Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಡಿಪುರ » ಹವಾಮಾನ

ಚಂಡಿಪುರ ಹವಾಮಾನ

ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಅತ್ಯಂತ ಪ್ರಸಕ್ತ ಸಮಯ. ಮರಳು ಉತ್ಸವವನ್ನು ಚಳಿಗಾಲದಲ್ಲಿ ಇಲ್ಲಿ ಆಯೋಜಿಸಲಾಗುತ್ತದೆ, ಈ ಉತ್ಸವದ ಸಮಯದಲ್ಲಿ ವಸ್ತು ಪ್ರದರ್ಶನ, ಕೈಮಗ್ಗ, ನೇಯ್ಗೆಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಖ್ಯಾತ ಕಲಾವಿದರಿಂದ ಸಾಂಸ್ಕ್ರುತಿಕ ಕಾರ್ಯಕ್ರಮಗಳೂ ನಡೆಯುತ್ತದೆ. ಚಂಡಿಪುರಕ್ಕೆ ಭೇಟಿ ನೀಡುವಾಗ ಬೆಚ್ಚಗಿನ ಉಡುಗೆ ತೊಡುಗೆಗಳನ್ನು ತೆಗೆದು ಕೊಂಡು ಹೋಗುವುದು ಸೂಕ್ತ.

ಬೇಸಿಗೆಗಾಲ

ಮಾರ್ಚ್ ತಿಂಗಳಿನಿಂದ ಜೂನ್ ಅಂತ್ಯದವರೆಗೂ ಬೇಸಿಗೆ ಕಾಲವಿರುತ್ತದೆ. ಉಷ್ಣಾಂಸ ಈ ಸಮಯದಲ್ಲಿ ಗರಿಷ್ಠ 47 ಡಿಗ್ರಿ ತಲುಪುತ್ತದೆ. ಬಿಸಿಗಾಳಿ ದಿನವಿಡೀ ಬೀಸುತ್ತಲೇ ಇದ್ದು, ವಿಪರಿಮಿತ ಸೆಖೆಯಿಂದಾಗಿ ಜೀವನ ಹೈರಾಣವಾಗುತ್ತದೆ. ಬಿಸಿಗಾಳಿಯಿಂದ ಜನತೆ ತೊಂದರ ಅನುಭವಿಸುತ್ತಲೇ ಇರುತ್ತದೆ.

ಮಳೆಗಾಲ

ಮಳೆಗಾಲ ಬೇಸಿಗೆಯ ಬಿಡು ಬಿಸಿಯಿಂದ ನೆಮ್ಮದಿ ನೀಡುತ್ತದೆ. ಜುಲೈ ತಿಂಗಳಿನಿಂದ ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ಈ ಭಾಗದಲ್ಲಿ ಅತ್ಯಧಿಕ ಮಳೆಯಾಗುತ್ತದೆ. ಮಳೆಗಾಲದಲ್ಲಿ ಸಂಪರ್ಕ ವ್ಯವಸ್ಥೆ ಇಲ್ಲಿ ಅಸ್ಥವ್ಯಸ್ಥ ಗೊಳ್ಳುತ್ತದೆ. ನದಿಗಳು ಉಕ್ಕಿ ಹರಿದು, ಪ್ರಮುಖ ರಸ್ತೆಗಳು ಜಲಾವೃತವಾಗುತ್ತದೆ.

ಚಳಿಗಾಲ

ಚಳಿಗಾಲ ಚಂಡಿಪುರದಲ್ಲಿ ಅತ್ಯಂತ ಆಹ್ಲಾದಕರವಾಗಿರುತ್ತದೆ, ಈ ಸಮಯದಲ್ಲಿ ಉಷ್ಣಾಂಸ ಹನ್ನೆರದೂ ಡಿಗ್ರಿಯವರೆಗಿರುತ್ತದೆ. ಚಳಿಗಾಲ ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗಿದ್ದು ಈ ಸಮಯದಲ್ಲಿ ಶೀತಗಾಳಿ ರಾಜ್ಯದೆಲ್ಲಡೆ ಬೀಸುತ್ತದೆ. ಹಾಗಾಗಿ ಈ ಸಮಯ ಉತ್ತಮವಾಗಿರುತ್ತದೆ.