• Follow NativePlanet
Share
» »ಯೌವನದಲ್ಲಿರುವಾಗಲೇ ಈ ನಗರಗಳ ನೈಟ್‌ ಲೈಫ್‌ಅನುಭವ ಪಡೆಯಲೇ ಬೇಕು

ಯೌವನದಲ್ಲಿರುವಾಗಲೇ ಈ ನಗರಗಳ ನೈಟ್‌ ಲೈಫ್‌ಅನುಭವ ಪಡೆಯಲೇ ಬೇಕು

Written By:

ಜೀವನದಲ್ಲಿ ಒಮ್ಮೆಯಾದರೂ ನೈಟ್‌ ಲೈಫ್‌ ಅನುಭವವನ್ನು ಎಂದಾದರೂ ಪಡೆದಿದ್ದೀರಾ? ಯುವಕರಿಗಂತೂ ಫ್ರೆಂಡ್ಸ್ ಜೊತೆ ನೈಟ್‌ ಕ್ಲಬ್‌ಗೆ ಹೋಗೋದು, ನೈಟ್ ಪಬ್‌ಗೆ ಹೋಗೋದು ಮಜಾ ಮಾಡೋದು ಇಷ್ಟವಾಗುತ್ತೆ. ನೈಟ್‌ಲೈಫ್‌ ಯುವಕರ ಜೀವನ ಶೈಲಿಯನ್ನೇ ಬದಲಾಯಿಸಿದೆ. ಹಾಗಾದ್ರೆ ಭಾರತದಲ್ಲಿರುವ ಅಂತಹ ನಗರಗಳು ಯಾವುವು ಅನ್ನೋದನ್ನು ನೋಡೋಣ.

ಬರೀ 12 ಸಾವಿರ ರೂ.ಗೆ ಇಡೀ ದ್ವೀಪವೇ ನಿಮ್ಮದಾಗುತ್ತದೆ

ಗೋವಾದ ನೈಟ್ ಲೈಫ್

ಗೋವಾದ ನೈಟ್ ಲೈಫ್

ಗೋವಾ ನೈಟ್‌ ಲೈಫ್‌ಗೆ ಪ್ರಸಿದ್ಧವಾದ ಸ್ಥಳವಾಗಿದೆ. ಇಲ್ಲಿನ ಬೀಚ್‌ಗಳು ಕೇವಲ ದೇಶಿಗರಲ್ಲಿ ಮಾತ್ರವಲ್ಲ ವಿದೇಶಿಗರ ನಡುವೆಯೂ ಪ್ರಸಿದ್ಧವಾಗಿದೆ. ಸಾಕಷ್ಟು ಮಂದಿ ವಿದೇಶಿಗರೂ ಕೂಡಾ ಇಲ್ಲಿಗೆ ಆಗಮಿಸಿ ಬೀಚ್‌ನ ಮಜಾ ಪಡೆಯುತ್ತಾರೆ. ಗೋವಾವು ಡಿಸ್ಕೋ, ಪಾರ್ಟಿ, ಕ್ಲಬ್ ಗಳಿಗೆ ಹೆಸರುವಾಸಿಯಾಗಿದೆ. ಹಬ್ಬಗಳ ಸಂದರ್ಭದಲ್ಲಿ ಇಲ್ಲಿ ಸಾಕಷ್ಟು ಜನರು ಯುವಕರು ಆಗಮಿಸುತ್ತಾರೆ. ಸಂಜೆ ಪ್ರಾರಂಭಿಸಿದರೆ ಮತ್ತೆ ಅಲ್ಲಿಂದ ತೆರಳೋದು ಮುಂಜಾನೇನೆ. ನೈಟ್‌ ಲೈಫ್‌ನ ಬಗ್ಗೆ ತಿಳಿದುಕೊಳ್ಳಬೇಕಾದರೆ ಗೋವಾಕ್ಕೆ ಭೇಟಿ ನೀಡಿ.

ಬೆಂಗಳೂರು ನೈಟ್ ಲೈಫ್

ಬೆಂಗಳೂರು ನೈಟ್ ಲೈಫ್

ಬೆಂಗಳೂರು ಎಂದ ತಕ್ಷಣ ಮೊತ್ತಮೊದಲಿಗೆ ತಲೆಗೆ ಹೊಳೆಯುವುದೇ ಐಟಿ ಕ್ಷೇತ್ರ. ಬೆಂಗಳೂರು ಕೇವಲ ಐಟಿ ಹಬ್‌ಗಾಗಿ ಮಾತ್ರವಲ್ಲ ತನ್ನ ನೈಟ್ ಲೈಫ್‌ಗೂ ಫೇಮಸ್ ಆಗಿದೆ, ಇಲ್ಲಿ ನೀವು ನೈಟ್ ಎಕ್ಸ್‌ಪೀರಿಯನ್ಸ್‌ ಪಡೆಯಬಹುದಾದ ಹಲವು ಸ್ಥಳಗಳಿವೆ. ಎಮ್‌ಜಿ ರೋಡ್, ಚರ್ಚ್ ಗೇಟ್, ಬ್ರಿಗೇಡ್ ರೋಡ್, ಜೆಪಿ ನಗರದಲ್ಲಿ ಉತ್ತಮ ನೈಟ್ ಕ್ಲಬ್‌ಗಳು ಹಾಗೂ ಪಬ್‌ಗಳು ಇವೆ. ಕರ್ನಾಟಕದಲ್ಲಿ ಬೆಂಗಳೂರನ್ನು ಹೊರತುಪಡಿಸಿ ಕೂರ್ಗ್‌ನಲ್ಲೂ ನೀವು ನೈಟ್ ಲೈಫ್‌ನ ಆನಂದ ಪಡೆಯಬಹುದು.

ಮುಂಬೈ ನೈಟ್ ಲೈಫ್

ಮುಂಬೈ ನೈಟ್ ಲೈಫ್

ಹೆಚ್ಚಿನ ಬಾಲಿವುಡ್‌ ಸ್ಟಾರ್‌ಗಳ ಮನೆಯಾಗಿರುವ ಮುಂಬೈ ಎಷ್ಟು ಫ್ಯಾಶನೇಬಲ್ ಸಿಟಿ ಎನ್ನುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ನಗರವು ರಾತ್ರಿಯಲ್ಲೂ ಮಲಗುವುದಿಲ್ಲ. ಇದಕ್ಕೆ ಕಾರಣ ಅಲ್ಲಿ ಹೆಚ್ಚುತ್ತಿರುವ ಯುವಕರ ಸಂಖ್ಯೆ. ಮುಂಬೈ ದೊಡ್ಡ ದೊಡ್ಡ ಕಂಪನಿಗಳ ತಾಣವಾಗಿದ್ದು, ಬೀಚ್, ಬಾಲಿವುಡ್‌ಗೆ ಸಂಬಂಧಿಸಿದ ನಗರವಾಗಿದೆ. ಇದು ದಿನದಲ್ಲಿ ಮಾತ್ರವಲ್ಲ ರಾತ್ರಿಯಲ್ಲೂ ಬ್ಯುಸಿಯಾಗಿರುವ ನಗರವಾಗಿದೆ. ಇಲ್ಲಿ ಸಾಕಷ್ಟು ಪಬ್, ಬಾರ್, ಡಿಸ್ಕೋಗಳು ಇವೆ, ನೀವು ಇಲ್ಲಿ ನೈಟ್ ಲೈಫ್‌ನ್ನು ಎಂಜಾಯ್ ಮಾಡಬಹುದು.

ಚಂಡೀಗಡ್ ನೈಟ್ ಲೈಫ್

ಚಂಡೀಗಡ್ ನೈಟ್ ಲೈಫ್

ನೈಟ್‌ಲೈಪ್‌ಗೆ ಸಂಬಂಧಿಸಿದಂತೆ ಚಂಡೀಗಡ ಯಾವುದಕ್ಕೂ ಕಮ್ಮಿ ಇಲ್ಲ. ಇಲ್ಲಿಯ ಹೆಚ್ಚಿನ ಯುವಕರು ತಮ್ಮ ಮೋಜು ಮಸ್ತಿಗಾಗಿ ನೈಟ್ ಕ್ಲಬ್, ಪಬ್, ಬಾರ್, ಡಿಸ್ಕೋಗಳಿಗೆ ಹೋಗುತ್ತಾರೆ. ಬದಲಾಗುತ್ತಿರುವ ಫ್ಯಾಶನ್‌ನ್ನು ನೀವು ಇಲ್ಲಿ ಕಾಣಬಹುದು. ನೈಟ್‌ ಲೈಫ್‌ನ ಮಜಾ ಪಡೆಯುವ ಅನೇಕ ಸ್ಥಳಗಳು ಇಲ್ಲಿವೆ.

ಲೈಫ್‌ನಲ್ಲಿ ಒಮ್ಮೆಯಾದರೂ ಪ್ಯಾರಗ್ಲೈಡಿಂಗ್ ಮಾಡಿದ್ದೀರಾ...ಇಲ್ಲಿದೆ ಪ್ಯಾರಗ್ಲೈಡಿಂಗ್ ತಾಣಗಳು

ಪುಣೆ ನೈಟ್ ಲೈಫ್

ಪುಣೆ ನೈಟ್ ಲೈಫ್

ಮಹಾರಾಷ್ಟ್ರದಲ್ಲಿರುವ ಪುಣೆಯು ತನ್ನ ಉತ್ತಮ ಜೀವನ ಶೈಲಿಗಾಗಿ ಹೆಸರುವಾಸಿಯಾಗಿದೆ. ಜೊತೆಗೆ ನೈಟ್ ಲೈಫ್‌ಗೂ ಹೆಸರುವಾಸಿದೆ. ಇಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚು ಪಬ್, ಬಾರ್‌ಗಳು ಕಾಣಸಿಗುತ್ತದೆ. ದಿನವಿಡೀ ಬ್ಯುಸಿಯಾಗಿದ್ದರೂ ರಾತ್ರಿ ಮಾತ್ರ ಕಲರ್‌ಫುಲ್ ಜೀವನ ಇಲ್ಲಿ ಕಾಣಸಿಗುತ್ತದೆ.

Read more about: india goa bangalore

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ