Search
  • Follow NativePlanet
Share
» »ಬೆಂಗಳೂರಿನಲ್ಲಿದೆ ಮೋಕ್ಷವನ್ನು ಪ್ರಸಾದಿಸುವ ದೇವಾಲಯ

ಬೆಂಗಳೂರಿನಲ್ಲಿದೆ ಮೋಕ್ಷವನ್ನು ಪ್ರಸಾದಿಸುವ ದೇವಾಲಯ

ನಮ್ಮ ಪುರಾಣಗಳ ಪ್ರಕಾರ ಶಿವನು ಲಯಕಾರನಾಗಿದ್ದಾನೆ. ಅಂದರೆ ಪದೇ ಪದೇ ಸೃಷ್ಟಿ ನಡೆಯಬೇಕು ಎಂದರೆ ಯಾವ ಯಾವ ವಸ್ತುವಿಗೆ ಆಗಲಿ ಜೀವಿಗೆ ಆಗಲಿ ಲಯ ಅತಿಮುಖ್ಯವಾದದ್ದು. ಜನ್ಮ ಬಾಧೆಗಳಿಂದ ವಿಮುಕ್ತಿಯನ್ನು ನೀಡುವುದು ಪರಶಿವನ ಪ್ರಥಮ ಕಾರ್ಯ. ಆದ್ದರಿಂದಲೇ ಶೈವ ಕ್ಷೇತ್ರವನ್ನು "ಮೋಕ್ಷ ಕ್ಷೇತ್ರ" ಎಂದು ಕರೆಯಲಾಗುತ್ತದೆ. ನಮ್ಮ ಭಾರತ ದೇಶದಲ್ಲಿ ಶೈವ ಧರ್ಮಕ್ಕೆ ಸಂಬಂಧಿಸಿದಂತೆ ಅನೇಕ ದೇವಾಲಯಗಳು ಇರುವುದನ್ನು ಕಾಣಬಹುದು. ಆದರೆ ಪರಮಶಿವನ ಈ ದೇವಾಲಯದಲ್ಲಿ 5 ಲಿಂಗಗಳಿಗೆ 5 ವಿಭಿನ್ನವಾದ ಹೆಸರುಗಳಿಂದ ಕರೆದು ಆರಾಧಿಸುತ್ತಾರೆ. ಈ ದೇವಾಲಯವು ಬೇರೆಲ್ಲೂ ಇಲ್ಲ ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿದೆ. ಈ ದೇವಾಲಯವು ಅತ್ಯಂತ ಪುರಾತನವಾದದ್ದು ಎಂದು ನಂಬಲಾಗಿದೆ. ಸ್ಥಳೀಯ ಪ್ರಜೆಗಳ ಪ್ರಕಾರ ಆ ದೇವಾಲಯವು ಕಲಿಯುಗ ಆರಂಭಕ್ಕಿಂತ ಮುಂಚೆ ಇದೆ ಎಂದು ಹೇಳುತ್ತಾರೆ.

ಮಹಿಮಾನ್ವಿತವಾದ ಈ ದೇವಾಲಯವನ್ನು ದರ್ಶಿಸಿದರೆ ಮೋಕ್ಷ ಲಭಿಸುತ್ತದೆ ಎಂದು ಹಿಂದೂ ಧರ್ಮದ ಭಕ್ತರ ನಂಬಿಕೆಯಾಗಿದೆ. ಇಂತಹ ವಿಶಿಷ್ಟವಾದ ದೇವಾಲಯದ ಬಗ್ಗೆ ಲೇಖನದ ಮೂಲಕ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ .

1. ಸೋಮೇಶ್ವರ ದೇವಾಲಯ

1. ಸೋಮೇಶ್ವರ ದೇವಾಲಯ

PC:YOUTUBE

ಮೋಕ್ಷವನ್ನುಪ್ರಸಾದಿಸುವ ಆ ದೇವಾಲಯವು ಬೆಂಗಳೂರಿನಲ್ಲಿದೆ. ಆ ದೇವಾಲಯವೇ ಸೋಮೇಶ್ವರ ದೇವಾಲಯ. ಕಲಿಯುಗಕ್ಕಿಂತ ಮುಂಚೆ ಈ ದೇವಾಲಯದ ಪ್ರದೇಶದಲ್ಲಿ ಒಬ್ಬ ಋಷಿಯ ಆಶ್ರಮವಿತ್ತು ಎಂದು ಸ್ಥಳ ಪುರಾಣ ತಿಳಿಸುತ್ತದೆ. ಆ ಮಹರ್ಷಿಯು ತನ್ನ ಶಿಷ್ಯರೊಂದಿಗೆ ಸ್ವಯಂ ಭೂ ಆಗಿ ನೆಲೆಸಿದ್ದ ಶಿವಲಿಂಗವನ್ನು ದಿನನಿತ್ಯವೂ ಆರಾಧಿಸುತ್ತಿದ್ದನಂತೆ. ಕಾಲಕ್ರಮೇಣ ಆ ಶಿವಲಿಂಗವೂ ಭೂಗರ್ಭದಲ್ಲಿ ಮುಚ್ಚಿ ಹೋಯಿತಂತೆ. ತದನಂತರ ಆ ಪ್ರದೇಶವನ್ನು ದಟ್ಟವಾದ ಅರಣ್ಯವಾಗಿ ಮಾರ್ಪಾಟಾಯಿತು. ಈ ಕ್ರಮದಲ್ಲಿ 13ನೇ ಶತಮಾನದಲ್ಲಿ ಬೆಂಗಳೂರು ನಿರ್ಮಾಣಗಾರನಾದ ಕೆಂಪೇಗೌಡರ ತಂದೆ ಜಯಪ್ಪ ಗೌಡರವರು ಆ ಪ್ರದೇಶಕ್ಕೆ ಬೇಟೆಗೆಂದು ಹೊರಟರಂತೆ.

 2. ವಿಶ್ರಾಂತಿಗಾಗಿ

2. ವಿಶ್ರಾಂತಿಗಾಗಿ

PC:YOUTUBE

ಬೇಟೆಯಿಂದಾಗಿ ಬಳಲಿದ್ದ ಜಯಪ್ಪ ಗೌಡರು ವಿಶ್ರಾಂತಿ ಪಡೆಯುವ ಸಲುವಾಗಿ ಹಲಸಿನ ಮರದ ಕೆಳಗೆ ಸ್ವಲ್ಪ ಕಾಲದವರೆಗೆ ಮಲಗಿದ್ದರು. ಆ ಸಮಯದಲ್ಲಿ ಪರಮೇಶ್ವರನು ಕನಸಿನಲ್ಲಿ ಬಂದು, ತಾನು ಈ ಭೂಗರ್ಭದಲ್ಲಿ ಶಿವಲಿಂಗವಾಗಿ ನೆಲೆಸಿದ್ದೇನೆ ಶಿವಲಿಂಗವನ್ನು ಹೊರತೆಗೆದು ದೇವಾಲಯವನ್ನು ನಿರ್ಮಾಣ ಮಾಡು ಎಂದು ಸೂಚಿಸುತ್ತಾನೆ. ಇದಕ್ಕೆ ಸಂತೋಷವಾಗಿ ಒಪ್ಪಿದ ಜಯಪ್ಪ ಗೌಡರು ಶಿವಲಿಂಗವನ್ನು ಭೂಗರ್ಭದಿಂದ ಹೊರತೆಗೆದು ದೇವಾಲಯವನ್ನು ನಿರ್ಮಾಣ ಮಾಡುತ್ತಾರೆ. ಅಷ್ಟೇ ಅಲ್ಲದೆ ಆ ಶಿವಲಿಂಗಕ್ಕೆ ಸೋಮೇಶ್ವರ ಎಂದು ಹೆಸರನ್ನು ನೀಡಿ ಅತ್ಯಂತ ಶ್ರದ್ಧೆ ಭಕ್ತಿಯಿಂದ ಆರಾಧಿಸುತ್ತಾರೆ.

ತದನಂತರದ ದಿನಗಳಲ್ಲಿ ಸೋಮೇಶ್ವರನನ್ನು ಆರಾಧಿಸಿದ ಭಕ್ತರು, ದೇವಾಲಯದ ಪ್ರಾಂಗಣದಲ್ಲಿ ಅರುಣಾಚಲೇಶ್ವರ, ಭೀಮೇಶ್ವರ, ನಂಜುಂಡೇಶ್ವರ, ಚಂದ್ರಮೌಳೀಶ್ವರ ಲಿಂಗಗಳನ್ನು ಪ್ರತಿಷ್ಠಾಪಿಸಿದ್ದಾರೆ. ಹೀಗೆ ಒಂದೇ ದೇವಾಲಯದಲ್ಲಿ ಐದು ವಿಭಿನ್ನ ಹೆಸರಿನ ಶಿವಲಿಂಗವನ್ನು ಕಾಣಬಹುದು. ಪ್ರಸ್ತುತ ಹಲಸೂರು ಸೋಮೇಶ್ವರ ದೇವಾಲಯ ಎಂದೂ ಪ್ರಸಿದ್ಧಿಯನ್ನು ಪಡೆದಿದೆ.

 3. ಅನೇಕ ರಾಜರು

3. ಅನೇಕ ರಾಜರು

PC:YOUTUBE

ಸೋಮೇಶ್ವರ ದೇವಾಲಯದ ಅಭಿವೃದ್ಧಿಗಾಗಿ ಚೋಳರು, ವಿಜಯನಗರದ ರಾಜರು ಅನೇಕ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ. ಆದ್ದರಿಂದಲೇ ಈ ದೇವಾಲಯದ ಪ್ರತಿಮೆಗಳು ಕೆಲವು ಚೋಳರ ಶೈಲಿಯಲ್ಲಿದ್ದರೆ ಮತ್ತೆ ಕೆಲವು ವಿಜಯನಗರದ ಶೈಲಿಯಲ್ಲಿದೆ. ಸುಮಾರು 4 ಎಕರೆಗಳಷ್ಟು ವಿಸ್ತೀರ್ಣದಲ್ಲಿರುವ ಈ ದೇವಾಲಯದ ಮುಂಭಾಗದಲ್ಲಿ 48 ಶೀಲಾ ಸ್ತಂಭಗಳಿಂದ ಕೂಡಿದ ದೊಡ್ಡದಾದ ಮಂಟಪವಿದೆ. ಈ ಸ್ತಂಭಗಳ ಜೊತೆಗೆ ದೇವಾಲಯದ ಹಿಂಭಾಗದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು ತಮ್ಮ ತಮ್ಮ ವಾಹನಗಳ ಮೇಲೆ ಆಸೀನರಾಗಿರುವ ವಿಗ್ರಹವನ್ನು ಕೂಡ ಕಾಣಬಹುದು. ಇಲ್ಲಿನ ವಿಶೇಷವೇನೆಂದರೆ ಬ್ರಹ್ಮ ದೇವನಿಗೂ ಕೂಡ ಇಲ್ಲಿ ಪೂಜೆಗಳು ನಡೆಯುತ್ತವೆ.

4. ಕಾಮಾಕ್ಷಿ ದೇವಿ

4. ಕಾಮಾಕ್ಷಿ ದೇವಿ

PC:YOUTUBE

ಇಲ್ಲಿ ಪಾರ್ವತಿದೇವಿಯು ಕಾಮಾಕ್ಷಿ ದೇವಿಯಾಗಿ ನೆಲೆಸಿದ್ದಾಳೆ. ದೇವಿಯ ಎದುರಿನಲ್ಲಿ ಶಿಲೆಗಳಿಂದ ಕೆತ್ತಿರುವ ಬೀಜಾಕ್ಷರಯುಕ್ತ ಶ್ರೀಚಕ್ರವನ್ನು ಕೂಡ ಕಾಣಬಹುದು. ಗರ್ಭಗುಡಿಯಲ್ಲಿ ಅಪೂರ್ವವಾದ 63 ವಿಗ್ರಹಗಳಿವೆ. ಮುಖ ಮಂಟಪದ ಎದುರು ಗಂಭೀರವಾಗಿ ಕುಳಿತಿರುವ ನಂದಿಯು ಭಕ್ತರನ್ನು ಆಕರ್ಷಿಸುತ್ತದೆ. ಈ ಗುಡಿಯ ಪ್ರಾಂಗಣದಲ್ಲಿ ಅನೇಕ ವೃಕ್ಷಗಳಿದ್ದು ಆಧ್ಯಾತ್ಮಿಕ ಭಾವದ ಜೊತೆಜೊತೆಗೆ ಪ್ರಾಕೃತಿಕ ಭಾವವನ್ನು ಕೂಡ ಉಂಟು ಮಾಡುತ್ತದೆ.

 5. ಹೂವಿನ ಪಲ್ಲಕ್ಕಿ

5. ಹೂವಿನ ಪಲ್ಲಕ್ಕಿ

PC:YOUTUBE

ಈ ಸೋಮೇಶ್ವರ ದೇವಾಲಯದಲ್ಲಿ ಸತತ 11 ದಿನಗಳ ಕಾಲ ಚೈತ್ರಮಾಸದಲ್ಲಿ ವಿಜೃಂಭಣೆಯಿಂದ ಉತ್ಸವಗಳನ್ನು ಆಚರಿಸುತ್ತಾರೆ. ಚೈತ್ರ ಪೌರ್ಣಮಿಯಂದು ಪ್ರಾರಂಭವಾಗುವ ಈ ಉತ್ಸವದಲ್ಲಿ ಕೊನೆಯ ದಿನ ನಿರ್ವಹಿಸುವ ಹೂವಿನ ಪಲ್ಲಕ್ಕಿ ಅತ್ಯಂತ ಪ್ರಸಿದ್ಧವಾದುದು. ಆ ದಿನದೊಂದು ಎಲ್ಲಾ ದೇವಾಲಯಗಳ ಗ್ರಾಮದೇವತೆಗಳು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಅದೇ ವಿಧವಾಗಿ ಪ್ರತಿ ಸೋಮವಾರ ಹಾಗೂ ಅಮಾವಾಸ್ಯೆ ದಿನದಂದು ನಡೆಯುವ ಶತರುದ್ರಾಭಿಷೇಕ ಅತ್ಯಂತ ವೈಭವಯುತವಾಗಿ ನಡೆಯುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more