Search
  • Follow NativePlanet
Share
» »ಬೌದ್ಧ ಧರ್ಮ ಮತ್ತು ಜೈನ ಧರ್ಮದ ತೀರ್ಥಸ್ಥಳವಾದ ವೈಶಾಲಿಯ ಕಡೆಗೆ ಪ್ರಯಾಣ

ಬೌದ್ಧ ಧರ್ಮ ಮತ್ತು ಜೈನ ಧರ್ಮದ ತೀರ್ಥಸ್ಥಳವಾದ ವೈಶಾಲಿಯ ಕಡೆಗೆ ಪ್ರಯಾಣ

ವೈಶಾಲಿ ಬಿಹಾರ ಪ್ರವಾಸೋದ್ಯಮದ ಬಗ್ಗೆ , ವೈಶಾಲಿ ಬಿಹಾರದ ಇತಿಹಾಸ, ವೈಶಾಲಿ, ಪಾಟ್ನಾ, ವೈಶಾಲಿ ಅಂತರ ಮತ್ತು ಭೇಟಿ ನೀಡಬಹುದಾದ ಇನ್ನಿತರ ಸ್ಥಳಗಳು.

By Manjula balaraj

ವೈಶಾಲಿ ಬಿಹಾರದ ಒಂದು ಪುರಾತನ ನಗರವಾಗಿದ್ದು, ಇದು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಈಗ ಇದು ಒಂದು ಸಣ್ಣ ಗ್ರಾಮವಾಗಿದ್ದು ರಾಜಧಾನಿಯಾದ ಪಾಟ್ನಾದಿಂದ 32 ಕಿ.ಮಿ ದೂರದಲ್ಲಿದೆ.

ರಾಮಾಯಣದ ಯುಗದ ರಾಜನಾಗಿದ್ದ ರಾಜಾ ವಿಶಾಲ್ ಎಂಬ ರಾಜನ ಹೆಸರನ್ನು ಈ ಪಟ್ಟಣಕ್ಕೆ ಇಡಲಾಗಿದೆ. ದೇಶದ ಮೊದಲ ಗಣರಾಜ್ಯ ಹೊಂದಿದ ರಾಜ್ಯಗಳಲ್ಲಿ ಇದು ಮೊದಲನೆಯದು ಎಂದು ಹೇಳಲಾಗುತ್ತದೆ. ಕ್ರಿ.ಪೂ. 6ನೇ ಶತಮಾನದಲ್ಲಿ ಗಣತಂತ್ರವನ್ನು ಇಲ್ಲಿ ಆಚರಿಸಲಾಗಿತ್ತು. ಇದು ಯಾವಾಗ ಅಂದರೆ ಈ ಪಟ್ಟಣವು ಬುದ್ದನ ಆಡಳಿತದ ಸಮಯಕ್ಕೂ ಮುನ್ನ ಗಣರಾಜ್ಯದ ಸರಕಾರವನ್ನು ರೂಢಿಸಿಕೊಂಡಿತ್ತು.

ವೈಶಾಲಿ ನಗರದ ಇತಿಹಾಸ

Vaishali Bihar tourism

PC: Shuklarajrishi

ವೈಶಾಲಿ ನಗರದ ಇತಿಹಾಸ ಐತಿಹಾಸಿಕ ಮಹತ್ವ ಉಳ್ಳದ್ದಾಗಿದೆ. ಭಗವಾನ್ ಬುದ್ಧ ತಮ್ಮ ಜೀವನದ ಬಹುಪಾಲು ಈ ನಗರದಲ್ಲಿಯೇ ಕಳೆದಿದ್ದರು. ಆದುದರಿಂದ ಬೌದ್ಧ ಧರ್ಮದವರಿಗೆ ಈ ನಗರವು ಪ್ರಮುಖ ಯಾತ್ರಾ ಸ್ಥಳವಾಗಿದೆ. ಅಲ್ಲದೆ ವೈಶಾಲಿ ಭಗವಾನ್ ಮಹಾವೀರನ ಹುಟ್ಟಿದ ಸ್ಥಳವಾಗಿದೆ. ಆದ್ದರಿಂದ ನಮ್ಮ ದೇಶದ ಎರಡು ಪ್ರಮುಖ ಧರ್ಮಗಳಾದ ಬೌದ್ಧ ಹಾಗೂ ಜೈನ ಧರ್ಮಗಳು ಈ ನಗರದಲ್ಲಿ ಪ್ರಬಲವಾಗಿ ಪ್ರಚಲಿತವಾಗಿದೆ.

ವೈಶಾಲಿಯು ಭಗವಾನ್ ಬುದ್ಧ ಮತ್ತು ಭಗವಾನ್ ಮಹಾವೀರರ ಉಪಸ್ಥಿತಿಗೆ ಮುಂಚಿತವಾಗಿ ಲಿಚವಿ ಎಂಬ ಹೆಸರಿನ ಗಣತಂತ್ರ ರಾಜ್ಯದ ರಾಜಧಾನಿಯಾಗಿತ್ತು. ವೈಶಾಲಿಯು ಪ್ರಸಿದ್ದ ದೇವದಾಸಿಯಾದ ಅಮ್ರಪಾಲಿಯವರ ಜನ್ಮ ಸ್ಥಳವೂ ಆಗಿದೆ. ನಂತರ ಇವರು ಬುದ್ಧನ ಅನುಯಾಯಿಯಾದರು ಎಂದು ಹೇಳಲಾಗುತ್ತದೆ.

ವೈಶಾಲಿಯ ರಾಜಾ ಅಶೋಕನ ಆಳ್ವಿಕೆಯ ಅವಧಿಯಲ್ಲಿ ಬೌದ್ಧ ಧರ್ಮವನ್ನು ಅಳವಡಿಸಿಕೊಂಡರು ಇವರು ವೈಶಾಲಿಯಲ್ಲಿ ಅಶೋಕ ಸ್ಥಂಭವನ್ನು ಸ್ಥಾಪಿಸಿದರು. ವೈಶಾಲಿಗೆ ಭೇಟಿಕೊಡುವ ಮೊದಲು ಅಶೋಕ ಸ್ಥಂಭ ಮತ್ತು ಇತರ ಸ್ಥಳಗಳ ಬಗ್ಗೆ ಎಲ್ಲವನ್ನು ಓದಿ.

ಅಶೋಕ ಸ್ಥಂಭ
ಅಶೋಕ ಸ್ಥಂಭದಂತೆ ದೇಶದ ವಿವಿಧ ಭಾಗಗಳಲ್ಲಿ ರಾಜಾ ಅಶೋಕನು ಕಟ್ಟಿಸಿದ ಸ್ಥಂಭಗಳಂತೆ ಇವೆ. ವೈಶಾಲಿಯಲ್ಲಿಯೂ ಕೂಡ ಅಶೋಕ ಸ್ಥಂಭವಿದೆ. ಭಗವಾನ್ ಬುದ್ಧನ ಕೊನೆಯ ಧರ್ಮೋಪದೇಶದ ನೆನಪಿಗಾಗಿ ಇದನ್ನು ನಿರ್ಮಿಸಲಾಯಿತು. ವೈಶಾಲಿಯ ಅಶೋಕ ಸ್ಥಂಭದ ಮೇಲೆ ಯಾವುದೇ ಶಾಸನಗಳಿಲ್ಲ.

ಇದು ಅತ್ಯಂತ ಜನಪ್ರೀಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಮತ್ತು ಪುರಾತತ್ವ ಶಾಸ್ತ್ರ ಅಥವಾ ಇತಿಹಾಸದ ಬಗ್ಗೆ ಉತ್ಸಾಹ ಉಳ್ಳವರನ್ನು ಈ ಜಾಗವು ಆಕರ್ಷಿಸುತ್ತದೆ.

ವಿಶ್ವಶಾಂತಿ ಸ್ಥೂಪ

Vaishali Bihar tourism

PC: mself

ಬೌದ್ಧ ಧರ್ಮವನ್ನು ಮುಂದುವರಿಸುವುದಕ್ಕೆ ಶಾಂತಿ ಮತ್ತು ಸಾಮರಸ್ಯದ ಗುರುತಿಗಾಗಿ ವಿಶ್ವಶಾಂತಿ ಸ್ಥೂಪ ಮತ್ತು ಶಾಂತಿ ಸ್ಥೂಪವನ್ನು ದೇಶದಾದ್ಯಂತ ನಿರ್ಮಿಸಲಾಯಿತು. ಅಂತಹ ವಿಶ್ವಶಾಂತಿ ಸ್ಥೂಪ ಅಥವಾ ಪೀಸ್ ಪಗೋಡವನ್ನು ವೈಶಾಲಿಯಲ್ಲಿ ನಿರ್ಮಿಸಲಾಗಿದೆ ಇದನ್ನು 1969 ರಲ್ಲಿ ಉತ್ಖನನ ಮಾಡಲಾಯಿತು.

ಈ ಶಾಂತಿ ಸ್ಠೂಪಗಳು ಬಿಳಿ ಅಮೃತ ಶಿಲೆಯಿಂದ ಮಾಡಿದ ಸುಂದರ ರಚನೆಳಾಗಿವೆ. ವೈಶಾಲಿಯ ವಿಶ್ವ ಶಾಂತಿ ಸ್ಠೂಪದ ಸುತ್ತ ಪ್ರಶಾಂತವಾದ ಹಸಿರು ಪ್ರದೇಶವನ್ನು ಹೊಂದಿದೆ ಅಲ್ಲದೆ ಅಲ್ಲಿ ಒಂದು ಕೊಳವಿದ್ದು ಪ್ರವಾಸಿಗರಿಗೆ ಬೋಟಿಂಗ್ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಗಮನ ಸೆಳೆಯುವ ಇತರ ಸ್ಥಳಗಳು: ಶಾಂತಿ ಸ್ಠೂಪಗಳು ಶಾಂತಿ ಮತ್ತು ಸಮೃದ್ದಿಯ ಚಿಹ್ನೆ ಯಾಗಿರುವುದರಿಂದ ವೈಶಾಲಿಯ ಇತರ ಸ್ಥಳಗಳಲ್ಲೂ ಬೌದ್ಧ ಧರ್ಮ ಗಮನಾರ್ಹ ಪ್ರಭಾವವನ್ನು ಬೀರಿದೆ. ಭಗವಾನ್ ಬುದ್ಧನ ಎರಡು ಸ್ಠೂಪಗಳು ಪಟ್ಟಣದಲ್ಲಿ ಕಂಡುಬರುತ್ತದೆ. ಈ ಎರಡೂ ಸ್ಠೂಪಗಳು ಭಗವಾನ್ ಬುದ್ಧನ ಚಿತಾಭಸ್ಮವನ್ನು ಹೊಂದಿವೆ. ಅಭಿಷೇಕ್ ಪುಷ್ಕರಣಿ ಎಂಬ ಹೆಸರಿನ ಒಂದು ಟ್ಯಾಂಕ್ ನಗರದಲ್ಲಿ ಕಂಡು ಬರುತ್ತದೆ. ವೈಶಾಲಿಯ ಹಿಂದಿನ ರಾಜರುಗಳ ಪಟ್ಟಾಭಿಷೇಕಕ್ಕಾಗಿ ಈ ಟ್ಯಾಂಕಿನ ಪವಿತ್ರ ನೀರನ್ನು ಬಳಸುತ್ತಿದ್ದ ಕಾರಣ ಇದು ಒಂದು ಜನಪ್ರಿಯ ಸ್ಥಳವಾಗಿದೆ.

ಕುಂದಾಲ್ಪುರ್ ಇದು ಜೈನ ಭಕ್ತರ ಪ್ರಾಮುಖ್ಯತೆಯ ಒಂದು ಸ್ಥಳವಾಗಿದೆ. ಇಲ್ಲಿ ಒಂದನೇ ತೀರ್ಥಂಕರರಾದ ಭಗವಾನ್ ಆದಿನಾಥರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಬವನ್ ಪೋಖರ್ ದೇವಾಲಯ ಮತ್ತು ರಾಮಚೌರ ಮಂದಿರ ವೈಶಾಲಿಯಲ್ಲಿ ಭೇಟಿ ಕೊಡಬಹುದಾದ ಎರಡು ಹಿಂದೂ ದೇವಾಲಯಗಳಾಗಿವೆ.

ವೈಶಾಲಿ ತಲುಪುವುದು ಹೇಗೆ:

Vaishali Bihar tourism

PC: Neil Satyam

ವಾಯುಮಾರ್ಗದ ಮೂಲಕ: ವೈಶಾಲಿಯಿಂದ 65ಕಿ.ಮೀ ದೂರದಲ್ಲಿರುವ ಪಾಟ್ನಾ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು, ಕೊಲ್ಕತಾ, ಹೈದರಾಬಾದ್ ಮುಂತಾದ ವಿವಿಧ ನಗರಗಳಿಗೆ ಈ ವಿಮಾನ ನಿಲ್ದಾಣದಿಂದ ಉತ್ತಮ ಸಂಪರ್ಕವಿದೆ. ಇಲ್ಲಿಂದ ವೈಶಾಲಿ ತಲುಪಲು ಸುಮಾರು ಒಂದು ತಾಸು ತೆಗೆದುಕೊಳ್ಳುತ್ತದೆ. ರೈಲು ಮೂಲಕ ಪ್ರಯಾಣ ಮಾಡುವುದಾದರೆ, ಹಾಜಿಪುರ್ ರೈಲು ನಿಲ್ದಾಣವು ಸಮೀಪದ ರೈಲು ನಿಲ್ದಾಣವಾಗಿದೆ, ಇದು ಕೋಲ್ಕತಾ, ಗೋರಖ್ ಪುರ, ಚಂಡೀಗಢ, ಇತ್ಯಾದಿಗಳಿಂದ ಬರುವ ರೈಲುಗಳನ್ನು ಹೊಂದಿರುವ ಸಣ್ಣ ನಿಲ್ದಾಣವಾಗಿದೆ. ಇದು ಪಟ್ಟಣದಿಂದ ಸುಮಾರು 40ಕಿ. ಮೀ ದೂರದಲ್ಲಿದೆ.

ರೈಲಿನ ಮೂಲಕ: ರೈಲು ಮೂಲಕ ಪ್ರಯಾಣ ಮಾಡುವುದಾದರೆ: ಹಾಜಿಪುರ್ ರೈಲು ನಿಲ್ದಾಣವು ಸಮೀಪದ ರೈಲು ನಿಲ್ದಾಣವಾಗಿದೆ, ಇದು ಕೋಲ್ಕತಾ, ಗೋರಖ್ಪುರ, ಚಂಡೀಗಢ, ಇತ್ಯಾದಿಗಳಿಂದ ಬರುವ ರೈಲುಗಳನ್ನು ಹೊಂದಿರುವ ಸಣ್ಣ ನಿಲ್ದಾಣವಾಗಿದೆ. ಇದು ಪಟ್ಟಣದಿಂದ ಸುಮಾರು 40ಕಿ. ಮೀ ದೂರದಲ್ಲಿದೆ.

ರಸ್ತೆಯ ಮೂಲಕ: ರಸ್ತೆಗಳು ಮತ್ತು ರಾಜ್ಯ ಸರ್ಕಾರಿ ಬಸ್ಸುಗಳ ಮೂಲಕ ವೈಶಾಲಿ ರಾಜ್ಯದ ಇತರ ಭಾಗಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಪಟ್ಟಣವನ್ನು ರಾಜಧಾನಿ, ಪಾಟ್ನಾಮತ್ತು ಇತರ ಸ್ಥಳಗಳಿಗೆ ಸಂಪರ್ಕಿಸುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+