Search
  • Follow NativePlanet
Share
» »ಮಡಿಕೇರಿಯಲ್ಲಿ ಗಾಳಿಬೀಡು ಟ್ರೆಕ್ಕಿಂಗ್ ಹೋಗಿದ್ದೀರಾ?

ಮಡಿಕೇರಿಯಲ್ಲಿ ಗಾಳಿಬೀಡು ಟ್ರೆಕ್ಕಿಂಗ್ ಹೋಗಿದ್ದೀರಾ?

ವೀಕ್ ಎಂಡ್ ಬಂತೆಂದರೆ ಸಾಕು ಯುವಕರು ತಮ್ಮ ಫ್ರೆಂಡ್ಸ್‌ ಗ್ಯಾಂಗ್ ಹಿಡಿದುಕೊಂಡು ಚಟುವಟಿಕೆ ಮಾಡಬೇಕೆನ್ನುವ ಅಪೇಕ್ಷೆಯಲ್ಲಿರುತ್ತಾರೆ. ಯುವಕರಿಗಂತೂ ಟ್ರಕ್ಕಿಂಗ್ ಹೋಗೋದಂದ್ರೆ ತುಂಬಾನೇ ಇಷ್ಟವಾಗುತ್ತದೆ. ಗೊತ್ತಿಲ್ಲದ ಪ್ರದೇಶದಲ್ಲಿ ಹೊಸ ದಾರಿ ಹೊಸ ಅನುಭವವನ್ನು ಪಡೆಯುವ ಕುತೂಹಲದಲ್ಲಿರುತ್ತಾರೆ. ನೀವೂ ಸಹ ಟ್ರೆಕ್ ಪ್ರಿಯರಾಗಿದ್ದರೆ ಈ ಲೇಖನದಲ್ಲಿ ತಿಳಿಸಲಾದ ಟ್ರೆಕ್ಕಿಂಗ್ ತಾಣದ ಬಗ್ಗೆ ಒಮ್ಮೆ ನೋಡಿ. ಅದುವೇ ಗಾಳಿಬೀಡು ಟ್ರೆಕ್. ಬೆಂಗಳೂರು, ಮೈಸೂರುಗಳಿಗೆ ಸಮೀಪವಿರುವ ಅದ್ಭುತ ಬೆಟ್ಟ ಪ್ರದೇಶ ಇದಾಗಿದೆ.

ಗಾಳಿಬೀಡು ಟ್ರೆಕ್

ಗಾಳಿಬೀಡು ಟ್ರೆಕ್

PC: youtube

ವಾರಾಂತ್ಯದ ರಜೆಯನ್ನು ಕಳೆಯಲು ಹೇಳಿಮಾಡಿಸಿದಂತಿದೆ ಈ ತಾಣ. ಸಾಕಷ್ಟು ಜನರಿಗೆ ಈ ಟ್ರೆಕ್ ಕುರಿತು ಅಷ್ಟೊಂದಾಗಿ ತಿಳಿದಿಲ್ಲ. ಹಾಗಾಗಿ ಇಲ್ಲಿ ಟ್ರೆಕ್ ಮಾಡುವವರ ಸಂಖ್ಯೆಯೂ ವಿರಳ. ಆದರೆ ಈ ಟ್ರೆಕ್ ಎಂದಿಗೂ ಮರೆಯದ ಸುಂದರ ಅನುಭವವನ್ನು ಕಟ್ಟಿಕೊಡುವುದರಲ್ಲಿ ಸಂಶಯವಿಲ್ಲ. ಇದೆ ಗಾಳಿಬೀಡು ಟ್ರೆಕ್. ಕೊಡಗಿನಲ್ಲಿ ಆಸ್ವಾದಿಸಬಹುದಾದ ಒಂದು ರೋಮಾಂಚಕ ಟ್ರೆಕ್ ಇದಾಗಿದೆ.

ಮಡಿಕೇರಿಯ ಚುಮುಚುಮು ಚಳಿ

ಮಡಿಕೇರಿಯ ಚುಮುಚುಮು ಚಳಿ

ಬೆಂಗಳೂರು ಅಕ್ಕ ಪಕ್ಕ ವಾಸಿಸುವವರಿಗೆ ಮಡಿಕೇರಿ ಹೋಗೋದಂದ್ರೆ ತುಂಬಾನೇ ಸುಲಭ. ಒಂದು ಬೈಕ್ ಹಿಡ್ಕೊಂಡು ಹೊರಟ್ರೆ ಪ್ರಯಾಣವನ್ನೂ ಎಂಜಾಯ್ ಮಾಡಬಹುದು ಹಾಗೆಯೇ ಮಡಿಕೇರಿಯ ಚುಮುಚುಮು ಚಳಿಯ ಅನುಭವವನ್ನೂ ಪಡೆಯಬಹುದು. ಅಲ್ಲಿನ ಕಾಫಿ ತೋಟಗಳ ಕಂಪಾದ ವಾಸನೆಯು ನಿಮ್ಮನ್ನು ಒಂದು ಮತ್ತಿನ ಲೋಕಕ್ಕೆ ಕರೆದೊಯ್ಯುವಂತೆ ಮಾಡುತ್ತದೆ.

 ವೀಕೆಂಡ್‌ ಮಜಾ

ವೀಕೆಂಡ್‌ ಮಜಾ

ದಿನನಿತ್ಯ ಗದ್ದಲದ ಜೀವನ, ಟ್ರಾಫಿಕ್ ಕಿರಿಕಿರಿಯಿಂದ ದೂರವಿರಬೇಕು. ಮನಸ್ಸಿಗೆ ನೆಮ್ಮದಿ ಬೇಕೆಂದೆನಿಸಿದರೆ ಇಲ್ಲಿಗೆ ಹೋಗಲೇ ಬೇಕು. ಇಂತಹ ಪ್ರಶಾಂತವಾದ ಸ್ಥಳದಲ್ಲಿ ನೀವು ನಿಮ್ಮ ನಿಮ್ಮ ಸ್ನೇಹಿತರ ಜೊತೆ ಚಾರಣ ಕೈಗೊಂಡರೆ ನಿಮ್ಮ ವೀಕೆಂಡ್‌ನ್ನು ಸಂಪೂರ್ಣವಾಗಿ ಎಂಜಾಯ್ ಮಾಡಬಹುದು. ಪ್ರಾಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ಈ ತಾಣವು ನಿಮ್ಮ ಮನಸ್ಸನ್ನು ಉಲ್ಲಾಸ ಗೊಳಿಸುವುದರಲ್ಲಿ ಎರಡು ಮಾತಿಲ್ಲ.

ಮಾರ್ಗದರ್ಶಕರನ್ನು ಕರೆದೊಯ್ಯಿರಿ

ಮಾರ್ಗದರ್ಶಕರನ್ನು ಕರೆದೊಯ್ಯಿರಿ

ಗಾಳಿಬೀಡು ಕೊಡಗಿನಲ್ಲಿ ಕಂಡುಬರುವ ಹಲವು ಶಿಖರಗಳ ಪೈಕಿ ಒಂದಾಗಿದ್ದು ಟ್ರೆಕ್ಕಿಂಗ್ ಮಾಡಲು ಬಲು ಯೋಗ್ಯವಾದ ಸ್ಥಳವಾಗಿದೆ. ಆದರೆ ಈ ಟ್ರೆಕ್ಕಿಂಗ್ ಅಷ್ಟೆ ಸರಳ ಎಂದು ಭಾವಿಸಬೇಡಿ. ನೀವು ಎಷ್ಟು ಬಾರಿ ಬಂದರೂ ಇಲ್ಲಿನ ರಸ್ತೆ ನಿಮಗೆ ಪ್ರತಿಸಲ ಗೊಂದಲಕ್ಕೀಡಾಗಿಸುತ್ತದೆ. ಹಾಗಾಗಿ ನಿಮಗೆ ಮಾರ್ಗದರ್ಶನ ನೀಡಲು ತಿಳಿದಿರುವ ಸ್ಥಳೀಯರನ್ನು ಜೊತೆಗೆ ಕರೆದುಕೊಂಡು ಹೋಗುವುದು ಒಳಿತು. ಇಲ್ಲವಾದಲ್ಲಿ ದಾರಿ ತಪ್ಪಿ ಹೋಗುವ ಸಾಧ್ಯತೆ ಅಧಿಕ.

ಚಾರಣಿಗರ ತಂಡ

ಚಾರಣಿಗರ ತಂಡ

ನಿಮಗೆ ಟ್ರಕ್ಕಿಂಗ್ ಹೋಗಬೇಕೆಂದಿದ್ದರೆ ಇತ್ತೀಚೆಗೆ ಅನೇಕ ಚಾರಣಿಗರ ತಂಡಗಳು ಪ್ರಾರಂಭವಾಗಿವೆ. ಎಲ್ಲಾ ಚಾರಣಿಗ ಪ್ರೀಯರು ಸೇರಿಕೊಂಡು ನಿರ್ಧಿಷ್ಟ ದಿನ ನಿಗಧಿಮಾಡಿ ಚಾರಣಕ್ಕೆ ಹೋಗುತ್ತಾರೆ. ನೀವೂ ಅವರ ಜೊತೆ ಸೇರಿಕೊಳ್ಳಬಹುದು. ಇಲ್ಲವಾದಲ್ಲಿ ಕೆಲವು ಟ್ರಕ್ಕಿಂಗ್ ಸೇವೆ ಒದಗಿಸುವ ಸಂಸ್ಥೆಗಳಿರುತ್ತವೆ. ಅವರಲ್ಲಿ ಟ್ರಕ್ಕಿಂಗ್‌ಗೆ ಹೋಗಲು ಎಲ್ಲಿ ಬಸ್ ಹತ್ತಬೇಕು? ಎಲ್ಲಿ ಇಳಿಯಬೇಕೆನ್ನುವ ಎಲ್ಲಾ ಮಾಹಿತಿ ಪಡೆದಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X