• Follow NativePlanet
Share
» »ಕೋಲ್ಕತ್ತದ ಮೋಸ್ಟ್ ಹಂಟೆಡ್ ಮೆಟ್ರೊ ಸ್ಟೇಷನ್ ಯಾವುದು ಗೊತ್ತ?

ಕೋಲ್ಕತ್ತದ ಮೋಸ್ಟ್ ಹಂಟೆಡ್ ಮೆಟ್ರೊ ಸ್ಟೇಷನ್ ಯಾವುದು ಗೊತ್ತ?

Posted By:

ಕೋಲ್ಕತ್ತ ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ. ಇದು 1911 ರಲ್ಲಿ ಬ್ರಿಟೀಷರರಾಜಧಾನಿಯಾಗಿತ್ತು. ಇಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಅವುಗಳಲ್ಲಿ ಮುಖ್ಯವಾದುದು ಎಂದರೆ ಹೌರಾ ಸೇತುವೆ. ದಸರಾ ಹಬ್ಬದಂದು ಅತ್ಯಂತ ವಿಜೃಂಬಣೆಯಿಂದ ಆಚರಿಸುವ ರಾಜ್ಯಗಳಲ್ಲಿ ಇದು ಕೂಡ ಒಂದು. ದುರ್ಗಾ ಪೂಜೆಯನ್ನು ವೈಭವದಿಂದ ಆಚರಿಸುತ್ತಾರೆ. ಆ ಸಮಯದಲ್ಲಿ ಕೋಲ್ಕತ್ತ ನೋಡಲು ತುಂಬಾ ಚೆನ್ನಾಗಿರುತ್ತದೆ. ಆ ಸಮಯದಲ್ಲಿ ಬಣ್ಣ-ಬಣ್ಣದ ದೀಪಾಲಂಕಾರ, ಸುಂದರವಾದ ಮಂಟಪಗಳಲ್ಲಿ ಮನೋಹರವಾದ ದುರ್ಗಾ ಮೂರ್ತಿಯ ಆರಾಧನೆ ಆಹಾ....! ಎಷ್ಟು ಅದ್ಭುತವಾಗಿರುತ್ತದೆ ಗೊತ್ತ?

ಇಲ್ಲಿ ಮುಖ್ಯವಾಗಿ ವಿವೇಕಾನಂದ ದೀಕ್ಷಾ ಸ್ಥಳ, ರಾಮಕೃಷ್ಣ ಪರಮಹಂಸ ಕ್ಷೇತ್ರವಾದ ದಕ್ಷಿಣೇಶ್ವರ, ರವೀಂದ್ರಸೇತು ಎಂಬ ಕೇಬಲ್ ಸೇತುವೆ, ಅಮೆರಿಕಾದ ವೈಟ್ ಹೌಸ್ ಪ್ರತಿರೂಪವಾದ ವಿಕ್ಟೋರಿಯಾ ಹಾಲ್, ಈಜಿಫ್ಟ್ ಮಮ್ಮಿಯನ್ನು ಇಟ್ಟಿರುವ ಭಾರತದ ಮ್ಯೂಸಿಯಂ,ಇನ್ನು ಅನೇಕ ಪ್ರವಾಸಿ ತಾಣಗಳು ಇಲ್ಲಿವೆ. ಇವುಗಳ ಜೊತೆ ಜೊತೆಗೆ ಭಯಾನಕವಾದ ತಾಣಗಳು ಕೂಡ ನಮ್ಮ ಭಾರತ ದೇಶದಲ್ಲಿದೆ. ಹಾಗಾದರೆ ಆ ತಾಣಗಳು ಯಾವುವು? ಎಂಬುದನ್ನು ಸಂಕ್ಷೀಪ್ತವಾಗಿ ತಿಳಿಯೋಣ.

1.ರಾಷ್ಟ್ರೀಯ ಗ್ರಂಥಾಲಯ, ಆಲಿಪೋರ್

1.ರಾಷ್ಟ್ರೀಯ ಗ್ರಂಥಾಲಯ, ಆಲಿಪೋರ್

PC:YOUTUBE

ಇದು ಭಾರತದ ದೊಡ್ಡ ಗ್ರಂಥಾಲಯವಾಗಿದೆ. ಇದೊಂದು ಭಯಾನಕವಾದ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಓದುಗರಿಗೆ ಹಲವಾರು ರೀತಿಯ ಭಯಾನಕವಾದ ಘಟನೆಗಳು ಸಂಭವಿಸಿದೆ. ಗ್ರಂಥಾಲಯದಲ್ಲಿ ಓದುವವರಿಗೆ ಹಿಂದೆಯಿಂದ ಯಾರೋ ಕತ್ತು ಹಿಸುಕಿದಂತೆ ಅನುಭವವಾಗುತ್ತದೆಯಂತೆ. ಅಷ್ಟೇ ಅಲ್ಲ ಪ್ರಶಾಂತವಾದ ಸ್ಥಳವಾದ ಗ್ರಂಥಾಲಯದಲ್ಲಿ ಒಂದು ಆತ್ಮ ತಿರುಗುತ್ತಿರುವಂತೆ ಭಾಸವಾಗುತ್ತದೆಯಂತೆ. ಗ್ರಂಥಾಲಯದಲ್ಲಿನ ಕೆಲವರು ಹೇಳಿದ ಪ್ರಕಾರ ಕುರ್ಚಿಗಳನ್ನು ಯಾರೋ ಎಳೆದ ಹಾಗೆ ಭಾಸವಾಗುತ್ತದೆಯಂತೆ. 250 ವರ್ಷಗಳ ನಂತರ ಈ ಹಳೆಯ ಕಟ್ಟಡದಲ್ಲಿ ಒಂದು ನಿಗೂಢವಾದ ಕೋಣೆ ಪತ್ತೆಯಾಯಿತು. ರಾತ್ರಿಯ ಸಮಯದಲ್ಲಿ ಒಬ್ಬ ಸಿಬ್ಬಂದಿ ಕೂಡ ಇಲ್ಲಿ ಇರುವುದಿಲ್ಲವಂತೆ....

2.ಹೌರಾ ಬ್ರಿಡ್ಜ್

2.ಹೌರಾ ಬ್ರಿಡ್ಜ್

PC:YOUTUBE

ಇದೊಂದು ಭಯಾನಕವಾದ ಬ್ರಿಡ್ಜ್ ಆಗಿದ್ದು, ಅನೇಕ ಮಂದಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರಿಪಿಸುತ್ತದೆ ಎಂತೆ. ಇದಕ್ಕೆ ಮುಖ್ಯವಾದ ಕಾರಣವೆನೆಂದರೆ ಈ ಬ್ರಿಡ್ಜ್‍ನ ಮೇಲಿಂದ ಬಿದ್ದು ಅನೇಕ ಮಂದಿ ಅತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿರುತ್ತಾರೆ. ಕೆಲವು ಜನರು ಮಾತ್ರ ಇಲ್ಲಿ ಬಿಳಿ ಸೀರೆ ಧರಿಸಿರುವ ಮಹಿಳೆ ಆಗಾಗ ಕಾಣಿಸಿಕೊಳ್ಳುತ್ತಿರುತ್ತದೆ ಎಂದು ಭಯಾನಕವಾದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಹೀಗಾಗಿಯೇ ಈ ಹೌರಾ ಬಿಡ್ಜ್‍ನ ಸಮೀಪದಲ್ಲಿ ಯಾರು ಕೂಡ ಸಂಜೆಯಾಗುತ್ತಿದ್ದಂತೆ ಜನರು ಇರುವುದಿಲ್ಲವಂತೆ.

3.ನಿಮತಲಾ ಸ್ಮಶಾನ ಘಾಟ್

3.ನಿಮತಲಾ ಸ್ಮಶಾನ ಘಾಟ್

PC:YOUTUBE

ನಿಮತಲಾ ಬರ್ನಿಂಗ್ ಘಾಟ್ ಕೊಲ್ಕತ್ತಾದ ಅತ್ಯಂತ ಹಳೆಯ ಘಾಟ್‍ಗಳಲ್ಲಿ ಒಂದಾಗಿದೆ. ಇಲ್ಲಿ ಅನೇಕ ಮಾಂತ್ರಿಕರು ಸ್ಮಶಾನ ಕಾಳಿಯನ್ನು ಆರಾಧಿಸಲು ಹಾಗು ಕ್ಷುದ್ರ ಪೂಜೆಗಳನ್ನು ಮಾಡಲು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಸ್ಥಳೀಯರು ಆ ತಾಯಿಯ ಹೆಸರನ್ನು ದೊಡ್ಡದಾಗಿ ಹೇಳಬಾರದು ಎಂದು ನಂಬುತ್ತಾರೆ. ಸುಟ್ಟ ದೇಹದ ಮಾಂಸವನ್ನು ಇಲ್ಲಿನ ಮಾಂತ್ರಿಕರು, ಅಘೋರಿಗಳು ಸೇವಿಸುತ್ತಾರೆ. ನಿಗೂಢ ಶಕ್ತಿಗಳನ್ನು ತಮ್ಮೊಳಗೆ ಸೃಷ್ಟಿ ಮಾಡಿಕೊಳ್ಳುವ ಸಲುವಾಗಿ ಈ ಆಚರಣೆಗಳನ್ನು ಮಾಡುತ್ತಾರೆ.

4.ರೈಟರ್ಸ್ ಕಟ್ಟಡ

4.ರೈಟರ್ಸ್ ಕಟ್ಟಡ

PC:YOUTUBE

ಸೂರ್ಯಾಸ್ತದ ನಂತರ ಯಾರೂ ಇಲ್ಲಿ ಕೆಲಸ ಮಾಡುವುದಿಲ್ಲ. ಕೊಲ್ಕತ್ತಾದ ಅತ್ಯಂತ ಶಕ್ತಿಯುತವಾದ ಕಟ್ಟಡಗಳಲ್ಲಿ ಇದು ಕೂಡ ಒಂದಾಗಿದೆ. ಈ ಬರಹಗಾರರ ಕಟ್ಟಡವು ಪಶ್ಚಿಮ ಬಂಗಾಳ ರಾಜ್ಯದ ಸರ್ಕಾರವು, ಸಚಿವಾಲಯ ಕಟ್ಟಡವನ್ನು ನಿರ್ಮಾಣ ಮಾಡಲು ಬಳಸಿತು. ಈ 300 ವರ್ಷ ಹಳೆಯ ಕಟ್ಟಡದಲ್ಲಿ ಖಾಲಿ ಕೊಠಡಿಗಳು, ಕೆಲವು ಗುಪ್ತವಾದ ರಹಸ್ಯಗಳು ಕೂಡ ಹೊಂದಿದೆ. ಈ ಕಟ್ಟಡವು ಹಲವಾರು ದಶಕಗಳಿಂದ ಇಲ್ಲಿಯೇ ಇದ್ದರು ಕೂಡ ಇಲ್ಲಿನ ಉಸ್ತುವಾರಿಗಾರರು ಒಂದಕ್ಕಿಂತ ಹೆಚ್ಚು ತಿಂಗಳು ತಮ್ಮ ಕೆಲಸವನ್ನು ಮುಂದುವರೆಸಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದಾರೆ. ಕಟ್ಟಡದಲ್ಲಿನ ದೊಡ್ಡ ಕೊಠಡಿ ಒಂದರಲ್ಲಿ ಪ್ರೇತಗಳು ನೆಲೆಸಿವೆ ಎಂದು ನಂಬಲಾಗಿದೆ.

5.ಪುತುಲ್ಬಾರಿ

5.ಪುತುಲ್ಬಾರಿ

PC:YOUTUBE

ಈ ಪುತುಲ್ಬಾರಿ ಅಥವಾ ಹೌಸ್ ಆಫ್ ಡಾಲ್ಸ್ ಸೋವ ಬಜಾರ್ ಜೆಟ್ಟ ಹತ್ತಿರದಲ್ಲಿದೆ. ಇದು ನಿಮ್ತಾಲಾ ಘಾಟ್‍ನಿಂದ ಸ್ವಲ್ಪವೇ ದೂರದಲ್ಲಿದೆ. ಗೊಂಬೆಗಳು ಎಂದಾಕ್ಷಣ ಸಿನಿಮಾಗಳು ನೆನಪಾಗುವುದು ಸಾಮಾನ್ಯವಾದುದು. ಇಲ್ಲಿ ಕೆಲವು ಬೊಂಬೆಗಳೊಂದಿಗೆ ರೊಮನ್ ಶೈಲಿಯ ವಾಸ್ತುಶಿಲ್ಪವು ನಿಂತಿದೆ. ನಿಮಗೆ ಗೊತ್ತ? ಶ್ರೀಮಂತ ಮಾಲೀಕರು ಒಂದು ಕಾಲದಲ್ಲಿ ಯುವತಿಯರನ್ನು ಇಲ್ಲಿ ಲೈಂಗಿಕವಾಗಿ ಬಳಸಿಕೊಂಡು ಕೊಂದು ಹಾಕುತ್ತಿದ್ದರು. ಅವರೇ ಇಲ್ಲಿ ಆತ್ಮವಾಗಿದ್ದರೆ ಎಂದು ನಂಬಲಾಗಿದೆ. ಇಲ್ಲಿ ಭಯಾನಕವಾದ ಅನೇಕ ಶಬ್ಧಗಳು ಕೇಳಿಸುತ್ತವೆ ಎಂದು ಅನುಭವವನ್ನು ಪಡೆದವರು ಹೇಳುತ್ತಾರೆ.

6.ಸೌತ್ ಪಾರ್ಕ್ ಸ್ಟ್ರೀಟ್ ಸ್ಮಶಾನ

6.ಸೌತ್ ಪಾರ್ಕ್ ಸ್ಟ್ರೀಟ್ ಸ್ಮಶಾನ

PC:YOUTUBE

ನಾವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ಛಾಯಚಿತ್ರಗಳನ್ನು ಕ್ಲಿಕ್ ಮಾಡುವುದು ಸಾಮಾನ್ಯವಾದ ಸಂಗತಿಯೇ ಆಗಿದೆ. ನಿಮಗೆ ತಿಳಿದಿರುವ ಹಾಗೆ ಯುವಕರು ಸಾಹಸ ಪ್ರಿಯರು. ಒಂದು ಗುಂಪು ಸ್ಮಶಾನಕ್ಕೆ ಭೇಟಿ ನೀಡಿದರಂತೆ ಆ ಸಮಯದಲ್ಲಿ ವಿಚಿತ್ರವಾದ ಸಂಗತಿಯನ್ನು ಅನುಭವಿಸಿದರಂತೆ. ಹಾಗೆಯೇ ಅನಾರೋಗ್ಯಕ್ಕೂ ಕೂಡ ತುತ್ತಾದರಂತೆ. 1767 ರಲ್ಲಿ ಕಟ್ಟಲಾದ ಕೋಲ್ಕತ್ತಾದ ಎಲ್ಲಾ ಸಮಾಧಿ ಮೈದಾನಗಳಲ್ಲಿ ಈ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ.

7.ದಿ ರಾಯಲ್ ಕೋಲ್ಕತ್ತಾ ಟರ್ಫ್ ಕ್ಲಬ್

7.ದಿ ರಾಯಲ್ ಕೋಲ್ಕತ್ತಾ ಟರ್ಫ್ ಕ್ಲಬ್

PC:YOUTUBE

ಕೋಲ್ಕತ್ತಾದ ಭಯಾನಕವಾದ ತಾಣಗಳಲ್ಲಿ ಇದು ಕೂಡ ಒಂದಾಗಿದೆ. ಓರ್ವನು ತನ್ನ ಕುಟುಂಬವನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಅವನು ಆತನ ಕುದುರೆಗಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದನು, ಅವನ ನೆಚ್ಚಿನ ಒಂದು ಕುದುರೆ ಎಂದರೆ ಅದು ಬಿಳಿ ಕುದುರೆಯಾಗಿತ್ತು. ಅದನ್ನು ಪ್ರೈಡ್ ಎಂದು ಹೆಸರಿಸಲ್ಪಟ್ಟಿತು. ನಂತರ ಅದರ ಚೈತನ್ಯವು ಕಳೆದುಕೊಂಡಿತು. ಇದರಿಂದಾಗಿ ಆತ ತನ್ನ ಎಲ್ಲಾ ಹಣವನ್ನು ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡನು. ಆತನೇ ಇಲ್ಲಿ ಆತ್ಮವಾಗಿ ತಿರುಗಾಡುತ್ತಿದ್ದಾನೆ ಎಂದು ಹೇಳಲಾಗುತ್ತದೆ.

8.ರವೀಂದ್ರ ಸರೋವರ ಮೆಟ್ರೋ ನಿಲ್ದಾಣ

8.ರವೀಂದ್ರ ಸರೋವರ ಮೆಟ್ರೋ ನಿಲ್ದಾಣ

PC:YOUTUBE

ಕೊಲ್ಕತ್ತಾದ ಮೊಟ್ರೋದಲ್ಲಿ ಅನೇಕ ಆತ್ಮಹತ್ಯೆಗಳು ನಡೆಯುತ್ತಿರುತ್ತವೆ. ನಿಮಗೆ ಗೊತ್ತ? ಈ ನಗರದ ಎಲ್ಲಾ ಆತ್ಮಹತ್ಯೆಗಳಲ್ಲಿ ಶೇ 80% ರಷ್ಟು ಈ ಮೆಟ್ರೋ ಸ್ಟೇಷನ್‍ನಲ್ಲಿಯೇ ನಡೆಯುತ್ತದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಇದು ಅತ್ಯಂತ ಜನನಿಬಿಡ ಮೆಟ್ರೋ ನಿಲ್ದಾಣಗಳಲ್ಲಿ ಒಂದಾಗಿದೆಯಾದರೂ, ಅದನ್ನು "ಆತ್ಮಹತ್ಯೆಗೆ ಪ್ಯಾರಡೈಸ್" ಎಂದು ಕರೆಯುತ್ತಾರೆ. ಇಲ್ಲಿನ ರೈಲುಗಳು ಹಂಟೆಡ್ ಎಂದು ಹೇಳಲಾಗುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ