Search
  • Follow NativePlanet
Share
ಮುಖಪುಟ » ಸ್ಥಳಗಳು» ಧರ್ಮಸ್ಥಳ

ಧರ್ಮಸ್ಥಳ – ಧಾರ್ಮಿಕ ಸಹಿಷ್ಣುತೆಯ ನಾಡು

29

ನೇತ್ರಾವತಿ ನದಿಯ ದಡದಲ್ಲಿ, ಪಶ್ಚಿಮ ಘಟ್ಟಗಳ ಮಧ್ಯಭಾಗದಲ್ಲಿರುವ ದೇವಾಲಯ ಗ್ರಾಮ, ಧರ್ಮಸ್ಥಳ ಪೌರಾಣಿಕ ಹಾಗೂ ಧಾರ್ಮಿಕ ಮಹತ್ವವನ್ನು ಒಳಗೊಂಡಿದೆ. ಈ ಹಳ್ಳಿಯು ಭವ್ಯವಾದ ಮಂಜುನಾಥೇಶ್ವರ ದೇವಾಲಯದ ನೆಲೆಯಾಗಿದೆ. ಶಿವನಿಗೆ ಅರ್ಪಿತವಾಗಿರುವ ಈ ದೇವಾಲಯ ಅಲ್ಲಿರುವ ಬಂಗಾರದ ಲಿಂಗದಿಂದಾಗಿ ಹೆಸರುವಾಸಿಯಾಗಿದೆ.

 

ದೇವಾಲಯಗಳು ಮತ್ತು ಬಸದಿಗಳ ಬಗ್ಗೆ

ಧರ್ಮಸ್ಥಳವು ಧಾರ್ಮಿಕ ಸಹಬಾಳ್ವೆಗೆ ಉದಾಹರಣೆಯಾಗಿದೆ. ಈ ದೇವಾಲಯವು ಕೇವಲ ಅದರ ರಚನೆಯಿಂದ ಮಾತ್ರ ಅಲ್ಲದೆ, ಈ ದೇವಸ್ಥಾನವನ್ನು ಜೈನ ಧರ್ಮದವರು ನಡೆಸುತ್ತಿದ್ದು, ಜೊತೆಯಲ್ಲಿ ದೈನಂದಿನ ಪೂಜೆಗಳು ಹಿಂದೂ ಪುರೋಹಿತರಿಂದ ನೆರವೇರಿಸಲಾಗುತ್ತದೆ ಎಂಬ ಸತ್ಯ ಸಂಗತಿಯಿಂದಲೂ ಕೂಡ ಪ್ರಸಿದ್ದಿಯಾಗಿದೆ. 8 ಜೈನ ಬಸದಿಗಳು ಅಲ್ಲದೆ 11 ಮೀಟರ್ ಎತ್ತರವಿರುವ ಬಾಹುಬಲಿಯ ಮೂರ್ತಿಯು ಇಲ್ಲಿನ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಮೂರ್ತಿಯು ಒಂದೇ ಬಂಡೆಯಿಂದ ಕೆತ್ತಲ್ಪಟ್ಟಿದ್ದು 175 ಟನ್ ಗಳಷ್ಟು ಭಾರವಿದೆ.

ಈ ಗ್ರಾಮವು ಹಲವಾರು ಪ್ರಾಚೀನ ಹಸ್ತಪ್ರತಿಗಳ ಭಂಡಾರವಾಗಿದೆ. ಇವೆಲ್ಲವುಗಳನ್ನು ಧರ್ಮಸ್ಥಳದ ಒಂದು ಪುರಾತತ್ವ ಜಾಗದಲ್ಲಿ  ಸಂಗ್ರಹಿಸಲ್ಪಟ್ಟಿದ್ದು ಮತ್ತು ಇಲ್ಲಿನ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಣೆ ಮಾಡಲಾಗಿದೆ. ಹಲವಾರು ವಿಂಟೇಜ್ ಕಾರು ಪ್ರೇಮಿಗಳನ್ನು ಆಕರ್ಷಿಸುವ ಒಂದು ಅನನ್ಯ ಕಾರ್ ಮ್ಯೂಸಿಯಂ ಕೂಡ ಇದೆ.

ಧರ್ಮಸ್ಥಳವು ಬೆಂಗಳೂರಿನಿಂದ 300 ಕಿಮೀ ದೂರವಿದೆ ಆದರೂ ಸುಲಭವಾಗಿ ತಲುಪಬಹುದಾಗಿದೆ. ಈ ನಗರವು ಉಡುಪಿಯಿಂದ 100 ಕಿಮೀ ಹಾಗು ಮಂಗಳೂರಿನಿಂದ 70 ಕಿಮೀ ದೂರವಿದೆ.  ಬಹಳಷ್ಟು ಬಸ್ಸುಗಳು ಯಾತ್ರಿಗಳನ್ನು ದಿನನಿತ್ಯವೂ ಈ ಹಳ್ಳಿಗೆ ತಲುಪಿಸುತ್ತವೆ. ಬೆಂಗಳೂರಿನಿಂದ ರಸ್ತೆ ಮಾರ್ಗದಲ್ಲಿನ ಪ್ರಯಾಣ 6 ಘಂಟೆಯ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ.

ಧರ್ಮಸ್ಥಳ ಪ್ರಸಿದ್ಧವಾಗಿದೆ

ಧರ್ಮಸ್ಥಳ ಹವಾಮಾನ

ಉತ್ತಮ ಸಮಯ ಧರ್ಮಸ್ಥಳ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಧರ್ಮಸ್ಥಳ

  • ರಸ್ತೆಯ ಮೂಲಕ
    ಪ್ರವಾಸಿಗರು ರಾಜ್ಯದ ಎಲ್ಲೆಡೆಯಿಂದ ಧರ್ಮಸ್ಥಳ ತಲುಪಲು ಕರಾರಸಾಸ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್ ಪಡೆಯಬಹುದು. ಖಾಸಗಿ ಬಸ್ಸುಗಳಾದ ಹವಾನಿಯಂತ್ರಿತವಲ್ಲದ ಸ್ಲೀಪರ್ / ಸೀಟರ್ ಗಳು ಧರ್ಮಸ್ಥಳಕ್ಕೆ ಸಮೀಪದ ನಗರಗಳಲ್ಲಿ ಕೂಡ ಸಂಚರಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮಂಗಳೂರು ರೈಲು ನಿಲ್ದಾಣವು 74 ಕಿಮೀ ದೂರದಲ್ಲಿ ನೆಲೆಸಿದ ಧರ್ಮಸ್ಥಳಕ್ಕೆ ಹತ್ತಿರದ ರೈಲ್ವೆ ಜಂಕ್ಷನ್ ಆಗಿದೆ. ರೈಲು ನಿಲ್ದಾಣ ಭಾರತದ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಗು ​​ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಟ್ಯಾಕ್ಸಿಗಳು ಮತ್ತು ಕ್ಯಾಬ್ಗಳು ಅಥವಾ ಬಸ್ಸುಗಳನ್ನು ಬಾಡಿಗೆಗೆ ತೆಗೆದುಕೊಂಡು ಧರ್ಮಸ್ಥಳ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಂಗಳೂರು ವಿಮಾನ ನಿಲ್ದಾಣ ಧರ್ಮಸ್ಥಳಕ್ಕೆ ಬರುವ ಪ್ರವಾಸಿಗರಿಗೆ ಹತ್ತಿರದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಸೇವೆ ಸಲ್ಲಿಸುತ್ತಿದೆ. ಹಿಂದೆ ಬಾಜ್ಪೆ ಏರ್ಪೋರ್ಟ್ ಎಂದು ಕರೆಯಲಾಗುತ್ತಿದ್ದ ಇದು ಧರ್ಮಸ್ಥಳದಿಂದ ಸುಮಾರು 65 ಕಿಮೀ ದೂರದಲ್ಲಿ ನೆಲೆಸಿದೆ. ವಿಮಾನಗಳು ಜಗತ್ತಿನ ಇತರ ಭಾಗಗಳನ್ನು ಹೊರತುಪಡಿಸಿ ಪ್ರಮುಖ ಮಧ್ಯಪ್ರಾಚ್ಯ ಸ್ಥಳಗಳಾದ, ದುಬೈ, ಅಬು ಧಾಬಿ, ಮಸ್ಕತ್, ದೋಹಾ, ಕುವೈತ್ ಮತ್ತು ಬಹರೇನ್ ಸ್ಥಳಗಳಿಗೆ ಸಂಪರ್ಕವನ್ನು ಹೊಂದಿದೆ. ಜೊತೆಗೆ, ಇದು ಮುಂಬೈ, ಬೆಂಗಳೂರು, ಗೋವಾ, ಕೊಚ್ಚಿ, ಕ್ಯಾಲಿಕಟ್ ಮತ್ತು ಇತರ ಭಾರತೀಯ ಸ್ಥಳಗಳಿಗೆ ಬರುವ ಪ್ರಯಾಣಿಕರಿಗೆ ಸೂಕ್ತವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat