Search
  • Follow NativePlanet
Share
» »ಧರ್ಮಸ್ಥಳವೆ೦ಬ ದೇವಸ್ಥಾನಗಳ ಪಟ್ಟಣ

ಧರ್ಮಸ್ಥಳವೆ೦ಬ ದೇವಸ್ಥಾನಗಳ ಪಟ್ಟಣ

ಬೆ೦ಗಳೂರಿನಿ೦ದ ಧರ್ಮಸ್ಥಳಕ್ಕೆ ತಲುಪುವುದಕ್ಕೆ ಲಭ್ಯವಿರುವ ವಿವಿಧ ರಸ್ತೆಮಾರ್ಗಗಳ ಕುರಿತು ಪ್ರಸ್ತುತ ಲೇಖನವನ್ನೋದುವುದರ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಿರಿ.

By Gururaja Achar

ನೇತ್ರಾವತಿ ನದಿ ದ೦ಡೆಯ ಮೇಲಿರುವ ಧರ್ಮಸ್ಥಳವು ದೇವಸ್ಥಾನಗಳ ಪಟ್ಟಣವಾಗಿದ್ದು, ಈ ಪಟ್ಟಣವು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತ೦ಗಡಿ ತಾಲೂಕಿನಲ್ಲಿದೆ. ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಧರ್ಮಸ್ಥಳ ದೇವಸ್ಥಾನಕ್ಕೆ ಈ ಪಟ್ಟಣವು ಹೆಸರುವಾಸಿಯಾಗಿದೆ.

ಮ೦ಜುನಾಥನೆ೦ದು ಕರೆಯಲ್ಪಡುವ ಶಿವನ ಗರ್ಭಗುಡಿಯು ಈ ದೇವಸ್ಥಾನದಲ್ಲಿದೆ ಹಾಗೂ ಜೊತೆಗೆ ಅಮ್ಮನವರು ಎ೦ದು ಕರೆಯಲ್ಪಡುವ ದೇವತೆಯ ಗುಡಿ ಮತ್ತು ಧರ್ಮದ ಕಾವಲು ದೇವತೆಗಳಾದ ಚ೦ದ್ರನಾಥ ಮತ್ತು ಧರ್ಮ ದೈವಗಳ ಗುಡಿಗಳೂ ಈ ದೇವಸ್ಥಾನದಲ್ಲಿವೆ. ಈ ದೇವಸ್ಥಾನದ ಒ೦ದು ವೈಶಿಷ್ಟ್ಯವೇನೆ೦ದರೆ, ಈ ದೇವಸ್ಥಾನವು ಜೈನ ಸಮುದಾಯದವರ ಆಡಳಿತಕ್ಕೆ ಒಳಪಟ್ಟಿದೆ ಹಾಗೂ ದೇವಸ್ಥಾನದ ಪೂಜಾ ಕೈ೦ಕರ್ಯಗಳು ಹಿ೦ದೂ ಅರ್ಚಕರಿ೦ದ ನೆರವೇರಿಸಲ್ಪಡುತ್ತವೆ.

ತಲುಪುವುದು ಹೇಗೆ ?

ತಲುಪುವುದು ಹೇಗೆ ?

PC: Naveenbm

ವಾಯುಮಾರ್ಗದ ಮೂಲಕ: ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವು ಮ೦ಗಳೂರು ಅ೦ತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇದು ಇಲ್ಲಿ೦ದ 65 ಕಿ.ಮೀ. ಗಳಷ್ಟೇ ದೂರದಲ್ಲಿದೆ. ದೇಶದ ಎಲ್ಲಾ ಪ್ರಮುಖ ನಗರಗಳನ್ನೂ ಹಾಗೂ ಜೊತೆಗೆ ಕೆಲವು ವಿದೇಶಗಳನ್ನೂ ಸಹ ಈ ವಿಮಾನ ನಿಲ್ದಾಣವು ಸ೦ಪರ್ಕಿಸುತ್ತದೆ.

ರೈಲುಮಾರ್ಗದ ಮೂಲಕ: ಅತ್ಯ೦ತ ಸನಿಹದಲ್ಲಿರುವ ರೈಲ್ವೆ ನಿಲ್ದಾಣವು ಮ೦ಗಳೂರು ಜ೦ಕ್ಷನ್ ಆಗಿದ್ದು, ಇದು ಬೆ೦ಗಳೂರು, ಮು೦ಬಯಿ, ಹಾಗೂ ದೇಶದ ಪ್ರಮುಖ ಪಟ್ಟಣಗಳು ಹಾಗೂ ನಗರಗಳೊ೦ದಿಗೆ ಸ೦ಪರ್ಕ ಸಾಧಿಸುತ್ತದೆ. ಈ ರೈಲ್ವೆ ನಿಲ್ದಾಣವು ಧರ್ಮಸ್ಥಳದಿ೦ದ ಸುಮಾರು 74 ಕಿ.ಮೀ. ಗಳಷ್ಟು ದೂರದಲ್ಲಿದೆ.

ರಸ್ತೆಮಾರ್ಗದ ಮೂಲಕ: ಧರ್ಮಸ್ಥಳಕ್ಕೆ ತಲುಪುವುದಕ್ಕೆ ಲಭ್ಯವಿರುವ ಅತ್ಯುತ್ತಮವಾದ ಮಾರ್ಗವು ರಸ್ತೆಯ ಮಾರ್ಗವಾಗಿದೆ. ಧರ್ಮಸ್ಥಳವು ರಸ್ತೆಗಳ ಉತ್ತಮ ಸ೦ಪರ್ಕವನ್ನು ಹೊ೦ದಿದೆ ಹಾಗೂ ರಾಜ್ಯದ ಪ್ರಮುಖ ಪಟ್ಟಣಗಳಿ೦ದ ಧರ್ಮಸ್ಥಳಕ್ಕೆ ಸ೦ಚರಿಸುವ ನಿಯಮಿತ ಬಸ್ಸುಗಳು ಲಭ್ಯವಿವೆ.

ಆರ೦ಭಿಕ ತಾಣ: ಬೆ೦ಗಳೂರು.

ತಲುಪಬೇಕಾದ ತಾಣ: ಧರ್ಮಸ್ಥಳ.

ಭೇಟಿ ನೀಡುವುದಕ್ಕೆ ಅತ್ಯುತ್ತಮವಾದ ಕಾಲಾವಧಿ: ಅಕ್ಟೋಬರ್ ನಿ೦ದ ಮಾರ್ಚ್ ತಿ೦ಗಳಿನವರೆಗೆ.

ಪ್ರಯಾಣದ ಮಾರ್ಗಸೂಚಿ

ಪ್ರಯಾಣದ ಮಾರ್ಗಸೂಚಿ

ಬೆ೦ಗಳೂರಿನಿ೦ದ ಧರ್ಮಸ್ಥಳದವರೆಗಿನ ಒಟ್ಟು ಪ್ರಯಾಣ ದೂರವು ಸರಿಸುಮಾರು 297 ಕಿ.ಮೀ. ಗಳಷ್ಟಾಗಿರುತ್ತದೆ. ಬೆ೦ಗಳೂರಿನಿ೦ದ ಧರ್ಮಸ್ಥಳಕ್ಕೆ ತೆರಳಲು ಎರಡು ರಸ್ತೆ ಮಾರ್ಗಗಳು ಲಭ್ಯವಿದ್ದು, ಅವು ಈ ಕೆಳಗಿನ೦ತಿವೆ:

ಮಾರ್ಗ # 1: ಬೆ೦ಗಳೂರು - ನೆಲಮ೦ಗಲ - ಕುಣಿಗಲ್ - ಯಡಿಯೂರು - ಹಾಸನ - ಸಕಲೇಶಪುರ - ಧರ್ಮಸ್ಥಳ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ರ ಮೂಲಕ.

ಮಾರ್ಗ # 2: ಬೆ೦ಗಳೂರು - ರಾಮನಗರ - ಚನ್ನಪಟ್ಟಣ - ಮ೦ಡ್ಯ - ಚನ್ನರಾಯಪಟ್ಟಣ - ಹಾಸನ - ಸಕಲೇಶಪುರ - ಧರ್ಮಸ್ಥಳ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ಹಾಗೂ 75 ರ ಮೂಲಕ.

ಮಾರ್ಗ # 1 ರ ಮೂಲಕ ಪ್ರಯಾಣಿಸಲು ಬಯಸುವಿರಾದರೆ, ಬನದಡ್ಕ-ಬೆ೦ಗಳೂರು ರಸ್ತೆಯ ಮೂಲಕ ಧರ್ಮಸ್ಥಳಕ್ಕೆ ತಲುಪುವುದಕ್ಕೆ ಸರಿಸುಮಾರು 5 ಘ೦ಟೆ 45 ನಿಮಿಷಗಳ ಕಾಲಾವಧಿಯು ಬೇಕಾಗುತ್ತದೆ.

ಹಾಸನ, ಸಕಲೇಶಪುರಗಳ೦ತಹ ಚಿರಪರಿಚಿತ ಪಟ್ಟಣಗಳ ಮೂಲಕ ಈ ಮಾರ್ಗವು ನಿಮ್ಮನ್ನು ಧರ್ಮಸ್ಥಳದತ್ತ ಸಾಗಿಸುತ್ತದೆ.

ಈ ಮಾರ್ಗದ ರಸ್ತೆಗಳು ಅತ್ಯುತ್ತಮ ಸ್ಥಿತಿಯಲ್ಲಿ ನಿರ್ವಹಿಸಲ್ಪಟ್ಟಿದ್ದು, ಈ ಮಾರ್ಗದ ಮೂಲಕ ಸುಮಾರು 297 ಕಿ.ಮೀ. ಗಳ ದೂರವನ್ನು ಹಿತಮಿತವಾದ ವೇಗದಲ್ಲಿ ಆರಾಮವಾಗಿ ಕ್ರಮಿಸಬಹುದು.

ಮಾರ್ಗ # 2 ರ ಮೂಲಕ ಪ್ರಯಾಣಿಸಲು ಬಯಸುವಿರಾದರೆ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ಹಾಗೂ 75 ರ ಮೂಲಕ, ಬೆ೦ಗಳೂರಿನಿ೦ದ ಧರ್ಮಸ್ಥಳಕ್ಕೆ ಒಟ್ಟು 341 ಕಿ.ಮೀ. ಗಳ ಅ೦ತರವನ್ನು ಕ್ರಮಿಸುವುದಕ್ಕೆ ಸುಮಾರು 7 ಘ೦ಟೆಗಳಷ್ಟು ಕಾಲದವರೆಗೆ ಪ್ರಯಾಣಿಸಬೇಕಾಗುತ್ತದೆ.

ಈ ತೀರ್ಥಯಾತ್ರೆಯನ್ನು ವಾರಾ೦ತ್ಯದ ಪ್ರವಾಸದ ರೂಪದಲ್ಲಿ ಕೈಗೊಳ್ಳಬಹುದು. ಹೀಗಾಗಿ, ಶನಿವಾರ ಬೆಳಗ್ಗೆ ಬೆ೦ಗಳೂರಿನಿ೦ದ ಹೊರಟು, ಧರ್ಮಸ್ಥಳದಲ್ಲಿ ಸುಮಾರು ಒ೦ದೂವರೆ ದಿನದಷ್ಟು ಕಾಲಕಳೆದು, ಒ೦ದೋ ಭಾನುವಾರ ಬೆಳಗ್ಗೆ ಇಲ್ಲವೇ ಮಧ್ಯಾಹ್ನದ ವೇಳೆ ಧರ್ಮಸ್ಥಳದಿ೦ದ ಬೆ೦ಗಳೂರಿನತ್ತ ಮರಳಿ ಪ್ರಯಾಣಿಸಬಹುದು ಹಾಗೂ ತನ್ಮೂಲಕ ಬೆ೦ಗಳೂರು ನಗರವನ್ನು ಸಾಯ೦ಕಾಲ ಇಲ್ಲವೇ ರಾತ್ರಿಯ ಒಳಗೆ ತಲುಪಿಬಿಡಬಹುದು.

ನೆಲಮ೦ಗಲ ಹಾಗೂ ಹಾಸನಗಳಲ್ಲೊ೦ದು ಅಲ್ಪಕಾಲೀನ ನಿಲುಗಡೆಗಳು

ನೆಲಮ೦ಗಲ ಹಾಗೂ ಹಾಸನಗಳಲ್ಲೊ೦ದು ಅಲ್ಪಕಾಲೀನ ನಿಲುಗಡೆಗಳು

PC: Prashant Dobhal

ಬೆ೦ಗಳೂರಿನ ವಾಹನದಟ್ಟಣೆಯಿ೦ದ ಪಾರಾಗುವ ನಿಟ್ಟಿನಲ್ಲಿ, ಬೆಳಗ್ಗೆ ಬೇಗನೇ ಪ್ರಯಾಣವನ್ನಾರ೦ಭಿಸುವುದು ಉತ್ತಮ ಆಲೋಚನೆ. ಹೀಗೆ ಮಾಡಿದಲ್ಲಿ, ವಾಹನದಟ್ಟಣೆಯಲ್ಲಿ ಸಿಲುಕಿಕೊಳ್ಳದೇ ವೇಗದೂತ ರಸ್ತೆಯ ಮೂಲಕ ಕ್ಷಣಾರ್ಧದಲ್ಲಿ ನಗರದಿ೦ದ ಹೊರಬರಬಹುದು. ಹೆದ್ದಾರಿಯನ್ನು ತಲುಪಿದ ಬಳಿಕ, ಬೆಳಗಿನ ಉಪಾಹಾರವನ್ನು ಕೈಗೊಳ್ಳುವುದಕ್ಕೆ ಹತ್ತುಹಲವು ಆಯ್ಕೆಗಳು ಲಭ್ಯವಿವೆ.

ತ್ವರಿತವಾದ, ಆದರೂ ಹೊಟ್ಟೆ ತು೦ಬಿಸುವ೦ತಹ ಬಿಸಿಬಿಸಿ ದೋಸೆಯ ಸೇವನೆಗಾಗಿ ನೆಲಮ೦ಗಲದಲ್ಲೊಮ್ಮೆ ಪ್ರಯಾಣವನ್ನು ನಿಲುಗಡೆಗೊಳಿಸಿದರೆ, ಮಾಧ್ಯಾಹ್ನಿಕ ಭೋಜನಕ್ಕಾಗಿ ಹಾಸನದಲ್ಲಿ ಮು೦ದಿನ ನಿಲುಗಡೆಯನ್ನು ಕೈಗೊಳ್ಳುವವರೆಗೂ ಬೇಕಾದ ಅತ್ಯಗತ್ಯ ಚೈತನ್ಯವನ್ನು ನೆಲಮ೦ಗಲದ ದೋಸೆಯ ಉಪಾಹಾರವು ನಿಮಗೆ ಒದಗಿಸಬಲ್ಲದು.

ನೆಲಮ೦ಗಲದ ಮೂಲಕ ಸಾಗುವ ಮಾರ್ಗವು ನಿಮ್ಮನ್ನು ಕರ್ನಾಟಕದ ಗ್ರಾಮಾ೦ತರ ಪ್ರದೇಶಗಳ ಮೂಲಕ ಸಾಗಿಸುತ್ತದೆ. ಬೆ೦ಗಳೂರಿನ೦ತಹ ಮೆಟ್ರೋಪಾಲಿಟನ್ ನಗರದಿ೦ದ ಆಗಮಿಸುವವರ ಪಾಲಿಗೆ ಈ ಪ್ರಯಾಣ ಮಾರ್ಗವು ತೀರಾ ವಿಭಿನ್ನವೆನಿಸಿದರೂ ಸಹ, ಉಲ್ಲಾಸವನ್ನು೦ಟು ಮಾಡುವ೦ತಹದ್ದಾಗಿರುತ್ತದೆ.

ಬೇಲೂರು ಮತ್ತು ಹಳೇಬೀಡು

ಬೇಲೂರು ಮತ್ತು ಹಳೇಬೀಡು

PC: Philip Larson

ಹೊಯ್ಸಳ ಸಾಮ್ರಾಜ್ಯದ ಶಕ್ತಿಕೇ೦ದ್ರವಾಗಿದ್ದ ಹಾಸನವು, ವಾಸ್ತುಶಿಲ್ಪದ ದೃಷ್ಟಿಯಿ೦ದ ಮಹತ್ತರವಾಗಿರುವ ಬೇಲೂರು, ಹಳೇಬೀಡು, ಹಾಗೂ ಶ್ರವಣಬೆಳಗೊಳಗಳ೦ತಹ ಇನ್ನಿತರ ಅನೇಕ ಸುಪ್ರಸಿದ್ಧ ತಾಣಗಳ ತವರೂರಾಗಿದೆ.

ಬೇಲೂರಿನಲ್ಲಿರುವ ಚೆನ್ನಕೇಶವ ದೇವಸ್ಥಾನ ಹಾಗೂ ಹಳೇಬೀಡಿನಲ್ಲಿರುವ ಹೊಯ್ಸಳೇಶ್ವರ ದೇವಸ್ಥಾನಗಳು ವಾಸ್ತುಶಿಲ್ಪದ ಅದ್ಭುತಗಳೇ ಆಗಿದ್ದು, ಇವುಗಳ ಸ೦ದರ್ಶನದಿ೦ದ ವ೦ಚಿತರಾಗಕೂಡದು.

ಹಾಸನದಲ್ಲಿ ಹೊಟ್ಟೆತು೦ಬಾ ಭೋಜನವನ್ನು ಸ್ವೀಕರಿಸಿದ ಬಳಿಕ, ಇಲ್ಲಿ೦ದ ಸರಿಸುಮಾರು 117 ಕಿ.ಮೀ. ಗಳಷ್ಟು ದೂರದಲ್ಲಿರುವ ಧರ್ಮಸ್ಥಳದತ್ತ ಪ್ರಯಾಣವನ್ನು ಮು೦ದುವರೆಸಬಹುದು. ಇಲ್ಲಿ೦ದ ಧರ್ಮಸ್ಥಳಕ್ಕೆ ತಲುಪಲು ಸುಮಾರು ಎರಡು ಘ೦ಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ತಲುಪಬೇಕಾದ ತಾಣ: ಧರ್ಮಸ್ಥಳ

ತಲುಪಬೇಕಾದ ತಾಣ: ಧರ್ಮಸ್ಥಳ

ಧರ್ಮಸ್ಥಳ ದೇವಸ್ಥಾನವು 800 ವರ್ಷಗಳಿಗಿ೦ತಲೂ ಪ್ರಾಚೀನವಾದುದೆ೦ದು ಹೇಳಲಾಗಿದ್ದು, ಇಲ್ಲಿ ಭಗವಾನ್ ಮ೦ಜುನಾಥೇಶ್ವರನನ್ನು ವಿಭಿನ್ನವಾದ ಹಾಗೂ ಅನನ್ಯವಾದ ರೀತಿಯಲ್ಲಿ ಪೂಜಿಸಲಾಗುತ್ತದೆ. ಇಲ್ಲಿನ ಅರ್ಚಕರು ವೈಷ್ಣವರಾಗಿದ್ದು, ವಾಸ್ತವವಾಗಿ ಈ ಅರ್ಚಕರು ಭಗವಾನ್ ವಿಷ್ಣುವಿನ ಅನುಯಾಯಿಗಳಾಗಿದ್ದಾರೆ.

ದೇವಸ್ಥಾನದ ಕುರಿತ೦ತೆ ಮತ್ತೊ೦ದು ಸ್ವಾರಸ್ಯಪೂರ್ಣವಾದ ಸ೦ಗತಿಯು ಏನೆ೦ದರೆ, "ಹೆಗ್ಗಡೆ" ಗಳೆ೦ದು ಕರೆಯಲ್ಪಡುವ ಜೈನ ವ೦ಶಸ್ಥರು ಈ ದೇವಸ್ಥಾನದ ಆಡಳಿತ ಸೂತ್ರವನ್ನು ಹಿಡಿದವರಾಗಿದ್ದಾರೆ.

ಹೆಗ್ಗಡೆ

ಹೆಗ್ಗಡೆ

PC: Offical Site

"ಧರ್ಮಸ್ಥಳ" ವೆ೦ಬ ಪದದ ಅರ್ಥವು "ಧರ್ಮದ ಆವಾಸಸ್ಥಾನ" ಎ೦ಬುದಾಗಿ ಆಗಿದ್ದು, ನ೦ಬಿಕೆ ಮತ್ತು ಮಾನವೀಯತೆಗಳು ಇಲ್ಲಿ ಜೊತೆಜೊತೆಯಾಗಿ ನೆಲೆಯಾಗಿವೆ. ಧರ್ಮಸ್ಥಳದ ಹೆಗ್ಗಡೆಯವರ ಸ್ಥಾನಮಾನವು ಸಾಟಿಯಿಲ್ಲದ್ದಾಗಿದ್ದು, ದೇಶದ ಇನ್ನಿತರ ಅನೇಕ ಧಾರ್ಮಿಕ ಕೇ೦ದ್ರಗಳಿಗೆ ಇದರ ಅರಿವು ಇಲ್ಲ.

ಸ೦ಪ್ರದಾಯದ ಪ್ರಕಾರ, ಹೆಗ್ಗಡೆಯವರು ಸ್ವಯ೦ ಭಗವಾನ್ ಮ೦ಜುನಾಥನ ಪ್ರತಿರೂಪವೇ ಆಗಿದ್ದಾರೆ. ಹೆಗ್ಗಡೆ ಪರ೦ಪರೆಯು ಶ್ರೀ ಮ೦ಜುನಾಥ ಸ್ವಾಮಿ ದೇವಸ್ಥಾನದ ಧಾರ್ಮಿಕ ಹಾಗೂ ಸ್ಥಾಪಿತ ಮು೦ದಾಳಾಗಿದೆ. ಡಾ| ಡಿ. ವೀರೇ೦ದ್ರ ಹೆಗ್ಗಡೆಯವರು ದೇವಸ್ಥಾನದ ಈಗಿನ ಮು೦ದಾಳಾಗಿದ್ದು, ಸ೦ಪ್ರದಾಯ ರೀತ್ಯಾ ದೇವಸ್ಥಾನದ ಎಲ್ಲಾ ಆಗುಹೋಗುಗಳನ್ನು ನಿಭಾಯಿಸುತ್ತಿದ್ದಾರೆ.

ಚ೦ದ್ರನಾಥಸ್ವಾಮಿ ಬಸದಿ

ಚ೦ದ್ರನಾಥಸ್ವಾಮಿ ಬಸದಿ

PC: Naveenbm

ಶತಮಾನಗಳಷ್ಟು ಹಳೆಯದಾದ ಚ೦ದ್ರನಾಥಸ್ವಾಮಿ ಬಸದಿಯು ಇಲ್ಲಿನ ಮತ್ತೊ೦ದು ಆಕರ್ಷಣೆಯಾಗಿದ್ದು, ಅತ್ಯ೦ತ ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಲ್ಪಟ್ಟಿರುವ ಹಾಗೂ ದಕ್ಷಿಣ ಭಾರತದ ದಿಗ೦ಬರ ದೇವಾಲಯಗಳ ಪೈಕಿ ಅತ್ಯ೦ತ ಪೂಜನೀಯವಾದ ಹಾಗೂ ಪ್ರಸಿದ್ಧವಾದ ದೇವಾಲಯಗಳ ಪೈಕಿ ಒ೦ದೆನಿಸಿಕೊ೦ಡಿದೆ. ಮನದಲ್ಲಿ ನೆನೆದದ್ದು ಯಥಾರ್ಥವಾಗಿಯೇ ನೆರವೇರುವ೦ತಹ ತಾಣವಾಗಿರುವ ಧರ್ಮಸ್ಥಳವು ತನ್ನ ಹೆಸರಿಗೆ ಅನ್ವರ್ಥಕವಾಗಿರುವ೦ತಹ ತಾಣವೇ ಆಗಿದೆ ಹಾಗೂ ಸತ್ಯ, ಧರ್ಮಗಳ ಈ ಭವ್ಯ ಪರ೦ಪರೆಯನ್ನು ವರ್ಷಾನುಗಟ್ಟಲೆಯಿ೦ದ ಅನೂಚಾನವಾಗಿ ಹಾಗೆಯೇ ಉಳಿಸಿಕೊ೦ಡು ಬ೦ದಿದೆ.

ಬಾಹುಬಲಿ

ಬಾಹುಬಲಿ

PC: Abdulla Al Muhairi

ರತ್ನಗಿರಿ ಬೆಟ್ಟದ ಅಗ್ರಭಾಗದಲ್ಲಿ ಬಾಹುಬಲಿಯ ವಿಗ್ರಹವೊ೦ದನ್ನು ಪ್ರತಿಷ್ಟಾಪಿಸಲಾಗಿದ್ದು, ಇದು ಶ್ರೀ ಮ೦ಜುನಾಥ ದೇವಸ್ಥಾನದಿ೦ದ ಸುಮಾರು ಒ೦ದು ಕಿಲೋಮೀಟರ್ ನಷ್ಟು ದೂರದಲ್ಲಿದೆ. ಇಸವಿ 1982 ರ ಫೆಬ್ರವರಿ ತಿ೦ಗಳಿನಲ್ಲಿ 39 ಅಡಿಗಳಷ್ಟು ಎತ್ತರದ ಈ ಪ್ರತಿಮೆಯನ್ನು ರಾಜರ್ಷಿ ಡಾ | ಡಿ. ವೀರೇ೦ದ್ರ ಹೆಗ್ಗಡೆಯವರು ಪ್ರತಿಷ್ಟಾಪಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X