Search
  • Follow NativePlanet
Share
» »ಕೆಲವು ಅದ್ಭುತ ಕಾಳಿ ದೇವಾಲಯಗಳು!

ಕೆಲವು ಅದ್ಭುತ ಕಾಳಿ ದೇವಾಲಯಗಳು!

By Vijay

ಕಾಳಿ ಅಥವಾ ಕಾಲಿ ಎಂತಲೂ ಕರೆಯಲ್ಪಡುವ ಈಕೆಯು ಒಬ್ಬ ಭಯಂಕರ ಹಾಗೂ ಉಗ್ರ ರುಪದ ಶಕ್ತಿ ದೇವಿಯಾಗಿದ್ದಾಳೆ. ದುರ್ಗೆಯ ಒಂದು ಅವತಾರವಾಗಿ ಕಾಲಿ ದೇವಿಯನ್ನು ಪೂಜಿಸುತ್ತಾರೆ. ಸಂಸ್ಕೃತ ಪದ ಕಾಲದಿಂದ ಕಾಲಿ ದೇವಿಯ ಹೆಸರು ಬಂದಿದೆ. ಅಂದರೆ ಕಾಲದ ಎಲ್ಲ ಆಯಾಮಗಳನ್ನು ಪ್ರತಿನಿಧಿಸುವ ದೇವಿ ಇವಳಾಗಿದ್ದಾಳೆ.

ಕಾಲಿ ಎಂದರೆ ಸಾಮಾನ್ಯವಾಗಿ ಉಗ್ರ ರೂಪದ ದೇವಿ. ಕ್ರೋಧಾಗ್ನಿಯಲ್ಲಿರುವ ದೇವಿಯು ದುಷ್ಟ ಶಕ್ತಿಗಳ ಪ್ರತೀಕರಾದ ರಾಕ್ಷಸರ ಸಂಹಾರವೆ ಇವಳ ಮೊದಲ ಆದ್ಯತೆ. ಅಲ್ಲದೆ ಎಷ್ಟೊ ಮಂತ್ರ-ತಂತ್ರ ವಿದ್ಯೆಗಳ ಮಾಂತ್ರಿಕರೂ ಸಹ ಕಾಲಿ ದೇವಿಯನ್ನು ಆರಾಧಿಸುತ್ತಾರೆ.

ಎಂತಹ ಗಂಭೀರ ಸ್ವರೂಪದ ಕಷ್ಟಗಳೆ ಇರಲಿ ಅಥವಾ ಅತ್ಯಂತ ದುಷ್ಟ ಶಕ್ತಿಗಳ ಭಯವೆ ಇರಲಿ ಕಾಲಿ ದೇವಿಯನ್ನು ಭಕ್ತಿಯಿಂದ ಪೂಜಿಸಿದರೆ ಸಕಲ ತೊಂದರೆಗಳು ನಿವಾರಣೆಯಾಗಬಲ್ಲವು ಎಂದು ಹೇಳಲಾಗುತ್ತದೆ. ಭಾರತದಲ್ಲಿ ಕೆಲವು ಪ್ರಸಿದ್ಧವಾದ ಕಾಲಿ ಮಾತೆಗೆ ಮುಡಿಪಾದ ದೇವಾಲಯಗಳಿದ್ದು ಸಾಕಷ್ಟು ಜನ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಕೆಲವು ಆಯ್ದ ಕಾಲಿ ದೇವಿಯ ಅದ್ಭುತ ದೇವಾಲಯಗಳ ದರ್ಶನ ಮಾಡೋಣ.

ಪ್ರಸಿದ್ಧ ಕಾಲಿ ದೇವಾಲಯಗಳು:

ಪ್ರಸಿದ್ಧ ಕಾಲಿ ದೇವಾಲಯಗಳು:

ಕಾಲಿಘಾಟ್ ಕಾಲಿ ದೇವಾಲಯ : ಇದೊಂದು ಕಾಲಿ ದೇವಿಗೆ ಮುಡಿಪಾದ ಶಕ್ತಿಶಾಲಿ ಹಾಗೂ ಪ್ರಸಿದ್ಧವಾದ ದೇವಾಲಯವಾಗಿದೆ. ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾ ನಗರದ ಹೂಗ್ಲಿ ನದಿಯ ತಟದಲ್ಲಿ ನೆಲೆಸಿರುವ ಕಾಲಿಘಾಟ್ ಎಂಬಲ್ಲಿ ಈ ದೇವಾಲಯವಿದೆ. ಇದು ಕಾಲಿಘಾಟ್ ಕಾಲಿ ದೇವಾಲಯ ಎಂದೆ ಕರೆಯಲ್ಪಡುತ್ತದೆ.

ಚಿತ್ರಕೃಪೆ: Sankarrukku

ಪ್ರಸಿದ್ಧ ಕಾಲಿ ದೇವಾಲಯಗಳು:

ಪ್ರಸಿದ್ಧ ಕಾಲಿ ದೇವಾಲಯಗಳು:

ಗೋಲ್ಕೊಂಡಾ ಮಹಾಕಾಳಿ ದೇವಾಲಯ : ಈ ಮಹಾಕಾಳಿಯ ದೇವಾಲಯವಿರುವುದು ತೆಲಂಗಾಣ ರಾಜ್ಯದ ರಾಜಧಾನಿಯಾದ ಹೈದರಾಬಾದ್ ನಗರದ ಹೊರವಲಯದಲ್ಲಿರುವ ಹಾಗೂ ನಗರದ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾದ ಗೋಲ್ಕೊಂಡಾ ಕೋಟೆಯ ಮೇಲೆ. ತೆಲಂಗಾಣ ರಾಜ್ಯದ ಪ್ರಮುಖ ಉತ್ಸವವಾದ ಬೊನಾಲು ಉತ್ಸವವು ಮೊದಲು ಪ್ರಾರಂಭವಾಗುವುದು ಈ ದೇವಿಯ ದೇವಾಲಯದಿಂದಲೆ.

ಚಿತ್ರಕೃಪೆ: Randhirreddy

ಪ್ರಸಿದ್ಧ ಕಾಲಿ ದೇವಾಲಯಗಳು:

ಪ್ರಸಿದ್ಧ ಕಾಲಿ ದೇವಾಲಯಗಳು:

ಶ್ರೀ ಶ್ರೀ ಕಾಲಿಕಾ ಮಂದಿರ : ಜಾರ್ಖಂಡ್ ರಾಜ್ಯದ ಬುಕಾರೊ ಜಿಲ್ಲೆಯ ಚಾಸ್ ಎಂಬ ಪ್ರದೇಶದ ಚಿರಾ ಚಾಸ್ ಭಾಗದಲ್ಲಿ ಕಾಲಿಯ ಈ ದೇವಾಲಯವಿದೆ.

ಚಿತ್ರಕೃಪೆ: Aashiyan Estate Developers

ಪ್ರಸಿದ್ಧ ಕಾಲಿ ದೇವಾಲಯಗಳು:

ಪ್ರಸಿದ್ಧ ಕಾಲಿ ದೇವಾಲಯಗಳು:

ಕಾಲಿಕಾ ವಿಹಾರ ಎಂಬ ಸ್ಥಳದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಸಾಕಷ್ಟು ವಿನೂತನ ರೀತಿಯಲ್ಲಿ ನಿರ್ಮಿಸಲ್ಪಟ್ಟಿದೆ. ಈ ದೇವಾಲಯದ ಗೋಪುರವು ಆಧುನಿಕವಾಗಿದ್ದು ಸಾಂಪ್ರದಾಯಿಕ ಶೈಲಿಗಿಂತ ಭಿನ್ನವಾಗಿರುವುದನ್ನು ಕಾಣಬಹುದು.

ಚಿತ್ರಕೃಪೆ: Aashiyan Estate Developers

ಪ್ರಸಿದ್ಧ ಕಾಲಿ ದೇವಾಲಯಗಳು:

ಪ್ರಸಿದ್ಧ ಕಾಲಿ ದೇವಾಲಯಗಳು:

ಸರ್ಕರಾದೇವಿ ದೇವಾಲಯ : ದಕ್ಷಿಣ ಭಾರತದ ಪ್ರಮುಖ ಕಾಲಿ ದೇವಾಲಯಗಳ ಪೈಕಿ ಇದು ಒಂದಾಗಿದೆ. ಕೇರಳದ ತಿರುವನಂತಪುರಂ ಜಿಲ್ಲೆಯ ಚಿರಾಯಿಂಕೀಳು ತಾಲುಕಿನಲ್ಲಿರುವ ಈ ದೇವಾಲಯದ ಅಧಿ ದೇವತೆಯಾಗಿ ಭದ್ರಕಾಳಿಯು ನೆಲೆಸಿದ್ದಾಳೆ.

ಚಿತ್ರಕೃಪೆ: Binoyjsdk

ಪ್ರಸಿದ್ಧ ಕಾಲಿ ದೇವಾಲಯಗಳು:

ಪ್ರಸಿದ್ಧ ಕಾಲಿ ದೇವಾಲಯಗಳು:

ಶಿರಸಂಗಿ ಕಾಳಿಕಾ ದೇವಾಲಯ : ಕರ್ನಾಟಕದ ಧಾರವಾಡ-ವಿಜಯಪುರ ರಸ್ತೆಯ ಮೇಲೆ ನೆಲೆಸಿದ್ದು ಧಾರವಾಡದಿಂದ 60 ಕಿ.ಮೀ ಗಳಷ್ಟು ದೂರದಲ್ಲಿರುವ ಶಿರಸಂಗಿ ಎಂಬ ಹಳ್ಳಿಯಲ್ಲಿರುವ ಪ್ರಸಿದ್ಧ ಕಾಲಿ ದೇವಿಯ ದೇವಾಲಯ ಇದಾಗಿದೆ. ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ವಿಶೇಷವಾಗಿ ನವರಾತ್ರಿಯ ಸಂದರ್ಭದಲ್ಲಿ ಭೇಟಿ ನೀಡುತ್ತಾರೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: wikimedia

ಪ್ರಸಿದ್ಧ ಕಾಲಿ ದೇವಾಲಯಗಳು:

ಪ್ರಸಿದ್ಧ ಕಾಲಿ ದೇವಾಲಯಗಳು:

ಪಲಕ್ಕಾವು ಭಗವತಿ ದೇವಾಲಯ : ಕೇರಳದ ತಿರುವನಂತಪುರಂನ ಎಡವ ಎಂಬಲ್ಲಿರುವ ಅತಿ ಪುರಾತನ ಭದ್ರಕಾಳಿಯ ದೇವಾಲಯ ಇದಾಗಿದ್ದು ಸಾಕಷ್ಟು ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಪಡೆದ ಕಾಲಿಯ ದೇವಸ್ಥಾನ ಇದಾಗಿದೆ.

ಚಿತ್ರಕೃಪೆ: Akash.sl

ಪ್ರಸಿದ್ಧ ಕಾಲಿ ದೇವಾಲಯಗಳು:

ಪ್ರಸಿದ್ಧ ಕಾಲಿ ದೇವಾಲಯಗಳು:

ಕೃಪಾಮಯಿ ಕಾಲಿ ಮಂದಿರ : ಕೊಲ್ಕತ್ತಾದ ಬಳಿ ಇರುವ ಬಾರಾನಗರದ ಹೂಗ್ಲಿ ನದಿಯ ತಟದಲ್ಲಿ ನೆಲೆಸಿರುವ ಪ್ರಸಿದ್ಧ ಕಾಲಿ ದೇವಿಯ ದೇವಾಲಯ ಇದಾಗಿದೆ. ಇದರ ವಿಶೇಷತೆ ಎಂದರೆ ಉಗ್ರ ರೂಪದ ಕಾಲಿಯು ಇಲ್ಲಿ ಸೌಮ್ಯ ಸ್ವಭಾವ ಹೊಂದಿದ್ದು ದಯಾಮಯಿಯಾಗಿದ್ದಾಳೆ. ಭಕ್ತರ ನಂಬಿಕೆಯುಕ್ತ ಪ್ರಾರ್ಥನೆಗೆ ಬೇಗನೆ ಒಲಿಯುತ್ತಾಳಂತೆ.

ಚಿತ್ರಕೃಪೆ: Jonoikobangali

ಪ್ರಸಿದ್ಧ ಕಾಲಿ ದೇವಾಲಯಗಳು:

ಪ್ರಸಿದ್ಧ ಕಾಲಿ ದೇವಾಲಯಗಳು:

ಕುಟ್ಟಿಕಟ್ಟು ಶ್ರೀ ಭದ್ರಕಾಳಿ ದೇವಾಲಯ : ಕೇರಳದ ಅಲಪುಳ ಜಿಲ್ಲೆಯ ಚೆರ್ತಲ ಎಂಬಲ್ಲಿ ಈ ಭದ್ರಕಾಳಿಯ ದೇವಾಲಯವಿದೆ. ಮಲಯಾಳಂ ಕ್ಯಾಲೆಂಡರಿನ ಪ್ರಕಾರ, ಪ್ರತಿ ತಿಂಗಳ ಮೊದಲ ಭಾನುವಾರದಂದು ಸಂತಾನ ಬಯಸುವ ದಂಪತಿಗಳಿಗೆ ವಿಶೇಷವಾದ ಆಚರಣೆಯೊಂದನ್ನು ಇಲ್ಲಿ ಮಾಡಲಾಗುತ್ತದೆ. ಸಾಂದರ್ಭಿಕ ಚಿತ್ರ.

ಪ್ರಸಿದ್ಧ ಕಾಲಿ ದೇವಾಲಯಗಳು:

ಪ್ರಸಿದ್ಧ ಕಾಲಿ ದೇವಾಲಯಗಳು:

ಇನ್ನೊಂದು ವಿಶೇಷವೆಂದರೆ ಇಲ್ಲಿ ಸರ್ಪಗಳನ್ನು ಪೂಜಿಸಲಾಗುತ್ತದೆ. ಈ ಆಚರಣೆಯು ವರ್ಷದಲ್ಲಿ ಒಂದು ಬಾರಿ ಬಲು ಅದ್ದೂರಿಯಾಗಿ ನಡೆಯುತ್ತದೆ. ವರ್ಷಪೂರ್ತಿ ಈ ಉತ್ಸವಕ್ಕೆಂದು ಸಾಕಷ್ಟು ತಯಾರಿ ಮಾಡುತ್ತಾರೆ. ಎಲ್ಲ ಒಂಭತ್ತು ಸರ್ಪಗಳನ್ನು ವಿಶೇಷವಾಗಿ ಇಲ್ಲಿ ಪೂಜಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X