Search
  • Follow NativePlanet
Share
» »ಹಂಪಿ ಉತ್ಸವ ವೈಭವ ಏನಿದರ ವಿಶೇಷತೆ?

ಹಂಪಿ ಉತ್ಸವ ವೈಭವ ಏನಿದರ ವಿಶೇಷತೆ?

By Vijay

ನೀವು ಎಂದಾದರೂ ಪ್ರಾಚೀನ ಕೋಟೆ ಕೊತ್ತಲಗಳು, ಅವಶೇಷಗಳು, ಪುರಾತನ ನಾಗರೀಕತೆಯನ್ನು ಪರಿಚಯಿಸುವ ರಚನೆಗಳಿಗೆ ಭೇಟಿ ನೀಡಿದ್ದರೆ ಖಂಡಿತವಾಗಿಯೂ ನಿಮ್ಮ ಮನದಲ್ಲಿ ಒಂದು ವಿಚಿತ್ರ ಭಾವನೆ, ಕುತೂಹಲ, ತರಹೇವಾರಿ ಯೋಚನೆಗಳು ಮೂಡೆ ಮೂಡಿರುತ್ತವೆ. ಹೌದು, ಏಕೆಂದರೆ ಇವು ಗತ ಕಾಲದ ತಮ್ಮ ಇತಿಹಾಸವನ್ನು ಹೇಳಲು ಪ್ರಯತ್ನಿಸುತ್ತಿರುತ್ತವೆ ಎಂದು ಹೇಳಬಹುದು.

ಇಂತಹ ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಅದೆಷ್ಟೊ ರಚನೆಗಳು, ಸ್ಥಳಗಳು ಭಾರತದಾದ್ಯಂತ ಕಾಣಬಹುದು. ಅವುಗಳಲ್ಲಿಯೂ ಸಹ ಕೆಲವು ಅತ್ಯಂತ ಶ್ರೀಮಂತ ವಾಸ್ತುಕಲೆ, ಇತಿಹಾಸ, ಪ್ರಾಚೀನ ಕಾಲದಲ್ಲಿಯೆ ಉನ್ನತ ಮಟ್ಟದ ಜೀವನಶೈಲಿಗಾಗಿ ವಿಶ್ವವಿಖ್ಯಾತಿಯನ್ನೆ ಪಡೆದಿವೆ. ಅಂತಹ ಕೆಲವು ಅದ್ಭುತ ಸ್ಥಳಗಳ ಪೈಕಿ ಒಂದಾಗಿದೆ ಕರ್ನಾಟಕದ ಹೆಮ್ಮೆಯ ಹಂಪಿ ಅಥವಾ ಹಂಪೆ.

ನಿಮಗಿಷ್ಟವಾಗಬಹುದಾದ : ಪುಷ್ಕರ್ ಒಂಟೆ ಮೇಳ

ಭಾರತ ಕಂಡ ಅತ್ಯದ್ಭುತ ರಾಜಸಾಮ್ರಾಜ್ಯಗಳ ಪೈಕಿ ವಿಜಯನಗರ ಸಾಮ್ರಾಜ್ಯವೂ ಸಹ ಒಂದು. ಕೃಷ್ಣದೇವರಾಯನ ಕಾಲದಲ್ಲಿ ಅತ್ಯಂತ ಶುಶ್ರಾವ್ಯ ಸ್ಥಿತಿಯಲ್ಲಿದ್ದ ಈ ಸಾಮ್ರಾಜ್ಯ ಶ್ರೀಮಂತ ಸಾಮ್ರಾಜ್ಯವೆಂದರೂ ತಪ್ಪಾಗಲಾರದು. ಬೀದಿ ಬದಿಗಳಲ್ಲೆ ರತ್ನ, ವೈಢೂರ್ಯ, ವಜ್ರಗಳ ವ್ಯಾಪಾರ ನಡೆಯುತ್ತಿತ್ತೆಂದರೆ ನೀವೆ ಊಹಿಸಬಹುದು ವಿಜಯನಗರದ ವೈಭೋಗವನ್ನ.

ಹೀಗೆ ಆರ್ಥಿಕ ಶ್ರೀಮಂತಿಕೆ ಒಂದೆಡೆಯಾದರೆ, ಶಿಲ್ಪಕಲೆ ದೃಷ್ಟಿಯಿಂದ ಇನ್ನಷ್ಟು ಹೆಚ್ಚಾಗಿ ವಿಕಸಿತಗೊಂಡಿದ್ದು ಹೊರಗಿನವರೂ ಒಂದೊಮ್ಮೆಯಾದರೂ ಹೊಟ್ಟೆಕಿಚ್ಚು ಪಡುವಂತೆ ನಳನಳಿಸುತ್ತಿದ್ದವು ಇಲ್ಲಿನ ಶಿಲೆಯಲ್ಲಿ ಮೂಡಿದ ಶಿಲ್ಪಕಲಾಕೃತಿಗಳು. ಈ ಸಾಮ್ರಾಜ್ಯದ ಒಂದೊಂದೂ ಮೂಲೆಗಳಲ್ಲೂ ನಿಪುಣ ಶಿಲ್ಪಕಲಾಕಾರರ ಅದ್ಭುತ ರಚನೆಗಳು ಸುಂದರವಾಗಿ ರೂಪಗೊಂಡಿದ್ದವು.

ಕಾಲಕ್ರಮೇಣ ವಿಜಯನಗರದ ವರ್ಚಸ್ಸು ಕಡಿಮೆಯಾದಂತೆ ಹಲವಾರು ಬಾರಿ ಶತ್ರುಗಳಿಂದ ದಾಳಿಗೆ ಒಳಗಾಗಿ, ಕಾಲದ ಹಿಡಿತಕ್ಕೆ ಒಳಗಾಗಿ, ಕೆಲ ರಚನೆಗಳು ಭಗ್ನಗೊಂಡರೂ ಹಂಪಿಯು ತನ್ನ ನಡಿಗೆಯನ್ನು ನಡೆದುಕೊಂಡು ಬಂದಿತಾದರೂ ತನ್ನ ವೈಭವತೆಯನ್ನು ಸಾರುವ ಇನ್ನೂ ಎಷ್ಟೊ ರಚನೆಗಳನ್ನು ಉಳಿಸಿಕೊಂಡೂ ಸಹ ಬಂದಿತು. ಇಂತಹ ಅಪರೂಪದ, ಗತಕಾಲದ ವೈಭವ ಸಾರುವ ಹಂಪಿಯನ್ನು ಮುಂಬರುವ ಸಮಯದಲ್ಲೂ ಸಹ ಜೀವಂತವಾಗಿರಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದಿಂದ ಆರಂಭಿಸಲಾದ ಉತ್ಸವವೆ ಹಂಪಿ ಉತ್ಸವ.

ಹಂಪಿ ಉತ್ಸವ:

ಹಂಪಿ ಉತ್ಸವ:

ಕರ್ನಾಟಕ ಪ್ರವಾಸೋದ್ಯಮದ ದೃಷ್ಟಿಯಿಂದ ಹಂಪಿ ಉತ್ಸವವು ಕರ್ನಾಟಕದ ಪ್ರತಿಷ್ಟಿತ ಉತ್ಸವವಾಗಿದೆ. ವಿಶೇಷವಾಗಿ ವಿದೇಶಿ ಪ್ರವಾಸಿಗರಲ್ಲಿ ಇದು ಹೆಚ್ಚು ಜನಪ್ರೀಯತೆಗಳಿಸಿದೆ. ನಮ್ಮ ನಾಡ ನುಡಿಯ ವೈಭವ ಸಾರುವ ಸದುದ್ದೇಶದಿಂದ ಈ ಉತ್ಸವಕ್ಕೆ ನಮ್ಮ ಜನರಿಂದಲೇ ಇನ್ನೂ ಹೆಚ್ಚಿನ ಪ್ರೋತ್ಸಾಹ ಬೇಕಾಗಿದೆ ಎಂತಲೆ ಹೇಳಬಹುದು. ಹಿಂದಿನ ವರ್ಷದ ಉತ್ಸವದ ಚಿತ್ರ.

ಹಂಪಿ ಉತ್ಸವ:

ಹಂಪಿ ಉತ್ಸವ:

ಹೀಗಾಗಿ ಪ್ರವಾಸಿ ಪ್ರಿಯ ಓದುಗರು ನೀವು ನಿಮ್ಮ ಸ್ನೇಹಿತರೊಂದಿಗೊ ಅಥವಾ ಕುಟುಂಬದವರೊಂದಿಗೊ ಒಟ್ಟುಗೂಡಿ ಪ್ರತಿ ವರ್ಷ ನವಂಬರ್ ಅಥವಾ ಜನವರಿ ಸಮಯದಲ್ಲಿ ಆಯೋಜಿಸಲಾಗುವ ಈ ಉತ್ಸವದಲ್ಲಿ ಭಾಗಿಯಾಗಲು ಪ್ರಯತ್ನಿಸಿ ಹಾಗೂ ನಿಮ್ಮ ಮಕ್ಕಳಿಗೆ ಹಾಗೂ ನಂಟರಿಗೆ ಹಂಪಿಯ ವೈಭವವನ್ನು ಸವಿಯಲು ನೆರವಾಗಿ. ಹಿಂದಿನ ವರ್ಷದ ಉತ್ಸವದ ಚಿತ್ರ.

ಹಂಪಿ ಉತ್ಸವ:

ಹಂಪಿ ಉತ್ಸವ:

ಈ ಉತ್ಸವವು ಸಾಮಾನ್ಯವಾಗಿ ನವಂಬರ್ ನಿಂದ ಹಿಡಿದು ಜನವರಿಯವರೆಗಿನ ಸಮಯದಲ್ಲಿ ಯಾವುದಾದರೊಂದು ಅನುಕೂಲಕರವಾದ ದಿನಾಂಕಿನಲ್ಲಿ ಕರ್ನಾಟಕ ಸರ್ಕಾರದಿಂದ ಆಯೋಜಿಸಲ್ಪಡುತ್ತದೆ. ಹಿಂದಿನ ವರ್ಷದ ಉತ್ಸವದ ಚಿತ್ರ.

ಹಂಪಿ ಉತ್ಸವ:

ಹಂಪಿ ಉತ್ಸವ:

ಸಾಮಾನ್ಯವಾಗಿ ಮೂರು ದಿನಗಳ ಕಾಲ ಆಚರಿಸಲ್ಪಡುವ ಈ ಉತ್ಸವದ ಪ್ರಮುಖ ಆಕರ್ಷ ಎಂದರೆ ವರ್ಣರಂಜಿತ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು. ಪ್ರಸ್ತುತ ವರ್ಷದ ಅಂದರೆ 2016 ನೇಯ ವರ್ಷದ ಹಂಪಿ ಉತ್ಸವವು ಇದೆ ಜನವರಿಯಲ್ಲಿ ನಡೆಯಲಿದೆ (ಇನ್ನೂ ದಿನಾಂಕಗಳು ನಿಗದಿಗೊಂಡಿಲ್ಲ). ಹಿಂದಿನ ವರ್ಷದ ಉತ್ಸವದ ಚಿತ್ರ.

ಹಂಪಿ ಉತ್ಸವ:

ಹಂಪಿ ಉತ್ಸವ:

ವಿಜಯ ಉತ್ಸವ ಎಂತಲೂ ಕರೆಯಲ್ಪಡುವ ಹಂಪಿ ಉತ್ಸವವು ಕರ್ನಾಟಕದ ವರ್ಣರಂಜಿತ ಉತ್ಸವಗಳ ಪೈಕಿ ಒಂದಾಗಿದೆ. ರಾಜ್ಯವಲ್ಲದೆ ದೇಶದ ಹಲವು ಭಾಗಗಳಿಂದಲೂ ಸಹ ಜನರು, ಪ್ರವಾಸಿಗರು ಹಾಗೂ ಮುಖ್ಯವಾಗಿ ವಿವಿಧ ಕಲಾವಿದರು ಈ ಉತ್ಸವದಲ್ಲಿ ಪಾಲ್ಗೊಂಡು ಕಳೆ ತರುತ್ತಾರೆ. ಹಿಂದಿನ ವರ್ಷದ ಉತ್ಸವದ ಚಿತ್ರ.

ಹಂಪಿ ಉತ್ಸವ:

ಹಂಪಿ ಉತ್ಸವ:

ಹಲವಾರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಉತ್ಸವದ ಪ್ರಮುಖ ಆಕರ್ಷಣೆ. ಬೊಂಬೆಗಳಾಟ, ಭಾರ ಎತ್ತುವಿಕೆ, ನಾಟಕ, ಸಂಗೀತ, ನೃತ್ಯ ಮುಂತಾದ ವಿವಿಧ ಕಾರ್ಯಕ್ರಮಗಳು ಅತ್ಯಂತ ಸಡಗರದಿಂದ ಈ ಉತ್ಸವದಲ್ಲಿ ನಡೆಯುತ್ತವೆ. ಹಿಂದಿನ ವರ್ಷದ ಉತ್ಸವದ ಚಿತ್ರ.

ಹಂಪಿ ಉತ್ಸವ:

ಹಂಪಿ ಉತ್ಸವ:

ಕಲೆ, ಸಂಸ್ಕೃತಿಗಳಲ್ಲಿ ಆಸಕ್ತಿ ಇರುವವರು ಈ ಉತ್ಸವವನ್ನು ಬಲು ಆತೂರದಿಂದ ಎದುರು ನೋಡುತ್ತಿರುತ್ತಾರೆ ಎಂದರೆ ತಪ್ಪಾಗಲಾರದು. ಉತ್ಸವವು ಕರ್ನಾಟಕ ಸರ್ಕಾರದ ವತಿಯಿಂದ ಶಿಸ್ತು ಬದ್ಧವಾಗಿ ಆಯೋಜಿಸಲಾಗುತ್ತದೆ. ಸಾಕಷ್ಟು ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿ ಆಗಮಿಸುವುದರಿಂದ ಸಾಕಷ್ಟು ಮುಂಚಿತವಾಗಿಯೆ ಪೂರ್ವ ತಯಾರಿ ಮಾಡಿಕೊಂಡಿರಲಾಗುತ್ತದೆ. ಹಿಂದಿನ ವರ್ಷದ ಉತ್ಸವದ ಚಿತ್ರ.

ಹಂಪಿ ಉತ್ಸವ:

ಹಂಪಿ ಉತ್ಸವ:

ಕರ್ನಾಟಕದ ನಾಡು ನುಡಿ ಸಂಸ್ಕೃತಿಗಳ ಪರಿಚಯ ನಿಮಗಾಗಬೇಕೆಂದಿದ್ದಲ್ಲಿ ಮೂರು ದಿನಗಳ ಕಾಲ ನಿಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಮುಂದುಡಿ, ಒತ್ತಡ ಮರೆತು ಸಂತಸದಿಂದ ಈ ಉತ್ಸವದಲ್ಲಿ ಪಾಲ್ಗೊಳ್ಳಿ. ಅಷ್ಟೆ ದೇಶದ ಪ್ರಮುಖ ಕಲಾವಿದರಿಂದಲೂ ಸಂಗೀತ, ಗಾಯನ ಮುಂತಾದ ಕಾರ್ಯಕ್ರಮಗಳು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ. ಹಿಂದಿನ ವರ್ಷದ ಉತ್ಸವದ ಚಿತ್ರ.

ಚಿತ್ರಕೃಪೆ: vilapicina

ಹಂಪಿ ಉತ್ಸವ:

ಹಂಪಿ ಉತ್ಸವ:

ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಾಗಿ ಹಿಂದಿನ ವಿಜಯನಗರ ಸಾಮ್ರಾಜ್ಯದ ಇಂದಿಗೂ ತೊಡೆ ಕಟ್ಟಿ ನಿಂತಿರುವ ಅತ್ಯದ್ಭುತ ಶಿಲ್ಪ ಕಲೆಯನ್ನು ಮೈದುಂಬಿಕೊಂಡಿರುವ ಹಲವಾರು ಪ್ರಾಚೀನ ಶಿಲ್ಪ ಕಲಾಕೃತಿಗಳಿಗೆ ಭೇಟಿ ನೀಡಬಹುದು. ಹಿಂದಿನ ವರ್ಷದ ಉತ್ಸವದ ಚಿತ್ರ.

ಚಿತ್ರಕೃಪೆ: Reuben Strayer

ಹಂಪಿ ಉತ್ಸವ:

ಹಂಪಿ ಉತ್ಸವ:

ನಾದ ಹೊಮ್ಮಿಸುವ ಖಂಬಗಳಾಗಲಿ, ಬಡವಿ ಲಿಂಗವಾಗಲಿ, ಸಾಸಿವೆ ಗಣೇಶನಾಗಲಿ, ಕಲ್ಲಿನ ರಥವಾಗಲಿ, ವಿರೂಪಾಕ್ಷ ದೇವಸ್ಥಾನ ಗೋಪುರವಾಗಲಿ, ಉಗ್ರನರಸಿಂಹನ ಸುಂದರ ಶಿಲಾ ವಿಗ್ರಹವಾಗಲಿ ಎಲ್ಲವೂ ಒಂದಕ್ಕಿಂತ ಒಂದು ವಿಶಿಷ್ಟ ಕಲಾ ರಚನೆಗಳಾಗಿದ್ದು ಅಂದಿನ ಕಲಾ ನೈಪುಣ್ಯತೆಯನ್ನು ನೀವು ಹಾಡಿ ಹೊಗಳುವಂತೆ ಮಾಡುತ್ತವೆ.

ಚಿತ್ರಕೃಪೆ: Nomad Tales

ಹಂಪಿ ಉತ್ಸವ:

ಹಂಪಿ ಉತ್ಸವ:

ಅಷ್ಟೆ ಅಲ್ಲ, ಇಲ್ಲಿ ಪುಸ್ತಕ ಮಳಿಗೆಗಳು ಇತರೆ ಹಲವಾರಿ ಸ್ಟಾಲುಗಳನ್ನೂ ಸಹ ಉತ್ಸವದ ಸಂದರ್ಭದಲ್ಲಿ ಹಾಕಿರಲಾಗುತ್ತದೆ. ಸರಿ ಇನ್ನೇಕೆ ತಡ...ಈ ಉತ್ಸವದಲ್ಲಿ ಪಾಲ್ಗೊಳ್ಳಲು ನೀವು ಸನ್ನದ್ಧರಾಗಿ ಹಾಗೂ ಪ್ರತಿ ವರ್ಷ ಜರುಗುವ ಈ ಉತ್ಸವಕ್ಕೆ ನಿಮ್ಮ ಭೇಟಿ ನೀಡಿ, ಕರ್ನಾಟಕ ಸಂಸ್ಕೃತಿಯ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಹಾರಿಸುವಂತೆ ಮಾಡುವಲ್ಲಿ ನೆರವಾಗಿ. ಹಿಂದಿನ ವರ್ಷದ ಉತ್ಸವದ ಚಿತ್ರ.

ಹಂಪಿ ಉತ್ಸವ:

ಹಂಪಿ ಉತ್ಸವ:

ರಸ್ತೆ ಮಾರ್ಗವು ಪ್ರಮುಖವಾದ ಮಾಧ್ಯಮವಾಗಿದ್ದು ಹಂಪಿಯನ್ನು ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ 340 ಕಿ.ಮೀ ದೂರವಿರುವ ಈ ಐತಿಹಾಸಿಕ ಪಟ್ಟಣವನ್ನು ತುಮಕೂರು, ಚಿತ್ರದುರ್ಗ, ಹೊಸಪೇಟೆ ಮಾರ್ಗವಾಗಿ ಸುಲಭವಾಗಿ ಬಸ್ಸಿನ ಮೂಲಕ ತಲುಪಬಹುದು. ಇನ್ನೂ ರೈಲಿನಲ್ಲಿ ಪ್ರಯಾಣಿಸಬೇಕೆಂದಿದ್ದರೆ, 12 ಕಿ.ಮೀ ದೂರದಲ್ಲಿರುವ ಹೊಸಪೇಟೆ ರೈಲು ನಿಲ್ದಾಣವು ಹಂಪಿಗೆ ಹತ್ತಿರವಾದ ರೈಲು ನಿಲ್ದಾಣವಾಗಿದೆ. ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್, ಬಿಜಾಪುರ ಮುಂತಾದ ಕಡೆಗಳಿಂದ ಹೊಸಪೇಟೆಗೆ ರೈಲುಗಳು ಲಭ್ಯವಿದೆ. ಮುಂದಿನ ಸ್ಲೈಡುಗಳಲ್ಲಿ ಹಂಪಿಯ ಕೆಲವು ಆಯ್ದ ಅದ್ಭುತ ಶಿಲ್ಪಕಲೆಯ ರಚನೆಗಳನ್ನು ನೋಡಿ ಆನಂದಿಸಿ.

ಚಿತ್ರಕೃಪೆ: Jean-Pierre Dalbéra

ಹಂಪಿ ಉತ್ಸವ:

ಹಂಪಿ ಉತ್ಸವ:

ಹಂಪಿಯಲ್ಲಿ ನೋಡಲು ನಯನ ಮನೋಹರವಾದ ಅತಿ ಸುಂದರವಾದ ಶಿಲ್ಪ ಕೆತ್ತನೆಯುಳ್ಳ ಕಲಾಕೃತಿಗಳು, ರಚನೆಗಳು ಸಾಕಷ್ಟಿವೆ. ಪ್ರತಿ ರಚನೆಗಳು ವಿಜಯನಗರ ಶೈಲಿಯ ವಾಸ್ತುಕಲೆಗೆ ಜನಪ್ರೀಯವಾಗಿವೆ. ತನ್ನ ಕೆತ್ತನೆಗಳಿಂದ ಚುಂಬಕದಂತೆ ಸೆಳೆಯುವ ವಿಜಯ ವಿಠ್ಠಲ ದೇವಾಲಯ ಸಂಕೀರ್ಣ.

ಚಿತ್ರಕೃಪೆ: nevil zaveri

ಹಂಪಿ ಉತ್ಸವ:

ಹಂಪಿ ಉತ್ಸವ:

ಇಲ್ಲಿನ ಖಂಬಗಳ ಮೇಲೆ ಬಿಡಿಸಲಾದ/ಕೆತ್ತಲಾದ ಸಂಕೀರ್ಣ ಕಲಾ ಕೆತ್ತನೆಗಳು ಎಂಥವರನ್ನು ಬೆರುಗುಗೊಳಿಸಬಲ್ಲುದು.

ಚಿತ್ರಕೃಪೆ: Jean-Pierre Dalbéra

ಹಂಪಿ ಉತ್ಸವ:

ಹಂಪಿ ಉತ್ಸವ:

ವಿಶ್ವ ಪ್ರಖ್ಯಾತಿಗಳಿಸಿರುವ ಹಂಪಿಯ ಸುಂದರ ಕಲ್ಲಿನ ರಥ.

ಚಿತ್ರಕೃಪೆ: Arian Zwegers

ಹಂಪಿ ಉತ್ಸವ:

ಹಂಪಿ ಉತ್ಸವ:

ಹಂಪಿಯಲ್ಲಿರುವ ಹಿಂದೆ ಮಹಿಳೆಯರಿಗೆಂದೆ ಮೀಸಲಾಗಿದ್ದ ಲೋಟಸ್ ಹೌಸ್.

ಚಿತ್ರಕೃಪೆ: Arian Zwegers

ಹಂಪಿ ಉತ್ಸವ:

ಹಂಪಿ ಉತ್ಸವ:

ಹಂಪಿಯ ಮತ್ತೊಂದು ಅದ್ಭುತ ಕಲಾ ರಚನೆ ಉಗ್ರನರಸಿಂಹ ದೇವಾಲಯ.

ಚಿತ್ರಕೃಪೆ: Jean-Pierre Dalbéra

ಹಂಪಿ ಉತ್ಸವ:

ಹಂಪಿ ಉತ್ಸವ:

ಹಂಪಿಯಲ್ಲಿರುವ ಮತ್ತೊಂದು ಸುಂದರ ಕಲಾಕೃತಿ ಬಡವಿ ಲಿಂಗ.

ಚಿತ್ರಕೃಪೆ: V.Vasant

ಹಂಪಿ ಉತ್ಸವ:

ಹಂಪಿ ಉತ್ಸವ:

ಆನೆಗಳನ್ನು ಕಟ್ಟಿ ಹಾಕಲಾಗುತ್ತಿದ್ದ ಆನೆಗಳ ಕೊಟ್ಟಿಗೆ.

ಚಿತ್ರಕೃಪೆ: Uttakarsha

ಹಂಪಿ ಉತ್ಸವ:

ಹಂಪಿ ಉತ್ಸವ:

ದೂರದಿಂದಲೆ ಪ್ರವಾಸಿಗರನ್ನು ಬರಮಾಡಿಕೊಳ್ಳುವ ಎತ್ತರದ ಪ್ರವೇಶ ಗೋಪುರವುಳ್ಳ ಹಂಪಿಯ ಪ್ರಖ್ಯಾತ ವಿರೂಪಾಕ್ಷ ದೇವಾಲಯದ ಸುಂದರ ನೋಟ.

ಚಿತ್ರಕೃಪೆ: Roving-Aye!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X