಅಲೆಗಳು ಸುಮಾರು 2 ರಿಂದ 3 ಕಿ.ಮೀ ದೂರಗಳು ಹಿಮ್ಮೆಟ್ಟುತ್ತವೆ. ಆಗ ಸ್ಥಾನ ಪಲ್ಲಟ ಮಾಡುತ್ತದೆ. ಈ ವಿಚಿತ್ರವಾದ ದೃಶ್ಯವು ಪ್ರತಿನಿತ್ಯ ಕಂಡು ಬರುತ್ತದೆ. ಹಾಗಾಗಿಯೇ ಈ ಆಶ್ಚರ್ಯಕರವಾದ ಬೀಚ್ ಕಾಣಲು ದೇಶ, ವಿದೇಶಗಳಿಂದ ಭೇಟಿ ನೀಡುತ್ತಾರೆ.

ಪ್ರಸ್ತುತ ಲೇಖನದಲ್ಲಿ ಇಂಥಹ ಆಶ್ಚರ್ಯಕರವಾದ ಬೀಚ್‍ನ ಬಗ್ಗೆ ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

ಈ ಹೈಡ್ ಆಂಡ್ ಸೀಕ್ ಬೀಚ್ ಇರುವುದು ಒಡಿಶಾ ರಾಜ್ಯದಲ್ಲಿ. ಒರಿಶಾದ ಭುವನೇಶ್ವರದಿಂದ ರಾಷ್ಟ್ರೀಯ ಹೆದ್ದಾರಿ 5 ಮತ್ತು 200 ಕಿ.ಮೀ ದೂರದಲ್ಲಿರುವ ಬಾಲಸೋರ್ ಜಿಲ್ಲೆಯ ರೈಲು ನಿಲ್ದಾಣದಿಂದ 16 ಕಿ.ಮೀ ದೂರದಲ್ಲಿ ಈ ಕಡಲತೀರವಿದೆ.

PC:Abinashjenatubulu

ಹೈಡ್ ಆಂಡ್ ಸೀಕ್

ಹೈಡ್ ಆಂಡ್ ಸೀಕ್

ಸಾಮಾನ್ಯವಾಗಿ ಬೀಚ್‍ಗಳೆಂದರೆ ಎಲ್ಲರಿಗೂ ಪ್ರಿಯವಾದುದು. ಆದರೆ ವಿಸ್ಮಯ ರೀತಿಯಲ್ಲಿ ಒಂದು ದಿನಕ್ಕೆ 2 ಬಾರಿ ಸ್ಥಾನ ಬದಲಾವಣೆ ಮಾಡುವ ಬೀಚ್ ಎಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಒಮ್ಮೆ ನೋಡಿಬಂದ ಬೀಚ್ ಮತ್ತೇ ಕಾಣಲಿಲ್ಲ ಎಂದರೆ ಆಗುವ ಚಕಿತ ಹೇಳವುದಕ್ಕೆ ಅಸಾಧ್ಯವಾದುದು.


PC:Wikipediaacc

ಬೀಚ್‍ನ ಸೌಂದರ್ಯ

ಬೀಚ್‍ನ ಸೌಂದರ್ಯ

ಈ ಬೀಚ್ ಅತ್ಯಂತ ಸುಂದರವಾಗಿದೆ. ಈ ವಿಸ್ಮಯವಾದ ಬೀಚ್‍ನಲ್ಲಿ ಏಡಿಗಳನ್ನು ಕಾಣಬಹುದಾಗಿದೆ. ಮುಖ್ಯವಾಗಿ ಕೆಂಪು ಏಡಿಗಳನ್ನು. ಕಡಲ ತೀರದ ಆಹಾರವನ್ನು ಇಷ್ಟಪಡುವವರಿಗೆ ಬಾಯೂರಿಸುವ ಸ್ವಾಧಿಷ್ಟವಾದ ಸಮುದ್ರ ತಿನಿಸುಗಳನ್ನು ಅಸ್ವಾಧಿಸಬಹುದಾಗಿದೆ. ಇಲ್ಲಿ ಓರಿಯಾ ಹಾಗು ಬಂಗಾಳಿ ಭೋಜನವನ್ನು ಕೂಡ ಅಸ್ವಾಧಿಸಬಹುದಾಗಿದೆ.

ಸಾಕಷ್ಟು ಜನರಿಗೆ ತಿಳಿದಿಲ್ಲ

ಸಾಕಷ್ಟು ಜನರಿಗೆ ತಿಳಿದಿಲ್ಲ

ಕಡಿಮೆ ಮತ್ತು ಎತ್ತರದ ಅಲೆಗಳ ವ್ಯತ್ಯಾಸಗಳಿಂದ ಚಂಡಿಪುರದ ಸಮುದ್ರತೀರವು ಪ್ರಸಿದ್ಧಿಯನ್ನು ಪಡೆದಿದ್ದರೂ ಕೂಡ ಈ ನಿಗೂಢವಾದ ಪ್ರದೇಶದ ಬಗ್ಗೆ ಅಷ್ಟಾಗಿ ಪ್ರವಾಸಿಗರಿಗೆ ತಿಳಿದಿಲ್ಲ. ಪ್ರಪಂಚದಲ್ಲಿನ ಏಕೈಕ ಸ್ಥಳ ಬದಲಾವಣೆಯ ಬೀಚ್ ಎಂದರೆ ಇದೆ. ಪುರಿ ಅಥವಾ ಕೊನಾರ್ಕ್ ದೇವಾಲಯಕ್ಕೆ ಭೇಟಿ ನೀಡುವ ಹಲವಾರು ಪ್ರವಾಸಿಗರಿಗೂ ಕೂಡ ಈ ಅದ್ಭುತವಾದ ಸ್ಥಳಗಳ ಬಗ್ಗೆ ತಿಳಿದಿಲ್ಲ.

ಆರಾಮದಾಯಕ

ಆರಾಮದಾಯಕ

ಚಂದ್ರನ ಚಲನೆಯನ್ನು ಅವಲಂಬಿಸಿರುವ ಈ ಅಲೆಗಳ ನಿರ್ದಿಷ್ಟ ಸಮಯಗಳ ಹಾಗು ಹೆಚ್ಚು ಆನಂದಮಯವಾದ ಸಮಯವನ್ನು ಇಲ್ಲಿ ಕಳೆಯಲು ಅವಕಾಶವಿದೆ. ನೀವು ನಿಧಾನವಾಗಿ ಮರಳಿದಾಗ ಅಥವಾ ಕಡಲತೀರದೊಳಗೆ ಪ್ರವೇಶಿಸಿದಾಗ ನೀವು ನಿಜವಾಗಿಯೂ ಸಮುದ್ರದೊಳಗೆ ಇರುವ ರೊಮಾಂಚನಕಾರಿ ಅನುಭುತಿಯನ್ನು ಪಡೆಯಬಹುದಾಗಿದೆ.

ಜೀವ ವೈವಿದ್ಯಮಯ

ಜೀವ ವೈವಿದ್ಯಮಯ

ಈ ಹೈಡ್ ಆಂಡ್ ಸೀಕ್ ಕಡಲತೀರದಲ್ಲಿ ಶಾಂತವಾದ ಕಡಲತೀರವೇ ಅಲ್ಲದೇ ಹಲವಾರು ಜೀವ ವೈವಿದ್ಯಗಳಲ್ಲಿಯೂ ಕೂಡ ಸಮೃದ್ಧವಾಗಿದೆ. ಇಲ್ಲಿ ಹಲವಾರು ಸಮುದ್ರದ ಪ್ರಾಣಿಗಳನ್ನು ಕಾಣಬಹುದಾಗಿದೆ.

ಸಮೀಪದ ಪ್ರವಾಸಿ ಸ್ಥಳಗಳು

ಸಮೀಪದ ಪ್ರವಾಸಿ ಸ್ಥಳಗಳು

ಚಂಡೀಪುರದ ಸಮುದ್ರ ತೀರದ ಸಮೀಪದಲ್ಲಿ ಹಲವಾರು ಪ್ರವಾಸಿತಾಣಗಳಿವೆ. ಅವುಗಳೆಂದರೆ ದೇವಕುಂದ ಜಲಪಾತ, ಪಂಚಲೈನೇಶ್ವರ ದೇವಾಲಯ, ಖಿರಾಚೋರ ಗೋಪಿನಾಥ್ ದೇವಾಲಯ, ಚಂದನೇಶ್ವರ ದೇವಾಲಯ, ನೀಲಗಿರಿ ಜಗನ್ನಾಥ ಮಂದಿರ ಇನ್ನೂ ಹಲವಾರು.

ಭೇಟಿ ಸೂಕ್ತವಾದ ಸಮಯ

ಭೇಟಿ ಸೂಕ್ತವಾದ ಸಮಯ

ಈ ಹೈಡ್ ಆಂಡ್ ಸೀಕ್ ಬೀಚ್‍ಗೆ ಭೇಟಿ ನೀಡಲು ಸೂಕ್ತವಾದ ಸಮಯವೆಂದರೆ ಅದು ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ . ಏಕೆಂದರೆ ಫೆಬ್ರವರಿ ತಿಂಗಳಿನಲ್ಲಿ ಹಲವಾರು ನೃತ್ಯಗಳು, ಕಲೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಇಲ್ಲಿ ನಡೆಸಲಾಗುತ್ತದೆ.

ತಲುಪುವ ಬಗೆ?

ತಲುಪುವ ಬಗೆ?

ವಿಮಾನ ಮಾರ್ಗದ ಮೂಲಕ
ಈ ಹೈಟ್ ಆಂಡ್ ಸೀಕ್ ಬೀಚ್‍ಗೆ ತೆರಳಲು ಸಮೀಪವಾದ ವಿಮಾನ ನಿಲ್ದಾಣವೆಂದರೆ ಅದು ಭುವನೇಶ್ವರ. ಇಲ್ಲಿನ ವಿಮಾನ ನಿಲ್ದಾಣವು ದೇಶದ ಪ್ರಧಾನವಾದ ನಗರಗಳಾದ ಕೊಲ್ಕತ್ತ, ದೆಹಲಿ, ಹೈದ್ರಾಬಾದ್, ರಾಯ್‍ಪುರ, ನಾಗಪುರ ಮತ್ತು ಮುಂಬೈ ಇನ್ನೂ ಹಲವಾರು ಪ್ರದೇಶಗಳಿಂದ ನೇರವಾದ ವಿಮಾನ ನಿಲ್ದಾಣವಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ