• Follow NativePlanet
Share
» »ನದೀ ತೀರದಲ್ಲಿರುವ ಕೋಲಾಡ್ ನ ಹಳ್ಳಿಯ ಕಡೆಗೆ ಮುಂಬೈಯಿಂದ ಪ್ರಯಾಣ

ನದೀ ತೀರದಲ್ಲಿರುವ ಕೋಲಾಡ್ ನ ಹಳ್ಳಿಯ ಕಡೆಗೆ ಮುಂಬೈಯಿಂದ ಪ್ರಯಾಣ

Posted By: Manjula Balaraj Tantry

ಕೋಲಾಡ್ ಮಹಾರಾಷ್ಟ್ರದ ಒಂದು ನದಿತೀರದಲ್ಲಿರುವ ಒಂದು ಹಳ್ಳಿಯಾಗಿದೆ. ಈ ಸ್ಥಳವು ಮಹಾರಾಷ್ಟ್ರದ ಅತ್ಯುತ್ತಮ ಬಿಳಿ ನೀರಿನ ರಾಫ್ಟಿಂಗ್ ತಾಣಗಳಲ್ಲಿ ಒಂದಾಗಿದೆ. ಇದು ಜಲಪಾತಗಳು ಮತ್ತು ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಮುಂಬೈನಿಂದ ಕೋಲಾಡ್ ತಲುಪಲು ಹಲವಾರು ಮಾರ್ಗಗಳಿವೆ.

ಮುಂಬೈಯಿಂದ ಕೋಲಾಡ್ ನ ನದಿ ತೀರದಲ್ಲಿರುವ ಸಣ್ಣ ಹಳ್ಳಿಗಳ ಕಡೆಗೆ ಒಂದು ಪ್ರಯಾಣ

From Mumbai to Kolad Route

PC: Ramakrishna Reddy Y

ರಿಷಿಕೇಶ ಉತ್ತರಕಾಂಡಕ್ಕೆ, ಲಡಾಖ್ ಜಮ್ಮು ಕಾಶ್ಮೀರಕ್ಕೆ ಹಾಗೂ ಕೂರ್ಗ್ ಕರ್ನಾಟಕಕ್ಕೆ ಹೇಗೆಯೋ ಹಾಗೆ ಮಹಾರಾಷ್ಟ್ರಕ್ಕೆ ಕೋಲಾಡ್. ಬಿಳಿನೀರಿನ ವಾಟರ್ ರಾಫ್ಟಿಂಗ್ ಮಾಡಲು ಮಹಾರಾಷ್ಟ್ರದಲ್ಲಿ ಕೆಲವು ಉತ್ತಮವಾದ ಜಾಗಗಳಲ್ಲೊಂದಾಗಿದೆ. ಈ ಜಾಗವು ಸಣ್ಣ ಜಲಪಾತಗಳಿಗೆ ಮತ್ತು ಸಾಹಸಮಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಕೊಲಾಡ್ ಪಶ್ಚಿಮ ಘಟ್ಟದಲ್ಲಿದ್ದು ಇದು ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿದೆ.

ಈ ಪ್ರದೇಶವು ಇಲ್ಲಿಯ ಒರಟಾದ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಆದುದರಿಂದ ಕೋಲಾಡ್ ನಲ್ಲಿ ಟ್ರಕ್ಕಿಂಗ್ ಮಾಡುವುದು ಕೆಲವೊಮ್ಮೆ ಕಷ್ಟಕರ ಅನುಭವ ನೀಡಬಹುದು. ಇಲ್ಲಿ ಮಾನ್ಸೂನ್ ಮಳೆಗಾಲದಲ್ಲಿ ಟ್ರಕ್ಕಿಂಗ್ ಮಾಡಿದರೆ ಉತ್ತಮ ಏಕೆಂದರೆ, ಇಲ್ಲಿಯ ಭೂ ಪ್ರದೇಶವು ಹಸಿರಿನಿಂದ ಕೂಡಿದ್ದು ನೋಡುಗರಿಗೆ ಒಂದು ಅದ್ಬುತವಾದ ದೃಶ್ಯವನ್ನು ಒದಗಿಸಿಕೊಡುತ್ತದೆ.

ಕೋಲಾಡನ್ನು ತಲುಪುವುದು ಹೇಗೆ

From Mumbai to Kolad Route

ರೈಲು ಮಾರ್ಗದ ಮೂಲಕ : ದೇಶಾದ್ಯಂತ ಇರುವ ಎಲ್ಲಾ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿರುವ ಕೋಲಾಡ್ ನಿಲ್ದಾಣವು ಪ್ರಮುಖ ರೈಲ್ವೆ ನಿಲ್ದಾಣವಾಗಿದೆ. ಈ ನಿಲ್ದಾಣವು ಕೊಂಕಣ ರೈಲ್ವೆ ಮಾರ್ಗದ ಮೊದಲ ನಿಲ್ದಾಣವಾಗಿದೆ.

ರಸ್ತೆಯ ಮೂಲಕ: ಕೋಲಾಡನ್ನು ತಲುಪಲು ಉತ್ತಮ ಮಾರ್ಗವೆಂದರೆ ಅದು ರಸ್ತೆಯ ಮೂಲಕ. ಈ ಪಟ್ಟಣವು ರಸ್ತೆಗಳಿಂದ ಉತ್ತಮ ಸಂಪರ್ಕವನ್ನು ಹೊಂದಿದೆ ಮತ್ತು ಕೋಲಾಡಿಗೆ ಪ್ರಮುಖ ನಗರಗಳಿಂದ ನಿರಂತರವಾಗಿ ಬಸ್ಸುಗಳು ಕಾರ್ಯನಿರ್ವಹಿಸುತ್ತವೆ.

ಕೋಲಾಡಿಗೆ ಭೇಟಿ ನೀಡಲು ಉತ್ತಮ ಸಮಯ: ಕೋಲಾಡ್ ವರ್ಷವಿಡೀ ಭೇಟಿ ಮಾಡಬಹುದಾದ ಸ್ಥಳವಾಗಿದೆ.

ಮಾರ್ಗ ನಕ್ಷೆ ಮುಂಬೈ ಯಿಂದ ಕೋಲಾಡಿಗೆ ಒಟ್ಟು ಕ್ರಮಿಸಲು ಆಗುವ ದೂರ ಸುಮಾರು 105 ಕಿ.ಮೀ. ಇಲ್ಲಿಗೆ ತಲುಪಲು ಎರಡು ರೀತಿಯ ಮಾರ್ಗಗಳಿವೆ. ಅವು ಈ ಕೆಳಗಿನಂತಿವೆ.

ಮಾರ್ಗ 1 : ಮುಂಬೈ-ನವಿ ಮುಂಬೈ-ರಸ್ಯಾನಿ- ದುರ್ಶೆಟ್-ಪಾಲಿ-ಕೊಲಾಡಿಂದ ಬೆಂಗಳೂರು- ಮುಂಬೈ ರಾ.ಹೆ ಮತ್ತು ರಾ ಹೆ. 92

ಮಾರ್ಗ 2: ಮುಂಬೈ- ಚೆಂಬೂರ್ ಈಸ್ಟ್-ಬೊರಿ-ಪೆನ್-ನಾಗೊಥಾಣೆ- ಸುಕೇಲಿ-ಕೊಲಾಡ್ ರಾ.ಹೆ66 ರ ಮೂಲಕ

ಮಾರ್ಗ 1 ರಲ್ಲಿ ಪ್ರಯಾಣ ಮಾಡಲು ಬಯಸುವವರು, ಬೆಂಗಳೂರು-ಮುಂಬಯಿ ಹೆದ್ದಾರಿ ಮತ್ತು ರಾ.ಹೆ 92 ಮೂಲಕ ಕೋಲಾಡ್ ತಲುಪಲು ಸುಮಾರು 3 ಗಂಟೆಗಳ ಕಾಲ ಬೇಕಾಗುವುದು.ಈ ಮಾರ್ಗವು ನಿಮ್ಮನ್ನು ನವೀ ಮುಂಬಯಿ, ದುರ್ಶೆಟ್, ಇತ್ಯಾದಿಗಳ ಪ್ರಸಿದ್ಧ ಪಟ್ಟಣಗಳ ಮೂಲಕ ಕರೆದೊಯ್ಯುತ್ತದೆ.

ಇಲ್ಲಿಯ ರಸ್ತೆಗಳು ಸುಸಜ್ಜಿತವಾಗಿದ್ದು ಉತ್ತಮ ವೇಗದಲ್ಲಿ ದೂರವನ್ನು ಕ್ರಮಿಸಲು ಸಹಾಯ ಮಾಡುತ್ತದೆ. ಮತ್ತು ಈ ಮಾರ್ಗದಿಂದ ಕೋಲಾಡ್ ತಲುಪಲು ಸುಮಾರು 122 ಕಿ. ಮೀ ಚಲಿಸಬೇಕಾಗುವುದು.

From Mumbai to Kolad Route

PC: Naishashetty17

ರಸ್ತೆಗಳು ಉತ್ತಮವಾಗಿ ನಿರ್ವಹಿಸಲ್ಪಡುತ್ತವೆ, ಇದು ಉತ್ತಮ ವೇಗದಲ್ಲಿ ದೂರವನ್ನು ಸಾಗಿಸಲು ಸಹಾಯ ಮಾಡುತ್ತದೆ ಮತ್ತು ಈ ಮಾರ್ಗವು ಸುಮಾರು 122 ಕಿಮೀ ದೂರದಲ್ಲಿದೆ. ಪ್ರಯಾಣಕ್ಕಾಗಿ ಮಾರ್ಗ 2 ನ್ನು ನೀವು ಆರಿಸಿದರೆ, ಮುಂಬೈನಿಂದ 112 ಕಿ.ಮೀ ದೂರದಲ್ಲಿರುವ ಕೋಲಾಡಿಗೆ ತಲುಪಲು ರಾ.ಹೆ 66 ಮೂಲಕ ಒಟ್ಟು 4 ತಾಸು ಬೇಕಾಗುವುದು.

ದುರ್ಶೆಟ್ನಲ್ಲಿ ಸ್ವಲ್ಪ ನಿಲ್ಲಿಸಿ ನೀವು ಮಾರ್ಗ 1 ನ್ನು ಆರಿಸಿದರೆ, ಮುಂಬೈನಿಂದ ಮುಂಜಾನೆ ಪ್ರಯಾಣ ಪ್ರಾರಂಭ ಮಾಡುವುದು ಉತ್ತಮ ಇದು ಎರಡು ಕಾರಣಗಳಿಂದಾಗಿ, ಒಂದು ನಗರದ ಟ್ರಾಫಿಕ್ ನಿಂದ ಮುಕ್ತಿ ಹೊಂದಲು ಮತ್ತು ಇನ್ನೊಂದು ಹೆದ್ದಾರಿ ಸಂಚಾರವನ್ನು ತಪ್ಪಿಸಲು.

ಒಮ್ಮೆ ನೀವು ಹೆದ್ದಾರಿಯನ್ನು ತಲುಪಿದಲ್ಲಿ,ಇಲ್ಲಿ ತರ ತರಹದ ಬೆಳಗಿನ ಉಪಹಾರಕ್ಕೆ ಬೇಕಾಗುವ ಆಯ್ಕೆ ಗಳನ್ನು ಕಾಣಬಹುದು. ದರ್ಶೆಟ್ ಒಂದು ಸಣ್ಣ ಹಳ್ಳಿಯಾಗಿದ್ದು ಇದು ಅಂಬಾ ನದಿಯ ತಟದಲ್ಲಿದೆ. ಈ ಜಾಗವು ತೇಗದ ಮರಗಳಿಂದ ತುಂಬಿದ್ದು ಹೆಸರುವಾಸಿಯಾಗಿದೆ ಅಲ್ಲದೆ ಇಲ್ಲಿ ಅಪರೂಪದ ಸಿಲ್ವರ್ ಓಕ್ ಮರಗಳನ್ನೂ ಕಾಣಬಹುದು.

ದರ್ಶೆಟ್ ನಲ್ಲಿ ಒಂದು ಸಣ್ಣ ನಿಲುಗಡೆ.

From Mumbai to Kolad Route

PC: Gayatri Krishnamoorthy

ಈ ಗ್ರಾಮವು ಪಾಲಿಯ ಗಣೇಶ ದೇವಾಲಯ ಮತ್ತು ಮಹದ್ ನಡುವೆ ಇದೆ. ಮತ್ತು ಕೊಪೋಲಿ ಹಳ್ಳಿಯು ಹೆದ್ದಾರಿಯಿಂದ ಸ್ವಲ್ಪ ದೂರದಲ್ಲಿದೆ.

ಈ ಪ್ರದೇಶದಲ್ಲಿ ಶಿವಾಜಿಯ ಆಳ್ವಿಕೆಗೆ ಒಳಪಟ್ಟಿದ್ದ ಸರಸ್ ಗಡ್ ಮತ್ತು ಸುಧಾಗಡ್ ಎಂಬ ಎರಡು ಕೋಟೆಗಳಿವೆ. ಈ ಎರಡು ಐತಿಹಾಸಿಕ ಮಹತ್ವವುಳ್ಳ ಕೋಟೆಗಳಲ್ಲದೆ, ಈ ಸ್ಥಳವು ಟ್ರಕ್ಕಿಂಗ್ ಮತ್ತು ಸಾಹಸಿಗಳಿಗೆ ಒಂದು ಉತ್ತಮವಾದ ಜಾಗವಾಗಿದೆ.

ಗಮ್ಯಸ್ಥಾನ: ಕೋಲಾಡ್

From Mumbai to Kolad Route

PC: Shreveport-Bossier Convention and Tourist Bureau

ಸಾಹಸ ಪ್ರೀಯರಿಗೆ ಕೋಲಾಡ್ ಒಂದು ಸ್ವರ್ಗ ಎಂಬುದಕ್ಕೆ ಉದಾಹರಣೆಯಾಗಿದೆ. ಕುಂಡಲಿಕ ನದಿಯ 14 ಕಿಮೀ ಉದ್ದದ ಅತ್ಯಾಕರ್ಷಕ ರಾಪಿಡ್ ಗಳು ಒಂದೂವರೆ ಗಂಟೆಗಳ ಕಾಲ ಮತ್ತು ಬಿಳಿ ನೀರಿನ ರಾಫ್ಟಿಂಗ್ ಅನ್ನು ಒದಗಿಸುತ್ತದೆ.

ಮಳೆಗಾಲವು ಸಾಹಸ ಕ್ರೀಡೆಗಳಿಗೆ ಅತ್ಯುತ್ತಮವಾದ ಸಮಯವಾಗಿದ್ದು , ಆದರೂ ರಾಫ್ಟಿಂಗ್ ಮಾಡಲು ಹವಾಮಾನದ ಸ್ಥಿತಿಗಳ ಕಾರಣದಿಂದಾಗಿ ವಿರಾಮಗಳು ಉಂಟಾಗುತ್ತವೆ.

ತಮ್ಹಿನಿ ಜಲಪಾತ

From Mumbai to Kolad Route

PC: Unknown

ತಮ್ಹಿನಿ ಜಲಪಾತವನ್ನು ವಾಲ್ಸೆ ಎಂದೂ ಕರೆಯಲಾಗುತ್ತದೆ. ಇದು ಕೋಲಾಡ್ ನ ಒಂದು ಪ್ರಮುಖವಾದ ಆಕರ್ಷಣೆಯಾಗಿದೆ. ಈ ಜಾಗವು ಇದರ ಪರ್ವತ ಶ್ರೇಣಿಗಳ ನೋಟ ಮತ್ತು ಪ್ರಕೃತಿಯ ಸೌಂದರ್ಯತೆ ನೋಡುಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ.

ಭೀರಾ ಅಣೆಕಟ್ಟು

From Mumbai to Kolad Route

PC: Prashant.angre2010

ಟಾಟಾ ಪವರ್ ಹೌಸ್ ಅಣೆಕಟ್ಟು ಎಂದು ಕರೆಯಲಾಗುವ ಭೀರಾ ಆಣೆಕಟ್ಟನ್ನು 1927 ರಲ್ಲಿ ಟಾಟಾ ಸಂಸ್ಥೆಯಿಂದ ಸ್ಥಾಪಿಸಲ್ಪಟ್ಟಿತು.ಈ ಅಣೆಕಟ್ಟನ್ನು ನೀರಾವರಿ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಮತ್ತು ಈ ಅಣೆಕಟ್ಟಿನಿಂದ ಉತ್ಪತ್ತಿಯಾಗುವ ವಿದ್ಯುತ್ತನ್ನು ಮುಂಬೈ ಮತ್ತು ಪುಣೆಯ ಹಲವು ಕೈಗಾರಿಕೆಗಳಿಗೆ ಉಪಯೋಗಿಸಲಾಗುತ್ತದೆ. ಕುಂಡಲಿಕಾ ನದಿಯಲ್ಲಿ ರಾಫ್ಟಿಂಗ್ ಅಣೆಕಟ್ಟಿನಿಂದ ಬಿಡಲಾಗುವ ನೀರನ್ನು ಅವಲಂಬಿಸಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ