Search
  • Follow NativePlanet
Share
» »ಈ ಪ್ರಾಕೃತಿಕ ವಿಸ್ಮಯಗಳನ್ನು ನೋಡಿದ್ದೀರಾ?

ಈ ಪ್ರಾಕೃತಿಕ ವಿಸ್ಮಯಗಳನ್ನು ನೋಡಿದ್ದೀರಾ?

By Vijay

ಭಾರತದಲ್ಲಿ ಅದೆಷ್ಟೊ ಅಸಾಮಾನ್ಯ ಪ್ರಾಕೃತಿಕ ರಚನೆಗಳಿವೆ. ಅದರಲ್ಲಿ ಕೆಲವು ಪುಸ್ತಕಗಳಲ್ಲಿ ಶಾಶ್ವತವಾದ ಸ್ಥಾನ ಮಾನ ಪಡೆದಿದ್ದರೂ ಇನ್ನೂ ಎಷ್ಟೊ ರಚನೆಗಳು ಎಲೆ ಮರೆಯ ಕಾಯಿಯಂತೆ ತಮ್ಮಷ್ಟಕ್ಕೆ ತಾವೆ ಸದೃಢವಾಗಿ ನೆಲೆಸಿ ಪ್ರವಾಸಿಗರಿಗಾಗಿ ಎದುರು ನೋಡುತ್ತಿವೆ.

ಇಂತಹ ರಚನೆಗಳು ಸಾಮಾನ್ಯವಾಗಿ ಜನರಲ್ಲಿ ಕುತೂಹಲ ಕೆರಳಿಸುತ್ತವೆ. ಈ ಒಂದು ಕುತೂಹಲವೆ ಅಂತಹ ಸ್ಥಳಗಳಿಗೆ ಭೇಟಿ ನೀಡಲು ಪ್ರೇರೆಪಿಸುತ್ತವೆ ಎಂದರೂ ತಪ್ಪಾಗಲಾರದು. ನಿಮಗೂ ಸಹ ಕೆಲವು ವಿಶೇಷವಾದ, ವಿಚಿತ್ರವಾದ ಅಂತಹ ಕೆಲವು ಆಕರ್ಷಣೆಗಳ ಕುರಿತು ತಿಳಿಯಲು ಹಂಬಲವಿದೆಯೆ? ಅಥವಾ ಭೇಟಿ ನೀಡಲು ಆಸೆ ಇದೆಯೆ? ಹಾಗಾದರೆ ಈ ಲೇಖನವನ್ನೊಮ್ಮೆ ಓದಿ.

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ಲೋಣಾರ್ ಕ್ರೇಟರ್: ಭೂಗರ್ಭ ಶಾಸ್ತ್ರಜ್ಞರ ಪ್ರಕಾರ, ಈ ಗುಂಡಿಯ ವಯಸ್ಸು ಸುಮಾರು 52000+6000 ಅಥವಾ 52000-6000 ವರ್ಷಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಆದರೆ 2010 ರಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ, ಇದರ ವಯಸ್ಸು 570000+46000 ಇಲ್ಲವೆ 570000-46000 ವರ್ಷಗಳಷ್ಟು ಎಂದು ಹೇಳಲಾಗಿದೆ.

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ವೃತ್ತಾಕಾರದ ಈ ಗುಂಡಿಯ ವ್ಯಾಸವು ಸುಮಾರು 1.2 ಕಿ.ಮೀ ಗಳಷ್ಟಿದೆ ಎಂದರೆ ನೀವೇ ಉಹಿಸಬಹುದು ಇದರ ಅಗಾಧತೆಯನ್ನು. ಈ ಕೆರೆಯ ನೀರು ಕ್ಷಾರಯುಕ್ತವಾಗಿದ್ದು ಸೇವಿಸಲು ಯೋಗ್ಯವಾಗಿಲ್ಲ. ಅಲ್ಲದೆ ಕೇಲ ನಿರ್ದಿಷ್ಟ ಜಲ ಸೂಕ್ಷ್ಮ ಜೀವಿಗಳನ್ನು ಹೊರತುಪಡಿಸಿ ಇತರೆ ಸಾಮಾನ್ಯವಾಗಿ ಜಲದಲ್ಲಿ ಕಂಡುಬರುವಂತಹ ಮೀನುಗಳು ಹಾಗೂ ಇತರೆ ಜೀವಿಗಳು ಇಲ್ಲಿ ಕಂಡುಬರುವುದಿಲ್ಲ.

ಚಿತ್ರಕೃಪೆ: Aditya Laghate

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ವಿಜ್ಞಾನಿಗಳ ಪ್ರಕಾರ, ಈ ಲೋಣಾರ್ ಗುಂಡಿಯು ಲಕ್ಷಾಂತರ ವರ್ಷಗಳ ಹಿಂದೆ ಸೌರ್ಯವ್ಯೂಹದಲ್ಲಿ ನಡೆದಿರುವ ವಿವಿಧ ಪ್ರಕ್ರಿಯೆಗಳಿಂದುಂಟಾದ ಉಲ್ಕಾ ಶಿಲೆಗಳು ರಭಸದಿಂದ ಭೂಮಿಯೆಡೆಗೆ ತೂರಿ ಬಂದು ಅಪ್ಪಳಿಸಿದಾಗ ಒಡಮೂಡಿದ ಗುಂಡಿ ಅಥವಾ ಕಂದಕವಾಗಿದೆ ಎನ್ನಲಾಗಿದೆ.

ಚಿತ್ರಕೃಪೆ: V4vjk

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ಲೋಣಾರ್ ಕೆರೆ ಎಂತಲೆ ಪ್ರಸಿದ್ಧಿ ಪಡೆದಿರುವ ಈ ಗುಂಡಿಯು ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಲೋಣಾರ್ ಎಂಬ ಪಟ್ಟಣದಲ್ಲಿದೆ. ಲೋಣಾರ್ ಮುಂಬೈ ಮಹಾನಗರದಿಂದ 550 ಕಿ.ಮೀ ಹಾಗೂ ಔರಂಗಾಬಾದ್ 160 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Akash Sharma

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ಸೂಜಿ ಮನೆ ವೀಕ್ಷಣಾ ಕೇಂದ್ರ : ಇದೊಂದು ವಿಶಿಷ್ಟ ವೀಕ್ಷಣಾ ಕೇಂದ್ರವಾಗಿದೆ. ದೂರದಿಂದ ಒಂದು ನಿರ್ದಿಷ್ಟ ಕೋನದಲ್ಲಿ ಇದನ್ನು ನೋಡಿದಾಗ ಸೂಜಿ ಮನೆಯಂತಹ ಆಕಾರದಲ್ಲಿ ಇದು ಕಂಡುಬರುವುದರಿಂದ ಇದಕ್ಕೆ ನೀಡಲ್ ಪಾಯಿಂಟ್ ಅಥವಾ ಸೂಜಿ ಮನೆ ಕೇಂದ್ರ ಎಂದು ಕರೆಯುತ್ತಾರೆ. ಇದೂ ಎಲಿಫಂಟ್ ಹೆಡ್ ಎಂತಲೂ ಸಹ ಕರೆಯಲ್ಪಡುತ್ತದೆ. ಮಹಾರಾಷ್ಟ್ರದ ಪ್ರಖ್ಯಾತ ಪ್ರವಾಸಿ ತಾಣವಾದ ಮಹಾಬಲೇಶ್ವರದಲ್ಲಿ ಈ ಆಕರ್ಷಣೆಯಿದೆ.

ಚಿತ್ರಕೃಪೆ: Naiju.mathew

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ಕಪ್ಪೆ ಬಂಡೆ : ರಾಜಸ್ಥಾನದ ಏಕೈಕ ಗಿರಿಧಾಮ ಪ್ರದೇಶವಾದ ಮೌಂಟ್ ಅಬುವಿನಲ್ಲಿ ಈ ನೈಸರ್ಗಿಕ ಶಿಲೆಯನ್ನು ಕಾಣಬಹುದು. ಅಂದರೆ ಇದನ್ನು ಒಂದು ಕೋನದಿಂದ ನೋಡಿದಾಗ ಬೃಹದಾಕಾರದ ಮಂಡೂಕ ಅಥವಾ ಕಪ್ಪೆಯ ಹಾಗೆ ಕಾಣುವುದರಿಂದ ಇದಕ್ಕೆ ಕಪ್ಪೆ ಶಿಲೆ ಅಥವಾ ಟೋಡ್ ರಾಕ್ ಎಂದು ಕರೆಯುತ್ತಾರೆ. ಇದೂ ಸಹ ಪ್ರವಾಸಿಗರ ನೋಡಬಯಸುವ ಕೌತುಕಮಯ ರಚನೆಯಾಗಿದೆ.

ಚಿತ್ರಕೃಪೆ: Kondephy

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೊಲಿಮಿಗುಂದ್ಲಾ ತಾಲೂಕಿನ ಬೇಲಮ್ ಹಳ್ಳಿಯಲ್ಲಿ ಕಂಡುಬರುವ ಬೇಲಮ್ ಗುಹೆಗಳು ಭಾರತ ಉಪಖಂಡದಲ್ಲೆ ಎರಡನೆಯ ಅತಿ ದೊಡ್ಡದಾದ ಗುಹೆಯಾಗಿದ್ದು, ಅತಿ ಉದ್ದನೆಯ ಗುಹೆ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ.

ಚಿತ್ರಕೃಪೆ: PP Yoonus

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

3,229 ಮೀ.ಗಳಷ್ಟು ಉದ್ದವಿರುವ ಈ ಪ್ರಕೃತಿ ಸಹಜ ನಿರ್ಮಿತ ಗುಹೆಯು ಆಂಧ್ರದ ಕೊಲಿಮಿಗುಂದ್ಲಾ ತಲೂಕಿನಿಂದ ಕೇವಲ 3 ಕಿ.ಮೀ ದೂರದಲ್ಲಿ ನೆಲೆಸಿದೆ. ಐತಿಹಾಸಿಕವಾಗಿಯೂ ಮಹತ್ವವನ್ನು ಪಡೆದಿರುವ ಈ ಗುಹೆಯ ಕುರಿತು ಸ್ಥಳೀಯರಿಗೆ ಗೊತ್ತಿದ್ದರೂ ಪುಸ್ತಕದಲ್ಲಿ ಮೊದಲು ದಾಖಲಿಸಿದ್ದು ಬ್ರಿಟೀಷ್ ಸಮೀಕ್ಷಕ (ಸರ್ವೇಯರ್) ರಾಬರ್ಟ್ ಬ್ರೂಸ್ ಫೂಟ್ ಅದೂ 1884 ರಲ್ಲಿ.

ಚಿತ್ರಕೃಪೆ: Naga Praveena Sharma P

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ಭೇಡಾಘಾಟಿನ ಅಮೃತಶಿಲೆಗಳು : ಮಧ್ಯ ಪ್ರದೇಶದ ರಾಜ್ಯದ ಜಬಲಪುರ್ ನಗರದಿಂದ ಇಪ್ಪತ್ತು ಕಿ.ಮೀ ದೂರದಲ್ಲಿರುವ ಭೇಡಾಘಾಟ್ ತನ್ನಲ್ಲಿರುವ ಧುಂವಾಧಾರ್ ಜಲಪಾತ ಹಾಗೂ ವಿಶೇಷವಾಗಿ ಕಂಡುಬರುವ ಅಮೃತ ಶಿಲೆಗಳ ಬಂಡೆಗಳಿಂದಾಗಿ ಗಮನಸೆಳೆಯುತ್ತದೆ. ನರ್ಮದಾ ನದಿಯ ಅದಿ ಬದಿಗಳಲ್ಲಿ ಈ ಅಮೃತಶಿಲೆಗಳ ಬಂಡೆಗಳು ಬಲು ವಿಶಿಷ್ಟವಾಗಿ ಗೋಚರಿಸುತ್ತವೆ.

ಚಿತ್ರಕೃಪೆ: Hariya1234

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ಬೊರಾ ಗುಹೆಗಳು : ಅರಕು ಕಣಿವೆ, ಆಂಧ್ರಪ್ರದೇಶದ ವೈಜಾಗ್(ವಿಶಾಖಪಟ್ಟಣ) ಜಿಲ್ಲೆಯಲ್ಲಿರುವ ಒಂದು ಸುಂದರ ಹಾಗೂ ಮನಮೋಹಕ ಗಿರಿಧಾಮವಾಗಿದೆ. ಈ ಗಿರಿಧಾಮವು ತನ್ನಲ್ಲಿರುವ ನಸಿರ್ಗಿಕವಾಗಿ ನಿರ್ಮಿತವಾದ ವಿಸ್ಮಯಕಾರಿ ಗುಹೆಗಳಿಂದಾಗಿ ಗಮನ ಸೆಳೆಯುತ್ತದೆ. ಇವುಗಳನ್ನು ಬೊರಾ ಗುಹೆಗಳೆಂದು ಕರೆಯುತ್ತಾರೆ ಹಾಗೂ ಈ ಗುಹೆಗಳು ಆಕರ್ಷಕ ಪ್ರವಾಸಿ ಕೇಂದ್ರವಾಗಿದೆ.

ಚಿತ್ರಕೃಪೆ: Bhaskaranaidu

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ಅಮರನಾಥ ಶಿವಲಿಂಗ : ಜಮ್ಮು ಕಾಶ್ಮೀರ ರಾಜ್ಯದಲ್ಲಿರುವ ಅಮರನಾಥ ಮೂಲತಃ ಒಂದು ಗುಹಾ ದೇವಾಲಯವಾಗಿದ್ದು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಕಂಡುಬರುವ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ಶಿವಲಿಂಗವು ಆ ಸಮಯದಲ್ಲಿ ಸಂಪೂರ್ಣವಾಗಿ ಮಂಜುಗಡ್ಡೆಯಿಂದ ರೂಪಗೊಳ್ಳುವುದೆ ಒಂದು ವಿಸ್ಮಯಕಾರಿ ಅಂಶವಾಗಿದೆ. ಇದೊಂದು ನೈಸರ್ಗಿಕ ವಿಸ್ಮಯವೆ ಹೌದು.

ಚಿತ್ರಕೃಪೆ: Gktambe

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ಲೋಕ್ತಕ್ ಎಂಬ ತೇಲುವ ಕೆರೆ : ಅದೇನಪ್ಪಾ ಕೇರೆಯೆ ತೇಲುತ್ತದೆಯಾ? ಎಂತನ್ನಿಸದೆ ಇರಲಾರದು. ಹೌದು ಇದೊಂದು ರೀತಿಯಲ್ಲಿ "ತೇಲುವ ಕೆರೆ" ಎಂಬ ಬಿರುದನ್ನು ಪಡೆದಿದೆ. ಈ ರೀತಿಯ ಕೆರೆಯ ವಿಧದಲ್ಲಿ ಇದು ಜಗತ್ತಿನಲ್ಲೆ ಏಕೈಕ ಕೆರೆಯಾಗಿದ್ದು, ಅದರಲ್ಲೂ ಭಾರತದಲ್ಲಿರುವುದು ಹೆಮ್ಮೆಯ ವಿಚಾರ. ಮೂಲವಾಗಿ ಇದಿರುವುದು ಈಶಾನ್ಯ ಭಾರತ ರಾಜ್ಯವಾದ ಮಣಿಪುರದ ಬಿಷ್ಣುಪುರ(ವಿಷ್ಣುಪುರ) ಜಿಲ್ಲೆಯಲ್ಲಿರುವ ಮೋಯಿರಾಂಗ್ ಎಂಬ ಪಟ್ಟಣದಲ್ಲಿ.

ಚಿತ್ರಕೃಪೆ: Sharada Prasad CS

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ಮೋಯಿರಾಂಗ್ ಒಂದು ಪ್ರವಾಸಿ ಮಹತ್ವವುಳ್ಳ ಪಟ್ಟಣವಾಗಿದ್ದು, ಮಣಿಪುರದ ರಾಜಧಾನಿಯಾದ ಇಂಫಾಲ್ ನಗರದ ದಕ್ಷಿಣಕ್ಕೆ 45 ಕಿ.ಮೀ ಗಳಷ್ಟು ದೂರದಲ್ಲಿದೆ. ಇನ್ನು ಈ ಪಟ್ಟಣದಲ್ಲಿರುವ ಲೋಕ್ತಕ್ ಕೆರೆಯು ಈಶಾನ್ಯ ಭಾರತದ ಅತಿ ದೊಡ್ಡ ಸಿಹಿ ನೀರಿನ ಕೆರೆಯಾಗಿದ್ದು ತೇಲುವ ಚಿಕ್ಕ ಚಿಕ್ಕ ಗುಡ್ಡೆಗಳನ್ನು ಒಳಗೊಂಡಿದೆ. ಈ ಗುಡ್ಡೆಗಳು ವಿಘಟಿಸುತ್ತಿರುವ ಸಸ್ಯದ್ರವ್ಯ, ಮಣ್ಣು ಹಾಗೂ ಇತರೆ ಜೈವಿಕ ಉತ್ಪನ್ನಗಳಿಂದ ಉತ್ಪತ್ತಿಯಾಗಿರುತ್ತವೆ.

ಚಿತ್ರಕೃಪೆ: Sharada Prasad CS

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ಸಂತ ಮೇರಿಯ ಬಸಾಲ್ಟ್ ಶಿಲಾ ರಚನೆಗಳು : ಉಡುಪಿಯ ಮಲ್ಪೆ ಕಡಲ ತೀರ ಪ್ರದೇಶದಲ್ಲೆ ಕಂಡುಬರುವ ಸೇಂಟ್ ಮೇರಿಯ ದ್ವೀಪ ಸಮೂಹವು ಉಡೂಪಿಯ ಪ್ರೇಕ್ಷಣೀಯ ಸ್ಥಳವಾಗಿದೆ. ವಿಶೇಷವೆಂದರೆ ಇಲ್ಲಿ ಕಂಡುಬರುವ ಬಸಾಲ್ಟ್ ಶಿಲಾ ರಚನೆಗಳು ಜ್ವಾಲಾಮುಖಿಯಿಂದ ರೂಪಿತವಾದ ರಚನೆಗಳಾಗಿವೆ. ಈ ರಚನೆಗಳು ಮಡಗಾಸ್ಕರ್ ದೇಶವು ಭಾರತ ಉಪಖಂಡದೊಂದಿಗೆ ಹೊಂದಿಕೊಂಡಿದ್ದಾಗ ಉಂಟಾದವುಗಳು ಎಂದಿ ತಜ್ಞರು ವಿಶ್ಲೇಷಿಸುತ್ತಾರೆ. ಮಲ್ಪೆ ಕಡಲ ತೀರದಿಂದ ಆರು ಕಿ.ಮೀ ದೂರವಿರುವ ಈ ದ್ವೀಪ ಸಮೂಹಕ್ಕೆ ದೋಣಿಯಿಂದ ಮಾತ್ರವೆ ಹೋಗಲು ಸಾಧ್ಯ. ಇದನ್ನು ಕೋಕೋನಟ್ ದ್ವೀಪ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.
ಚಿತ್ರಕೃಪೆ: Arun Prabhu

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ಡೈನೋಸಾರಸ್ ಶಿಲೆ : ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿಯಿರುವ ಕುಂತಿ ಬೆಟ್ಟಗಳಲ್ಲಿನ ಒಂದು ಭಾಗ. ಇದನ್ನು ದೂರದಿಂದ ಸೂಕ್ಷ್ಮವಾಗಿ ಗಮನಿಸಿದರೆ ಆದಿ ಕಾಲದಲ್ಲಿದ್ದ ಡೈನೋಸಾರಸ್ ಎಂಬ ಪ್ರಾಣಿಯ ಮುಖವು ನೆನಪಿಗೆ ಬರುವಂತಿದೆಯಲ್ಲವೆ...

ಚಿತ್ರಕೃಪೆ: Vinayraghavendra

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಯಾಣವು ಒಂದು ಪ್ರವಾಸಿ ತಾಣವಾಗಿದ್ದು ತನ್ನಲ್ಲಿರುವ ವಿಶಿಷ್ಟಮಯ ಕಲ್ಲಿನ ರಚನೆಗಾಗಿ ಹೆಸರುವಾಸಿಯಾಗಿದೆ. ಅಸಾಧಾರಣ ಹಾಗೂ ಅಸ್ವಾಭಾವಿಕ ಬಂಡೆಗಳಿಂದ ರಚನೆಗೊಂಡಿರುವ ಯಾಣದಲ್ಲಿರುವ ಶಿಲೆಗಳ ಬೃಹತ್ ಗಾತ್ರದ ರಚನೆಯು ಪರಿಸರ ಪ್ರೇಮಿಗಳನ್ನು ಸೇರಿದಂತೆ ಅನೇಕ ಪ್ರವಾಸಿರನ್ನೂ ಸಹ ಆಕರ್ಷಿಸುತ್ತದೆ.

ಚಿತ್ರಕೃಪೆ: Srinivas G

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ದಂಗುಬಡಿಸುವ ಪ್ರಾಕೃತಿಕ ವಿಸ್ಮಯಗಳು:

ಭಾರತದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಮೇಘಾಲಯ ರಾಜ್ಯದ ಚಿರಾಪುಂಜಿಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಈ ಸೇತುವೆ ಒಂದು ನಿಸರ್ಗ ನಿರ್ಮಿತ ಜಗತ್ತಿನಲ್ಲೆ ಅದ್ಭುತ ಅಚ್ಚರಿಯಾಗಿದೆ. ಮರದ ಬೇರುಗಳಿಂದ ತೂಗು ಸೇತುವೆಯ ಹಾಗೆ ತನ್ನಷ್ಟಕ್ಕೆ ತಾನೆ ನಿರ್ಮಾಣಗೊಂಡಿದ್ದು ಈ ಸೇತುವೆಯು ಇಂದಿಗೂ ಸುತ್ತಮುತ್ತಲಿನ ಹಳ್ಳಿಗಳ ಜನರಿಂದ ನಿರ್ಭಯವಾಗಿ ಬಳಸಲ್ಪಡುತ್ತದೆ.

ಚಿತ್ರಕೃಪೆ: Arshiya Urveeja Bose

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more