Search
  • Follow NativePlanet
Share
» »ಚಾರಣಿಗರ ಅಚ್ಚುಮೆಚ್ಚಿನ ತಾಣ -ನಾಸಿಕ್‌ನ ಹರಿಹರ ಕೋಟೆ

ಚಾರಣಿಗರ ಅಚ್ಚುಮೆಚ್ಚಿನ ತಾಣ -ನಾಸಿಕ್‌ನ ಹರಿಹರ ಕೋಟೆ

ಬೆಟ್ಟಗಳಲ್ಲಿ ಕೋಟೆಗಳನ್ನು ಹೊಂದಿರುವ ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಕೂಡಾ ಒಂದು. ನೀವು ಈ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಇಂತಹ ಕೋಟೆಗಳನ್ನು ಕಾಣಬಹುದು. ಕಾಲ ಕ್ರಮೇಣ ಈ ಕೋಟೆಗಳು ಟ್ರಕ್ಕಿಂಗ್ ತಾಣವಾಗಿ ಮಾರ್ಪಟ್ಟಿದ್ದರೂ ಕೂಡ ಇವುಗಳ ಐತಿಹಾಸಿಕ ಮಹತ್ವದಿಂದಾಗಿ ಇಂದಿಗೂ ಕೂಡಾ ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತಿವೆ.

ಅಂತಹುದೇ ಕೋಟೆಗಳಲ್ಲೊಂದಾದ ಹಚ್ಚ ಹಸುರಿನ ಬೆಟ್ಟಗಳ ಮೇಲೆ ನೆಲೆನಿಂತಿರುವ ಹರಿಹರ ಕೋಟೆ ಕೂಡಾ ಒಂದು. ಮಹಾರಾಷ್ಟ್ರದ ಬೆಟ್ಟದ ಮೇಲೆ ನೆಲೆಗೊಂಡಿರುವ ಈ ಪ್ರಾಚೀನ ಕೋಟೆಗೆ ಟ್ರಕ್ಕಿಂಗ್ ಹೋದರೆ ಹೇಗಿರಬಹುದು? ನೀವು ಚಾರಣ ಮಾಡುವುದರಲ್ಲಿ ಉತ್ಕಟ ಆಸಕ್ತಿ ಹೊಂದಿದ್ದು ಅಥವಾ ಒಂದು ಸ್ಥಳದ ಇತಿಹಾಸವನ್ನು ಅನ್ವೇಷಣೆ ನಡೆಸುವ ಇಚ್ಚೆ ಇದ್ದವರಾಗಿದ್ದಲ್ಲಿ, ನೀವು ಖಂಡಿತವಾಗಿಯೂ ಹರಿಹರ ಕೋಟೆಗೆ ಭೇಟಿ ನೀಡುವುದನ್ನು ತಪ್ಪಿಸಲೇ ಬಾರದು.

ಹರಿಹರ ಕೋಟೆಗೆ ಭೇಟಿ ಕೊಡಲು ಸೂಕ್ತ ಸಮಯ

ಹರಿಹರ ಕೋಟೆಗೆ ಭೇಟಿ ಕೊಡಲು ಸೂಕ್ತ ಸಮಯ

PC:Ccmarathe

ಬೆಟ್ಟದ ಮೇಲೆ ಇರುವ ಕೋಟೆ ಆಗಿರುವುದರಿಂದ ಇದು ವರ್ಷವಿಡೀ ಭೇಟಿ ಕೊಡಬಹುದಾದ ಸ್ಥಳವಾಗಿದೆ ಮತ್ತು ಈ ಸ್ಥಳವು ನಿರಂತರವಾಗಿ ಪ್ರವಾಸಿಗರಿಂದ ಅದರಲ್ಲೂ ವಿಶೇಷವಾಗಿ ದೇಶದಾದ್ಯಂತದ ರಾಜ್ಯಗಳ ಚಾರುಣಿಗರಿಂದ ವರ್ಷವಿಡೀ ಭೇಟಿ ನೀಡಲ್ಪಡುತ್ತದೆ.

ಇಲ್ಲಿಯ ಹವಾಮಾನವು ಅನುಕೂಲಕರವಾಗಿದ್ದಾಗ ಇಲ್ಲಿಗೆ ಭೇಟಿ ಕೊಡುವುದು ಸೂಕ್ತ ಮತ್ತು ಇಲ್ಲಿಯ ತಾಪಮಾನವು ಗರಿಷ್ಟವಾಗಿರುತ್ತದೆ. ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳಿನ ಕೊನೆಯವರೆಗೆ ಭೇಟಿ ಕೊಡಲು ಸೂಕ್ತವಾಗಿದೆ. ನೀವು ಇಲ್ಲಿಗೆ ಮಾನ್ಸೂನ್ ಮಳೆಗಾಲದ ಸಮಯದಲ್ಲೂ ಭೇಟಿ ಕೊಡಬಹುದು ಆದರೆ ಈ ಸಮಯದಲ್ಲಿ ಬೆಟ್ಟದ ಮೇಲೆ ಟ್ರಕ್ಕಿಂಗ್ ಮಾಡುವ ದಾರಿಗಳು ತುಂಬಾ ಜಾರುವಂತಿರುತ್ತದೆ. ಆದುದರಿಂದ ಟ್ರಕ್ಕಿಂಗ್ ಮಾಡುವಾಗ ಬಹಳ ಜಾಗ್ರತೆ ವಹಿಸಬೇಕಾಗುತ್ತದೆ.

ಒಂದೇ ರಾತ್ರಿಯಲ್ಲಿ, ಒಂದೇ ಕೈಯಲ್ಲಿ ನಿರ್ಮಿಸಿದ ಶಿವಾಲಯವ, ಆದರೂ ಇಲ್ಲಿ ಪೂಜೆ ನಡೆಯೋಲ್ಲಒಂದೇ ರಾತ್ರಿಯಲ್ಲಿ, ಒಂದೇ ಕೈಯಲ್ಲಿ ನಿರ್ಮಿಸಿದ ಶಿವಾಲಯವ, ಆದರೂ ಇಲ್ಲಿ ಪೂಜೆ ನಡೆಯೋಲ್ಲ

ಹರಿಹರ ಕೋಟೆಯ ಸ್ಥಳ ಮತ್ತು ಅದರ ಇತಿಹಾಸ

ಹರಿಹರ ಕೋಟೆಯ ಸ್ಥಳ ಮತ್ತು ಅದರ ಇತಿಹಾಸ

PC: Ccmarathe

ಹರಿಹರ ಕೋಟೆಯು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿದೆ ಇದು ಮುಖ್ಯ ಪಟ್ಟಣದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಬೆಟ್ಟದ ಮೇಲೆ ನೆಲೆಸಿರುವ ಈ ಕೋಟೆಯು 3500ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿದೆ. ಇದು ಹರ್ಷೆವಾಡಿ ಗ್ರಾಮಗಳ ಸಮೀಪದಲ್ಲಿರುವಂತೆ ಕಾಣುತ್ತದೆ. ಈ ಕೋಟೆಯ ಇತಿಹಾಸವು 9ನೇ ಮತ್ತು 14 ನೇ ಶತಮಾನಗಳ ಮಧ್ಯದ್ದಾಗಿದ್ದು ಯಾದವ ಸಾಮ್ರಾಜ್ಯದ ಕಾಲದ ಇತಿಹಾಸವನ್ನು ಸಾರುತ್ತದೆ.

 ಟ್ರಕ್ಕಿಂಗ್ ತಾಣ

ಟ್ರಕ್ಕಿಂಗ್ ತಾಣ

PC:Pranav Lawate

ಈ ಕೋಟೆಯನ್ನು ವ್ಯಾಪಾರ ಮಾರ್ಗಗಳ ಕಾವಲಿಗಾಗಿ ನಿರ್ಮಿಸಲಾಯಿತು. ನಂತರದ ದಿನಗಳಲ್ಲಿ ಇದು ಬ್ರಿಟಿಷರ ಆಳ್ವಿಕೆಗೆ ಒಳಗಾಗುವವರೆಗೆ ಅನೇಕ ದಾಳಿಕೋರರು ಮತ್ತು ಸ್ಥಳೀಯ ರಾಜರುಗಳಿಂದ ವಶಕ್ಕೆ ಒಳಪಡಿಸಿಕೊಳ್ಳಲಾಗಿತ್ತು. ಇಂದು ಈ ಕೋಟೆಯ ಅವಶೇಷಗಳನ್ನು ಕಾಣಬಹುದಾಗಿದೆ ಮತ್ತು ಇದನ್ನು ಟ್ರಕ್ಕಿಂಗ್ ತಾಣವಾಗಿ ಉಪಯೋಗಿಸಲಾಗುತ್ತಿದೆ. ಈ ಕೋಟೆಯನ್ನು ತಲುಪಲು ನೀವು ಎತ್ತರದ ಕಲ್ಲು ಬಂಡೆಗಳ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಾಗುತ್ತದೆ. ಹರ್ಶೇವಾಡಿ ಮತ್ತು ನಿರ್ಗುಡ್ ಪಾಡಾ ಹಳ್ಳಿಗಳಿಂದ ಟ್ರಕ್ಕಿಂಗ್ ಪ್ರಾರಂಭವಾಗುತ್ತದೆ.

ನೀವು ಹರಿಹರ ಕೋಟೆಯನ್ನು ಏಕೆ ಭೇಟಿ ಕೊಡಬೇಕು?

ನೀವು ಹರಿಹರ ಕೋಟೆಯನ್ನು ಏಕೆ ಭೇಟಿ ಕೊಡಬೇಕು?

PC:Ccmarathe

ನೀವು ಇತಿಹಾಸ, ಪ್ರಕೃತಿ ಮತ್ತು ಸಾಹಸಗಳ ಪರಿಪೂರ್ಣ ಮಿಶ್ರಣವನ್ನು ಇಷ್ಟಪಡುವವರಾಗಿದ್ದಲ್ಲಿ ನೀವು ನಾಸಿಕ್ ನ ಹರಿಹರ್ ಕೋಟೆಯ ಕಡೆಗೆ ಪ್ರಯಾಣ ಬೆಳೆಸುವುದು ಹೆಚ್ಚು ಸೂಕ್ತ. ಇಲ್ಲಿ ಒಂದು ಕಡೆಯಲ್ಲಿ ನಿಮಗೆ ಯಾದವ ಸಾಮ್ರಾಜ್ಯದ ಮತ್ತು ಮಹಾರಾಷ್ಟ್ರದ ಇತರ ರಾಜರುಗಳ ಬಗ್ಗೆ ಈ ಕೋಟೆಯ ಅವಶೇಷಗಳ ಮೂಲಕ ಇತಿಹಾಸವನ್ನು ತಿಳಿಯುವ ಅವಕಾಶವಾದರೆ ಇನ್ನೊಂದೆಡೆ ನೀವು ಇಲ್ಲಿಯ ಸುಂದರ ಪ್ರಕೃತಿಯಲ್ಲಿ ಬೆಟ್ಟದ ಮೇಲೆ ಟ್ರಕ್ಕಿಂಗ್ ಮಾಡುವ ಅನುಭವವನ್ನು ಪಡೆಯಬಹುದಾಗಿದೆ.

ಇನ್ನಿತರ ಟ್ರಕ್ಕಿಂಗ್ ನಂತೆ ಇಲ್ಲಿಯ ಟ್ರಕ್ಕಿಂಗ್ ಸಾಮಾನ್ಯವಾಗಿರದೆ ರೋಮಾಂಚಕ ಮತ್ತು ಕುತೂಹಲಭರಿತವಾಗಿರುತ್ತದೆ. ಆದುದರಿಂದ ನಿಮ್ಮನ್ನು ನೀವು ಇಂತಹ ಭವ್ಯವಾದ ಸೌಂದರ್ಯತೆಯಲ್ಲಿ ಕಂಡುಕೊಳ್ಳ ಬಯಸುವುದಿಲ್ಲವೆ ?

ಹರಿಹರ ಕೋಟೆಗೆ ತಲುಪುವುದು ಹೇಗೆ?

ಹರಿಹರ ಕೋಟೆಗೆ ತಲುಪುವುದು ಹೇಗೆ?

PC: Ccmarathe

ವಾಯುಮಾರ್ಗ : ಹರಿಹರ ಕೋಟೆಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಅದು 165 ಕಿ.ಮೀ ಅಂತರದಲ್ಲಿರುವ ಮುಂಬೈ ವಿಮಾನ ನಿಲ್ದಾಣ. ಅಲ್ಲಿಂದ ನೀವು ನೇರವಾಗಿ ಹರಿಹರ ಕೋಟೆಗೆ ಬಾಡಿಗೆ ವಾಹನದ ಮೂಲಕ ಪ್ರಯಾಣ ಮಾಡಬಹುದು. ಅಲ್ಲದೆ ನೀವು ಮುಂಬೈ ಯಿಂದ ನಾಶಿಕ್ ಗೆ ಬಸ್ಸಿನಲ್ಲಿಯೂ ಪ್ರಯಾಣ ಮಾಡಬಹುದಾಗಿದೆ ನಂತರ ಅಲ್ಲಿಂದ ಹರಿಹರ ಕೋಟೆಗೆ ಕ್ಯಾಬ್ ಮೂಲಕ ಪ್ರಯಾಣ ಮಾಡಬಹುದಾಗಿದೆ. ನಾಶಿಕ್ ನಿಂದ ಹರಿಹರ್ ಕೋಟೆಯು 40 ಕಿ.ಮೀ ಅಂತರದಲ್ಲಿದೆ.

ಕೇರಳದಲ್ಲಿ ಬಾರೀ ಮಳೆ; ಮುಂದೂಡಲಾದ ಬೋಟ್‌ ರೇಸಿಂಗ್ ಕೇರಳದಲ್ಲಿ ಬಾರೀ ಮಳೆ; ಮುಂದೂಡಲಾದ ಬೋಟ್‌ ರೇಸಿಂಗ್

ರೈಲ್ವೇ ಮೂಲಕ : ಹರಿಹರ ಕೋಟೆಗೆ ಹತ್ತಿರವಿರುವ ರೈಲು ನಿಲ್ದಾಣವೆಂದರೆ ಅದು ನಾಶಿಕ್ ರೈಲ್ವೇ ನಿಲ್ದಾಣ. ನೀವು ನಾಶಿಕ್ ಜಂಕ್ಷನ್ ಗೆ ನೇರವಾಗಿ ರೈಲು ಮೂಲಕ ಪ್ರಯಾಣ ಮಾಡಬಹುದಾಗಿದೆ ನಂತರ ಅಲ್ಲಿಂದ ಹರಿಹರ ಕೋಟೆಯ ತಪ್ಪಲಿಗೆ ಕ್ಯಾಬ್ ಮೂಲಕ ಪ್ರಯಾಣ ಮಾಡಬಹುದಾಗಿದೆ.

ರಸ್ತೆ ಮೂಲಕ : ಹರಿಹರ ಕೋಟೆಯು ಬೆಟ್ಟದ ಮೇಲೆ ಇರುವುದರಿಂದ ರಸ್ತೆಯ ಮೂಲಕ ಇಲ್ಲಿಗೆ ತಲುಪಲು ಸಾಧ್ಯವಿಲ್ಲ ಈ ಕೋಟೆಯ ತಪ್ಪಲಿನ ವರೆಗೆ ಬಾಡಿಗೆ ವಾಹನ ಅಥವಾ ಬಸ್ಸಿನ ಮೂಲಕ ಪ್ರಯಾಣ ಮಾಡಬಹುದು ನಂತರ ನೀವು ಬೆಟ್ಟದ ಮೇಲೆ ಕಲ್ಲು ಬಂಡೆಗಳ ಮೆಟ್ಟಿಲುಗಳಲ್ಲಿ ಚಾರಣ ನಡೆಸಿ ಕೋಟೆಯ ಸಮೀಪಕ್ಕೆ ಹೋಗಬೇಕಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X