Search
  • Follow NativePlanet
Share
» »ಭವ್ಯ ಬೆಟ್ಟ ಕೋಟೆಯಲೊಂದು ಪ್ರಳಯ ಸೂಚಕ!

ಭವ್ಯ ಬೆಟ್ಟ ಕೋಟೆಯಲೊಂದು ಪ್ರಳಯ ಸೂಚಕ!

By Vijay

ಭಾರತದಲ್ಲಿ ಅದೆಷ್ಟೊ ವಿಚಿತ್ರ ಕಥೆ, ದಂತಕಥೆಗಳುಳ್ಳ ತಾಣಗಳಿವೆ. ಇಂತಹ ಕೆಲವು ತಾಣಗಳ ಹಿನ್ನಿಲೆಯು ರೋಮಾಂಚನವನ್ನುಂಟು ಮಾಡಿದರೆ ಇನ್ನೂ ಕೆಲವು ತಾಣಗಳು ವಿಸ್ಮಯ, ಅಚ್ಚರಿಗಳನ್ನು ಮೂಡಿಸುತ್ತದೆ. ಪ್ರಸ್ತುತ, ಮಾಡರ್ನ್ ಜಗತ್ತಿನಲ್ಲಿ ಬದುಕುತ್ತಿರುವ ನಾವು ಒಮ್ಮೊಮ್ಮೆ ಇಂತಹ ತಾಣಗಳಿಗೆ ಭೇಟಿ ನೀಡಿ ಅದರ ಹಿಂದಿರುವ ಕೌತುಕಮಯ ಕಥೆಗಳನ್ನು ಕೇಳಿದಾಗ ಒಂದು ಕ್ಷಣ ನಾವು ಬಾಹ್ಯ ಜಗತ್ತಿನೊಡನೆ ಸಂಪರ್ಕ ಕಡೆದುಕೊಂಡು ಸ್ಥಂಬಿಭೂತರಾಗುವುದಂತು ನಿಜ. ಹರಿಶ್ಚಂದ್ರಗಡ್ ನಲ್ಲಿರುವ ಕೇದಾರೇಶ್ವರ ಗುಹೆಯು ಕೂಡ ಪ್ರಳಯ ಸೂಚಕ ಹಿನ್ನಿಲೆಯನ್ನು ಹೊಂದಿದೆ. ಅದನ್ನು ಕುರಿತು ಸ್ಲೈಡಿನಲ್ಲಿ ತಿಳಿಯಿರಿ.

ಈ ಲೇಖನದ ಮೂಲಕ ಮಹಾರಾಷ್ಟ್ರದ ಅಹ್ಮದ್ ನಗರ ಪ್ರದೇಶದಲ್ಲಿರುವ ಹರಿಶ್ಚಂದ್ರಗಡ್ ಎಂಬ ಅಚ್ಚರಿಪಡಿಸುವಂತಹ ತಾಣದ ಕುರಿತು ತಿಳಿಯಿರಿ. ಇದೊಂದು ಅತ್ಯಂತ ಪುರಾತನ ಬೆಟ್ಟ ಕೋಟೆಯಾಗಿದ್ದು, ಇದರ ಕುರಿತು ಮತ್ಸ್ಯಪುರಾಣ, ಅಗ್ನಿಪುರಾಣ ಹಾಗು ಸ್ಕಂದಪುರಾಣಗಳಲ್ಲೂ ಉಲ್ಲೇಖಿಸಲಾಗಿದೆ. ಈ ಬೆಟ್ಟ ಕೋಟೆಯ ಮೂಲವು ಆರನೆಯ ಶತಮಾನದ್ದಾಗಿದ್ದು, ನಂತರ 11 ನೆಯ ಶತಮಾನದಲ್ಲಿ ಇಲ್ಲಿ ಗುಹೆಗಳನ್ನು ಕೆತ್ತಲಾಗಿರುವುದನ್ನು ಕಾಣಬಹುದು. ತತ್ವಸಾರವನ್ನು ರಚಿಸಿದ ಮಹಾ ಋಷಿ ಚಾಂಗದೇವನು ಇಲ್ಲಿಯೆ ತಪಸ್ಸು ಆಚರಿಸಿದ್ದುದು ಮತ್ತೊಂದು ವಿಶೇಷ. ಇಲ್ಲಿರುವ ಕೆಲವು ವಿಶೀಷ್ಟ, ಅದ್ಭುತ ತಾಣಗಳ ಕುರಿತು ತಿಳಿಯಿರಿ.

ಸಪ್ತತೀರ್ಥ ಪುಷ್ಕರಣಿ:

ಸಪ್ತತೀರ್ಥ ಪುಷ್ಕರಣಿ:

ಇಲ್ಲಿನ ಹರಿಶ್ಚಂದ್ರೇಶ್ವರ ದೇವಾಲಯದ ಪೂರ್ವಕ್ಕೆ ಅದ್ಭುತವಾಗಿ ನಿರ್ಮಿಸಲಾದ ಈ ಕಲ್ಯಾಣಿಯನ್ನು ಕಾಣಬಹುದು. ಇದರ ವಿಶೇಷತೆಯೆಂದರೆ ಧಗ ಧಗ ಬೇಸಿಗೆಯ ಸಮಯದಲ್ಲೂ ಕೂಡ ಇದರ ಬಳಿ ನಿಂತಾಗ ನೀವು ಮಂಜುಗಡ್ಡೆಯ ಬಳಿ ನಿಂತಿರೆಂಬ ಅನುಭೂತಿ ಉಂಟಾಗುತ್ತದೆ. ಆದರೆ ಪ್ರಸ್ತುತ, ಇಲ್ಲಿ ಭೇಟಿ ನೀಡುವವರಲ್ಲಿ ಕೆಲವರು ತಮ್ಮ ಅಲಕ್ಷ್ಯದಿಂದಾಗಿ ಈ ಕಲ್ಯಾಣಿಯ ನೀರನ್ನು ಕಲುಷಿತಗೊಳಿಸಿರುವುದು ದುರದೃಷ್ಟಕರ.

ಚಿತ್ರಕೃಪೆ: Bajirao

ಕೇದಾರೇಶ್ವರ ಗುಹೆ:

ಕೇದಾರೇಶ್ವರ ಗುಹೆ:

ಹರಿಶ್ಚಂದ್ರ ದೇವಸ್ಥಾನಕ್ಕೆ ತೆರಳುವ ಹಾದಿಯಲ್ಲಿ ಒಂದು ಬೃಹತ್ ಗುಹೆಯನ್ನು ಕಾಣಬಹುದಾಗಿದ್ದು ಅದೆ ಕೇದಾರೇಶ್ವರ ಗುಹೆ. ಈ ಗುಹೆಯಲ್ಲಿ 5 ಅಡಿಗಳ ಶಿವಲಿಂಗವೊಂದು ನೀರಿನಿಂದ ಆವೃತವಾಗಿರುವುದನ್ನು ಕಾಣಬಹುದು. ಸ್ಥಳಪುರಾಣದ ಪ್ರಕಾರ, ಈ ಶಿವಲಿಂಗದ ಮೇಲೆ ಛಾವಣಿಯೊಂದಿದ್ದು ಅದಕ್ಕೆ ಆಧಾರವೆಂಬಂತೆ ನಾಲ್ಕು ಖಂಬಗಳಿವೆ. ಇವು ನಾಲ್ಕು ಯುಗಗಳನ್ನು ಸೂಚಿಸುತ್ತವೆ. ಈಗಾಗಲೆ ಮೂರು ಖಂಬಗಳು ನಾಶಗೊಂಡಿದ್ದು ಕಳೆದುಹೋದ ಮೂರು ಯುಗಗಳ ಸಂಕೇತಗಳಾಗಿವೆ. ಕುತೂಹಲಕರ ವಿಷಯವೆಂದರೆ ಯಾವಾಗ ಈಗಿರುವ ಖಂಬವು ನಾಶವಾಗುತ್ತದೊ ಅದೆ ಕಲಿಯುಗದ ಅಂತ್ಯವೆಂದು ಹೇಳಲಾಗುತ್ತದೆ.

ಚಿತ್ರಕೃಪೆ: rohit gowaikar

ಕೊಂಕಣ ಕಡಾ:

ಕೊಂಕಣ ಕಡಾ:

ಇದೊಂದು ಬೆಟ್ಟದ ತುದಿಯಾಗಿದ್ದು ಆಸಕ್ತಿಕರ ವಿಷಯವೆಂದರೆ ಪಶ್ಚಿಮಕ್ಕೆ ಮುಖಮಾಡಿ ನಿಂತರೂ ಕೊಂಕಣ ಪ್ರದೇಶವನ್ನು ಬಗ್ಗಿ ನೋಡುತ್ತಿರುವಂತೆ ಗೋಚರಿಸುತ್ತದೆ. ಇದರ ಒಂದು ತುದಿಯಿಂದ ಸುತ್ತಮುತ್ತಲ ಪ್ರದೇಶದ ಅತ್ಯದ್ಭುತ ನೋಟವನ್ನು ಸವಿಯಬಹುದಾಗಿದ್ದು, ಸೂರ್ಯಾಸ್ತಮಾನದ ನೋಟವಂತೂ ಮನಸೆಳೆವಂತಿರುತ್ತದೆ. ಮೋಡಗಳ ಸ್ಫೋಟ ವೈಜ್ಞಾನಿಕ ಘಟನೆಯನ್ನೂ ಇಲ್ಲಿ ನೋಡಬಹುದಾಗಿದೆ. ಮೋಡಗಳು ಈ ಬೆಟ್ಟದ ತುದಿಗೆ ಅಪ್ಪಳಿಸಿ ಛಿದ್ರಗೊಂಡು ಕೆಳಗೆ ಬೀಳುತ್ತಿರುವಾಗ ಮತ್ತೆ ಮೇಲೆ ಚಿಮ್ಮಲ್ಪಡುತ್ತವೆ.

ಚಿತ್ರಕೃಪೆ: Cj.samson

ತಾರಾಮತಿ ಶೃಂಗ:

ತಾರಾಮತಿ ಶೃಂಗ:

ಇದು ಈ ಕೋಟೆ ಬೆಟ್ಟದ ಅತಿ ಎತ್ತರದ ತುದಿಯಾಗಿದ್ದು ನೋಡಲು ವಿಹಂಗಮ ನೋಟವನ್ನು ಒದಗಿಸುತ್ತದೆ. ಈ ಪ್ರದೇಶದಲ್ಲಿ ಚಿರತೆಗಳಿರುವುದನ್ನು ಗಮನಿಸಲಾಗಿದೆ. ಇಲ್ಲಿಂದ ನಾನೆಘಾಟ್, ಮುರ್ಬಾದ್, ಭೀಮಾಶಂಕರದ ಬಳಿಯ ಸಿದ್ಧಗಡ್ ಮೂತಾದವುಗಳ ಉತ್ತಮ ನೋಟವನ್ನು ಕಾಣಬಹುದು.

ಚಿತ್ರಕೃಪೆ: Ssriram mt

ಗುಹೆಗಳು:

ಗುಹೆಗಳು:

ಈ ಬೆಟ್ಟ ಕೋಟೆಯ ಸುತ್ತಲೂ ಗುಹೆಗಳಿರುವುದನ್ನು ಗಮನಿಸಬಹುದು. ತಾರಾಮತಿ ಶೃಂಗದ ಬುಡದಲ್ಲಿ ಬಹು ಸಂಖ್ಯೆಯಲ್ಲಿ ಈ ಗುಹೆಗಳನ್ನು ಕಾಣಬಹುದು.

ಚಿತ್ರಕೃಪೆ: Bajirao

ಹರಿಶ್ಚಂದ್ರೇಶ್ವರ ದೇವಾಲಯ:

ಹರಿಶ್ಚಂದ್ರೇಶ್ವರ ದೇವಾಲಯ:

ಪುರಾತನ ಭಾರತದಲ್ಲಿದ್ದ ಕಲಾತ್ಮಕತೆಗೆ ಸಾಕ್ಷಿಯಾಗಿ ನಿಂತಿದೆ ಈ ದೇವಾಲಯ ಹಾಗು ಅದರ ಕೆತ್ತನೆಗಳು. ಈ ದೇವಾಲಯದ ಪಕ್ಕದಲ್ಲಿ ಕೆಲವು ಪುರಾತನ ಗುಹೆಗಳು ಹಾಗು ನೀರಿನ ತೊಟ್ಟಿಗಳನ್ನು ಕಾಣಬಹುದಾಗಿದೆ. ಮಂಗಳಗಂಗಾ ಎಂಬ ನದಿಯು ಇಲ್ಲಿನ ಒಂದು ತೊಟ್ಟಿಯ ಮೂಲಕ ಉಗಮಗೊಳ್ಳುತ್ತದೆ ಎನ್ನಲಾಗಿದೆ. ಈ ದೇವಾಲಯದ ವಿಶೇಷತೆಯೆಂದರೆ ಇದನ್ನು ಕೇವಲ ಒಂದೆ ಒಂದು ಬೃಹತ್ ಬಂಡೆಯನ್ನು ಕೊರೆದು ನಿರ್ಮಿಸಲಾಗಿದೆ.

ಚಿತ್ರಕೃಪೆ: rohit gowaikar

ತೆರಳುವ ಬಗೆ:

ತೆರಳುವ ಬಗೆ:

ಠಾಣೆ, ಪುಣೆ ಹಾಗು ಅಹ್ಮದ್ ನಗರಗಳ ಅಂಚುಗಳು ಸಂಧಿಸುವ ಸ್ಥಳದಲ್ಲಿ ಇದು ನೆಲೆಸಿದೆ.

ಠಾಣೆಯಿಂದ: ಕಲ್ಯಾಣಿನ ನಗರ್ ದಿಂದ ಖೂಬಿ ಫಟಾದ ವರೆಗೆ ಬಸ್ಸಿನಲ್ಲಿ ತೆರಳಬೇಕು. ಅಲ್ಲಿಂದ ಖಾಸಗಿ ವಾಹನ ಅಥವಾ ಬಸ್ಸಿನ ಮೂಲಕ ಖಿರೇಶ್ವರ್ ಹಳ್ಳಿಗೆ ಬರಬೇಕು. ಇಲ್ಲಿಂದ ಈ ತಾಣ ಕೇವಲ 7 ಕಿ.ಮೀ.

ಪುಣೆಯಿಂದ: ಪುಣೆಯ ಶಿವಾಜಿನಗರ ಬಸ್ ನಿಲ್ದಾಣದಿಂದ ಖೀರೇಶ್ವರ್ ಹಳ್ಳಿಗೆ ಪ್ರತಿನಿತ್ಯ ಬಸ್ ಸೌಲಭ್ಯವಿದೆ.

ಚಿತ್ರಕೃಪೆ: Ssriram mt

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X