• Follow NativePlanet
Share
» » ಮಹಾರಾಷ್ಟ್ರಕ್ಕೆ ಹೋದ್ರೆ ಮಹಾಬಲೇಶ್ವರಕ್ಕೆ ಹೋಗೋದು ಮಾತ್ರ ಮಿಸ್ ಮಾಡ್ಬೇಡಿ

ಮಹಾರಾಷ್ಟ್ರಕ್ಕೆ ಹೋದ್ರೆ ಮಹಾಬಲೇಶ್ವರಕ್ಕೆ ಹೋಗೋದು ಮಾತ್ರ ಮಿಸ್ ಮಾಡ್ಬೇಡಿ

Written By:

ಬೇಸಿಗೆ ರಜೆಯಲ್ಲಿ ಹೆಚ್ಚಿನವರು ತಮ್ಮ ಫ್ಯಾಮಿಲಿ ಜೊತೆ, ಸ್ನೇಹಿತರ ಜೊತೆ ಪ್ರವಾಸ ಹೋಗುತ್ತಾರೆ. ಸಾಮಾನ್ಯವಾಗಿ ಮುಂಬೈಯನ್ನು ಹೆಚ್ಚಿನವರು ಸುತ್ತಾಡಿರುತ್ತಾರೆ, ಆದರೆ ನೀವು ಬೇಸಿಗೆಯಲ್ಲಿ ಸುತ್ತಾಡಬಹುದಾದ ಇನ್ನೂ ಹಲವು ಪ್ರದೇಶಗಳು ಮಹಾರಾಷ್ಟ್ರದಲ್ಲಿದೆ.

ಪವಿತ್ರ ಸರೋವರ: ಮೋಕ್ಷ ಬೇಕಾದ್ರೆ ಇಲ್ಲಿ ಒಮ್ಮೆ ಸ್ನಾನ ಮಾಡಿ

ಪಂಚಗಣಿ

ಪಂಚಗಣಿ

PC- Akhilesh Dasgupta
ಪಂಚಗಣಿ ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿರುವ ಸುಂದರ ಹಿಲ್‌ಸ್ಟೇಶನ್ ಆಗಿದೆ. ಇದು ಇಲ್ಲಿನ ವಾತಾವರಣ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಮುಂಬೈ ಒಳಗೆಯೇ ತಿರುಗಾಡ ಬುಸುವವರು ಈ ಸ್ಥಳಕ್ಕೆ ಹೋಗಬಹುದು. ಇತ್ತೀಚೆಗಂತೂ ಪ್ರಕೃತಿ ಪ್ರೀಯರು ಹಾಗೂ ಫೋಟೋಗ್ರಾಫರ್ಸ್‌ಗಳಿಂದಾಗಿ ಈ ಸ್ಥಳ ಇನ್ನೂ ಫೇಮಸ್ ಆಗಿದೆ.

ಕಾಶಿದ್

ಕಾಶಿದ್

ಮುಂಬೈನಿಂದ ಸುಮಾರು 135ಕಿ.ಮೀ ದೂರದಲ್ಲಿದೆ. ಯಾವಾಗಲೂ ಕೂಲ್ ವಾತಾವರಣ ಹೊಂದಿರುತ್ತದೆ. ಹಾಗೂ ಜನನಿಭಿಡವಾಗಿರುವುದಿಲ್ಲ.ನೀವು ಆರಾಮವಾಗಿ ಕಾಲಕಳೆಯಬಹುದು. ಹಾಗಾಗಿ ನೀವು ಕಾಶಿದ್‌ಗೆ ಭೇಟಿ ನೀಡಬಹುದು. ಬೀಚ್‌ಗಾಗಿಯೇ ಈ ಸ್ಥಳ ಫೇಮಸ್ ಆಗಿದೆ.

ಅಂಬೋಲಿ

ಅಂಬೋಲಿ

PC- Ayilliath
ಸಿಂಧುದುರ್ಗ ಜಿಲ್ಲೆಯಲ್ಲಿರುವ ಅಂಬೋಲಿಯು ಮಹಾರಾಷ್ಟ್ರದಲ್ಲಿರುವ ಒಂದು ಸಣ್ಣ ಹಿಲ್‌ಸ್ಟೇಶನ್ ಆಗಿದೆ. ಇಲ್ಲಿ ಪುರಾತನ ಶಿವ ದೇವಾಲಯವೂ ಇದೆ. ಇಲ್ಲಿ ಜಲಪಾತಗಳೂ ಇವೆ. ಅಂಬೋಲಿಯಲ್ಲಿರುವ ಶಿವ ದೇವಾಲಯದಿಂದಾಗಿ ಇದು ಹಿಂದೂಗಳ ಪವಿತ್ರ ಸ್ಥಳ ಎನ್ನಲಾಗುತ್ತದೆ.

ಮಹಾಬಲೇಶ್ವರ

ಮಹಾಬಲೇಶ್ವರ

PC- Ganesh G
ಮಹಾರಾಷ್ಟ್ರ ಹಾಗೂ ಮಹಾಬಲೇಶ್ವರದಲ್ಲಿ ಹಿಲ್‌ಸ್ಟೇಶನ್ ಬಗ್ಗೆ ಮಾತಾಡಿಲ್ಲವೆಂದಾದಲ್ಲಿ ನಿಮ್ಮ ಪ್ರವಾಸ ವ್ಯರ್ಥವಾದಂತೆ. ಒಮ್ಮೆ ನೀವು ಮಹಾಬಲೇಶ್ವರಕ್ಕೆ ಹೋದರೆ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಅಲ್ಲಗಳೆಯುವಂತಿಲ್ಲ. ಸತಾರ ಜಿಲ್ಲೆಯಲ್ಲಿರುವ ಮಹಾಬಲೇಶ್ವರವು ಬೇಸಿಗೆ ರಜಾದಲ್ಲಿ ಸುತ್ತಾಡಲು ಸೂಕ್ತ ತಾಣವಾಗಿದೆ.

ಮಾಲ್ವನ್

ಮಾಲ್ವನ್

PC- Satyanadipally3541
ಸಿಂಧುದುರ್ಗ ಜಿಲ್ಲೆಯಲ್ಲಿರುವ ಇನ್ನೊಂದು ಆಕರ್ಷಣೀಯ ಸ್ಥಳವೆಂದರೆ ಮಾಲ್ವನ್. ಇದು ಬೀಚ್‌ಗೆ ಹೆಸರುವಾಸಿಯಾಗಿದೆ. ಬೇಸಿಗೆಯಲ್ಲಂತೂ ಈ ಬೀಚ್ ಜನಜಂಗುಳಿಯಿಂದ ಕೂಡಿರುತ್ತದೆ. ಇಲ್ಲಿ ಸಿಂಧುದುರ್ಗ ಕೋಟೆ, ತ್ಸುನಾಮಿ ಐಲ್ಯಾಂಡ್, ಚೀವ್ಲಾ ಬೀಚ್, ರಾಕ್ ಗಾರ್ಡನ್ ಕೂಡಾ ಇದೆ. ನೀವು ಬಾಲಿವುಡ್ ಫ್ಯಾನ್‌ ಆಗಿದ್ದಲ್ಲಿ ಇಲ್ಲಿನ ಸಾಯಿ ಬಾಲಿವುಡ್ ಫಿಲ್ಮ್ ಸಿಟಿಯನ್ನು ಕಾಣಬಹುದು.

Read more about: summer maharashtra mumbai

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ