Search
  • Follow NativePlanet
Share
» »ಹನುವಾಂಟಿಯ ದ್ವೀಪದಲ್ಲಿ ಒಂದು ದಿನ ಕಳೆದು ನೋಡಿ

ಹನುವಾಂಟಿಯ ದ್ವೀಪದಲ್ಲಿ ಒಂದು ದಿನ ಕಳೆದು ನೋಡಿ

ಇಂದಿರಾ ಸಾಗರ್ ನದಿಯ ದಂಡೆಯ ಮೇಲಿರುವ ದ್ವೀಪದಲ್ಲಿ ಹನುವಾಂಟಿಯ ಕೂಡಾ ಒಂದು ದ್ವೀಪವಾಗಿದೆ. ಈ ಸ್ಥಳವು ರೋಮಾಂಚಕ ಮತ್ತು ವರ್ಣರಂಜಿತವಾಗಿದ್ದು, ನಗರದ ಜೀವನದ ಗದ್ದಲದಿಂದ ಖಂಡಿತವಾಗಿಯೂ ಉತ್ತಮ ವಿರಾಮವನ್ನು ನೀಡುತ್ತದೆ.

 ಸಾಹಸ ಚಟುವಟಿಕಾ ತಾಣ

ಸಾಹಸ ಚಟುವಟಿಕಾ ತಾಣ

ಹನುವಾಂಟಿಯ ದ್ವೀಪವು ಸೌಂದರ್ಯದಿಂದ ತುಂಬಿರುತ್ತದೆ ಮತ್ತು ಈ ದ್ವೀಪವನ್ನು ಸುತ್ತುವರಿದ ತಂಪಾದ ನೀರು ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ಒಂದು ಉತ್ತಮ ಸಾಹಸ ಚಟುವಟಿಕಾ ತಾಣವಾಗಿದ್ದು, ರಜಾದಿನಗಳನ್ನು ಕಳೆಯಲು ಸೂಕ್ತವಾಗುತ್ತದೆ.

ಸೀತಾ ದೇವಿ ಸ್ನಾನ ಮಾಡುತ್ತಿದ್ದ ಕೆರೆ ನೋಡಿದ್ದೀರಾ?

ಜಲ್ ಮಹೋತ್ಸವ

ಜಲ್ ಮಹೋತ್ಸವ

PC: youtube

ಜಲ್ ಮಹೋತ್ಸವದ ಸಮಯದಲ್ಲಿ ಈ ದ್ವೀಪದಲ್ಲಿ ಜನಜಂಗುಳಿಯಿಂದ ಕೂಡಿರುತ್ತದೆ. ಗಾಳಿಪಟ ಆಕಾಶದಲ್ಲಿ ಹಾರಾಡುತ್ತಿರುತ್ತದೆ. ಇಡೀ ಸ್ಥಳವು ಹಬ್ಬದ ವಾತಾವರಣದಿಂದ ಕೂಡಿರುತ್ತದೆ.

ವನ್ಯಜೀವಿಗಳೂ ಇವೆ

ವನ್ಯಜೀವಿಗಳೂ ಇವೆ

ಹನುವಾಂಟಿಯ ದ್ವೀಪವು ವನ್ಯಜೀವಿಗಳಿಂದಲೂ ತುಂಬಿದೆ. ಈ ದ್ವೀಪವು ಎತ್ತರವಾದ ಮರಗಿಡಗಳು ಮತ್ತು ವನ್ಯಜೀವಿಗಳನ್ನು ಹೊಂದಿದ್ದು, ಭೂಮಿಯಲ್ಲಿ ಮಾತ್ರವಲ್ಲದೇ ನೀರಿನಲ್ಲಿಯೂ ಕೂಡ ನೆಲೆಸಿದೆ. ಅನೇಕ ವಲಸೆ ಹಕ್ಕಿಗಳು ಇಲ್ಲಿ ಗೂಡುಕಟ್ಟಿವೆ. ಜಿಂಕೆಗಳಂತಹ ಪ್ರಾಣಿಗಳು ಓಡಾಡುವುದನ್ನು ಸುಲಭವಾಗಿ ಇಲ್ಲಿ ಕಾಣಬಹುದು.

ಕಲ್ಲತ್ತಿ ಜಲಪಾತದಲ್ಲಿ ಸ್ನಾನ ಮಾಡಿದ್ದೀರಾ?

ಸ್ಕೂಬಾ ಡೈವಿಂಗ್

ಸ್ಕೂಬಾ ಡೈವಿಂಗ್

ನೀವು ನೀರಿನ ಸಾಹಸ ಚಟುವಟಿಕೆಯನ್ನು ಇಷ್ಟ ಪಡುವವರಾಗಿದ್ದರೆ ಸ್ಕೂಬಾ ಡೈವಿಂಗ್ ನಿಮಗೆ ಉತ್ತಮ ಚಟುವಟಿಕೆಯಾಗಿದೆ. ಹನುವಾಂಟಿಯಾ ದ್ವೀಪದ ಸಮೀಪವಿರುವ ನೀರಿನಲ್ಲಿ ಸ್ಕೂಬಾ ಡೈವಿಂಗ್ ನಿಮ್ಮನ್ನು ಮೋಡಿಮಾಡುತ್ತದೆ ಮತ್ತು ಅಲ್ಲಿ ವಾಸಿಸುವ ವರ್ಣರಂಜಿತ ಮತ್ತು ವಿವಿಧ ರೀತಿಯ ಮೀನುಗಳು ನಿಮ್ಮನ್ನು ಸಂತೃಪ್ತಿಗೊಳಿಸುತ್ತದೆ.

 ಜೆಟ್ ಸ್ಕೀ

ಜೆಟ್ ಸ್ಕೀ

ಇಂದಿರಾ ಸಾಗರದಲ್ಲಿ ಜೆಟ್ ಸ್ಕೀ ಅನುಭವವನ್ನು ಪಡೆಯಬಹುದು. ಸಾಮಾನ್ಯವಾಗಿ ಜೆಟ್ ಸ್ಕೀ ಗೆ ಸುಮಾರು 750 ರೂ.ಇದು ರೋಮಾಂಚಕಾರಿ ಅನುಭವವನ್ನು ಸಂಪೂರ್ಣವಾಗಿ ಯೋಗ್ಯವಾಗಿರುತ್ತದೆ.

ಡಿಸೆಂಬರ್‌ನ ಈ ಚುಮುಚುಮು ಚಳಿಯಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇಲ್ಲಿಗೆಲ್ಲಾ ಹೋಗಿ

ಹಾಟ್ ಏರ್ ಬಲೂನ್ ರೈಡ್

ಹಾಟ್ ಏರ್ ಬಲೂನ್ ರೈಡ್

ಯಾವುದೇ ನೀರಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ನೀವು ಬಯಸದಿದ್ದರೆ, ಹಾಟ್ ಏರ್ ಬಲೂನ್ ರೈಡ್ ನ್ನು ತೆಗೆದುಕೊಳ್ಳಬಹುದು, ಗಾಳಿಯಲ್ಲಿ ಮೇಲಕ್ಕೆ ಹಾರುವಾಗ ಇದು ಇಡೀ ಸ್ಥಳದ ಪಕ್ಷಿ ನೋಟವನ್ನು ನೀಡುತ್ತದೆ.

ಯಾವಾಗ ಭೇಟಿ ಸೂಕ್ತ

ಯಾವಾಗ ಭೇಟಿ ಸೂಕ್ತ

ಹನುವಾಂಟಿಯವು ವರ್ಷಪೂರ್ತಿ ಭೇಟಿ ನೀಡಬಹುದಾದ ಒಂದು ಸ್ಥಳವಾಗಿದೆ, ಹವಾಮಾನವು ಹೆಚ್ಚಾಗಿ ಆಹ್ಲಾದಕರವಾಗಿರುತ್ತದೆ. ಆದರೆ, ನೀವು ಪೂರ್ಣವಾಗಿ ಭೇಟಿ ನೀಡಲು ಬಯಸಿದರೆ ಜುಲೈ ತಿಂಗಳಿನಿಂದ ಏಪ್ರಿಲ್ ವರೆಗೆ ಆದರ್ಶಪ್ರಾಯವಾಗಿರುತ್ತದೆ.

ಈ ಪ್ರಸಿದ್ಧ ಬಕ್ರೇಶ್ವರ ದೇವಸ್ಥಾನದ ದರ್ಶನ ಮಾಡಿದ್ದೀರಾ?

ತಲುಪುವುದು ಹೇಗೆ?

ತಲುಪುವುದು ಹೇಗೆ?

ವಿಮಾನದ ಮೂಲಕ: ಹನುವಾಂಟಿಯವನ್ನು ತಲುಪಲು ಹತ್ತಿರದ ವಿಮಾನ ನಿಲ್ದಾಣ ಇಂದೋರ್ ವಿಮಾನ ನಿಲ್ದಾಣವಾಗಿದ್ದು, ಭಾರತದ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಹನುವಾಂಟಿಯ ಇಲ್ಲಿಂದ 150 ಕಿ.ಮೀ ದೂರದಲ್ಲಿದೆ ಮತ್ತು ಬಾಡಿಗೆ ಕಾರು ಮೂಲಕ ಸುಲಭವಾಗಿ ತಲುಪಬಹುದು.

 ರೈಲಿನ ಮೂಲಕ ತಲುಪುವುದು ಹೇಗೆ?

ರೈಲಿನ ಮೂಲಕ ತಲುಪುವುದು ಹೇಗೆ?

ರೈಲು ಮೂಲಕ: ಹನುವಾಂಟಿಯ ತಲುಪಲು ಹತ್ತಿರದ ರೈಲ್ವೆ ನಿಲ್ದಾಣವು ಖಾಂಡ್ವಾವಾಗಿದ್ದು, ಇದು 50 ಕಿ.ಮೀ ದೂರದಲ್ಲಿದೆ. ರೈಲು ನಿಲ್ದಾಣದಿಂದ ಅನೇಕ ಬಾಡಿಗೆ ಕಾರುಗಳು ಲಭ್ಯವಿದೆ, ಅದು ನಿಮ್ಮನ್ನು ಹನುವಾಂಟಿಯಕ್ಕೆ ಕರೆದೊಯ್ಯುತ್ತದೆ.

ರಸ್ತೆ ಮೂಲಕ: ಹನುವಾಂಟಿಯ ಇಂದೋರ್ನಿಂದ ಕೇವಲ 150 ಕಿ.ಮೀ ದೂರದಲ್ಲಿದೆ. ನೀವು ಕಾರನ್ನು ಬಾಡಿಗೆಗೆ ಪಡೆದುಕೊಳ್ಳಬಹುದು ಅಥವಾ ನಿಮ್ಮ ಸ್ವಂತ ಕಾರನ್ನು ತೆಗೆದುಕೊಳ್ಳಬಹುದು ಮತ್ತು ಈ ಸ್ಥಳವನ್ನು ತಲುಪಲು ಅದ್ಭುತ ರಸ್ತೆ ಪ್ರವಾಸವನ್ನು ಮಾಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more