Search
  • Follow NativePlanet
Share
» »ಹೇಮಕುಂಡ್‌ ಸಾಹೀಬ್ ಗುರುದ್ವಾರದ ಬಗ್ಗೆ ನಿಮಗೆ ಗೊತ್ತಾ?

ಹೇಮಕುಂಡ್‌ ಸಾಹೀಬ್ ಗುರುದ್ವಾರದ ಬಗ್ಗೆ ನಿಮಗೆ ಗೊತ್ತಾ?

ಗುರುದ್ವಾರ ಶ್ರೀ ಹೇಮಕುಂಡ್‌ ಸಾಹಿಬ್ ಜೀ ಎಂದು ಕರೆಯಲ್ಪಡುವ ಹೇಮಕುಂಡ್‌ ಸಾಹಿಬ್ ಉತ್ತರಖಂಡದ ಚಮೋಲಿ ಜಿಲ್ಲೆಯ ಒಂದು ಸಿಖ್ ಪೂಜಾ ಸ್ಥಳ ಮತ್ತು ಪವಿತ್ರ ಯಾತ್ರಾ ಸ್ಥಳವಾಗಿದೆ. ಇದು ಹತ್ತನೆಯ ಸಿಖ್ ಗುರುವಾದ ಗುರು ಗೋಬಿಂದ್ ಸಿಂಗ್ ಅವರಿಗೆ ಸಮರ್ಪಿಸಲಾಗಿದೆ.

ಹೇಮಕುಂಡ್‌ನ ಎತ್ತರ

ಹೇಮಕುಂಡ್‌ನ ಎತ್ತರ

Praveen Negi

ಹೇಮಕುಂಡ್‌ 15,197 ಅಡಿ (4328 ಮೀಟರ್) ಎತ್ತರದಲ್ಲಿದೆ. ಹಿಮಪದರದಲ್ಲಿ ವರ್ಷಪೂರ್ತಿ ಆವರಿಸಲ್ಪಟ್ಟಿದೆ, ಇದು ಜೂನ್ ನಿಂದ ಅಕ್ಟೋಬರ್ ವರೆಗೆ ಮಾತ್ರ ಪ್ರವೇಶಿಸಬಹುದಾಗಿದೆ. ಸಿಖ್ಖರಿಗೆ ಹೆಚ್ಚು ಪೂಜ್ಯವಾದ ತೀರ್ಥಯಾತ್ರೆಯ ಸ್ಥಳವಾಗಿದ್ದು, ಹೆಚ್ಚಿನ ಜನರು ಈ ಪರ್ವತವನ್ನು ಏರುತ್ತಾರೆ.

ಗಾಯತ್ರಿ ತಪೋಭೂಮಿಯಲ್ಲಿ ಕುಳಿತು ಗಾಯತ್ರಿ ಮಂತ್ರವನ್ನೊಮ್ಮೆ ಜಪಿಸಿದ್ರೆ... ಗಾಯತ್ರಿ ತಪೋಭೂಮಿಯಲ್ಲಿ ಕುಳಿತು ಗಾಯತ್ರಿ ಮಂತ್ರವನ್ನೊಮ್ಮೆ ಜಪಿಸಿದ್ರೆ...

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

Satbir 4

ಹಿಮಬಿಂದು ಪಥಗಳು ಮತ್ತು ಹಿಮನದಿಗಳಿಂದಾಗಿ ಹೇಮಕುಂಡ್‌ಗೆ ಅಕ್ಟೋಬರ್‌ನಿಂದ ಏಪ್ರಿಲ್ ವರೆಗೆ ಪ್ರವೇಶಿಸುವುದು ಸಾಧ್ಯವಾಗೋದಿಲ್ಲ. ಚಳಿಗಾಲದಲ್ಲಿ ಹಾಳಾಗಿರುವ ಈ ರಸ್ತೆಯನ್ನು ಸರಿಪಡಿಸಲು ಸಿಖ್ ಯಾತ್ರಿಗಳು ಮೇ ತಿಂಗಳಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಈ ಸಂಪ್ರದಾಯವು ನಿಸ್ವಾರ್ಥ ಸೇವೆ ಎಂದು ಕರೆಯಲ್ಪಡುತ್ತದೆ, ಇದು ಸಿಖ್ ನಂಬಿಕೆಯ ಪ್ರಮುಖ ತತ್ತ್ವವನ್ನು ರೂಪಿಸುತ್ತದೆ.

ರಾತ್ರಿ ಉಳಿಯುವಂತಿಲ್ಲ

ರಾತ್ರಿ ಉಳಿಯುವಂತಿಲ್ಲ

Panesar00888

ಅಲ್ಲಿ ಕೆಲವು ಹೋಟೆಲ್‌ಗಳು ಮತ್ತು ಡೇರೆಗಳು ಮತ್ತು ಹಾಸಿಗೆಗಳ ಕ್ಯಾಂಪ್ ಶಿಬಿರಗಳಿವೆ. ರಾತ್ರಿಯ ತಂಗುವಿಕೆಗೆ ಹೇಮಕುಂಡ್ ಸಾಹಿಬ್ ನಲ್ಲಿ ಅನುಮತಿ ಇಲ್ಲದಿರುವುದರಿಂದ ರಾತ್ರಿಯ ವೇಳೆಗೆ ಗೋವಿಂದಘಾಟ್‌ಗೆ ಮರಳಬೇಕಾಗುತ್ತದೆ.

ಮನುಷ್ಯನನ್ನು ಜೀವಂತ ಸಮಾಧಿ ಮಾಡಿ ನಿರ್ಮಿಸಲಾದ ಕೋಟೆ ಇದು !ಮನುಷ್ಯನನ್ನು ಜೀವಂತ ಸಮಾಧಿ ಮಾಡಿ ನಿರ್ಮಿಸಲಾದ ಕೋಟೆ ಇದು !

ದೆಹಲಿಯಿಂದ ರೈಲು

ದೆಹಲಿಯಿಂದ ರೈಲು

Satbir 4

ದೆಹಲಿಯಿಂದ ಪ್ರವಾಸಿಗರು ರೈಲಿನ ಮೂಲಕ ಹರಿದ್ವಾರವನ್ನು ತಲುಪುತ್ತಾರೆ. ನಂತರ ರಿಷಿಕೇಶ್‌ ಮೂಲಕ ಗೋವಿಂದಘಾಟ್‌ಗೆ ಬಸ್ ಮೂಲಕ ಪ್ರಯಾಣಿಸುತ್ತಾರೆ. ದೆಹಲಿಯಿಂದ ಗೋವಿಂದಘಾಟ್‌ಗೆ ಸುಮಾರು 500 ಕಿಲೋಮೀಟರ್ ಇದೆ. ಇದನ್ನು ಸುಮಾರು 18 ಗಂಟೆಗಳಲ್ಲಿ ತಲುಪಬಹುದು.

ಹೂವಿನ ಕಣಿವೆ

ಹೂವಿನ ಕಣಿವೆ

Neil Satyam

ಗೋವಿಂದಧಾಮದಿಂದ 3 ಕಿ.ಮೀ ದೂರದಲ್ಲಿರುವ ಹೂವುಗಳ ಕಣಿವೆ 5 ಕಿ.ಮೀ ಉದ್ದವಿದೆ. ಭಾರತೀಯ ಸರ್ಕಾರವು ಈ ಕಣಿವೆಯ ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಿದೆ. ಇದು ನಂದಾ ದೇವಿ ಬಯೋ ರಿಸರ್ವ್‌ನಲ್ಲಿ ನೆಲೆಗೊಂಡಿದೆ, ಮತ್ತು ಎಲ್ಲಾ ಚಟುವಟಿಕೆಗಳನ್ನು ಎಚ್ಚರಿಕೆಯಿಂದ ನಿಯಂತ್ರಿಸಲಾಗುತ್ತದೆ.

ಹೆಳವನಕಟ್ಟೆ ರಂಗನಾಥನ ದರ್ಶನ ಪಡೆದಿದ್ದೀರಾ?ಹೆಳವನಕಟ್ಟೆ ರಂಗನಾಥನ ದರ್ಶನ ಪಡೆದಿದ್ದೀರಾ?

ಬ್ರಹ್ಮ ಕಮಲ

ಬ್ರಹ್ಮ ಕಮಲ

Sabyk2001

ಪ್ರಸಿದ್ಧ ಹೂವಿನ ಕಣಿವೆ ಹೇಮಕುಂಡ ಸಾಹಿಬ್ ಸಮೀಪದಲ್ಲಿದೆ. ಘಂಘರಿಯಾದಿಂದ ಈ ಸುಂದರವಾದ ಸ್ಥಳವನ್ನು ತಲುಪಬಹುದು. ಮಳೆಗಾಲದಲ್ಲಿ, ಜುಲೈ ಮತ್ತು ಆಗಸ್ಟ್ ತಿಂಗಳುಗಳು ಭೇಟಿ ನೀಡಲು ಉತ್ತಮ ಸಮಯವಾಗಿದೆ. ಹಿಮಾಲಯದಲ್ಲಿ ಬ್ರಹ್ಮ-ಕಮಲ ಹೂವುಗಳು ಸುಮಾರು 12 ವರ್ಷಗಳಿಗೊಮ್ಮೆ ಹೂಬಿಡುತ್ತವೆ.

ಹೇಮಕುಂಡ ಸರೋವರ

ಹೇಮಕುಂಡ ಸರೋವರ

Amareshwara Sainadh

ಹೇಮಕುಂಡ ಸರೋವರವು ಹೇಮಕುಂಡ ಸಾಹಿಬ್ ಗುರುದ್ವಾರಕ್ಕೆ ಸಮೀಪದಲ್ಲಿದೆ, ಹೇಮಕುಂಡ್ ಸರೋವರವು ಈ ಸ್ಥಳದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಗುರುದ್ವಾರಕ್ಕೆ ಬರುವ ಭಕ್ತರು ಈ ಪವಿತ್ರ ಸರೋವರದ ನೀರಿನಲ್ಲಿ ಮುಳುಗಿ ಹೇಮಕುಂಡ ಸಾಹಿಬ್‌ಗೆ ಭೇಟಿ ನೀಡುತ್ತಾರೆ.

ರಾಮಾಯಣ ಎಕ್ಸ್‌ಪ್ರೆಸ್‌; ಇದರ ವಿಶೇಷತೆ ಏನು? ಟಿಕೇಟ್‌ ಎಷ್ಟು? ರಾಮಾಯಣ ಎಕ್ಸ್‌ಪ್ರೆಸ್‌; ಇದರ ವಿಶೇಷತೆ ಏನು? ಟಿಕೇಟ್‌ ಎಷ್ಟು?

ತಲುಪುವುದು ಹೇಗೆ?

ತಲುಪುವುದು ಹೇಗೆ?

Panoramio

ಹೆಮಕುಂಡ್‌ ಸಾಹಿಬ್ ನಿಂದ 310 ಕಿ.ಮೀ ದೂರದಲ್ಲಿರುವ ಡೆಹ್ರಾಡೂನ್‌ನಲ್ಲಿ ಜೋಲಿ ಗ್ರಾಂಟ್ ವಿಮಾನ ನಿಲ್ದಾಣವಿದೆ. ಹಮಕುಂಡ ಸಾಹಿಬ್ ನಿಂದ ಹತ್ತಿರದ ರೈಲು ನಿಲ್ದಾಣಗಳು ಡೆಹ್ರಾಡೂನ್ ಮತ್ತು ಹರಿದ್ವಾರದಲ್ಲಿವೆ. ಎರಡೂ ಸ್ಥಳಗಳಿಂದ, ಹೆಮಕುಂಡ್ ತಲುಪಲು ಬಸ್ ಅಥವಾ ಕ್ಯಾಬ್ ಅನ್ನು ತಲುಪಬಹುದು. ಜೋಶಿಮಠಕ್ಕೆ ಹರಿದ್ವಾರ ಮತ್ತು ಡೆಹ್ರಾಡೂನ್ನಿಂದ ಖಾಸಗಿ ಬಸ್ಸುಗಳು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X